April 2, 2025
ಮುಂಬಯಿ

ಕುಲಾಲ ಸಂಘ ಮುಂಬಯಿಯ ಮುಖವಾಣಿ “ಅಮೂಲ್ಯ” ದ ಅದ್ದೂರಿಯ ಬೆಳ್ಳಿ ಹಬ್ಬ ಸಮಾರಂಭ

ಉದ್ಘಾಟನೆ :

ಮುಂಬಯಿ : “ಅಮೂಲ್ಯ” ದ 25ನೇ ಸಂಭ್ರಮದಲ್ಲಿ ನಾವೆಲ್ಲರೂ ಬಾಗವಹಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಮುಂಬಯಿಯ ಎಲ್ಲಾ 20 ಲಕ್ಷ ಕನ್ನಡಿಗರ ಪರವಾಗಿ ಅಮೂಲ್ಯ ಪತ್ರಿಕೆಗೆ ಅಭಿನಂದನೆಗಳು ಹಾಗೂ ಶುಭಾಶಯಗಳು.   ಪತ್ರಿಕೆ ಜನರನ್ನು ಬರಹಗಾರರನ್ನಾಗಿ ಮಾಡುತ್ತದೆ. ದಿನಪತ್ರಿಕೆಗಳ ಹಾಗೂ ಮುಖವಾಣಿಗಳ ಮೂಲಕ ಅನೇಕ ಲೇಖಕರು ಬೆಳಕಿಗೆ ಬಂದಿದ್ದಾರೆ. ಇಲ್ಲಿನ ಕನ್ನಡ ಪತ್ರಿಕೆ ಹಾಗೂ ಮುಖವಾಣಿಯಿಂದಾಗಿ ಮುಂಬಯಿಯಲ್ಲಿ ತಕ್ಕಮಟ್ಟಿಗೆ ಕನ್ನಡ ಉಳಿದಿದೆ, ಎಂದು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಮುಖರಾದ ಡಾ. ಜಿ ಎನ್ ಉಪಾಧ್ಯ ಹೇಳಿದರು.

