April 1, 2025
ಲೇಖನ

ಜನಪದ ಲೋಕದ ಕಲಾ ದಿಗ್ಗಜ – ಬಹುಮುಖ ಪ್ರತಿಭೆಯ ಗುರುಚರಣ್ ಪೊಲಿಪು

ಲೇಖನ : ಶಿವಕುಮಾರ್ ಹೊಸಂಗಡಿ


ಅಧುನಿಕ ದಿನಗಳಲ್ಲಿ ಜನಪದ ಕಲೆ ಅಳಿದು ಮೂಲೆ ಸೇರುತ್ತಿರುವ ಮಧ್ಯೆ ಕೊಂಚ ಅಲ್ಲಲ್ಲಿ ಅದರ ಪಳೆಯುಳಿಕೆಯ ಸದ್ದು ಪ್ರತಿದ್ವನಿಸುತ್ತಿದೆ ಎಂದರೆ ಅದಕ್ಕೆ ಗುರುಚರಣ್ ರಂತಹ ಕಲಾರಸಿಕ ,ಕಲಾಪೋಷಕ ,ಕಲಾ ಪ್ರತಿಭೆಗಳ ಪ್ರಯತ್ನದ ಫಲ ಅಂದರೆ ಅತಿಶಯೋಕ್ತಿಯಾಗಲಾರದು.“ವೈಜ್ಞಾನಿಕ ತಂತ್ರಜ್ಜಾನಗಳ ನಡುವೆ ಯಾಂತ್ರಿಕ ಬದುಕಿನಲ್ಲಿ ಜಾನಪದ ಕಲೆ ಹೇಳ ಹೆಸರು ಇಲ್ಲದಂತೆ ಬದಿಗೆ ಸೇರುತ್ತಿವೆ ಬಹಳ ಬೇಸರದ ವಿಚಾರ ,ಪ್ರೋತ್ಸಾಹ ಕೊರತೆಯೂ ಕೂಡಾ ಎದ್ದು ಕಾಣುತ್ತಿದೆ . ಇದನ್ನು ಕಲಿಯುವವರು ಕೂಡಾ ವಿರಳವಾಗಿದ್ದಾರೆ.ಇದಕ್ಕೆ ಸಂಬಂದ ಪಟ್ಟ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ನಡೆಯಬೇಕು ,ಟಿವಿ ಮಾದ್ಯಮಗಳು ಇಂದಿನ ಜನೆತೆಗೆ ಅರಿವಾಗುವ ನಿಟ್ಟಿನಲ್ಲಿ ಹೆಚ್ಚಿನ ಕಾರ್ಯಕ್ರಮವನ್ನು ಬಿತ್ತಾರಪಡಿಸಬೇಕು.ಶಾಲೆಯಲ್ಲಿ ಇದರ ಬಗ್ಗೆ ಇನ್ನಷ್ಟು ಅರಿವು ಮೂಡಿಸುವ ಪ್ರಯತ್ನವಾಗಬೇಕು ..ಈಗಾಗಲೇ ಪ್ರತಿಬಾ ಕಾರಂಜಿ ಕಾರ್ಯಕ್ರಮದ ಮೂಲಕ ಜನಪದ ಕಲೆ ಮೊಳಗುತ್ತಿದೆ ಕೇವಲ ಪ್ರಶಸ್ತಿಗಷ್ಟೇ ಮೀಸಲಾಗ ಬಾರದು .ಪ್ರಚುರ ಪಡಿಸಲು ಪಣ ತೊಡಬೇಕು “-ಗುರುಚರಣ್ ಪೊಲಿಪು

