
ಉಡುಪಿ ನ 1. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಭಿಮಾನಿ ಬಳಗದ ಸರ್ವರ ಯೋಗಕ್ಷೇಮಕ್ಕಾಗಿ ಅವಿರತ ದುಡಿಯುವ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಅವರ ಜೊತೆಯಲ್ಲಿ ಮಹಾದಾನಿಗಳು ದಾನಿಗಳು ಮಹಾನಿರ್ದೇಶಕರುಗಳು ನಿರ್ದೇಶಕರು ಮಹಾಪೋಷಕರು ಪೋಷಕರು ಸರ್ವ ಸದಸ್ಯರು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ತಮ್ಮ ಸ್ವಂತ ಅಭಿವೃದ್ದಿಗಳನ್ನೆಲ್ಲವನ್ನು ಬದಿಗಿರಿಸಿ ನಿರಂತರ ಸಮಾಜಕ್ಕೋಸ್ಕರ ದುಡಿಯುವುದನ್ನು ನಾವು ನೀವೆಲ್ಲ ಕಂಡಿದ್ದೇವೆ ಅಕ್ಟೋಬರ್ 28ಹಾಗೂ 29 ರಂದು ಅಭೂತಪೂರ್ವಾಗಿ ವಿಶ್ವ ಬಂಟರ ಸಮ್ಮೇಳನವು ಯಶಸ್ವಿಯಾಗಿ ಜರಗಿತು
ಇಲ್ಲಿ ದುಡಿದವರು ಪ್ರತಿಯೊಬ್ಬರೂ ಕೂಡ ನಿಸ್ವಾರ್ಥಿಗಳೇ ಆಗಿದ್ದು ಸಾವಿರಾರು ಜನರ ರಕ್ತವನ್ನು ಬೆವರಾಗಿ ಹರಿಸಿ ರಾತ್ರಿ ಹಗಲೆನ್ನದೇ ದುಡಿದು ಸಮಾಜಕ್ಕಾಗಿ ಏನಾದರು ಕೊಡಬೇಕು ನಮ್ಮಿಂದಾದ ಸಹಾಯ ಮಾಡಬೇಕು ಎನ್ನುವ ಛಲದಿಂದ ದುಡಿದವರು ನಾವೆಲ್ಲರೂ ಇಂತಹ ಸಂದರ್ಭದಲ್ಲಿ ಅತ್ಯಂತ ನೋವು ಉಂಟಾಗುವ ರೀತಿಯಲ್ಲಿ ಸಮಾಜಘಾತುಕ ವ್ಯಕ್ತಿ ಜಾಲತಾಣಗಳಲ್ಲಿ ಅಸಭ್ಯವಾಗಿ ವರ್ತಿಸಿರುವುದನ್ನು ನಾವು ಕಂಡಿದ್ದೇವೆ ಇದು ಸಮಾಜ ಬಾಹಿರ ಕೃತ್ಯವಾಗಿದ್ದು ಇಂತಹ ಘಾತಕ ವ್ಯಕ್ತಿಯ ವಿರುದ್ಧ ಉಡುಪಿಯ ಠಾಣೆಯಲ್ಲಿ ಮತ್ತು ಪೊಲೀಸ್ ಜಿಲ್ಲಾ ಅಧೀಕ್ಷಕರಲ್ಲಿ ದೂರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಮೋಹನ್ ಶೆಟ್ಟಿ ಉಪಾಧ್ಯಕ್ಷ ಉಡುಪಿ ಬಂಟರ ಸಂಘ ಸುಪ್ರಸಾದ್ ಶೆಟ್ಟಿ ಬ್ರಹ್ಮಾವರ ಬಂಟರ ಸಂಘದ ಕಾರ್ಯದರ್ಶಿ, ಸಲ್ಲಿಸಲಾಗಿದ್ದು
ಇದೊಂದು ಸೈಬರ್ ಕ್ರೈಂ ನಲ್ಲಿ ದೂರು ಪಡೆದು ತಕ್ಷಣದಿಂದ ತನಿಖೆಯನ್ನು ಆರಂಭಿಸಿ ಯಾರು ಈ ಸಮಾಜದ ಸ್ವಾಸ್ಥ್ಯವನ್ನು ಕೆದಡುತ್ತಾರೋ ಅವರ ವಿರುದ್ಧ ಕಾನೂನು ಕ್ರಮವನ್ನ ಜರಗಿಸುವುದಾಗಿ ಪೊಲೀಸ್ ಇಲಾಖೆಯಿಂದ ಭರವಸೆ ದೊರಕಿದೆ ಮುಂದಿನ ದಿನಗಳಲ್ಲಿ ಈ ರೀತಿಯ ಸಮಾಜದಲ್ಲಿ ಭಯವನ್ನು ಉಂಟುಮಾಡುವ ರೀತಿಯಲ್ಲಿ ಹಾಗೆಯೇ ಒಡಕು ತರುವ ರೀತಿಯಲ್ಲಿ ಅಸಂವಿಧಾನಿಕ ಭಾಷೆಯನ್ನು ಬಳಸಿ ಸಾಮಾಜಿಕ ಜಾಲತಾಣವನ್ನು ದುರುಪಯೋಗ
ಪಡಿಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಅತ್ಯಂತ ಶೀಘ್ರವಾಗಿ ಕೈಗೊಳ್ಳುವುದಾಗಿ ಇಲಾಖೆ ನೀಡಿದ ಭರವಸೆಯನ್ನು ನಂಬಿಕೊಳ್ಳಲಾಗಿದೆ
ಮುಂದೆ ಈ ರೀತಿಯ ದುರ್ನಡತೆಗಳು ನಡೆಯದಂತೆ ಪೊಲೀಸ್ ಇಲಾಖೆಯು ಕ್ರಮ ಕೈಗೊಳ್ಳಲಿದೆ ಹಾಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿಗೂ ಕೂಡ ಈ ಕೆಟ್ಟ ಚಾಳಿಯ ವ್ಯಕ್ತಿಯ ನಡವಳಿಕೆ ಮತ್ತು ಅದನ್ನು ಜಾಲತಾಣಗಳಲ್ಲಿ ಪ್ರಚುರಪಡಿಸಿ ಶೇರ್ ಮಾಡಿದವರ ಮೇಲೆಯೂ ಕೂಡ ಕ್ರಮ ಜರುಗಿಸಲು ಇಲಾಖೆಯಲ್ಲಿ ವಿನಂತಿಸಲಾಗಿದೆ ಈ ಪ್ರಕರಣವು ಅತ್ಯಂತ ಗಂಭೀರವಾಗಿ ಪೊಲೀಸ್ ಇಲಾಖೆಯು ಪರಿಗಣಿಸಿ ಜನರ ಮಧ್ಯೆ ಉಂಟಾಗುವ ಕ್ಷೋಭೆಯನ್ನು ನಿಲ್ಲಿಸುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ತಿಳಿಸಿದ್ದಾರೆ