ಕುಲಾಲ ಸಂಘ ಮುಂಬಯಿಯ ಮುಖವಾಣಿ ಅಮೂಲ್ಯ  ತ್ರೈಮಾಸಿಕದ ಬೆಳ್ಳಿ ಹಬ್ಬ ಸಮಾರಂಭವು ನ.5 ರಂದು ನಂದಾದೀಪ ಹೈಸ್ಕೂಲ್ ಸಭಾಗ್ರಹ, ಜಯಪ್ರಕಾಶ್ ನಗರ್, ಗೋರೆಗಾಂವ್ ಪೂರ್ವ ಇಲ್ಲಿ ದಿ. ಪಿ. ಕೆ. ಸಾಲ್ಯಾನ್ ಸ್ಮಾರಕ ವೇದಿಕೆಯಲ್ಲಿ ಕುಲಾಲ ಸಂಘದ ಅಧ್ಯಕ್ಷರಾದ ರಘು ಎ ಮೂಲ್ಯ ಇವರ ಅಧ್ಯಕ್ಷತೆಯಲ್ಲಿ ಗೌರವ ಅಧ್ಯಕ್ಷರಾದ ಪಿ ದೇವದಾಸ್ ಎಲ್ ಕುಲಾಲ್ ಇವರ ಗೌರವ ಉಪಸ್ಥಿತಿಯಲ್ಲಿ ಸಂಪಾದಕರಾದ ಶಂಕರ್ ವೈ ಮೂಲ್ಯ ರ ಉಪಸ್ಥಿತಿಯಲ್ಲಿ ಜರಗಿದ್ದು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತಿಹಾಸದ ಪುಟವನ್ನು ತಿರುಗಿನೋಡಿದರೆ ಕುಂಬಾರರು, ಕುಲಾಲರು ನಿಜವಾಗಿಯೂ ಸೌಂದರ್ಯದ ಅನ್ವೇಷಕರು. ಭಾರತೀಯ ಸಂಸ್ಕೃತಿಯನ್ನು ರೂಪಿಸಿದಂತಹ ಒಂದು ಸಮುದಾಯ. ಮುಂಬಯಿಯಲ್ಲಿದ್ದಷ್ಟು ಮುಖವಾಣಿಗಳು ದೇಶದ ಯಾವ ಬಾಗದಲ್ಲಿ ಇಲ್ಲ. ಸರಕಾರದ ನೆರವನ್ನು ಈ ಪತ್ರಿಕೆಯು ಪಡಕೊಳ್ಳಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುಲಾಲ ಸಂಘದ ಅಧ್ಯಕ್ಷರಾದ ರಘು ಎ ಮೂಲ್ಯ ಅವರು ಕುಲಾಲ ಸಂಘ ಮುಂಬಯಿಯ ಮುಖವಾಣಿ “ಅಮೂಲ್ಯ” ದ ಬೆಳ್ಳಿ ಹಬ್ಬ ಸಮಾರಂಭವು ಎಲ್ಲರ ಸಹಾಯ ಹಾಗೂ ಪ್ರೋತ್ಸಾಹದಿಂದ ವಿಶೇಷ ರೀತಿಯಲ್ಲಿ ಅರ್ಥಪೂರ್ಣವಾಗಿ ನಡೆದಿದೆ. ಇಂದಿನ ಈ ಬೆಳ್ಳಿ ಹಬ್ಬ ಸಮಾರಂಭವು ಇತಿಹಾಸದ ಪುಟ ಸೇರುವಂತಾಗಲಿ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಬಾರ ವ್ಯಕ್ತಪಡಿಸುತ್ತಾ ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸುವ ಅವಕಾಶ ಒದಗಿದ್ದು ನನ್ನ ಸೌಭಾಗ್ಯ ಎಂದರು. ಜನಮನ ಗೆದ್ದ ನಮ್ಮ ಪತ್ರಿಕೆ ಅಮೂಲ್ಯ. ಪತ್ರಿಕೆ ಸಮಯಕ್ಕೆ ಸರಿಯಾಗಿ ಹೊರಬರುವ ತನಕದ ಎಲ್ಲಾ ಕಷ್ಟಗಳ ಬಗ್ಗೆ ಅದರ ಸಂಪಾದಕರಿಗೆ ಮಾತ್ರ ಗೊತ್ತು. ಪತ್ರಿಕೆಗೆ ಜಾಹೀರಾತನ್ನು ನೀಡಿ ಸಹಕರಿಸಿ, ಯುವ ಸಾಹಿತಿಗಳು,  ಹೊಸ ಬರಹಗಾರರು ಪತ್ರಿಕೆ ಲೇಖನ ಬರಹಗಳನ್ನು ಕಳುಹಿಸಬೇಕು. ಅಂತರ್ಜಾಲದ ಈ ಕಾಲದಲ್ಲಿ ಪತ್ರಿಕೆಯನ್ನು ಇನ್ನೂ ಉನ್ನತ ಮಟ್ಟದಲ್ಲಿ ಮುಂದುವರಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ  ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಅವರು ಮಾತನಾಡುತ್ತಾ ಪತ್ರಿಕೆ ನಡೆಸುವುದು ಸುಲಭವಲ್ಲ. ಎಲ್ಲಾ ಸಮಾಜ ಬಾಂಧವರನ್ನು ಪ್ರೀತಿಯಿಂದ ಕಾಣುವ ಸಮಾಜ ಕುಲಾಲ ಸಮಾಜ. ಮುಂಬಯಿಯಲ್ಲಿದಷ್ಟು ಜಾತೀಯ ಸಂಘಟನೆಗಳ ಒಗ್ಗಟ್ಟು ಬೇರೆ ಎಲ್ಲಿಯೂ ಕಾಣ ಸಿಗುದಿಲ್ಲ. ಸಮಾಜ ಸೇವೆಯಿಂದ ಯಾವುದೇ ಹಾನಿಯಿಲ್ಲ. ಯುವ ಜನಾಂಗವು ಸಂಘದಲ್ಲಿ ಸಕ್ರಿಯವಾಗಬೇಕು ಎಂದು ಶುಭ ಹಾರೈಸಿದರು. 