‘ಗುರುಚರಣ್ ಪೊಲಿಪು ‘ ಸದ್ದಿಲ್ಲದೇ ಸುದ್ದಿಯಾಗದೇ ಜನಪದ ಜೊತೆ ಇನ್ನೊಂದಿಷ್ಟು ಕಲೆಯನ್ನು ಕರಗತ ಮಾಡಿಕೊಂಡಿರುವ ಅಪೂರೂಪದ ಬಹುಮುಖ ಪ್ರತಿಭೆ ..ಅಲೆಮರೆ ಕಾಯಿ !!ಕೈ ತುಂಬಾ ಸಂಬಾವನೆ ಇರುವ ಉದ್ಯೋಗವನ್ನು ಬಿಟ್ಟು ಕಲಾ ಮಾತೆಯ ಸೇವೆಗೆ ದಾಸರಾಗಿರುವ ಇವರುಯಾವುದೇ ಪ್ರತಿಫಲಾಕ್ಷೆ ಇಟ್ಟುಕೊಳ್ಳದೆ ಕರೆದಲ್ಲಿ ಹೋಗಿ ಕಾರ್ಯಕ್ರಮ ನೀಡುವ ಹಾಗೂ ಉತ್ಸಾಹಿಗಳಿಗೆ ಉಚಿತವಾಗಿ ತರಬೇತಿ ನೀಡುವ ಇವರ ಕಲಾ ಆರಾಧನೆನೆಗೆ ತಲೆ ಬಾಗಲೇ ಬೇಕು .ಎಳೆಯ ವಯಸ್ಸಿನಲ್ಲೆಯೇ ಸಾವಿರಾರು ಕಾರ್ಯಕ್ರಮ ಕೊಟ್ಟಿದ್ದಾರೆ .ದೇಶ ಮಾತ್ರವಲ್ಲದೆ ವಿದೇಶದಲ್ಲೂ ತನ್ನ ಕಲಾ ಕಾಣಿಕೆಯನ್ನು ಧಾರೆ ಎರದಿದ್ದಾರೆ . ಅದೆಷ್ಟೋ ಮಂದಿಯನ್ನು ಜನಪದ ಲೋಕಕ್ಕೆ ಕೊಂಡು ಒಯ್ಯಿದಿದ್ದಾರೆ.ಭಾರತೀಯ ಸಂಸ್ಕ್ರತಿಯ ಪ್ರತೀಕದಂತಿರುವ ಈ ಕಲೆಯನ್ನು ಇವರು ವಂಶ ಪಾರ೦ಪರ್ಯವಾಗಿ ಕಳೆದ 19 ವರ್ಷದಿಂದ ನೀರೆದು ಪೋಷಿಸುತ್ತ ಬಂದವರು .ಇದರ ಜೊತೆಗೆ ಇನ್ನಷ್ಟು ಕಲೆಯನ್ನು ಕರಗತ ಮಾಡಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ .ಉಡುಪಿ ಜಿಲ್ಲೆಯ ಕೋಟದ ಉಪತಹಶಿಲ್ದಾರ್ ಪಿ .ಸುಂದರ್ ಹಾಗೂ ರಮಣಿ .ಕೆ ದಂಪತಿ ಪುತ್ರರಾಗಿರುವ ಗುರುಚರಣ್ ಮೂಲತ : ಉಡುಪಿ ಜಿಲ್ಲೆಯ ಕಾಪು ಸಮೀಪದ ಉಳಿಯಾರುಗೊಳಿಯವರು. ಇವರ ಕಲಾ ಸೇವೆಗೆ ತಂದೆಯೇ ಮೊದಲ ಗುರು .ತನ್ನ ಎರಡನೇ ತರಗತಿ ವ್ಯಾಸಂಗದಲ್ಲಿಯೇ ತಂದೆಯ ಪರಿಪಾಠ ದಿಂದಲೇ ಜಾನಪದ ಜೋಳಿಗಿಯ ಸೊಗಡಿಗೆ ಸೇರ್ಪಡೆ ಗೊಂಡವರು. ಪ್ರಾಥಮಿಕ ಶಾಲಾ ಜೀವನದಲ್ಲಿ ‘ರಮೇಶ್ ಕಲ್ಮಾಡಿ ‘ಯವರ ಜೊತೆ ಇನ್ನಷ್ಟು ಜನಪದ ಕಲಾರಾಧನೆಯನ್ನು ಬಲ ಪಡಿಸಿಕೊಂಡರು.’ವಿಠಲ್ ಆಚಾರ್ ,ರವರಿಂದ ಉತ್ತರ ಭಾರತದ ನ್ರತ್ಯ ಸೇರಿದಂತೆ ವಿವಿಧ ಪ್ರಕಾರದ ನ್ರತ್ಯವನ್ನು ಕಲಿತರು .ಇವರ ನ್ರತ್ಯದ ಕಲಾಗಾರಿಕೆಯನ್ನು ಕಂಡು ‘ಹಿತೇಶ ಕುಮಾರ್ ಪೊಲಿಪು’ ಮತ್ತು ‘ಸತೀಶ್ ಬೆಳಂಜೆ’ಯವರು ನ್ರತ್ಯಕ್ಕೆ ಇನ್ನಷ್ಟು ಇಂಬು ನೀಡುವಲ್ಲಿ ಶ್ರಮಿಸಿದರು .’