
ಜಯ ಸಿ ಪೂಜಾರಿ
——————————————-.
ಉತ್ತರ ಕುಂದಾಪುರದಿಂದ ದಕ್ಷಿಣದ ಕಾಸರಗೋಡು ಚಂದ್ರ ಗಿರಿ ನಧಿತೀರದವರೆಗೆ ಹರಡಿದ ಈಗಿನ ಧಕ್ಷಿಣ ಕನ್ನಡ ಉಡುಪಿ ಜಿಲ್ಲೆಯನ್ನು ಧಾರ್ಮಿಕ ಪ್ರದೇಶವೆಂದೆ ಹೇಳಬಹುದು. ಸಾಮಾನ್ಯವಾಗಿ ಸಂಸ್ಕೃತಿ ಮತ್ತು ಭಾಷೆಯ ಆಧಾರದಲ್ಲಿ ನಮ್ಮ ನಾಡು ಎಂದು ಸಾರುತ್ತದೆ.
ನಮ್ಮ ಉಡುಪಿ ಜಿಲ್ಲೆ ನಾಗ ಮಂಡಲ ಭೂತರಾಧನೆ ಮುಂತಾದ ಧಾರ್ಮಿಕ ಆಚರಣೆಗಳು ಯಕ್ಷಗಾನ,ತಾಳಮದ್ದಳೆ, ಮುಂತಾದ ರಂಗ ಪ್ರಭೇಧ ಗಳು ವಿವಿಧ ಜನಪದ ಕುಣಿತಗಳು ಸಂಧಿ ಪಾಡ್ಡದನಗಳು ಕಂಬಳ ಮುಂತಾದ ಜನಪದ ವಿನೋದಗಳು ಈಗಿನ ಯುವ ಜನಾಂಗಕ್ಕೆ ನಮ್ಮ ನಾಡಿನ ಕೋಡಂಗಿ ನೃತ್ಯ ಸಂಸ್ಕೃತಿ ಇತಿಹಾಸದ ಬಗ್ಗೆ ಆಸಕ್ತಿ ಮೂಡಿಸುವ ಅದರ ಉಳಿವು ಬೆಳವಣಿಗೆಗೆ ತಮ್ಮನ್ನೇ ತಾವು ಮುಡುಪಾಗಿಟ್ಟು ಕೊಂಡಿರುವ ಉಡುಪಿ ತಾಲೂಕಿನ ಕಲ್ಮಾಡಿಯ ಶೇಖರ್ ಸೂರಪ್ಪ ಸುವರ್ಣ( ಶೇಖರ್ ಮಾಸ್ಟರ್ ) ಇವರು ಕೂಡ ಒಬ್ಬರಾಗಿದ್ದಾರೆ.
ಇವರ ತಂದೆ ಉಡುಪಿ ತಾಲೂಕಿನ ಕಲ್ಮಾಡಿಯ ಸೂರಪ್ಪಸುವರ್ಣ ತಾಯಿ ಅದೇ ಊರಿನ ಸುಂದರಿ ಪೂಜಾರ್ತಿ ದಂಪತಿಗಳ ಪುತ್ರ ಪತ್ನಿ ಜಯಂತಿ.