ಕರ್ನಾಟಕಮಲ್ಲ ದ ಸಂಪಾದಕ ಚಂದ್ರಶೇಖರ ಪಾಲತ್ತಾಡಿ ಮಾತನಾಡುತ್ತಾ ಹೊರನಾಡಿನಲ್ಲಿ ಸಮಾಜದ ಪತ್ರಿಕೆಯೊಂದು 25ನೇ ವರ್ಷವನ್ನು ಆಚರಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಪಿ. ಕೆ. ಸಾಲ್ಯಾನರಂತಹ ಸಮಾಜಿಕ ಚಿಂತಕ ಅಮೂಲ್ಯವನ್ನು ಹುಟ್ಟು ಹಾಕಲಿಕ್ಕೆ ಎಷ್ಟು ಕಾರಣರೋ ಅದನ್ನು ಬೆಳೆಸುವಂತಹ ನೀವು ನಾವೆಲ್ಲರೂ ಅಷ್ಟೇ ಕಾರಣರು. ಪಿ. ಕೆ. ಸಾಲ್ಯಾನರು ಕೇವಲ ಅಮೂಲ್ಯವನ್ನು ಮಾತ್ರವಲ್ಲ ಮುಂಬಯಿಯ ಅನೇಕ ಜಾತೀಯ ಪತ್ರಿಕೆ ಗಳ ಪ್ರಗತಿಗೆ ಕಾರಣರು. ಆದುದರಿಂದ ಈ ಸಮಾಜವು ಸಣ್ಣ ಸಮಾಜವಲ್ಲ ಇತರರಲ್ಲಿ ಸಂಸ್ಕೃತಿಯನ್ನು ಬೆಳೆಸುವಂತೆ ಮಾಡುವ ಹಾಗೂ ಮಾನವನನ್ನು ಮಾನವನನ್ನಾಗಿಸುವ ಮಾನವ ಸಮಾಜ ಎನ್ನಬಹುದು.  ಯಾವುದೇ ಸಮಾಜದ ಅಭಿವೃದ್ದಿಗೆ ಸಮಾಜದ ಮುಖವಾಣಿಯ ಪಾತ್ರ ಮಹತ್ವದ್ದು ಎಂದರು.

ಇನ್ನೋರ್ವ ಮುಖ್ಯ ಅತಿಥಿ ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರು ಮಾತನಾಡುತ್ತಾ ಮುಂಬಯಿ ಎಲ್ಲಾ ಸಂಘಟನೆಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಯಾಕೆಂದರೆ ಆಗಾಗ ನಾವು ಒಟ್ಟು ಸೇರಬೇಕಾಗುತ್ತದೆ.  ಸಂಘಕ್ಕೆ ಎಲ್ಲರೂ ಕಿಂಚಿತ್ತು ಸಮಯ ನೀಡಿದಲ್ಲಿ ಸಂಘ ನಡೆಸುವುದು ಸುಲಭ ಸಾಧ್ಯ ಎಂದರು.

ಗೌರವ ಅತಿಥಿ ಕರ್ನಾಟಕ ಸಂಘ ಮುಂಬೈಯ ಅಧ್ಯಕ್ಷರಾದ ಭರತ್ ಕುಮಾರ್ ಪೊಲಿಪು ಮಾತನಾಡುತ್ತಾ ಇದು  ಕುಲಾಲ ಸಂಘ ಮಾತ್ರವಲ್ಲ ಒಟ್ಟು ಕನ್ನಡಿಗರ ಕಾರ್ಯಕ್ರಮದಂತಿದೆ ಎನ್ನಲು ಸಂತೋಷವಾಗುತ್ತಿದೆ. ನಮಗೆ ಸಂಸ್ಕೃತಿ ಮುಖ್ಯ. ಮುಂಬಯಿಯ ಎಲ್ಲಾ ಜಾತೀಯ ಸಂಘಟನೆಗಳ ಮುಖವಾಣಿಗಳು ಇಲ್ಲಿ ತಮ್ಮ ಜಾತೀಯ ಹಾಗೂ ನಾಡಿನ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿದೆ.

ಗೌರವ ಅತಿಥಿಗಳಾಗಿ ಆಗಮಿಸಿದ ಒಕ್ಕಲಿಗ ಸಂಘ ಮಹಾರಾಷ್ಟ್ರದ ಗೌರವ ಕಾರ್ಯದರ್ಶಿ ಸಿಎ ಮಂಜುನಾಥ ಗೌಡ ಮಾತನಾಡಿ ಜೀವನದಲ್ಲಿ ಸಾಧನೆ ಮಾಡಿದವರು ಇಂದು ವೇದಿಕೆಯಲ್ಲಿದ್ದು ನಾನು ಇನ್ನು ಮಾಡಬೇಕಾದದ್ದು ಬಹಳವಿದೆ ಎನ್ನುತ್ತಾ ಶುಭ ಹಾರೈಸಿದರು.