ಸತೀಶ್ ಬಿರ್ತಿ’ ಯವರಿಂದ ಸಂಗೀತ ,’ಶಂಕರ್ ದಾಸ ‘ರಿಂದ ಹಾಡುಗಾರಿಕೆ ,’ರವಿರಾಜ್ ಶೆಟ್ಟಿ’ಯವರಿಂದ ಛಾಯಾಗ್ರಹಣವನ್ನು ಶ್ರದ್ಧೆಯಿಂದ ತನ್ನದಾಗಿಸಿಕೊಂಡರು . ಗ್ರಾಮೀಣ ಪ್ರದೇಶದ ಕಲಾ ಕುಸುಮವಾಗಿರುವ ಇವರಿಗೆ ಪ್ರೋತ್ಸಾಹದ ಕೊರತೆಯಿದ್ದರೂ ,ಕಲಿಯುವ ಉತ್ಕಟ ಬಯಕೆಯ ಛಲವೇ ಇಂದು ಈ ಮಟ್ಟಕ್ಕೆ ಫಲ ನೀಡುವಂತೆ ಮಾಡಿದೆ .‘ಕಂಗೀಲುಕುಣಿತ’ ,’ಕರಗ’ ,’ಕೋಲಾಟ’,’ಚೆನ್ನಕುಣಿತ’ ,’ದಶಾವಾತಾರ’,’ವೀರಗಾಸೆ’ ,’ಪಟಕುಣಿತ’ ,’ಜೇಡರ ನ್ರತ್ಯ’ ,’ಹಾಲಕ್ಕಿ ಕುಣಿತ ‘,’ನುಗ್ಗಿ ಕುಣಿತ’ ,’ಬೆಸ್ತರ ನ್ರತ್ಯ’ ,ಮುಂತಾದ ಜನಪದ ನ್ರತ್ಯ ಸೇರಿದಂತೆ ‘ತಾಸ್’,’ಚೆಂಡೆ’ ,’ಡೊಲರ್’, ‘ಕಾಂಗೋ’ ,’ದುಡಿ’ ಮುಂತಾದ ಸಂಗೀತ ಸಾಧನಗಳಲ್ಲಿ ಕೈ ಹಾಕಿ ಸೈ ಎಣಿಸಿ ಕೊಂಡವರು .ಇವೀಷ್ಟು ಮಾತ್ರವಲ್ಲದೆ , ಹಾಡುಗಾರಿಕೆ ,ಛಾಯಾಗ್ರಹಣ ,ಮೇಕಪ್ ,ಮರಳು ಶಿಲ್ಪಿ ರಚನೆ ,ಕಲೆಯನ್ನು ಸಹ ಕರಗತ ಮಾಡಿ ಕೊಂಡರು .ಇಷ್ಟೆಲ್ಲಾ ಕಲಾ ತತ್ವವನ್ನು ಗುರುವ್ರಯರಿಂದ ಪಡೆದ ಇವರು ವಿವಿಧ ಪ್ರತಿಭೆಗಳನ್ನೂ ಅನಾವರಣ ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ .40 ಜನ ಸದಸ್ಯರ ಒಂದು ಗೂಡಿಸಿ ”ನಿತ್ಯಶ್ರಿ ಜನಪದ ಕಲಾ ತಂಡ”,ವನ್ನು ಕಟ್ಟಿ , ಹಂಪಿ ಉತ್ಸವ ,ಮೈಸೂರು ದಸರಾ ,ಹಾಸನ ಆದಿ ಚುಂಚನಗಿರಿಮಠ ,ಕೇರಳದ ಉದಮ ಕ್ಷೇತ್ರ ,ಬೆಂಗಳೂರು ಹಬ್ಬ ,ಉಜಿರೆ ವಿಶ್ವ ತುಳು ಸಮ್ಮೇಳನ ,ಸುವರ್ಣ ಕರ್ನಾಟಕ ಉತ್ಸವ ,ಆಳ್ವಾಸ್ ನುಡಿಸಿರಿ ,ಆಳ್ವಾಸ್ ವೀರಸಾತ್,ಚೆನೈ ಪ್ರವಾಸೋಧ್ಯಮ ಇಲಾಖೆ,ರಾಜಸ್ಥಾನ ,ಡೆಲ್ಲಿಯ ತಾಜ್ ,ಮುಂಬಯಿ ಜಾನಪದ ಸಾ೦ಸ್ರತಿಕ ಸಮ್ಮೇಳನ ,ಉಡುಪಿ ಪರ್ಯಾಯ ,ಉಡುಪಿ ಜಿಲ್ಲಾ ಉತ್ಸವ ,ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ರಾಜ್ಯ ಮಾತ್ರವಲ್ಲದೇ ದೇಶದ ಉದ್ದಗಲಕ್ಕೂ ಸುಮಾರು 3000 ಕ್ಕೊ ಹೆಚ್ಚು ಕಾರ್ಯಕ್ರಮ ಪ್ರದರ್ಶನ ಇವರ ಬತ್ತಳಿಕೆಯಲ್ಲಿ ಅರಳಿದೆ .ವಿದೇಶದ ಬ್ಯಾರಿನ್ ,ಕತಾರ್, ಕುವೈಟ್ , ತೈಲೆಂಡನಲ್ಲೂ ತಮ್ಮ ಕೀರ್ತಿ ಪತಾಕೆ ಬೆಳಗಿಸಿದ್ದಾರೆ.ಕೇವಲ ಜಾನಪದ ನ್ರತ್ಯ ಪ್ರದರ್ಶನದ ಜೊತೆ ,ಜಾನಪದ ಜಾತ್ರೆಯಲ್ಲಿ ಹಲವಾರು ನ್ರತ್ಯಕ್ಕೆ ನಿರ್ದೇಶನವನ್ನು ಮಾಡಿದ್ದಾರೆ.ಸಂಗೀತ ಸಂಯೋಜನೆಯನ್ನು ಅನುರಣಿಸಿದ್ದಾರೆ .