27.7 C
Mumbai
July 23, 2026
Mumbai News Kannada
ಕರಾವಳಿ

ಕೊಡೇರಿಯಲ್ಲಿ ಜರಗಿದ ಅಂಚೆ ಜನ ಸಂಪರ್ಕ ಅಭಿಯಾನ








ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗ ಮತ್ತು ಬಿಲ್ಲವ ಸಮಾಜ ಸೇವಾ ಸಂಘ [ರಿ] ಹಕ್ರೆಮಠ, ಕೊಡೇರಿ ಇವರ ಸಹಭಾಗಿತ್ವದಲ್ಲಿ ನವೆಂಬರ್ 1 ರಂದು ಶುಕ್ರವಾರ “ಡಾಕ್-ಸೇವಾ; ಜನ್-ಸೇವಾ-ಒಂದೇ ಸೂರು-ಸೇವೆ ಹಲವಾರು” ಎಂಬ ಆಶಯದ ಅಂಚೆ-ಜನ ಸಂಪರ್ಕ ಅಭಿಯಾನವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿಯಲ್ಲಿ ನಡೆಯಿತು.

ಅಭಿಯಾನದ ನೇತೃತ್ವ ವಹಿಸಿದ್ದ ಕುಂದಾಪುರ ಉತ್ತರ ಉಪ ಅಂಚೆ-ವಿಭಾಗದ ಹೆಚ್ಚುವರಿ ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠ್ಠಲ ಭಟ್ಟರು ಮಾತನಾಡಿ, ಜನರಿಗೆ ಅನುಕೂಲವಾಗುವಂತೆ ಒಂದೇ ಸೂರಿನಡಿ ಹಲವಾರು ಅಂಚೆ-ಸೇವೆಗಳನ್ನು ನೀಡುವ ಸಲುವಾಗಿ ಇಂತಹ ಅಭಿಯಾನಗಳನ್ನು ಗ್ರಾಮ-ಗ್ರಾಮಗಳಲ್ಲಿ ಅಂಚೆ ಇಲಾಖೆಯು ನಡೆಸುತ್ತಿದ್ದು, ನೂರಾರು ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ತಿಳಿಸಿ, ವಿವಿಧ ಅಂಚೆ ಸೇವೆಗಳ ಮಾಹಿತಿ ನೀಡಿದರು.

ಈ ಅಭಿಯಾನದ ಅಧ್ಯಕ್ಷತೆ ವಹಿಸಿದ್ದ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ನ ಸದಸ್ಯ ಮತ್ತು ಕೊಡೇರಿ ಬಿಲ್ಲವ ಸಮಾಜ ಸೇವಾ ಸಂಘದ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಆನಂದ ಪೂಜಾರಿ ಕೊಡೇರಿ ಮಾತನಾಡುತ್ತಾ ಇಂತಹ ಜನಸ್ನೇಹಿ ಅಭಿಯಾನವನ್ನು ಆಯೋಜಿಸುತ್ತಿರುವ ಅಂಚೆ ಇಲಾಖೆಯನ್ನು ಶ್ಲಾಘಿಸಿ, ಅಭಿನಂದಿಸಿದರು. ಹಲವಾರು ಗ್ರಾಮಸ್ತರು ಆಧಾರ್-ಹೊಸ ನೋಂದಣಿ/ಪರಿಷ್ಕರಣೆ, ಆನ್-ಲೈನ್-ಅಪಘಾತ ವಿಮಾ ಸೌಲಭ್ಯ ಹಾಗು ವಿವಿಧ ಅಂಚೆ-ಸೌಲಭ್ಯಗಳ ಪ್ರಯೋಜನವನ್ನು ಪಡೆದುಕೊಂಡರು.


ಈ ಅಭಿಯಾನದಲ್ಲಿ ಅಂಚೆ ಇಲಾಖೆಯ ಕೊಡೇರಿ ಶಾಖೆಯ ಬಿಪಿಎಮ್ ರಾಜೇಶ್ವರಿ ಶಿವರಾಮ್. ಬಿಲ್ಲವ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸುಧೀರ್ ಪೂಜಾರಿ ಕಾಡ್ಕೇರಿ ಸೇರಿದಂತೆ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು

.



Related posts

ಜೆ ಸಿ ಐ ಶಂಕರಪುರ ಇದರ 2024 ರ ಸಾಲಿನ ಅಧ್ಯಕ್ಷರಾಗಿ ಇನ್ನಂಜೆ ಹರೀಶ್ ಪೂಜಾರಿ ಆಯ್ಕೆ.

Mumbai News Desk

ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ಮಕ್ಕಳಿಗೆ ಜ್ಞಾನ ಬೆಳಕು ಶಿಬಿರ

Mumbai News Desk

ಯಕ್ಷಧ್ರುವ ಪಟ್ಲ ಸಂಭ್ರಮದ ಉದ್ಘಾಟನೆ 

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟವಿಶ್ವ ಬಂಟರ ಸಮ್ಮೇಳನ .

Mumbai News Desk

ನಟ ರಕ್ಷಿತ್ ಶೆಟ್ಟಿ : ಕಾಪು ಮಾರಿಯಮ್ಮ ದರುಶನಗೈದು, ಜೀರ್ಣೋದ್ಧಾರ ಕಾರ್ಯ ವೀಕ್ಷಣೆ

Mumbai News Desk

ಶಿಲಾಮಯಗೊಳ್ಳುತ್ತಿರುವ ಕಾಪು ಮಾರಿಯಮ್ಮನ ದೇಗುಲ ಕಾಮಗಾರಿ ವೀಕ್ಷಣೆ : ಆದ್ಯಾತ್ಮ ಗುರು ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ

Mumbai News Desk