September 6, 2026
Mumbai News Kannada
ಕರ್ನಾಟಕ

ಬೈಂದೂರು ಅಗ್ನಿಶಾಮಕ ಅಧಿಕಾರಿ ರಾಜೇಶ್ ಶೆಟ್ಟಿಯವರಿಗೆ ಮುಖ್ಯಮಂತ್ರಿ ಪದಕ





ಬೈಂದೂರು, ಮಾ.5.ಬೈಂದೂರು ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಾಜೇಶ್ ಶೆಟ್ಟಿಯವರು ಪ್ರಸ್ತುತ ವರ್ಷದಲ್ಲಿ ಕೊಡಮಾಡಿದ ಮುಖ್ಯಮಂತ್ರಿಗಳ ಪದಕವನ್ನು ಫೆ.24ರಂದು ಬೆಂಗಳೂರಿನ ಆರ್.ಎ. ಮುಂಡ್ಕಾರ್ ಟ್ರೈನಿಂಗ್ ಸೆಂಟರಿನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಗೃಹಮಂತ್ರಿ ಜಿ.ಪರಮೇಶ್ವರ್ ರವರಿಂದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅಗ್ನಿಶಾಮಕ ವಿಭಾಗದ ಡಿಜಿಪಿ ಪ್ರಶಾಂತ್ ಕುಮಾರ್ ಥಾಕುರ್, ಐಜಿಪಿ ಎಮ್.ನಂಜುಂಡ ಸ್ವಾಮಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜೇಶ್ ಶೆಟ್ಟಿಯವರು ಸುರತ್ಕಲ್ ಕಾಟಿಪಳ್ಳ ನಿವಾಸಿಯಾಗಿದ್ದು 1996ರಲ್ಲಿ ಅಗ್ನಿಶಾಮಕ ಇಲಾಖೆಯಲ್ಲಿ ಫಯರ್ಮೇನ್ ಆಗಿ ಸೇವೆಗೆ ಸೇರಿದ್ದರು. 2002ರಲ್ಲಿ ಅಗ್ನಿಶಾಮಕ ಚಾಲಕನಾಗಿ ಸೇವೆಯಲ್ಲಿ ಮುಂದುವರಿದು ಕದ್ರಿ, ಪಾಂಡೇಶ್ವರ, ಮೂಡುಬಿದಿರೆ, ಬೆಂಗಳೂರು , ಬಂಟ್ವಾಳದಲ್ಲಿ ಕಾರ್ಯ ನಿರತರಾಗಿ ಪ್ರಸ್ತುತ ಪದೋನ್ನತಿ ಗೊಂಡು ಬೈಂದೂರು ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರನ್ನು ಬೈಂದೂರು ಅಗ್ನಿಶಾಮಕ ಠಾಣೆಯ ಸರ್ವ ಸಿಬ್ಬಂದಿಗಳು, ಸಿವೈಸಿ ಕಾಟಿಪಳ್ಳ ಇದರ ಪದಾಧಿಕಾರಿಗಳು ಮತ್ತು ಸದಸ್ಯರು, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸಹಿತ ಅವರ ಅಪಾರ ಅಭಿಮಾನಿಗಳು ಅಭಿನಂದಿಸಿದ್ದಾರೆ.



Related posts

ಕರ್ನಾಟಕ : ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಬಿಜೆಪಿ

Mumbai News Desk

ಈಗ ಯಕ್ಷಗಾನದಲ್ಲಿ ಸಲಿಂಗಕಾಮ ಇಲ್ಲ, ಹೇಳಿಕೆಯಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ: ಪುರುಷೋತ್ತಮ ಬಿಳಿಮಲೆ

Mumbai News Desk

ಕರಾವಳಿ,‌ ಮಲೆನಾಡು ಭಾಗಕ್ಕೆ ‌ ಶೀಘ್ರದಲ್ಲಿ ಹೊಸ ಪ್ರವಾಸೋದ್ಯಮ ನೀತಿ: ಡಿ. ಕೆ. ಶಿವಕುಮಾರ್

Mumbai News Desk

ಕರ್ನಾಟಕ : ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್

Mumbai News Desk

ಧರ್ಮಸ್ಥಳ ಬುರುಡೆ ಕೇಸ್ನಲ್ಲಿ ಮೇಜರ್ ಟ್ವಿಸ್ಟ್, ಮಾಸ್ಕ್ ಮ್ಯಾನ್ ಅರೆಸ್ಟ್.

Mumbai News Desk

ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ಹೊಸ ನಾಯಕ: ಜೂನ್ 3ಕ್ಕೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ

Mumbai News Desk