ಗೌರವ ಅತಿಥಿ ಖ್ಯಾತ ನ್ಯೂರೋ ಸರ್ಜನ್ ಡಾ. ಪುಷ್ಪರಾಜ್ ಕೃಷ್ಣ ಮೂಲ್ಯ ಅವರು ಮಾತನಾಡಿ ಆಧುನಿಕ ಜೀವನ ಶೈಲಿಯಿಂದಾಗಿ ಅನಾರೋಗ್ಯ ವನ್ನು ಎದುರಿಸಬೇಕಾಗಿದ್ದು, ನನ್ನನ್ನು ಸಂಪರ್ಕಿಸಿದಲ್ಲಿ ನಾನು ಈ ಬಗ್ಗೆ ನನ್ನಿಂದಾಗುವ ಸಲಹೆಯನ್ನು ನೀಡಬಲ್ಲೆ ಎನ್ನುತ್ತಾ ಅಮೂಲ್ಯ ಪತ್ರಿಕೆಗೆ ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ಅಮೂಲ್ಯದ ಮಾಜಿ ಸಂಪಾದಕರಾದ ಕೃಷ್ಣ ಕೆ. ಬಂಜನ್, ಕುಟ್ಟಿ ಕೆ ಮೂಲ್ಯ, ದಿ. ನಾರಾಯಣ ನೆತ್ರಕೆರೆ ಇವರ ಧರ್ಮಪತ್ನಿ ರಾಜೇಶ್ವರಿ ನೇತ್ರಕೆರೆ ಇವರನ್ನು ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಸನ್ಮಾನಿಸಿದರು. ನಗರದ ವಿವಿಧ ಜಾತೀಯ ಸಂಘಟನೆಗಳ ಪತ್ರಿಕೆಗಳ ಸಂಪಾದಕರನ್ನು ಗೌರವಿಸಲಾಯಿತು.

ಅಮೂಲ್ಯ ಸಂಪಾದಕರಾದ ಶಂಕರ್ ವೈ ಮೂಲ್ಯ ಎಲ್ಲರನ್ನು ಸ್ವಾಗತಿಸಿ ದಿನ ಪೂರ್ತಿ ನಡೆಯುವ ಸಮಾರಂಭಕ್ಕೆ ಎಲ್ಲರ ಪ್ರೋತ್ಸಾಹವನ್ನು ಕೋರಿದರು.

ಸಂಘದ  ಗೌರವ ಅಧ್ಯಕ್ಷರಾದ ಪಿ ದೇವದಾಸ ಎಲ್ ಕುಲಾಲ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕುಲಾಲ ಸಂಘದ ಚಟುವಟಿಕೆಗಳ ಬಗ್ಗೆ ಪತ್ರಕತ್ರ ದಿನೇಶ್ ಬಿ. ಕುಲಾಲ್ ಮಾಹಿತಿಯಿತ್ತರು.

ವೇದಿಕೆಯಲ್ಲಿ ಭಾರತ್ ಬ್ಯಾಂಕಿನ ಉಪಾಧ್ಯಕ್ಷ ಸೋಮನಾಥ ಬಿ. ಅಮೀನ್, ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ ಪಿ ಶೇಖರ ಮೂಲ್ಯ, ಕುಲಾಲ ಸಂಘದ ಗೌ.  ಪ್ರ.ಕಾರ್ಯದರ್ಶಿ, ಕರುಣಾಕರ ಬಿ. ಸಾಲ್ಯಾನ್, ಗೌ. ಕೋಶಾಧಿಕಾರಿ ಜಯ ಎಸ್ ಅಂಚನ್,   ಮಹಿಳಾ ಕಾರ್ಯಾಧ್ಯಕ್ಷೆ, ಮಮತಾ ಎಸ್. ಗುಜರನ್,  ಸಂಘದ ಮೀರಾ ರೋಡ್ ವಿರಾರ್ ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಸದಾನಂದ ಕುಮಾರ್ ಸಾಲಿಯಾನ್,  ಸಂಘದ ಸ್ಥಳೀಯ ಸಮಿತಿಗಳ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರುಗಳಾದ ಮಮತಾ ಎಸ್. ಕುಲಾಲ್ (ನವಿಮುಂಬಯಿ), ಕುಶಲ ಜೆ ಬಂಗೇರ (ಠಾಣೆ ಕಸಾರ ಬಿವಂಡಿ), ಚಂದ್ರಾವತಿ ಎಸ್ ಸಾಲ್ಯಾನ್ (ಮೀರಾ ರೋಡ್ ವಿರಾರ್),  ಮಲ್ಲಿಕಾ ಎಸ್ ಮೂಲ್ಯ (ಸಿ ಎಸ್ ಟಿ  ಮುಲೂಂಡ್ ಮಾನ್ಕುರ್ಡ್), ಆಶಲತಾ ಎಸ್ ಮೂಲ್ಯ , ನಾರಾಯನ್ ಸಿ ಪೆರ್ನೆ, ರಘುನಾಥ್ ಕರ್ಕೇರ, ಅಶೋಕ್ ಕುಲಾಲ್,  ಇವರು ಉಪಸ್ಥಿತರಿರುವರು.