ಮಲ್ಪೆ ,ಕಾಪು ಸಮುದ್ರ ತೀರದಲ್ಲಿ ಪ್ರತಿ ವರ್ಷ ನಡೆಯುವ ಕಡಲೋತ್ಸವ ದಲ್ಲಿ ಮರಳು ಶಿಲ್ಪವನ್ನು ರಚಿಸಿ ಶಹಾಬ್ಬಶ್ ಗಿರಿಪಟ್ಟವನ್ನು ತನ್ನ ತೆಕ್ಕೆಗೆ ಒಲಿಸಿಕೊಂಡಿದ್ದಾರೆ.ಇವರ ಕ್ಯಾಮರ ಕೈ ಚಳಕಕ್ಕೆ ಸಾಕಷ್ಟು ಆಕ್ರತಿಗಳು ತನಗರಿವಿಲ್ಲದಂತೆ ಜಾಗ ಪಡೆದು ಕೊಂಡಿದೆ .ಈಷ್ಟೆಲ್ಲ ಕಲಾಛಾತಿಯನ್ನು ಮೈ ಗೂಡಿಸಿ ಕೊಂಡಿರುವ ‘ಗುರು’ ಎಂದೂ ತನ್ನ ಸ್ವಾರ್ಥ ಪರಿಧಿಯಲ್ಲಿ ಸುತ್ತಿದವರೇ ಅಲ್ಲ ತಾನು ಕಲಿತ ವಿದ್ಯೆಯನ್ನು ವಿಧ್ಯಾರ್ಥಿಗಳಿಗೆ ,ಸಂಘ-ಯುವಕ ಮಂಡಳಿಗಳಿಗೆ ಉಚಿತವಾಗಿ ತರಬೇತಿಯನ್ನು ನೀಡಿ ಈ ಕಲೆಯನ್ನು ಜನಪ್ರೀಯ ಗೊಳಿಸಲು ಮುನ್ನೆಡಿಸಿ ಕೊಂಡು ಹೋಗಲು ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ .ಇವರ ಶಿಷ್ಯ ಸುಕೇಶ್ ಸುವರ್ಣ ‘ಬ್ಯಾರಿಸ್ ‘ನಲ್ಲಿ ನೆಲೆಸಿದ್ದೂ ಅಲ್ಲಿಯೇ ಜಾನಪದ ತಂಡವನ್ನು ಕಟ್ಟಿ ಬಾರತೀಯ ಜಾನಪದ ಸಂಸ್ಕ್ರತಿಗೆ ಕನ್ನಡಿ ಹಿಡಿಯುತ್ತಿದ್ದಾರೆ .ಇವರಿಗೆ ಒಲಿದು ಬಂದ ಸನ್ಮಾನ ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ .ಕರ್ನಾಟಕ ರಕ್ಷಣಾ ವೇದಿಕೆ ಕೊಡ ಮಾಡುವ ”ಸುವರ್ಣ ಕರ್ನಾಟಕ ರಜ್ಜ್ಯೋತ್ಸವ ಪ್ರಶಸ್ತಿ ‘,ಜಾನಪದ ಸಾಹಿತ್ಯ ಅಕಾಡೆಮಿಯಿಂದ ‘ಯುವ ಪ್ರತಿಬೋತ್ಸವ ‘ ಪ್ರಶಸ್ತಿಗಳನ್ನೂ ಬಾಚಿ ಕೊಳ್ಳುತ್ತಾ , ಹಲವಾರು ಸನ್ಮಾನ ಗೌರವಕ್ಕೆ ಪಾತ್ರರಾಗಿದ್ದಾರೆ .ಇತ್ತೀಚೆಗೆ ೨೦೦೧೭ ರ ದಶಕದ ಸಾಧಕ ಪ್ರಶಸ್ತಿ ಹಾಗೂ ಕಲಾ ಸೌರಭ ಪ್ರಶಸ್ತಿಗೂ ಬಂದಿವೆ .ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಶ್ರೀ ಕಾಲ ಭೈರವ ಸನ್ನಿದಿಯಲ್ಲಿ
21/7/24 ರಂದು ಜರಗಿದ ಸಾಯಿ ದರ್ಬಾರ್ – 2024ರಲ್ಲಿ ಗಣ್ಯರ ಸಮ್ಮುಖದಲ್ಲಿ “ಈಶ್ವರಾನುಗ್ರಹ” ಪ್ರಶಸ್ತಿ ಪ್ರಧಾನಿಸಲಾಯಿತು.
ಇದೀಗ ಸದ್ಯಕ್ಕೆ ತುಳು ಟೆಲಿಫಿಲಂ ನಿರ್ದೇಶನದ ಕಾರ್ಯಕ್ಕೆ ಕೈ ಹಾಕಿರುವ ಇವರು ಅದರಲ್ಲೂ ಯಶಸ್ಸು ಕಾಣಲಿ ,ಜನಪದ ಕಲೆ ಉಳಿಯಲಿ ಬಾಲೆತ್ತರಕ್ಕೆ ಪಸರಿಸಲಿ ,ಇನ್ನಷ್ಟು ಇಂಥಹ ಮಹಾನ್ ಕಲಾವಿದರುಗಳು ಹುಟ್ಟಿ ಕೊಳ್ಳಲಿ .ಇವರುಗಳಿಗೆ ಉತ್ತಮ ಪ್ರೋತ್ಸಾಹ ಸಿಗಲಿ ಎಂದು ಹಾರೈಸೋಣ ..

