


ಉಡುಪಿ ಪ್ರವಾಸೋದ್ಯಮ ಇಲಾಖೆ ಪ್ರಸ್ತುತ ಪಡಿಸಿದ, ಚಿತ್ರ ನಿರ್ಮಾಪಕ ಕ್ಲಿಂಗ್ ಜಾನ್ಸನ್ ಅವರ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದ ಉಡುಪಿಯ ಸುಂದರ ತಾಣಗಳ ಬಗ್ಗೆ ಹಾಗೂ ವಿಶೇಷತೆಯನ್ನು ಸಾರುವ “ಉಡುಪಿ ಅಂಥೆಮ್” ಸುಂದರ ಗೀತೆಯ ವಿಡಿಯೋವನ್ನು ಉಡುಪಿಯ ಡಿ.ಸಿ ಡಾ. ಕೆ. ವಿದ್ಯಾಕುಮಾರಿ ಐಎಎಸ್ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸಿ ಯು ಇತ್ತೀಚಿಗೆ ಬಿಡುಗಡೆಗೊಳಿಸಿದರು.
ಉಡುಪಿ ಪ್ರವಾಸೋದ್ಯಮ ಇಲಾಖೆ ಮತ್ತು ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಯ ಸಹಯೋಗದಲ್ಲಿ ಕಾರ್ಯಕ್ರಮ ನೆರವೇರಿತು.
ಈ ಭಾವಪೂರ್ಣ ಗೀತೆಯು ದೇವಾಲಯದ ಪಟ್ಟಣ
‘ಒಡಿಪು’ಗೆ ಸಮರ್ಪಿತವಾಗಿದೆ ಹಾಗೆಯೇ ಉಡುಪಿಯ ಸುಂದರ ತಾಣಗಳನ್ನು ತೋರಿಸುವ ವಿಡಿಯೋ ಇದಾಗಿದೆ.
ಇತ್ತೀಚಿಗೆ ಜಸ್ಟ್ ರೋಲ್ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಿಸಿ, ಕ್ಲಿಂಗ್ ಜಾನ್ಸನ್ ನಿರ್ದೇಶಸಿದ “ದ್ವಮ್ದ್ವ” ಚಿತ್ರ ಮುಂಬೈಯಲ್ಲಿ ನಡೆದ 15ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ತೆರೆ ಕಂಡು ಎಲ್ಲರ ಪ್ರಶಂಸೆ ಗಳಿಸಿತ್ತು.
ಉಡುಪಿ ಅಂಥೆಮ್ ಗೀತೆಯ ಸಂಪೂರ್ಣ ವಿವರ.
ದೃಶ್ಯ ಹಾಡು ♪ ರೆಕಾರ್ಡ್ ಲೇಬಲ್: JustRoll Films YouTube ಚಾನಲ್ ನಲ್ಲಿ ಲಭ್ಯ
ಪ್ರಸ್ತುತಪಡಿಸಿದವರು: ಉಡುಪಿ ಪ್ರವಾಸೋದ್ಯಮ ಇಲಾಖೆ. ಉಡುಪಿ ಜಿಲ್ಲಾಡಳಿತ
ಪರಿಕಲ್ಪನೆ ಮತ್ತು ನಿರ್ದೇಶನ: ಕ್ಲಿಂಗ್ ಜಾನ್ಸನ್