ಇವರ ಪ್ರಾಥಮಿಕ ಶಿಕ್ಸಣ ಮತ್ತು ಪ್ರೌಢ ಶಿಕ್ಸಣ ಕಲ್ಮಾಡಿ ಹಾಗೂ ಮಲ್ಪೆಯಲ್ಲಿ ಕಲಿತು ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ( A M ಡಿ ) ಆರ್ಟ್ಸ್ ಮಾಸ್ಟರ್ ಡಿಪ್ಲೋಮ ಮಾಡಿ ಅಲೆವೂರು ನೆಹರು ಹೈಸ್ಕೂಲ್ ನಲ್ಲಿ 38 ವರ್ಷ ಶಿಕ್ಸಕರಾಗಿ 1981- 89 ರ ನಡುವೆ ಸ್ಕೌಟ್ ನ ಬ್ಯಾಜ್ ಗಳನ್ನು ಮಾಡಿ ಸ್ಕೌಟ್ ನ ಬಗ್ಗೆ 44 ವರ್ಷ ಅನುಭವ ಪಡೆದ ಇವರು ಸ್ಕೌಟ್ ನಲ್ಲಿ ಉಡುಪಿ ಜಿಲ್ಲೆಯ ಡಿಸ್ಟಿಕ್ ಕಾರ್ಯದರ್ಶಿ ಯಾಗಿ ಕಾರ್ಯನಿರ್ವಾಹಿಸಿದವರ ಲ್ಲದೆ ತುಳುನಾಡಿನ ಗರೋಡಿಗಳ ಅದ್ದಯನದೊಂದಿಗೆ ಕೋಡಂಗಿ ನೃತ್ಯವನ್ನು 9 ನೇ ತರಗತಿಯಲ್ಲಿರುವಾಗಲೇ ಕೋಡಂಗಿ ನೃತ್ಯದ ಆಸಕ್ತಿಯನ್ನು ಮೈಗೂಡಿಸಿ ಕೊಂಡು ಪರಿಸರದಲ್ಲಿಯಲ್ಲದೆ ಇತರ ಊರುಗಳಲ್ಲಿ ಕೂಡ ಗುರುತಿಸಿ ಕೊಂಡರು. ಸಮಾಜ ಮುಖಿ ಮತ್ತು ಸಂಸ್ಕೃತಿ ಪರ ಕಾರ್ಯದೊಂದಿಗೆ ಬೆಳೆದು ಇವರ ವಿಚಾರ ದಾರೆ ವಾಕ್ ಶಕ್ತಿ ಇವರನ್ನು ಕೋಡಂಗಿ ನೃತ್ಯದ ಕೀರ್ತನೆಯನ್ನು ಹಾಡಲು ಬಹಳವಾಗಿ ಆಕರ್ಷಸಿತು.
ಬಾರ್ಕುರ್ ಸೀಮೆ ಆಳಿದ ಮಂತ್ರಿಯ ಶ್ಲಾಘನಾ ನೃತ್ಯ – ಗೀತೆ
ಹೌಂದೆ ರಾಯಣ ಓಲಗ ಕುಣಿತ ಬ್ರಹ್ಮ ಬೈದೆರ್ ಗಳ ಗರೊಡಿ ಅಥವಾ ತುಳಸಿ ಪೂಜೆಯ ಸಂದರ್ಭದಲ್ಲಿ ಸಂಪ್ರದಾಯ ಉಡುಗೆಯನ್ನು ಧರಿಸಿ ಕುಣಿಯುವ ದೇವರಾಧನೆಯ ಭಾಗ ವಾದ ಜನಪ್ರಿಯ ಕಲಾ ಪ್ರಕಾರ ಇತೀಚಿನ ದಿನಗಳಲ್ಲಿ ಅವಸಾನದ ಅಂಚಿನಲ್ಲಿದ್ದರೂ ಕರಾವಳಿಯ ಮಲ್ಪೆ ಭಾಗದಲ್ಲಿ ಇದು ಹೆಚ್ಚು ಪ್ರಚಲಿತದಲ್ಲಿದೆ.
ಕಾಲ ಗೆಜ್ಜೆ ಬಿಳಿ ಪಂಚೆ ಹಾಗೂ ಬಿಳಿ ಬನಿಯನ್ ಅದರ ಮೇಲೆ ಜರಿಯ ಶಾಲನ್ನು ಕಟ್ಟಿಕೊಂಡು ಪಿಂಗಾರದ ಎಸಳನ್ನು ಸೊಂಟಕ್ಕೆ ಕಟ್ಟಿಕೊಂಡು ಕಾಲಿಗೆ ಕಡವು ಸೊಂಟಕ್ಕೆ ಅಡ್ಡ ಪಟ್ಟಿಯನ್ನು ಧರಿಸಿ ಜತೆ ಜತೆ ಯಾಗಿ ಕುಣಿಯುತ್ತಾ ಲಯ ಬದ್ದವಾಗಿ ಹೆಜ್ಜೆ ಹಾಕಿ ಭಾವ ಪರವಾಶರಾಗಿ ಕೀರ್ತನೆಯನ್ನು ಹಾಡುತ್ತಾ ಕುಣಿದು ಭಾವುಕ ಸನ್ನಿವೇಶ ವನ್ನು ಸೃಷ್ಟಿಸುವ ಅಪೂರ್ವ ಕಲವಂತಿಕೆ ಆಡಗಿದೆ. ಹರಿದಾಸರು ಮುಂಬದಿಯಲ್ಲಿ ಕೀರ್ತನೆ ಹಾಡುತ್ತಾ ಸಾಗುವಾಗ ಅದಕ್ಕೆ ಸರಿಯಾಗಿ ಕುಣಿತ ತಂಡ ಹೌಂದರಾಯಣ ವಾಲಗವೊ ಎಂದು ಹಾಡುತ್ತಾ ತುಳಸಿ ವೃಂದಾವನಕ್ಕೆ ಸುತ್ತುವರಿದು ಕುಣಿಯುತ್ತಾರೆ.
