October 21, 2026
Mumbai News Kannada
ಪ್ರಕಟಣೆ

ವಸಾಯಿ ಕರ್ನಾಟಕ ಸಂಘ : ಜ.26 ರಂದು 38ನೇ ವಾರ್ಷಿಕ ಮಹಾಸಭೆ,



ವಸಾಯಿ, ಜ.19- ಗ್ರಾಮೀಣ ಭಾಗವಾದ ವಸಾಯಿ ಪರಿಸರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತುಳು ಕನ್ನಡಿಗರ ಹೆಮ್ಮೆಯ ಸಂಸ್ಥೆ ವಸಾಯಿ ಕರ್ನಾಟಕ ಸಂಘದ  38ನೇ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ದೇವೇಂದ್ರ ಬಿ. ಬುನ್ನನ್‌ರವರ ಅಧ್ಯಕ್ಷತೆಯಲ್ಲಿ ಜ.26 ರಂದು ರವಿವಾರ ದಂದು ಸಂಘದ ಕಚೇರಿ ಸಂಖ್ಯೆ 3 ಮತ್ತು 4, ಹ್ಯಾಪಿ ಜೀವನ್ ಸೊಸೈಟಿ ಪಾರ್ವತಿ, ಸಿನೆಮಾದ ಎದುರುಗಡೆ, ವಸಾಯಿ (ಪ)  ಇಲ್ಲಿ 

ಬೆಳಿಗ್ಗೆ 7.30ಕ್ಕೆ ಸತ್ಯ ನಾರಾಯಣ ಮಹಾಪೂಜೆ, ಅನಂತರ ದ್ವಜಾರೋಹಣ, ಬಳಿಕ 10.30 ಕ್ಕೆ ವಾರ್ಷಿಕ ಮಹಾಸಭೆಯು ಸಂಘದ ಕಚೇರಿ  ಎದುರುಗಡೆಯಿರುವ ಸ್ವಾಮಿ ನಾರಾಯಣ ಮಂದಿರದ ಮೊದಲನೇ ಮಹಡಿಯ ಸಭಾಂಗಣ ಪಾರ್ವತಿ ಸಿನಿಮಾ ಹತ್ತಿರ ವಸಯಿ (ಪ)ಇಲ್ಲಿ

 ದೇವತಾ ಪ್ರಾರ್ಥನೆಯೊಂದಿಗೆ , ಗತ ಮಹಾಸಭೆಯ ಟಿಪ್ಪಣಿಯನ್ನು ಮಂಜೂರು ಮಾಡುವುದು, ವಾರ್ಷಿಕ ವರದಿಯನ್ನು ಮಂಜೂರು ಮಾಡುವುದು, 2025-26ರ ಅವಧಿಗೆ ಲೆಕ್ಕಪರಿಶೋಧಕರ ನೇಮಕ, ಅಧ್ಯಕ್ಷರ ಅನುಮತಿ ಮೇರೆಗೆ ಸಂಘದ ಸದಸ್ಯರು ಮಂಡಿಸಿರುವ ವಿಷಯಗಳ ಬಗ್ಗೆ ಚರ್ಚೆ, ಮತ್ತು 2025 -2027 ಕಾರ್ಯವಧಿಗೆ ಸಂಘದ ಕಾರ್ಯಕಾರಿ ಸಮಿತಿ ನೇಮಕ ಮಾಡುವ ಪ್ರಕ್ರಿಯೆ ನಡೆಯಲಿದೆ 

ಆ ಬಳಿಕ ಅಧ್ಯಕ್ಷರ ಭಾಷಣ, ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಸೂಚಿಯ ಪ್ರಕಾರ ನಡೆಯಲಿದೆ.

ಸಂಘದ ಸದಸ್ಯರಿಗೆ ವಿವರಗಳನ್ನು ವಾಟ್ಸ್‌ಆ್ಯಪ್, ಇ- ಮೇಲ್‌ಗಳಲ್ಲಿ ವಾರ್ಷಿಕ ವರದಿಯನ್ನು ಕಳುಹಿಸಲಾಗುವುದು. ವರದಿ ಲಭಿಸದ ಸದಸ್ಯರು ಸಂಘದ ಕಚೇರಿಯನ್ನು ಸಂಪರ್ಕಿಸಿ ಪಡೆಯಬಹುದು. ಸದಸ್ಯರು ಕ್ಲಪ್ತ ಸಮಯದಲ್ಲಿ ಹಾಜರಿರಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಮಯಕ್ಕೆ ಸರಿಯಾಗಿ ಹಾಜರಾಗದೇ ಇದ್ದಲ್ಲಿ ಅರ್ಧ ತಾಸಿನ ನಂತರ ಅದೇ ಸ್ಥಳದಲ್ಲಿ ಮುಂದುವರಿಸಿದ ಸಭೆಯೆಂದು ಪರಿಗಣಿಸಲಾಗುವುದು.

ಸಂಘದ ಸದಸ್ಯರು ಕ್ಲಪ್ತ ಸಮಯದಲ್ಲಿ ಸಭೆಯಲ್ಲಿ  ಪಾಲ್ಗೊಳ್ಳಬೇಕಾಗಿ ಗೌರವ ಪ್ರಧಾನ ಕಾರ್ಯದರ್ಶಿ, ರವೀಂದ್ರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ



Related posts

ನ. 21, 22 ರಂದು ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ, ಡೊಂಬಿವಲಿಯ 67ನೇ ವಾರ್ಷಿಕ ಮಂಗಳೋತ್ಸವ

Mumbai News Desk

ಜ.7ರಂದು ಶ್ರೀ ಅಯ್ಯಪ್ಪ ಭಕ್ತ ವೃಂದ, ಸಾಮಾಜಿಕ ಸಂಸ್ಥೆ, ನಾಲಾಸೋಪರ, ಇದರ ವಾರ್ಷಿಕ ಅಯ್ಯಪ್ಪ ಮಹಾಪೂಜೆ.

Mumbai News Desk

ಫೆ. 19 ರಂದು ಡೊಂಬಿವಲಿ ಶ್ರೀಮಹಾವಿಷ್ಣು ಮಂದಿರದಲ್ಲಿ “ದಶಾವತಾರ “ಹರಿನಾಮವಳಿ – ಶುಭ ಚಿಂತನ

Mumbai News Desk

ಎ. 25-26 ರಂದು ಬೊರಿವಲಿ ಮಂಡಪೇಶ್ವರ ಗುಹೆಯ ಶ್ರೀ ಪಾಂಡವೇಶ್ವರ ದೇವಸ್ಥಾನದಲ್ಲಿ ನೂತನ ಶಿವಲಿಂಗ ಪ್ರತಿಷ್ಠಾಪನೆಯೊಂದಿಗೆ ಬ್ರಹ್ಮ ಕಲಶೋತ್ಸವ

Mumbai News Desk

ಎ. 25, ತುಳು ಸಂಘ, ಬೋರಿವಲಿ16ನೇ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವ, ತುಳು ನಾಟಕ ಪ್ರದರ್ಶನ

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ (ರಿ), ಕಿಸಾನ್ ನಗರ ಥಾಣೆ :ಡಿ. 19ರಿಂದ 21ರ ತನಕ ರಜತ ಮಹೋತ್ಸವ, 25ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ

Mumbai News Desk