Related posts

ದುಬೈನಲ್ಲಿ ಟೀಮ್ ಇಂಡಿಯಾದ ಐವರು ಸ್ಪಿನ್ನರ್ ಗಳ ರಣನೀತಿಯ ‘ಯಶಸ್ಸಿನ ರೂವಾರಿ ’ವರುಣ್ ಚಕ್ರವರ್ತಿ

Mumbai News Desk

ಭಿಕ್ಷುಕ,ಬೀದಿ ಮಗು ಮತ್ತು ಬದುಕು

Mumbai News Desk

ಮೈಸಂದಾಯೆ

Mumbai News Desk

ಮಕ್ಕಳು ಮುಂದಿನ ಭವಿಷ್ಯ. ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಬೇಕಾದ   ವಿಶಿಷ್ಟ ಕಾರ್ಯಕ್ರಮ  ಬಂಟ ಭವಿಷ್ಯ,

Mumbai News Desk

ಕರೆದಲ್ಲಿ ಬರುವ, ಕೇಳಿದ ವರ ಕೊಡುವ ಮೆಟ್ಕಲ್ ಗುಡ್ಡ ಗಣಪತಿ

Chandrahas

ರಾಜಪ್ರಭುತ್ವದ ಕನ್ನಡಿಯಲ್ಲಿ ಕಂಡ ‘ಕಾಮಾಗ್ನಿಮಿತ್ರ’

Chandrahas