November 27, 2026
Mumbai News Kannada
ಕ್ರೀಡೆ

ಹೆಜಮಾಡಿಯಲ್ಲಿ ರಾಜ್ಯಮಟ್ಟದ ಹಗ್ಗಜಗ್ಗಾಟ ಸ್ಪರ್ಧೆ – ಕೋಟಿ ಚೆನ್ನಯ ಅತಿರಥ ಟ್ರೋಫಿ 2026 ಯಶಸ್ವಿ





















ಕೋಟಿ–ಚೆನ್ನಯ ಅತಿರಥ ಟ್ರೋಫಿ 2026ರಲ್ಲಿ ಪುರುಷರ ವಿಭಾಗದಲ್ಲಿ ಕಾವಳಪಡೂರು–ವಗ್ಗ, ಮಹಿಳಾ ವಿಭಾಗದಲ್ಲಿ ಬಜಗೋಳಿ ತಂಡಕ್ಕೆ ಪ್ರಥಮ ಸ್ಥಾನ

ಹೆಜಮಾಡಿ: ಹೆಜಮಾಡಿ ಬಿಲ್ಲವರ ಸಂಘ (ರಿ.) ಹಾಗೂ ಯುವವಾಹಿನಿ (ರಿ.) ಹೆಜಮಾಡಿ ಘಟಕದ ಸಹಯೋಗದಲ್ಲಿ ನವೆಂಬರ್ 22ರಂದು ಹೆಜಮಾಡಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ “ಕೋಟಿ–ಚೆನ್ನಯ ಅತಿರಥ ಟ್ರೋಫಿ 2026” ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಹೆಜಮಾಡಿ ಘಟಕದ ಅಧ್ಯಕ್ಷರಾದ ಶ್ರೀ ಪ್ರಥಮೇಶ್ ಪಿ. ಬಂಗೇರ ವಹಿಸಿದ್ದರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ಶ್ರೀ ವೈ. ಸುಧೀರ್ ಕುಮಾರ್ ಹಾಗೂ ಅಖಿಲ ಭಾರತ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಮಲತಾ ಎನ್. ಸುವರ್ಣ ಉದ್ಘಾಟಿಸಿದರು. ಭಾರತ್ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಸೂರ್ಯಕಾಂತ್ ಜೆ. ಸುವರ್ಣ ಧ್ವಜಾರೋಹಣ ನೆರವೇರಿಸಿದರು. ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಅವರು ಟ್ರೋಫಿ ಅನಾವರಣಗೊಳಿಸುವ ಮೂಲಕ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ, ದಯಾನಂದ ಹೆಜಮಾಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಯುವವಾಹಿನಿ ಹೆಜಮಾಡಿ ಘಟಕದ ಉಪಾಧ್ಯಕ್ಷರಾದ ಪ್ರಾಪ್ತಿ ಆರ್. ಸುವರ್ಣ ಸ್ವಾಗತಿಸಿ, ಘಟಕದ ಮಾಜಿ ಅಧ್ಯಕ್ಷರಾದ ಧೀರಜ್ ವಂದಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಪುರುಷರ ಹಾಗೂ ಮಹಿಳೆಯರ ತಂಡಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಿದವು. ತೀವ್ರ ಪೈಪೋಟಿಯಿಂದ ಕೂಡಿದ್ದ ಪುರುಷರ ವಿಭಾಗದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ, ಕಾವಳಪಡೂರು–ವಗ್ಗ ‘B’ ತಂಡ ಪ್ರಥಮ ಸ್ಥಾನ, ಅದೇ ಸಂಘದ ‘A’ ತಂಡ ದ್ವಿತೀಯ ಸ್ಥಾನ, ಬಲರಾಮ ಫ್ರೆಂಡ್ಸ್ ಮಲ್ಪೆ ತಂಡ ತೃತೀಯ ಸ್ಥಾನ ಹಾಗೂ ಕಂಬಳ ಫ್ರೆಂಡ್ಸ್ ಹೆಜಮಾಡಿ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು.

ಮಹಿಳೆಯರ ವಿಭಾಗದಲ್ಲಿ ಬಿಲ್ಲವ ಸಂಘ (ರಿ.) ಬಜಗೋಳಿ ತಂಡ ಪ್ರಥಮ ಸ್ಥಾನ, ಬಿಲ್ಲವ ಸಮಾಜ ಸೇವಾ ಸಂಘ ಕಾವಳಪಡೂರು–ವಗ್ಗ ತಂಡ ದ್ವಿತೀಯ ಸ್ಥಾನ, ಬಿಲ್ಲವ ಸಂಘ (ರಿ.) ನಿಟ್ಟೆ ತಂಡ ತೃತೀಯ ಸ್ಥಾನ ಹಾಗೂ ಐರನ್ ಉದ್ಯಾವರ ತಂಡ ನಾಲ್ಕನೇ ಸ್ಥಾನ ಗಳಿಸಿತು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರಥಮೇಶ್ ಪಿ. ಬಂಗೇರ ವಹಿಸಿದ್ದರು. ಈ ಸಂದರ್ಭದಲ್ಲಿ ವಿಜೇತ ತಂಡಗಳಿಗೆ ಗಣ್ಯರು ಬಹುಮಾನ ಹಾಗೂ ಟ್ರೋಫಿಗಳನ್ನು ವಿತರಿಸಿ ಅಭಿನಂದಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳ ಕ್ರೀಡಾಸ್ಫೂರ್ತಿ ಹಾಗೂ ಪ್ರದರ್ಶನವನ್ನು ಗಣ್ಯರು ಪ್ರಶಂಸಿಸಿದರು.

ಕ್ರೀಡೆ, ಸಂಘಟನೆ ಮತ್ತು ಸಾಮರಸ್ಯದ ಸಂದೇಶ ಸಾರಿದ ಕೋಟಿ–ಚೆನ್ನಯ ಅತಿರಥ ಟ್ರೋಫಿ 2026 ಕ್ರೀಡಾಕೂಟವು ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳ ಉತ್ಸಾಹಭರಿತ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.



Related posts

ಮೂಡುಬಿದಿರೆ – ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊದ ಆಯೋಜನೆಯಲ್ಲಿ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ ಸ್ಪರ್ಧೆ : ಪ್ರಿನ್ಸೆಸ್ ಆಫ್ ಕರಾವಳಿ 2025 ಆಗಿ ವಿಯಾ ಸಾಯಿ ಆಯ್ಕೆ

Mumbai News Desk

ವಿಶ್ವ ಬ್ಯಾಡ್ಮಿಂಟನ್ ದಿನಾಚರಣೆ: ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಪ್ರಥಮ ಬ್ಯಾಡ್ಮಿಂಟನ್ ಪಂದ್ಯಾಟ ಯಶಸ್ವಿ

Mumbai News Desk

ಗುರು ನಾರಾಯಣ ರಾತ್ರಿ ಪ್ರೌಢ ಶಾಲಾ ವಾರ್ಷಿಕ ಕ್ರೀಡಾ ಮಹೋತ್ಸವ

Mumbai News Desk

ಉಷಾ ಶ್ರೀಧರ ಶೆಟ್ಟಿ ಇವರ ನಾಯಕತ್ವ ತಂಡಕ್ಕೆ  ಟ್ರೋಪಿ ಯೊಂದಿಗೆ 50,000 ನಗದ ಬಹುಮಾನ

Mumbai News Desk

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಫುಟ್ ಬಾಲ್‌ ಲೀಗ್ KVAFL–2: ಟೈಗರ್ಸ್ ಯುನೈಟೆಡ್‌ಗೆ ಚಾಂಪಿಯನ್ ಪಟ್ಟ

Mumbai News Desk

ಬಿ ಎಸ್ ಕೆ ಬಿ ಎಸ್ಸೋಸಿಯೇಷನ್ ಮುಂಬಯಿ; ಗೋಕುಲ ಶತಮಾನೋತ್ಸವ ಆಚರಣೆಯ ನಿಮಿತ್ತ ತುಳು ಕನ್ನಡಿಗ ಗೇಮ್ಸ್ 2025,

Mumbai News Desk