ದಶ ರತ ಚಕ್ರವರ್ತಿ ಅವನಿಗೆ ಮೂವರು ಪತ್ನಿಯರು. ನಾಲ್ಕು ಮಕ್ಕಳಾಗಿ ಜನಿಸಿದ ವೇಳೆಯಲ್ಲಿ ಒಂದಾನೊಂದು ದಿನದಲ್ಲಿ ದಶರತ ಚಕ್ರವರ್ತಿಯ ಹಿರಿಯ ಮಗ ಅವನಿಗೆ ಪಟ್ಟ ಕಟ್ಟಬೇಕೆಂದು ಹೇಳಿ ಅಂತರಂಗದಲ್ಲಿ ಮಾತುಕತೆ ನಡೆಯುವಾಗ ಮಂತರೆಯು ಆ ಮಾತನ್ನು ಮರೆಯಲ್ಲಿ ನಿಂತುಕೊಂಡು ಕೇಳುತ್ತಾಳೆ. ಆ ಮಾತನ್ನು ಕೇಳಿಕೊಂಡು ಕೈ ಕೆಯಿ ಮಾತೆಯಲ್ಲಿ ದಶ ರತ ಚಕ್ರವರ್ತಿಯ ಹಿರಿಯ ಮಗ ರಾಮನಿಗೆ ಸೀಮೆ ಪಟ್ಟ ಕಟ್ಟ ಬೇಕು ಎಂಬ ಯೋಚನೆ ಮಾಡಿಕೊಂಡು ಮಂತ್ರ ಶ್ರೇಷ್ಠನನ್ನು ಕರೆಯುವನು. ಇದು ಯಾವ ನ್ಯಾಯ ನೀತಿ ನಿಮ್ಮ ಮಗ ಭರತನಿಗೆ ಸೀಮೆ ಪಟ್ಟ ಕಟ್ಟ ಬೇಕು ಶ್ರೀ ರಾಮ ಚರಿತ್ರನು ಆಡವಿ ಪಾಲಾಗಿ ಹೋಗಬೇಕು. ಎಂಬ ಯೋಚನೆ ಹೇಳುತ್ತಾಳೆ.
ಕೈ ಕೈಯ ಮಾತನ್ನು ಕೇಳಿಕೊಂಡ ದಸರತ ಚಕ್ರವರ್ತಿಯು ಹಿರಿಯ ಮಗ ರಾಮನನ್ನು ಆಡವಿ ಪಾಲಾಗಿ ಕಳುಹಿಸುತ್ತಾಳೆ. ಶ್ರೀ ರಾಮಚಂದ್ರನು ಲಕ್ಷ್ಮಣ ಸೀತೆಯ ಕೂಡಿಕೊಂಡು ಗಂಗಾ ನದಿಯ ದಾಟಿಕೊಂಡು ಚಿತ್ರ ಕೂಟಕ್ಕೆ ಬರುತ್ತಾರೆ. ಚಿತ್ರ ಕೂಟ ವನದಲ್ಲಿ ಕೆಲವು ದಿವಸ ಕಳೆದು ಅಲ್ಲಿಂದ ಮುಂದೆ ಪಯಣವಾಗಿ ಪಂಪಾವತಿ ತೀರದಲ್ಲಿ ಪೆರ್ನ ಶಾಲೆ ಮಾಡಿಕೊಂಡು ಇರುವಂತಹ ಸಮಯದಲ್ಲಿ ದಳ ಕಂಠ ವೆಂಬವನು ಮಾಯಾ ಮೃಗವನ್ನು ನಿರ್ಮಿಸಿ ಸೀತಾ ಮಾತೆಯನ್ನು ಕದ್ದುಕೊಂಡು ಹೋಗುತ್ತಾನೆ. ಈ ಸಮಯದಲ್ಲಿ ಸೂರ್ಯದೇವನ ಮಗನಾದ ಸುಗಿವ ರಾಯ ಎಂಬವನು ಕಿಸ್ಕಿಂಡಿ ಪವಾಡದ ಮೇಲೆ ಹೋಗುವಂತಹ ಸಮಯದಲ್ಲಿ ಪಂಪಾ ಸರೋವರದ ದಡದಲ್ಲಿ ಬಂದು ತಿರುಗುವವರಾರೆಂದು ನೋಡ ಬರಬೇಕೆಂದು ತನ್ನ ಸೈನ್ಯಗಳಿಗೆಲ್ಲ ಆಧಿ ಧೀರ ಬಂಟಾನಾದ ಅಂಜನಾ ದೇವಿ ಮಗನಾದ ವಾಯು ಪುತ್ರ ಹನುಮನನ್ನು ಕರೆದು ಹೇಳುತ್ತಾಳೆ
ಪಂಪಾ ಸರೋವರ ದಡದಲ್ಲಿ ಬಂದು ತಿರುಗುವರಾರೆಂದು ನೋಡಿ ಬರಬೇಕೆಂದು ಹೇಳುವಂತಹ ಸಮಯದಲ್ಲಿ ಅಂಜನಾದೇವಿ ಮಗನಾದ ವಾಯು ಪುತ್ರ ಹನುಮನು ಕೂಡ ತನ್ನ ವೇಷ ಮರೆಸಿಕೊಂಡು ಅವರ ಬಳಿ ಬರುತ್ತಾನೆ. ಅವರ ಮಾತು ಕೇಳಿಕೊಂಡು ತಾಯಿ ಮಾತಿನ ಮೇರೆಗೆ ರಾಮನ ಬಂಟನಾಗುತ್ತಾನೆ.
ಹರಿಸ್ಮರಣೆ ಭಕ್ತರೆಲ್ಲಾ ಸ್ವಾಮಿ ವೃಂದಾವನದ ಹರಿಸ್ಮರನಿಸುತ್ತಾ ಕುಣಿಯುವಾಗ ಭಾಕ್ತಾಮೇಲೆ ಆವೇಶನಾಗಿ ಬರುತ್ತಾನೆ. ಆಂಜನೇಯ ಸ್ವಾಮಿ ಭಕ್ತನ ಆ ಕೀರ್ತನೆಯಲ್ಲಿ ಆಂಜನೇಯ ಸ್ವಾಮಿ ಗಿರಿಯ ಗಿರಿಗೆ ಹಾರಿದನು ಎಂಬಾಗ ಈ ಆವೇಶ ದಾರಿಯು ಅದೇ ರೀತಿ ಹಾರುವನು ಕೈ ತಪ್ಪಿ ಬೀಳುವನು ಆಗ ಕಾಲು ಮುಂಟು ಕೋಡಂಗಿ, ಕಣ್ಣು ಕುಂಟು ಕೋಡಂಗಿ, ಬಾಳೆ ಹಣ್ಣು ಕೊಡುತ್ತೇನೆ ಓಡಿ ಬಾರೊ ಕೋಡಂಗ. ಕೋಡಂಗ ರಾಯ ಎಂಬವನು ಲಂಕೆಗೆ ಹಾರಿದನು. ಚೂಡಾಮಣಿಯ ತಂದನು. ಸ್ವಾಮಿ ವೃಂದವನ ಬಳಿಯಲ್ಲಿ ಹರಿಯ ಸ್ಮರಣೆ ಕೇಳಿಕೊಂಡು ಬಹು ಸಂತೋಷ ತಾಳಿಕೊಂಡು ಭಕ್ತರಿಗೆ ವರವನ್ನು ಕೊಡುತ್ತಾನೆ. ಈ ಪದ್ಯದಲ್ಲಿ ಹೇಳಿದ ಹಾಗೆ ಆವೇಶ ದಾರಿಯು ಕುಣಿಯುತ್ತಾ ಬರುವನು.
ಯಾರು ಈ ಹೌಂದೆ ರಾಯ?
