31 C
Mumbai
March 6, 2026
Mumbai News Kannada
ಸುದ್ದಿ

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿಗೆ ಮುಂಬೈಯ ನಿಷ್ಠಾವಂತ ಪತ್ರಕರ್ತ ನವೀನ್ ಕೆ ಇನ್ನ ಆಯ್ಕೆ.





ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು, ಕಳೆದ ಎರಡು ದಶಕಗಳಿಂದ ಕನ್ನಡ ಭಾಷೆ, ಸಂಸ್ಕೃತಿ, ಕಲೆಗಳ ಉಳಿವಿಗಾಗಿ ಶ್ರಮಿಸುತ್ತಿದೆ.
ಸಂಘವು ಪ್ರತಿ ವರ್ಷ ದತ್ತಿನಿಧಿ ಪ್ರಶಸ್ತಿಯನ್ನು ಪ್ರಧಾನಿಸುತ್ತಿದ್ದು ಈ ಬಾರಿಯ ನ್ಯಾಯವಾದಿ ಮಹಮ್ಮದ್ ಇಬ್ರಾಹಿಂ ಪಾರ ಸ್ವರಣಾರ್ಥ, ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲ ದುಬೈ ಅವರು ನೀಡುವ ದತ್ತಿನಿಧಿ ಪ್ರಶಸ್ತಿಗೆ ಮುಂಬಯಿಯ ಪ್ರಾಮಾಣಿಕ, ನಿಷ್ಠಾವಂತ ಪತ್ರಕರ್ತ ನವೀನ್ ಕೆ ಇನ್ನ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭ ಜುಲೈ 13ರಂದು ಬೆಳ್ಳಿಗ್ಗೆ, ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಲಯನ್ಸ್ ಸಭಾಂಗಣದಲ್ಲಿ ನಡೆಯಲಿದೆ. ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷ ಯು. ಟಿ. ಖಾದರ್, ಕರ್ನಾಟಕ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ, ಉಪ ಸಭಾಪತಿ ಎಂ. ಕೆ. ಪ್ರಾಣೇಶ್, ಕರ್ನಾಟಕ ಮುಖ್ಯಮಂತ್ರಿಗಳ ಸಲಹೆಗಾರ ಕೆ ವಿ ಪ್ರಭಾಕರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾಸರಗೋಡು ಸಂಸದರಾದ ಮೋಹನ್ ಉಣ್ಣಿತ್ತಾನ್,ಕೇರಳ ಶಾಸಕ ಎನ್ ಎ ನೆಲ್ಲಿಕುನ್ನು ಮೊದಲಾದ ಗಣ್ಯರು ಪ್ರಶಸ್ತಿ ಪ್ರಧಾನಿಸಲಿರುವರು.
ಪ್ರಶಸ್ತಿಯು ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹೊಂದಿರುತ್ತದೆ.

ನವೀನ್ ಕೆ. ಇನ್ನ, ಪರಿಚಯ ಮತ್ತು ಸಾಧನೆ.

ಕಳೆದ 33 ವರ್ಷಗಳಿಂದ ಮುಂಬಯಿ ಮಹಾನಗರದ ದೈನಿಕ ಕರ್ನಾಟಕ ಮಲ್ಲ ದಲ್ಲಿ ವರದಿಗಾರನಾಗಿ, ಛಾಯಾಚಿತ್ರಗ್ರಾಹಕನಾಗಿ, ಜಾಹಿರಾತು ಪ್ರತಿನಿಧಿಯಾಗಿ, ಕ್ರೀಡಾ ಅಂಕಣ ಕಾರನಾಗಿ ಕಾರ್ಯನಿರ್ವಹಿಸುತ್ತಿರುವ ನವೀನ್ ಕೆ.ಇನ್ನ ಅವರು
ಸಮಾಜಮುಖಿ ಸೇವೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸುವವರು. ಮುಂಬಯಿಯಲ್ಲಿ ಕನ್ನಡವನ್ನು ಗಟ್ಟಿಗೊಳಿಸುವಲ್ಲಿ ಶ್ರಮಿಸುತ್ತಾ ಬಂದವರಲ್ಲಿ ಪ್ರಮುಖ ಸಾಲಲ್ಲಿ ನಿಲ್ಲುವ ಅರ್ಹತೆ ಪಡೆದವರು ನವೀನ್ ಕೆ.ಇನ್ನ. ಪತ್ರಿಕೆ ಮುಖೇನ
ಸಾಮಾಜಿಕ ,ಶೈಕ್ಷಣಿಕ, ವೈದ್ಯಕೀಯ ಸೇವೆ, ಮುಂಬಯಿ ಮಹಾನಗರದ ಹೆಚ್ಚಿನ ವಿವಿಧ ಜಾತೀಯ, ಸಂಘಟನೆ, ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ,ಕಲಾ ಸಂಸ್ಥೆಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವವರು.

ತುಳುನಾಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಲೇಖನಗಳು ಅಲ್ಲದೆ ಮುಂಬಯಿ ಮಹಾನಗರದ ಹಾಗೂ ತುಳುನಾಡಿನ ನೂರಾರು ಧಾರ್ಮಿಕ ಕ್ಷೇತ್ರಗಳ ಪರಿಚಯ ಲೇಖನಗಳು ಕರ್ನಾಟಕ ಮಲ್ಲದಲ್ಲಿ ಪ್ರಸಾರಮಾಡಿದವರು. ‘

ಪತ್ರಕರ್ತನಾಗಿ ಸಾಧನೆಗಳು:


‘ಬೀದಿಯಲ್ಲಿ ಅಣಕು ನಾಟಕವಾಗುತ್ತಿರುವ ಭೂತಾರಾಧನೆ’ ಎಂಬ ಲೇಖನಕ್ಕೆ ಓದುಗರಿಂದ ಪ್ರಶಂಸೆ ಹಾಗೂ ಬೆಂಬಲ ವ್ಯಕ್ತ. ಈ ಲೇಖನದ ಬಗ್ಗೆ ನೂರಕ್ಕೂ ಹೆಚ್ಚು ಮಿಕ್ಕಿ ಪತ್ರಗಳು ಬಂದಿದ್ದು ತುಂಬಾ ಚರ್ಚೆಗೆ ಕಾರಣವಾಯಿತು. ದೈವ ದೇವರುಗಳ ಬಗ್ಗೆ ಅನನ್ಯ ನಂಬಿಕೆ, ಭಕ್ತಿ ವಿಶ್ವಾಸ. ಮುಂಬಯಿ ಮಹಾನಗರದಲ್ಲಿದ್ದು ಮನೆಯಿಂದ ತಪ್ಪಿಸಿಕೊಂಡಿದ್ದ ಮೂವರು ಎಳೆ ಪ್ರಾಯದ ಮಕ್ಕಳನ್ನು ಅವರವರ ಊರಿನ ಮನೆಗೆ ತಲುಪಿಸಿದ ತೃಪ್ತಿ.
ಸನ್ಮಾನ -ಪ್ರಶಸ್ತಿಗಳು- ಪತ್ರಕರ್ತರ ವೇದಿಕೆ(ರಿ) ಬೆಂಗಳೂರು ಉಡುಪಿ ಜಿಲ್ಲಾ ಘಟಕ ನೀಡುವ ರಾಜೇಶ ಶಿಬಾಜೆ ಗೌರವ.
ಇನ್ನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಆಳ್ವಾಸ್ ನುಡಿಸಿರಿ ವಿರಾಸತ್ ಸನ್ಮಾನ.
ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇವರಿಂದ ಯಕ್ಷ ರಕ್ಷಾ ಕಲಾ ಪ್ರಶಸ್ತಿ,
ಕಲಾಜಗತ್ತು ಮುಂಬಯಿ ಇವರಿಂದ ತೌಳವ ಶ್ರೀ ಪ್ರಶಸ್ತಿ
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ 12ನೇಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ
ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿ ಇವರಿಂದ ಸನ್ಮಾನ
ಮುಂಬಯಿ ಮಹಾನಗರದ ಹಾಗೂ ನಾಡಿನ ಅನೇಕ ಧಾರ್ಮಿಕ ಸಾಮಾಜಿಕ ಸಂಸ್ಥೆಗಳಲ್ಲಿ‌ ಹಲವಾರು ಸನ್ಮಾನ, ಪ್ರಶಸ್ತಿಗಳು ಇವರ ಸಾಧನೆಗೆ ದೊರೆತಿವೆ.