ವಿಚಾರ ಗೋಷ್ಥಿ

ವಿಚಾರ ಗೋಷ್ಥಿಯಲ್ಲಿ “ಮುಂಬಯಿ ಸಂಘ ಸಂಸ್ಥೆಗಳ ಕನ್ನಡ ಪತ್ರಿಕೆಗಳು ಅಂದು ಇಂದು”  ಈ ಬಗ್ಗೆ ಕರ್ನಾಟಕ ಮಲ್ಲದ ಉಪಸಂಪಾದಕರಾದ ಶ್ರೀನಿವಾಸ ಜೋಕಟ್ಟೆಯವರು ವಿಚಾರ ಮಂಡಿಸಿದರು.

ಕವಿಗೋಷ್ಠಿ

ಹಿರಿಯ ಸಾಹಿತಿ  ಸೀಮಂತೂರು ಚಂದ್ರಹಾಸ ಸುವರ್ಣ ಇವರ ಅಧ್ಯಕ್ಷತೆಯಲ್ಲಿ  ನಡೆದೆ ಕವಿಗೋಷ್ಠಿಯಲ್ಲಿ ಡಾ. ಜಿಪಿ ಕುಸುಮ,  ಸಾ ದಯಾ,  ಸುಜಾತ ಶೆಟ್ಟಿ, ಶಾರದಾ ಅಂಚನ್,  ಉದಯ ಮೂಲ್ಯ, ಗಣೇಶ್ ಕುಮಾರ್ ಇವರಿಂದ ಕವನ ವಾಚನ ನಡೆಯಿತು.

ಜೂ| ರಾಜ್ ಕುಮಾರ್ ಖ್ಯಾತಿಯ ಜಗದೀಶ್‌ಶಿವಪುರ ಇವರಿಂದ ಸಂಗೀತ ಕಾರ್ಯಕ್ರಮ,  ಅಮಿತಾ ಕಲಾ ಮಂದಿರ ಮೀರಾರೋಡ್ ನ ಅಮಿತಾ ಜತ್ತನ್ ಬಳಗದವರಿಂದ ಮತ್ತು ಪೊವಾಯಿಯ  ನಟನಾ ನೃತ್ಯ ಅಕಾಡೆಮಿಯ ಗೀತಾ ಸಾಲಿಯಾನ್ ಬಳಗ ಹಾಗೂ ಸಂಘದ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದವರಿಂದ ನೃತ್ಯ  ಕಾರ್ಯಕ್ರಮ ನಡೆಯಿತು. ಎಚ್. ಕೆ. ನಯನಾಡು ಕಾರ್ಯಕ್ರಮವನ್ನು ನಿರ್ವಹಿಸಿದರು ಬಿ. ದಿನೇಶ್ ಕುಲಾಲ್ ಮತ್ತು ಶಂಕರ್ ವೈ ಮೂಲ್ಯ ಸಹಕರಿಸಿದರು.

ಸಮಾರೋಪ ಸಮಾರಂಭ :

ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ರಘು ಎ ಮೂಲ್ಯ ಇವರ ಅಧ್ಯಕ್ಷತೆಯಲ್ಲಿ, ಗೌ. ಅಧ್ಯಕ್ಷರಾದ ಪಿ ದೇವದಾಸ್ ಎಲ್ ಕುಲಾಲ್ ಇವರ ಗೌರವ ಉಪಸ್ಥಿತಿಯಲ್ಲಿ ಸಂಪಾದಕರಾದ ಶಂಕರ್ ವೈ ಮೂಲ್ಯ ರ ಉಪಸ್ಥಿತಿಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಂಘದ ಗೌರವ ಕೋಶಾಧಿಕಾರಿ ಜಯ ಎಸ್ ಅಂಚನ್ ಅತಿಥಿಗಳನ್ನು ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ, ಕರುಣಾಕರ ಬಿ. ಸಾಲ್ಯಾನ್ ಪ್ರಸ್ತಾವನೆ ಮಾತುಗಳನ್ನಾಡಿದರು.  ಸಂಪಾದಕರಾದ ಶಂಕರ್ ವೈ ಮೂಲ್ಯ ಅವರು ಅಮೂಲ್ಯ ವಿಶೇಷ ಸಂಚಿಕೆ ಬಗ್ಗೆ ಸಂಕ್ಷಿಪ್ತ ವಾಗಿ ತಿಳಿಸಿದರು.

