November 17, 2026
Mumbai News Kannada
ಕರ್ನಾಟಕ

ನ.18 : ಕಲ್ಯಾಣಪುರ ಮಿಲಾಗ್ರಿಸ್ ಪಿಯು ಕಾಲೇಜಿನಲ್ಲಿ ನಾಳೆ ವ್ಯಸನಮುಕ್ತ ಜಾಗೃತಿ ಅಭಿಯಾನ





















ಯುವಜನತೆಯಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಬಳಕೆ ಹಾಗೂ ವಿವಿಧ ರೀತಿಯ ವ್ಯಸನಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಲ್ಲಿಯಾಣಪುರದ ಮಿಲಾಗ್ರಿಸ್ ಪಿಯು ಕಾಲೇಜಿನಲ್ಲಿ ನವೆಂಬರ್ 18ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ‘ವ್ಯಸನಮುಕ್ತ ಜಾಗೃತಿ ಅಭಿಯಾನ’ (Anti-Addiction Drive) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಲಯನ್ಸ್ ಕ್ಲಬ್ ಕೆಮ್ಮಣ್ಣು, ಲಯನ್ಸ್ ಕ್ಲಬ್ ಕಲ್ಲಿಯಾಣಪುರ ಹಾಗೂ ಮಂಗಳೂರಿನ ಮೂಲತ್ಥ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ.) ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಈ ಅಭಿಯಾನದಲ್ಲಿ ವ್ಯಸನಗಳ ಕುರಿತು ಜಾಗೃತಿ, ಸಂವಾದ ಹಾಗೂ ಸಮಾಲೋಚನೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.
ಮಿಲಾಗ್ರಿಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಮೆಲ್ವಿನ್ ಎಂ. ಮೆಂಡೋನ್ಸಾ ಎಸ್.ಜೆ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಲಯನ್ಸ್ ಕ್ಲಬ್ ಕೆಮ್ಮಣ್ಣಿನ ಅಧ್ಯಕ್ಷ ಲಯನ್ ಜಗದೀಶ್ ಕೆಮ್ಮಣ್ಣು ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮೂಲತ್ಥ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಪ್ರಕಾಶ್ ಮೂಲತ್ಥ್ವ ಅವರು ಗೌರವ ಉಪಸ್ಥಿತರಿರಲಿದ್ದಾರೆ. ವ್ಯಸನಮುಕ್ತಿ ಸಮಾಲೋಚಕಿ, ಚಿಕಿತ್ಸಕಿ ಹಾಗೂ ಶಿಕ್ಷಣ ಸಲಹೆಗಾರರಾದ ಡಾ. ಕುಸುಮ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವ್ಯಸನಗಳ ದುಷ್ಪರಿಣಾಮಗಳು, ಅವುಗಳಿಂದ ದೂರವಿರುವ ಮಾರ್ಗಗಳು ಹಾಗೂ ವ್ಯಸನಕ್ಕೆ ಒಳಗಾದವರಿಗೆ ಅಗತ್ಯವಿರುವ ಸಮಾಲೋಚನೆ ಮತ್ತು ಚಿಕಿತ್ಸೆಯ ಕುರಿತು ಮಾಹಿತಿ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಲಯನ್ ಎಸ್. ಅನಂತ ನಾಯಕ್ (ಲಯನ್ ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್ ಫಾರ್ ಸರ್ವಿಸ್ ಟು ಸ್ಪೆಷಲ್ ಸ್ಮೈಲ್) ಎಂ.ಜೆ.ಎಫ್. ಲಯನ್ ವಿಲ್ಸನ್ ಫರ್ನಾಂಡಿಸ್( ಲಯನ್ಸ್ ಕ್ಲಬ್ ಕಲ್ಯಾಣಪುರದ ಅಧ್ಯಕ್ಷ) ಲಯನ್ ನಂದಕಿಶೋರ್ (ಲಯನ್ಸ್ ಕ್ಲಬ್ ಕೆಮ್ಮಣ್ಣಿನ ಎಕ್ಸ್‌ಟೆನ್ಷನ್ ಚೇರ್ಮನ್), ಗಣಪತಿ ವ್ಯವಸಾಯ ಸಹಕಾರಿ ಸಂಘ ಕೆಮ್ಮಣ್ಣಿನ ಅಧ್ಯಕ್ಷ ಟಿ. ಸತೀಶ್ ಶೆಟ್ಟಿ, ಮಿಲಾಗ್ರಿಸ್ ಕಾಲೇಜಿನ 1984ನೇ ಸಾಲಿನ ಬಿ.ಕಾಂ. ವಿದ್ಯಾರ್ಥಿಗಳ ಬ್ಯಾಚ್ ಸಂಯೋಜಕ ನವೀನ್‌ಕುಮಾರ್ ಗುಳಿಬೆಟ್ಟು ಹಾಗೂ 1987ನೇ ಸಾಲಿನ ಬಿ.ಕಾಂ. ಬ್ಯಾಚ್ ಸಂಯೋಜಕ ಮೆಲ್ವಿನ್ ಲೂಯಿಸ್ ಅವರು ಉಪಸ್ಥಿತರಿರಲಿದ್ದಾರೆ.