ನವೀನ್ ಇನ್ನಾ ಅವರು ಇನ್ನ ಬೈಲುಮನೆ ಶ್ರೀಮತಿ ವನಜಾಕ್ಷಿ ಕೆ. ಸಾಲಿಯಾನ್ ಮತ್ತು ಮುಲ್ಕಿ ಮಾನಂಪಾಡಿ ಕೃಷ್ಣಪ್ಪ ಕೆ.ಸಾಲಿಯಾನ್ ದಂಪತಿಯ ಪುತ್ರನಾಗಿ 22/01/1968ರಲ್ಲಿ ಜನಿಸಿರುವರು.
ಪ್ರಾಥಮಿಕ ಶಿಕ್ಷಣವನ್ನು ಘಾಟ್ಕೋಪರ್ ಪಂತ್ ನಗರ್ ಮುನ್ಸಿಪಲ್ ಶಾಲೆಯಲ್ಲಿ, ಹೈಸ್ಕೂಲ್ ಶಿಕ್ಷಣ ವಿದ್ಯಾ ಪ್ರಸಾರಕ ಮಂಡಲ ಹೈಸ್ಕೂಲು ಮುಲುಂಡ್ ನಲ್ಲಿಯೂ,
ಸಿದ್ದಾರ್ಥ ಕಾಲೇಜು ಪೋರ್ಟ್ ನಲ್ಲಿ ಪದವಿ ಶಿಕ್ಷಣವನ್ನು ಮುಗಿಸಿರುವರು .ಪತ್ನಿ ಮಲ್ಲಿಕಾ ಎನ್. ಇನ್ನ(ಕೌಡೂರು ರಂಗನಪಲ್ಕೆ ಎಲಿಯಾಲು ದರ್ಕಾಸು ಮನೆ) ಹಾಗೂ ಪುತ್ರಿ- ದಿಯಾ ಎನ್ ಇನ್ನ( ಕ್ರಿಕೆಟ್ ಆಟಗಾರ್ತಿ,ಮಾಟುಂಗ ಖಾಲ್ಸಾ ಕಾಲೇಜಿನ 13ನೇ ತರಗತಿಯ ವಿದ್ಯಾರ್ಥಿನಿ) ಇವರೊಂದಿಗಿನ ಚಿಕ್ಕ, ಸುಂದರ ಸಂಸಾರ ನವೀನ್ ಅವರದ್ದು.



Related posts

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಪದ್ಮವಿಭೂಷಣ ಜಾರ್ಜ್ ಫರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ-2025 ಪ್ರದಾನ ಸಮಾರಂಭ, ಪೂರ್ವಭಾವಿ ಸಭೆ

Mumbai News Desk

ರಾಷ್ಟ್ರೀಯ ನಾಟಕ ಸ್ಪರ್ಧೆ – ಉಡುಪಿಯ ನವಸುಮ ರಂಗಮಂಚ ಕೊಡವೂರು ತಂಡ ಪ್ರಥಮ.

Mumbai News Desk

ನಿಟ್ಟೆ ತೇಜಮ್ಮ ಪೂಜಾರಿ ನಿಧಾನ

Mumbai News Desk

ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ ‘ಬ್ಯಾಂಕೊ ಬ್ಲೂ ರಿಬ್ಬನ್- 2023- 2024 ಪ್ರಶಸ್ತಿ

Mumbai News Desk

ಜಮ್ಮು-ಕಾಶ್ಮೀರ ಉಗ್ರರ ದಾಳಿಗೆ ಶಿವಮೊಗ್ಗ ನಿವಾಸಿ ಬಲಿ

Mumbai News Desk

” ಸಾಧನೆಯ ಮೂಲಕ ಮನಸ್ಸನ್ನು ತಿಳಿಗೊಳಿಸುವುದೇ ಜೀವನದ ಮುಖ್ಯ ಉದ್ದೇಶ “: ಶ್ರೀ ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ.

Mumbai News Desk