ಹಾಡಿನ ಸಹ ಪ್ರಾಯೋಜಕರು: ಜಯಲಕ್ಷ್ಮಿ ಸಿಲ್ಕ್ಸ್. ಅದಿತಿ ಆರ್ಟ್ ಗ್ಯಾಲರಿ, ಐಲ್ಯಾಂಡ್ ಬೇ-ವ್ಯೂ, ಸಾಯಿ ರಾಧಾ ಹೆರಿಟೇಜ್, ಬಲ್ಲಾಳ್ ಮೊಬೈಲ್ಸ್, ವಿಲ್ಲಾ ಒಡೆಯರ್ಮಟ್, ಸಾಯಿರಾಮ್ ಫ್ಲೋರಿಂಗ್ಸ್, ಗಿರಿಜಾ ಸರ್ಜಿಕಲ್ಸ್, ಅರುಣ್ ಪೌಲ್ಟ್ರಿ ಫಾರ್ಮ್, café ಬೋಡಾ ಶೀರಾ
ಕ್ರಿಯೇಟಿವ್ ಹೆಡ್: ಸಿತೇಶ್ ಸಿ ಗೋವಿಂದ್
ಸಂಗೀತ ನಿರ್ದೇಶಕ: ಗಿರಿಧರ್ ದಿವಾನ್
ಸಾಹಿತ್ಯ: ಬೆನ್ಸು ಪೀಟರ್
ಗಾಯಕ: ಕೀರ್ತನ್ ಹೊಳ್ಳ
ಕಥೆ- ನೃತ್ಯ ನಿರ್ದೇಶನ- ಹಾಡಿನ ದೃಶ್ಯ ವಿನ್ಯಾಸ: ಅವಿನಾಶ್ ಬಂಗೇರ
ಎಡಿಟ್, ಡಿಐ, ವಿಎಫ್‌ಎಕ್ಸ್ ಮತ್ತು ಧ್ವನಿ ಡಬ್ಬಿಂಗ್: ಪ್ರಜ್ವಲ್ ಸುವರ್ಣ.
ಡಿಜಿಟಲ್ ದೃಶ್ಯಗಳ ಕೊಡುಗೆದಾರರು: ಪ್ರವಾಸೋದ್ಯಮ ಇಲಾಖೆ ಉಡುಪಿ. ಸುಜನ್ ಶೆಟ್ಟಿ, ಸಚಿನ್ ಶೆಟ್ಟಿ-ಶಟರ್ ಬಾಕ್ಸ್ ಫಿಲ್ಮ್ಸ್♪ ಲೈನ್ ಪ್ರೊಡ್ಯೂಸರ್ ಮತ್ತು ಪ್ರೊಡಕ್ಷನ್ ಉಸ್ತುವಾರಿ: ಡಿಜೆ ಮೆರ್ವಿನ್
ಜಸ್ಟ್‌ರೋಲ್ ಫಿಲ್ಮ್ಸ್ ಕಾರ್ಯಾಚರಣೆಗಳು: ಶ್ರುತಿನ್ ಶೆಟ್ಟಿ ♪ ಪಾತ್ರವರ್ಗ: ಎಲಿಫ್ ಬಾಲಕಬಾಬಲರ್, ವಿಜಿತ್ ಕೋಟ್ಯಾನ್, ಪೃಥ್ವಿ ಅಂಬರ್, ಮಾನಸಿ ಸುಧೀರ್, ಕ್ಯಾರೆನ್ ರೀಸಾ, ತನುಶ್ರೀ ಪಿತ್ರೋಡಿ, ಆಡನ್ ಕ್ಲಿಯೋನ್, ಶಾಲಿನಿ ಶೆಟ್ಟಿ, ಸಹನಾ ಶೆಟ್ಟಿ, ರಕ್ಷಾ ಉಡುಪಿ.
ಹಾಡಿನ ಸಾಹಿತ್ಯ:
ಅಂದದ ಚೆಂದದ ನೂತನ ಚೇತನ
ಸುಂದರ ಸೊಗಸಿನ ಊರು
ರಮ್ಯಾ ನಿಸರ್ಗದ ತೋರಣ ಹೊತ್ತಾ
ನಯನ ಮನೋಹರ ಬೀಡು
ಅರಬಿ ಸಮುದ್ರದ ಅಲೆಗಳು ಬಾಗುವ
ಕಡಲ ಕಿನಾರೆಯ ನಾಡು
ಪ್ರೀತಿ ಅಕ್ಕರೆ ಮಮತೆ ತುಂಬಿದ
ನಿತ್ಯ ರಮಣೀಯ ಗೂಡು. ಉಡುಪಿ……. ಉಡುಪಿ……. ಉಡುಪಿ…….
ಈ ಕೆಳಗಿನ ಲಿಂಕ್ ಮೂಲಕ ಗೀತೆಯನ್ನು ವೀಕ್ಷಿಸ ಬಹುದು👇🏻