28 C
Mumbai
August 21, 2026
Mumbai News Kannada
ತುಳುನಾಡು

ಫರಂಗಿಪೇಟೆ ಕುಲಾಲ ಸುಧಾರಕ ಸಂಘದ ವಾರ್ಷಿಕೋತ್ಸವ. ಸಾಧಕರಿಗೆ ಸನ್ಮಾನ.






ಸಮಾಜ ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ ಒಗ್ಗಟ್ಟಾಗಬೇಕಾಗಿದೆ: ಕಮಲ ರಮೇಶ್.


ಬಂಟ್ವಾಳ: ಫರಂಗಿಪೇಟೆ ಕುಲಾಲ ಸುಧಾರಕ ಸಂಘ, ಪುದು ನಾಣ್ಯ ಇದರ ೩೩ನೇ ವಾರ್ಷಿಕೋತ್ಸವ ಸಂಭ್ರಮ ಮೇ19ರಂದು ಸಂಘದ ಸಮುದಾಯ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘ ದ ಅಧ್ಯಕ್ಷ ಸುರೇಶ್ ಕುಲಾಲ್ ನವೀಕೃತಗೊಂಡ ಕುಲಾಲ ಸಮುದಾಯ ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, “ಫರಂಗಿಪೇಟೆ ಕುಲಾಲ ಸಂಘ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ಮುಂದಿನ ಪೀಳಿಗೆಗೆ ಸಮುದಾಯ ಭವನ ಅತ್ಯಗತ್ಯವಾಗಿದೆ. ಇದರ ಇನ್ನಷ್ಟು ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು” ಎಂದು ಹೇಳಿದರು.

ಫರಂಗಿಪೇಟೆ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಕಮಲಾ ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ನವಿಕೃತ ಕುಲಾಲ ಭವನ ಸಮಾಜ ಬಾಂಧವರ ಸಹಕಾರದಿಂದ ನಿರ್ಮಾಣಗೊಂಡಿದೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಬಂಧುಗಳು ಸಹಕಾರ ನೀಡಬೇಕು. ಸಮಾಜವನ್ನು ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಬೇಕಾಗಿದೆ ಎಂದರು.
ವೇದಿಕೆಯಲ್ಲಿ ಕುಲಶೇಖರ ವೀರನಾರಾಯಣ ದೇವಸ್ಥಾನದ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಕಲ್
, ದ.ಕ. ಜಿಲ್ಲಾ ಕೋಳಿ ಸಾಗಾಣಿಕೆದಾರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ದಯಾನಂದ ಕುಲಾಲ್, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಬಿ. ರಮೇಶ್ ಸಾಲಿಯಾನ್ ಸಂಚಯಗಿರಿ, ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಸುಂದರ ಬಂಗೇರ ಶಕ್ತಿನಗರ, ಕುಲಾಲ ಸಂಘ ಮುಂಬೈ ಚರ್ಚಿಗೇಟ್-ದಹಿಸರ್ ಸ್ಥಳಿಯ ಸಮಿತಿಯಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ರತ್ನಾ ಕುಲಾಲ್ ಹಾಗೂ ಸಂಘದ ಮಹಿಳಾ ಘಟಕದ ಕಾರ್ಯಧ್ಯಕ್ಷೆ ನಯನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹರಿನಾಮ ಸಂಕೀರ್ತಕ ಕೊರಗಪ್ಪ ಮೂಲ್ಯ ವೈ.ಕೆ. ಕೊಡ್ಮಾಣ್ ಹಾಗೂ ಕ್ರೀಡಾಪಟು ಭವಿಷ್ ಸುಜೀರ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ನಡೆಯಿತು. ಕೆ.ಆರ್. ದೇವದಾಸ ಮಾಸ್ತರ್ ಸ್ವಾಗತಿಸಿದರು. ವಿದ್ಯಾರಾಜ್ ಕಾಪಿಕಾಡ್ ಸನ್ಮಾನಪತ್ರ ವಾಚಿಸಿದರು. ವಿಶ್ವನಾಥ ಕುಲಾಲ್ ಹಾಗೂ ವಿನಯರಾಜ ಅಡ್ಯಾರ್ ಕಾರ್ಯಕ್ರಮಕ್ಕೆ ಸಹಕರಿಸಿದರು. ಉಪಾಧ್ಯಕ್ಷ ಸುರೇಶ್ ಕುಲಾಲ್ ಧನ್ಯವಾದ ಸಲ್ಲಿಸಿದರು. ನವೀನ್ ಮತ್ತು ಕು. ಗೌತಮಿ ಸುಜೀರ್ ಕಾರ್ಯಕ್ರಮ ನಿರೂಪಿಸಿದರು.



Related posts

ಉಡುಪಿಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಮಹೋತ್ಸವ : ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾಗಮ

Mumbai News Desk

ಉಡುಪಿ ಇಂದ್ರಾಣಿ ನದಿ ಮಾಲಿನ್ಯ ನಿವಾರಣೆಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಿಲ್ಲಾಡಳಿತಕ್ಕೆ ತುರ್ತು ಮನವಿ

Mumbai News Desk

ಯುವವಾಹಿನಿಯ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ

Mumbai News Desk

ಕಾಪು: ಗಾಳಿ – ಮಳೆಗೆ ಮನೆಗೆ ಮರಬಿದ್ದು ಅಪಾರ ನಷ್ಟ.

Mumbai News Desk

ಹೆಜಮಾಡಿ ಬಿರುವೆರ್ ಬ್ರದರ್ಸ್ ನ ನೂತನ ಅಧ್ಯಕ್ಷರಾಗಿ ಗುರುಪ್ರಸಾದ್ ಪೂಜಾರಿ ಆಯ್ಕೆ.

Mumbai News Desk

ಉಡುಪಿ : ಜ. 9ರಂದು ಶೀರೂರು ಮಠದ ಶ್ರೀಗಳ ಉಡುಪಿ ‘ಪುರ ಪ್ರವೇಶ’.

Mumbai News Desk