ಅಮೂಲ್ಯ ವಿಶೇಷ ಸಂಚಿಕೆ ಯನ್ನು ಸರ್ವಜ್ಞ ವಿದ್ಯಾಪೀಠ ವಿರಾರ್ ಪಶ್ಚಿಮ ಇದರ ಕುಲ ಪತಿ  ಆಚಾರ್ಯ ಪ್ರಹ್ಲಾದ ಆಚಾರ್ಯ ಆರ್ ನಾಗರಹಳ್ಳಿ ಬಿಡುಗಡೆಗೊಳಿಸಿದರು. ಆ ನಂತರ ಮಾತನಾಡಿದ ಅವರು ಸಂಕೋಚವಿಲ್ಲದೆ ಮನಸ್ಸಿನಲ್ಲಿರುವ ಸಮಾಜಕ್ಕೆ ಉಪಯೋಗವಾಗುವ ವಿಚಾರಗಳನ್ನು ವ್ಯಕ್ತಮಾಡುವು ಕೃತಿ ಪತ್ರಿಕೆ. ಮುಂಬಯಿ ಯಲ್ಲಿ ಸುಮಾರು 20-30 ವರ್ಷಗಳ ಹಿಂದೆ ಪತ್ರಿಕೆ ಓದುಗರ ಸಂಖ್ಯೆ ಬಹಳ ಇತ್ತು. ಆದರೆ ಇಂದು ಎಲ್ಲರಲ್ಲೂ ಮೊಬೈಲ್ ಇದೆ. ಪತ್ರಿಕೆಯನ್ನು 25 ವರ್ಷ ನಡೆಸುವುದು ಒಂದು ಸಾಹಸ. ಅಮೂಲ್ಯ ಹೆಸರಿಗೆ ಮಹತ್ವವಿದೆ. ಈ ಪತ್ರಿಕೆಯನ್ನು ಆರಂಭದಲ್ಲಿ ನೋಡಿದ್ದೆ. ನಾನು ಬೆಳೆದದ್ದು ತುಳು ಸಮಾಜದ ಮಧ್ಯೆ. ಸಮಾಜ ಕ್ಕೆ ಈ ಪತ್ರಿಕೆ ಹೆಚ್ಚಿನ ಮಟ್ಟಕ್ಕೆ ಪ್ರಯೋಜನಕಾರಿಯಾಗಲಿ ಎಂದು ಶುಭ ಹಾರೈಸಿದರು.

ಗೌರವ ಅತಿಥಿಯಾಗಿ ಆಗಮಿಸಿದ ದಕ್ಷಿಣ ಕನ್ನಡ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಅವರು ಮಾತನಾಡುತ್ತಾ ಊರಿನ ನಮ್ಮ ಯಾವುದೇ ಅಭಿವೃದ್ದಿ ಕೆಲಸಕ್ಕೆ ನಮಗೆ ಶಕ್ತಿಯಾಗಿ ನಿಲ್ಲುವವರು ಮುಂಬಯಿಯ ನಮ್ಮ ಸಮಾಜ ಬಾಂಧವರು. ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಮುಂಬಯಿಗರ ನಮ್ಮ ಸಮಾಜದವರ ಕೊಡುಗೆಯನ್ನು ಯಾವತ್ತೂ ಮರೆಯುವಂತಿಲ್ಲ. ಅಮೂಲ್ಯ ಪತ್ರಿಕೆಯು ಸಮಸ್ತ ಕುಲಾಲರ ದ್ವನಿಯಾಗಲಿ. ಸಮಾಜದ ಎಲ್ಲಾ ಪ್ರತಿಭೆಗಳನ್ನು ಈ ಪತ್ರಿಕೆ ಗುರುತಿಸಿ ಬೆಳಕಿಗೆ ತರಲಿ ಎನ್ನುತ್ತಾ ಮಾತೃ ಸಂಘವು ಎರಡು ಯೋಜನೆಗಳಾದ ಸಮಾಜದ ಬಡ ಹೆಣ್ಣು ಮಕ್ಕಳಿಗೆ ಉಚಿತ ಹಾಸ್ಟೆಲ್ ಹಾಗೂ ವಿವಾಹವಾಗುವ ವಯಸ್ಸಿಗೆ ಬಂದಂತಹ ಸಮಾಜದ ಯುವ ಜನಾಂಗಕ್ಕೆ ಕರೆದು ಪ್ರತೀ ವರ್ಷ ವೀರನಾರಾಯಣ ದೇವಸ್ಥಾನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ವೈವಾಹಿಕ ಪ್ರಸ್ತಾಪ ವನ್ನು ಮಾಡುವ ಈ ಎಲ್ಲಾ ಯೋಜನೆಗಳಿಗೆ ಮುಂಬಯಿಯ ಸಮಾಜ ಬಾಂದವರು ಉಪಸ್ಥಿತರಿದ್ದು ಸಹಕರಿಸಬೇಕೆಂದರು.