ಈ ಕಾರ್ಯಕ್ರಮಕ್ಕೆ 1984 ಮತ್ತು 1987ನೇ ಸಾಲಿನ ಬಿ.ಕಾಂ. ವಿದ್ಯಾರ್ಥಿಗಳ ಬ್ಯಾಚ್ ಸಹ ಪ್ರಾಯೋಜಕತ್ವ ವಹಿಸಿದೆ.



















ಯುವಜನತೆ ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಹಾಗೂ ಜವಾಬ್ದಾರಿಯುತ ಜೀವನವನ್ನು ರೂಪಿಸಿಕೊಳ್ಳಲು ಪ್ರೇರಣೆ ನೀಡುವ ಈ ಜಾಗೃತಿ ಅಭಿಯಾನದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಆಹ್ವಾನಿಸಿದ್ದಾರೆ.



Related posts

ಕರ್ನಾಟಕ SSLC ಫಲಿತಾಂಶ 2026 ಪ್ರಕಟ: ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ, ಉಡುಪಿ ದ್ವಿತೀಯ ಮತ್ತು ಕಲಬುರಗಿ ಕೊನೆಯ ಸ್ಥಾನ

Mumbai News Desk

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2025 ಪ್ರಕಟ : ಮುಂಬೈ ಯ ಡಾ ಪಿ. ವಿ. ಶೆಟ್ಟಿ ಸೇರಿದಂತೆ, 70 ಮಂದಿಗೆ ಗೌರವ

Mumbai News Desk

ತಾಯಿಯ ಅಂತಿಮ ದರ್ಶನ ಪಡೆಯುತ್ತಿದ್ದಂತೆ ಕಣ್ಣೀರಿಟ್ಟ ರವಿ ಪೂಜಾರಿ; ಹುಟ್ಟೂರಿನ ಮನೆಯಲ್ಲಿ ಭಾವುಕ ಕ್ಷಣ

Mumbai News Desk

ಬಸ್ ಸಂಚಾರ ಸ್ಥಗಿತ: ಪಳ್ಳಿ-ನಿಂಜೂರು ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ಮನವಿ

Mumbai News Desk

ಬೈಂದೂರು ಅಗ್ನಿಶಾಮಕ ಅಧಿಕಾರಿ ರಾಜೇಶ್ ಶೆಟ್ಟಿಯವರಿಗೆ ಮುಖ್ಯಮಂತ್ರಿ ಪದಕ

Mumbai News Desk

ತಾಯಿಯ ಅಗಲಿಕೆಯ ನೋವಿನಲ್ಲೂ ಅಪ್ರತಿಮ ಸಾಧನೆ: ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಆಳ್ವಾಸ್ ಕಾಲೇಜಿನ ದಿಶಾ

Mumbai News Desk