September 6, 2026
Mumbai News Kannada
ಮುಂಬಯಿ

ಮುಂಬೈ : ಘಾಟ್ಕೋಪರ್ ನಲ್ಲಿ ಪಾದಚಾರಿಗಳ ಮೇಲೆ ಟೆಂಪೋ ಡಿಕ್ಕಿ 1 ಸಾವು, 5 ಮಂದಿಗೆ ಗಾಯ.





ಘಾಟ್ ಕೋಪರ್ ಪಶ್ಚಿಮ ಚಿರಾಗ್ ನಗರದಲ್ಲಿ ನಿನ್ನೆ (ಡಿ. 27) ತಡ ಸಂಜೆ ವೇಗವಾಗಿ ಬಂದ ಟೆಂಪೋ ಪಾದಾಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ 35 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಆಕೆಯ 65 ವರ್ಷದ ತಾಯಿ ಮತ್ತು ಇತರ ನಾಲ್ವರು ಗಾಯಗೊಂಡಿದ್ದಾರೆ.
ಮೃತ ಮಹಿಳೆಯನ್ನು ಪ್ರೀತಿ ರಿತೇಶ್ ಪಟೇಲ್ ಎಂದು ಗುರುತಿಸಲಾಗಿದ್ದು ವಾರ್ಶಿವಾಡಿಯ ಭಾಗೀರಥಿ ಚಾಲ್ ನಿವಾಸಿಯಾಗಿದ್ದು, ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ನಂತರ ಟೆಂಪೋ ಚಾಲಕ 25 ವರ್ಷದ ಉತ್ತಮ್ ಬಬನ್ ಖಾರತ್ ನನ್ನು ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಕಳುಹಿಸಿದ್ದಾರೆ. ಪೊಲೀಸರ ಪ್ರಕಾರ ಶುಕ್ರವಾರ ಸಂಜೆ 6:55ರ ಸುಮಾರಿಗೆ ಚಿರಾಗ್ ನಗರದ ಮೀನು ಮಾರುಕಟ್ಟೆ ರಸ್ತೆಯಲ್ಲಿರುವ ಅಜಾದ ಮಸಾಲಾ ಅಂಗಡಿಯ ಮುಂದೆ ಈ ಘಟನೆ ಸಂಭವಿಸಿದೆ, ಕಿರಿದಾದ ರಸ್ತೆಯಲ್ಲಿ ಜನರು ತರಕಾರಿ ಖರೀದಿಸುತ್ತಿದ್ದಾಗ ಮಾರುಕಟ್ಟೆಗೆ ಕೆಲವು ಉತ್ಪನ್ನಗಳನ್ನು ತಲುಪಿಸಿದ ಖಾರತ್ ಚಾಲನೆ ಮಾಡುತಿದ್ದ ಟೆಂಪೋ ನಿಯಂತ್ರಣ ಕಳೆದುಕೊಂಡು ಆರು ಪಾದಚಾರಿಗಳ ಮೇಲೆ ಡಿಕ್ಕಿ ಹೊಡೆದಿದೆ.
ಖಾರತ್ ವಾಹನ ಚಲಿಸುವಾಗ ಮೂರ್ಛೆ ಹೊಂದಿದ್ದು ಸ್ಟಿರಿಂಗ್ ನಿಯಂತ್ರಣ ತಪ್ಪಿದಂತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ಡಿಸೇಂಬರ್ 10ರಂದು ಕುರ್ಲಾ ಪಶ್ಚಿಮದಲ್ಲಿ ಬೆಸ್ಟ್ ಬಸ್ ಚಾಲಕನ ನಿಯಂತ್ರಣ ಕಳಕೊಂಡು ಹಾರಾಟ ನಡೆಸಿ, 8 ಜನರು ಸಾವನಪ್ಪಿ, 49 ಜನರು ಗಂಭೀರ ಗಾಯಗೊಂಡ ಘಟನೆ ಇನ್ನೂ ಮಾಸದಿರುವ ಮುನ್ನವೇ, ಘಾಟ್ ಕೋಪರ್ ನ ಟೆಂಪೋ ಅಪಘಾತ ಜನರನ್ನು ಗಾಬರಿಗೊಳಿಸಿದೆ.



Related posts

ಮೀರಾ ಡಹಾಣೂ ಬಂಟ್ಸ್ (ರಿ) ಪಾಲ್ಘರ್ ಬೊಯಿಸರ್ ವಿಭಾಗದವರಿಂದ ಸ್ನೇಹ ಸಮ್ಮಿಲನ.

Mumbai News Desk

ಕುಂದರ್ ಮೂಲಸ್ಥಾನ ಸಭಾ, ಮುಂಬಯಿ – 90ನೇ ವಾರ್ಷಿಕ ಮಹಾಸಭೆ

Mumbai News Desk

ಬಂಟ್ಸ್ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ,

Mumbai News Desk

ಭಾಂಡೂಪ್ ಶ್ರೀ ಪಿಂಪಲೇಶ್ವರ ಮಹಾದೇವ ಮಂದಿರದಲ್ಲಿ ಶ್ರೀ ಶನೀಶ್ವರ ದೇವರ 47ನೇ ವಾರ್ಷಿಕ ಮಹಾಪೂಜೆ: ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆ!

Mumbai News Desk

ಮುಂಬೈ : ನವೆಂಬರ್ 14–15 ರಂದು ಪ್ರಮುಖ ನೀರಿನ ಪೈಪ್‌ಲೈನ್ ನಿರ್ವಹಣೆ; ಹಲವು ಪ್ರದೇಶಗಳಲ್ಲಿ 22 ಗಂಟೆಗಳ ಕಾಲ ನೀರು ಸರಬರಾಜು ಕಡಿತ

Mumbai News Desk

ಐಸಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಮೋಕ್ಷಿತ್ ಶ್ರೀಧರ್ ಮೂಲ್ಯ ಗೆ ಶೇ. 96 ಅಂಕ.

Mumbai News Desk