ಗೌರವ ಅತಿಥಿ ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಕುಲಶೇಖರ ಅಧ್ಯಕ್ಷರಾದ ಪ್ರೇಮಾನಂದ ಕುಲಾಲ್ ದಂಪತಿಯನ್ನು ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಸನ್ಮಾನಿಸಿದ್ದು ನಂತರ ಮಾತನಾಡುತ್ತಾ ನಮ್ಮ ಹಿರಿಯರು ೯೪ ವರ್ಷಗಳ ಹಿಂದೆ ಸಂಘಟನೆಯನ್ನು ಕಟ್ಟಿ ಅದಕ್ಕೆ ಪೂರಕವಾಗಿ ಜ್ಯೋತಿ ಕ್ರೇಡಿಟ್ ಸೊಸೈಟಿಯನ್ನು ಕಟ್ಟಿ ಸಮಾಜದ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ಬಂದಿರುವ ಅಮೂಲ್ಯ ಪತ್ರಿಕೆಗೆ ಇಂದು 25 ರ ಸಂಭ್ರಮ. ನನಗೆ ನೀಡಿದ ಗೌರವಕ್ಕೆ ನಾನು ಚಿರಋಣಿಯಾಗಿದ್ದೇನೆ. ದೇವಸ್ಥಾನಕ್ಕೆ ನೀಡಿದ ನಿಮ್ಮ ಸಹಕಾರ ಎಂದೂ ಮರೆಯುವಂತಿಲ್ಲ. ಅಮೂಲ್ಯ ಪತ್ರಿಕೆ ಸಮಾಜದ ಎಲ್ಲರಿಗೂ ತಲಪುವಂತಾಗಲಿ ಎಂದರು.

ತುಳು ವಿಚಾರಗೋಷ್ಠಿ – ಮಾಧ್ಯಮ ಕ್ಷೇತ್ರದಲ್ಲಿ ಕುಲಾಲರು ಎಂಬ ವಿಷಯದ ಬಗ್ಗೆ ಅಬ್ಬಕ್ಕ ಟಿವಿ ಮಂಗಳೂರು ಇದರ ಆಡಳಿತ ನಿರ್ದೇಶಕರಾದ ಶಶಿಧರ ಪೊಯ್ಯತ್ತ ಬೈಲ್ ಮಾತನಾಡಲಿರುವರು ವೇದಿಕೆಯಲ್ಲಿ  ಮುಖ್ಯ ಅತಿಥಿಗಳಾಗದ ಅಯ್ಯ ಪ್ಯಾಕರ್ಸ್ ಅಂಡ್ ಮೂವರ್ಸ್ ಮುಂಬೈ ಇದರ ಸಿಎಂಡಿ ಅಶೋಕ್ ರಾಜು ಮೂಲ್ಯ,  ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ ಸಾಲ್ಯಾನ್,  ಮುಂಬಯಿಯ ಉದ್ಯಮಿ ದಾನಿ ಸುನಿಲ್ ಆರ್. ಸಾಲ್ಯಾನ್, ಅಂಬರ್ನಾಥ ನ ಜಯದೀಪ್ ಕನ್ಸ್ಟ್ರಕ್ಷನ್ ನ ಮಾಲಕರಾದ ಜಗದೀಶ್ ಆರ್ ಭಂಜನ್,  ಗೌರವ ಅತಿಥಿಗಳಾದ ನಾಸಿಕ್ ಹೋಟೆಲ್ ಉದ್ಯಮಿ ಸಂಜೀವ ಕೆ ಬಂಗೇರ,  ಪುಣೆಯ ಉಧ್ಯಮಿ ಎಸ್, ಅರ್. ಬಂಜನ್, ನೇರುಳ್ ಹರೀಶ್ ಹಾಸ್ಪಿಟಲ್ ನ ಆಡಳಿತ ನಿರ್ದೇಶಕ ಡಾ.ಹರೀಶ್ ಬಿ. ಸಾಲ್ಯಾನ್, ಕುಲಾಲ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್ ಗುಜರನ್,  ಸದಾನಂದ ಎಸ್. ಕುಲಾಲ್, ಸಂಘದ  ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರುಗಳಾದ  ಸಂಜೀವ ಬಂಗೇರ (ಸಿ ಎಸ್ ಟಿ  ಮುಲೂಂಡ್ ಮಾನ್ಕುರ್ಡ್)   ಆನಂದ ಕೆ. ಕುಲಾಲ್, (ಚರ್ಚ್ ಗೇಟ್ ದಹಿಸರ್), ಮೋಹನ್ ಎಂ ಬಂಜನ್ (ಮೀರಾ ರೋಡ್ ವಿರಾರ್),  ಸದಾನಂದ ಸಾಲ್ಯಾನ್, ಕುಷಾ ಕುಲಾಲ್, ಅಮೂಲ್ಯ ಉಪ ಸಂಪಾದಕ ಆನಂದ ಬಿ. ಮೂಲ್ಯ, ಜೊತೆ ಕಾರ್ಯದರ್ಶಿ ಎಲ್ ಅರ್ ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ  ಕುಲಾಲ ಸಂಘದ ಅಧ್ಯಕ್ಷರಾದ ರಘು ಎ ಮೂಲ್ಯ ದಂಪತಿ,  ಅಮೂಲ್ಯ ಸಂಪಾದಕರಾದ ಶಂಕರ್ ವೈ ಮೂಲ್ಯ ದಂಪತಿ ಇವರನ್ನು ಸನ್ಮಾನಿಸಲಾಯಿತು. ಮುದ್ರಣ ವಿನ್ಯಾಸಗಾರ ವಾಮನ್ ಡಿ ಮೂಲ್ಯ ಅದ್ಯಪಾಡಿ ದಂಪತಿ, ಪತ್ರಕರ್ತ ಗುರುರಾಜ್ ಪೋಟ್ನಿಸ್, ಮತ್ತು  ಪತ್ರಕರ್ತ ಹಾಗೂ ಸಂಘಟಕ ಬಿ. ದಿನೇಶ್ ಕುಲಾಲ್, ದಂಪತಿಯನ್ನು ಗೌರವಿಲಾಯಿತು.

