September 6, 2026
Mumbai News Kannada
ಪ್ರಕಟಣೆ

ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಬ್ರಹ್ಮಕಲಶೋತ್ಸವ: ಮಾರ್ಚ್ 6ರಂದು ಬಪ್ಪನಾಡಿನಿಂದ ಹಸಿರು ವಾಣಿ ಹೊರೆ ಕಾಣಿಕೆ ಸಮರ್ಪಣೆ





ಮೂಲ್ಕಿ ಸಸಿಹಿತ್ಲು ಭಗವತಿ ಕ್ಷೇತ್ರದ ಭಗವತಿ ಅಮ್ಮನವರು ಮತ್ತು ಮೂಲ್ಕಿ ಬಪ್ಪನಾಡು ಕ್ಷೇತ್ರದ ದುರ್ಗಾಪರಮೇಶ್ವರಿ ಅಮ್ಮನವರು ಪರಸ್ಪರ ಸಹೋದರಿಯರಾಗಿದ್ದಾರೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಬಪ್ಪನಾಡು ದೇವಾಲಯದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸಸಿಹಿತ್ಲು ಕ್ಷೇತ್ರದಿಂದ ಶ್ರೀ ಭಗವತಿಯು ಸಪರಿವಾರವಾಗಿ ಆಗಮಿಸಿ ಭೇಟಿ ನೀಡುವ ಸುದೀರ್ಘ ಸಂಪ್ರದಾಯ ಬೆಳೆದುಬಂದಿದೆ.
ಪ್ರಸಕ್ತ ಸಾಲಿನಲ್ಲಿ ಮಾರ್ಚ್ 4ರಿಂದ 8ರವರೆಗೆ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವವು ನಡೆಯಲಿದೆ. ಈ ಪವಿತ್ರ ಕಾರ್ಯಕ್ರಮದ ಪ್ರಯುಕ್ತ, ಶ್ರೀ ಕ್ಷೇತ್ರ ಬಪ್ಪನಾಡು ಹಾಗೂ ದೇವಳದ ಒಂಬತ್ತು ಮಾಗಣೆಯ ಭಕ್ತವೃಂದದ ವತಿಯಿಂದ ಹಸಿರು ವಾಣಿ ಹೊರೆ ಕಾಣಿಕೆಯನ್ನು ಮಾರ್ಚ್ 6ರಂದು ಅರ್ಪಿಸಲು ನಿರ್ಧರಿಸಲಾಗಿದೆ.
ಈಗಾಗಲೇ ಶ್ರೀ ಕ್ಷೇತ್ರ ಬಪ್ಪನಾಡಿನಲ್ಲಿ ಹೊರೆ ಕಾಣಿಕೆಯನ್ನು ಸ್ವೀಕರಿಸಲು ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಮಾರ್ಚ್ 6ರಂದು ಸಂಜೆ 4 ಗಂಟೆಗೆ ಶ್ರೀ ಬಪ್ಪನಾಡು ಕ್ಷೇತ್ರದಿಂದ ಸಸಿಹಿತ್ಲು ಭಗವತಿ ಕ್ಷೇತ್ರದವರೆಗೆ ಭವ್ಯ ಮೆರವಣಿಗೆಯ ಮೂಲಕ ಸಾಗಿ ಹಸಿರು ವಾಣಿ ಹೊರೆ ಕಾಣಿಕೆಯನ್ನು ಸಮರ್ಪಿಸಲಾಗುವುದು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

​ಸಮಸ್ತ ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಾಯಿಯ ಕೃಪೆಗೆ ಪಾತ್ರರಾಗಬೇಕೆಂದು ಹಾಗೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಡಳಿತ ಮಂಡಳಿ, ಶ್ರೀ ಕ್ಷೇತ್ರ ಬಪ್ಪನಾಡು ದೇವಸ್ಥಾನ ಮತ್ತು 9 ಮಾಗಣೆಯ ಸರ್ವ ಭಕ್ತವೃಂದ ವಿನಂತಿಸಿದ್ದಾರೆ.



Related posts

ಡಿ.24 ಕ್ಕೆ ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಮೀರಾ ,ಭಾರತಿ ಪಾರ್ಕ್ ಮೀರಾರೋಡ್, 27ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk

ಡೊಂಬಿವಲಿ: ಫೆ. 14ರಂದು ಶ್ರೀ ಜೈ ಭವಾನಿ ಶನೀಶ್ವರ ಮಂದಿರದ 36ನೇ ವಾರ್ಷಿಕ ಮಂಗಳೋತ್ಸವ

Mumbai News Desk

ಸೆ.7 ರಂದು ಡೊಂಬಿವಲಿಯಲ್ಲಿ 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಮಹೋತ್ಸವ: ಭಕ್ತಾದಿಗಳಿಗೆ ಹಾರ್ದಿಕ ಸ್ವಾಗತ

Mumbai News Desk

ಮೆಹತಾ ಕಾಲೇಜ್ ಐರೋಲಿ: ಜೂನ್ 27 ರಂದು ಬೆಳ್ಳಿ ಹಬ್ಬದ ನಿಮಿತ್ತ ವಿಶೇಷ ಕಾರ್ಯಕ್ರಮ: ಪರಂಪರೆಯಿಂದ ಪ್ರಗತಿಗೆ ಸಂವಾದ, ಸಾಧಕರಿಗೆ ಗೌರವಾರ್ಪಣೆ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ : ದೀಪಾವಳಿ ಹಬ್ಬದ ಪ್ರಯುಕ್ತ ಭಜನಾ ಸಂಕೀರ್ತನೆ

Mumbai News Desk

ವಜ್ರ ಮಹೋತ್ಸವದ ಸಂಭ್ರಮದಲ್ಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ,

Mumbai News Desk