ಬೂತಾಳ ಪಾಂಡ್ಯಾನ ನಂತರ ಬಾರ್ಕೊರು ಸೀಮೆಯಲ್ಲಿ ಆಡಳಿತ ವ್ಯವಸ್ಥೆಯು ಅವನತಿಗೆ ಹೋಗುವ ಸಮಯದಲ್ಲಿ ಹೌಂದೆ ರಾಯ ಎಂಬ ಮಂತ್ರಿಯು ತನ್ನ ಬುದ್ದಿ ವಂತಿಕೆಯಿಂದ ಸೀಮೆಯನ್ನು ಆಳುತ್ತಿದ್ದನು ಎಂಬ ಐತಿಹ್ಯ ಇದೆ.
ಆತನ ಉತ್ತಮ ಆಡಳಿತದಿಂದ ಬರ್ಕೊರು ಸೀಮೆ ಮತ್ತೆ ಅಭಿವೃದ್ಧಿ ಹೊಂದಿತು. ಸೀಮೆಯ ಉನ್ನತಿಗೆ ಕಾರಣರಾದ ಹೌಂದೆ ರಾಯನನ್ನು ಜನರು ಹಾಡಿ ಹೊಗಳಿದ ಹಾಡೇ ಹೌಂದೆ ರಾಯಣ ಓಲಗ.
ಹೊಗಳಿಕೆಯ ಹಾಡು ನೃತ್ಯ ನೋಡಿದ ಹೌಂದೆ ರಾಯ ಇದನ್ನು ಕಡ್ಡಾಯ ಗೊಳಿಸಿದ ಎನ್ನಲಾಗಿದೆ.
ಪ್ರಶ್ನೆ :
ಇವರಲ್ಲಿ ಕುಂದಾಪುರ ಹಾಗೂ ಉಡುಪಿ ತಾಲೂಕು ಗಳಲ್ಲಿ ಕೋಡಂಗಿ ನೃತ್ಯ ಬಗ್ಗೆ ವ್ಯತ್ಯಾಸ ಕೇಳಿದಾಗ.
ಉತ್ತರ
ಕುಂದಾಪುರ ಬದಿಯ ನೃತ್ಯದ ಹುಡುಗರು ಸ್ವಲ್ಪ ವೇಗವಾಗಿ ಹಾಡುತ್ತಾರೆ. ಆದರೆ ಇಲ್ಲಿಯವರು ನಾವು ಸ್ವಲ್ಪ ನಿದಾನವಾಗಿ ಬಿಡಿ ಬಿಡಿ ಯಾಗಿ ಹಾಡುತ್ತೇವೆ ಇಷ್ಟೇ ವ್ಯತ್ಯಾಸ.

ಶೇಖರ್ ಮಾಸ್ಟರ್ ಸಮಾಜ ಮುಖಿ ಹಾಗೂ ಸಂಸ್ಕೃತಿ ಪರ ಕಾರ್ಯದೊಂದಿಗೆ ಬೆಳೆದು ತನಗೆ ಅನ್ನ ನೀಡಿದ ನೆಲದ ಮಣ್ಣನ್ನು ಗೌರವಿಸುವ ಜೊತೆಗೆ ಬಳುವಳಿಯಾಗಿ ಬಂದ ಪ್ರಬುದ್ಧ ಸಮಾಜ ಸೇವೆ ಸಂಸ್ಕೃತಿ ಸಂಪ್ರದಾಯಗಳನ್ನು ಮರೆಯಲಿಲ್ಲ ಇವರು ತಾವು ನೆಲೆ ನಿಂತ ತಾಣಕ್ಕೆ ಗೌರವ ತಂದು ಕೊಡಲು ಪ್ರಯತ್ನಿಸಿ ನಂತರ ಗುರುಹಿರಿಯರ ಮತ್ತು ದೈವ ದೇವರ ಆಶೀರ್ವಾದದೊಂದಿಗೆ ಬರುವ ದಿನಗಳಲ್ಲಿ ಬಾಳಿ ಬದುಕಿ ಇನ್ನೂ ಸಹ ಇವರಿಂದ ಯುವ ಪೀಳಿಗೆ ಗಳಿಗೆ ಸಹಕಾರ ಸಿಗಲಿ ಎಂದು ಶುಭ ಹಾರೈಸುವ
ಜಯ ಸಿ ಪೂಜಾರಿ
ಕೆಳಾರ್ಕಳ ಬೆಟ್ಟು.