ಕಾರ್ಯಕ್ರಮಗಳನ್ನು ಹೆಚ್ ಕೆ ನಯನಾಡು ನಿರ್ವಹಿಸಿದರು.

ಜೊತೆ ಕಾರ್ಯದರ್ಶಿಗಳಾದ ಎಲ್ ಆರ್ ಮೂಲ್ಯ ಮತ್ತು ಲಕ್ಷ್ಮಣ್ ಸಿ ಮೂಲ್ಯ , ಜೊತೆ ಕೋಶಾಧಿಕಾರಿ ಸುನಿಲ್ ಕುಲಾಲ್ ,  ಅಮೂಲ್ಯ ಉಪ ಸಂಪಾದಕರಾದ ಆನಂದ ಬಿ. ಮೂಲ್ಯ, ಸಂಪಾದಕ ಮಂಡಳಿಯ ರಘು ಎ ಮೂಲ್ಯ, ಗಿರೀಶ್ ಬಿ ಸಾಲಿಯಾನ್, ಡಿ ಐ ಮೂಲ್ಯ .ಪಿ ಶೇಖರ್ ಮೂಲ್ಯ,  ರಘುನಾಥ್  ಕರ್ಕೇರ, ವಾಮನ್ ಡಿ ಮೂಲ್ಯ ಅದ್ಯಪಾಡಿ,  ಸೂರಜ್ ಹಂಡೆಲ್,  ಎಲ್ ಆರ್ ಮೂಲ್ಯ. ಅಶೋಕ್ ಬಿ ಕುಲಾಲ್, ಕುಲಾಲ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಸ್ಥಳೀಯ ಸಮಿತಿಗಳ ಸರ್ವ ಸದಸ್ಯರು ಕಾರ್ಯಕ್ರಮಕ್ಕೆ ಸಹಕರಿಸಿದರು.

Related posts

ಶ್ರೀ ಮಹಿಷಮರ್ದಿನಿ ದೇವಸ್ಥಾನ ಬೊರಿವಲಿ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನ ,

Mumbai News Desk

ಶ್ರೀ ಮಹಾ ವಿಷ್ಣು ಮಂದಿರ ಡೊಂಬಿವಲಿ, ಇದರ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ

Mumbai News Desk

ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಾರ್ಜ್ ಫೆರ್ನಾಂಡಿಸ್ ರ 94ನೇ ಜನ್ಮದಿನಾಚರಣೆ 

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಆಶ್ರಯದಲ್ಲಿ ಯಕ್ಷಗಾನ

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ ಪೋರ್ಟ್ ಮುಂಬಯಿ, 41 ನೇ ವಾರ್ಷಿಕ ಮಹಾಪೂಜೆ, ಇರುಮುಡಿ ಸೇವೆ ಸಂಪನ್ನ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ, ಡೊಂಬಿವಲಿ ಸ್ಥಳೀಯ ಕಚೇರಿಯ 35 ನೇ ವಾರ್ಷಿಕೋತ್ಸವಕ್ಕೆ ಚಾಲನೆ

Mumbai News Desk