September 6, 2026
Mumbai News Kannada
ಸುದ್ದಿ

ಬೊಳ್ನಾಡು ಶ್ರೀ ಚಿರುಂಭ ಭಗವತಿ ಕ್ಷೇತ್ರದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ





ಭಗವತಿ ಮಾತೆಯ ಅಪ್ಪಣೆಯಂತೆ ಹದಿನೆಂಟು ಕ್ಷೇತ್ರಗಳೂ ಲೋಕಾರ್ಪಣೆಗೊಂಡಿದೆ – ಚಂದ್ರಶೇಖರ ಬೆಳ್ಚಡ

ತೀಯಾ ಸಮುದಾಯದ ಹದಿನೆಂಟು ಭಗವತೀ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರ ಕಡೆಮೆಯಾಗಿದ್ದು ತುಳಸಿಯಂತೆ ದೇವರಿಗೆ ಹತ್ತಿರವಾಗುರುವ ಕೃಷ್ಣ ಎನ್ ಉಚ್ಚಿಲ್ ಅವರು ಭಗವತಿ ಮಾತೆಯ ಅಪ್ಪಣೆಯಂತೆ ಬೊಳ್ನಾಡು ಶ್ರೀ ಚಿರುಂಭ ಭಗವತಿ ಕ್ಷೇತ್ರವನ್ನು ಸಮಾಜಕ್ಕೆ ಅರ್ಪಿಸಿದ್ದು ನಮ್ಮೆಲ್ಲರ ಸೌಭಾಗ್ಯ ಎಂದು ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಬೆಳ್ಚಡ ನುಡಿದರು. 

ಬಂಟ್ವಾಳ ತಾಲೂಕು ಅಳಿಕೆ ಸಮೀಪ ಸಿಂಹಮೂಲೆ ಎರುಂಬು ಎಂಬಲ್ಲಿನ  ಬೊಳ್ನಾಡು ಶ್ರೀ ಚಿರುಂಭ ಭಗವತಿ ಕ್ಷೇತ್ರದ ಸಂಪೂರ್ಣ ಜೀರ್ಣೊದ್ದಾರ ಮಾಡಿ ಮಾ. 16ರಂದು ಜರಗಿದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು.  
ಡಾ. ಜಿ. ಪಿ. ಮೊಗಶಾಲೆಯವರು ಧಾರ್ಮಿಕ ಉಪನ್ಯಾಸ ನೀಡಿದರು.
ಮುಂಬಯಿಯ ಉದ್ಯಮಿ, ಕ್ಷೇತ್ರದ ಅಧ್ಯಕ್ಷರೂ ಆದ ಕೃಷ್ಣ ಎನ್ ಉಚ್ಚಿಲ್ ಇವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಜೀರ್ಣೋದ್ದಾರದ ಬಗ್ಗೆ ನನಗೆ ಸಿಕ್ಕಿದ ಎಲ್ಲಾ  ಗೌರವ ಸನ್ಮಾನ ಗಳನ್ನು ಕಳೆದ ಹದಿನೈದು ವರ್ಷಗಳಿಂದ ಕ್ಷೇತ್ರದ ಜೋರ್ಣೋದ್ದಾರಕ್ಕಾಗಿ ರಾತ್ರಿ ಹಗಲೆನ್ನದೆ ದುಡಿದ ಎಲ್ಲರಿಗೂ ಅರ್ಪಿಸುತ್ತಿರುವೆನು. ಹದಿನೈದು ವರ್ಷಗಳ ಹಿಂದೆ ಕನಸಲ್ಲಿ ಸಿಂಹದ ರೂಪದಲ್ಲಿ ಬಂದ ಮಾತೆ ಭಗವತೀ ತೀಯಾ ಸಮುದಾಯದ ಹದಿನೆಂಟು ಭಗವತೀ ಕ್ಷೇತ್ರಗಳಲ್ಲಿ ಒಂದಾದ, ಸುಮಾರು 600 ವರ್ಷಗಳ ಹಿಂದೆ ಅನ್ಯರ ದಾಳಿಯಿಂದಾಗಿ ಸಂಪೂರ್ಣ ನಾಶ ಹೊಂದಿದ್ದ ಬೊಳ್ನಾಡು ಶ್ರೀ ಚಿರುಂಭ ಭಗವತಿ ಕ್ಷೇತ್ರದ ಜೀರ್ಣೋದ್ದಾರವನ್ನು ಎಷ್ಟೇ ಕಷ್ಟ, ನಷ್ಟ ಬಂದರೂ ಮಾತೆಯ ಆಪ್ಪಣೆಯಂತೆ ಮುಂದಿಟ್ಟ ಕಾಲನ್ನು ಹಿಂದಿಡದೆ ಜಾತಿ ಬಾಂಧವರ ಹಾಗೂ ಊರಿನ ಎಲ್ಲಾ ಭಕ್ತಾಭಿಮಾನಿಗಳ ಸಹಾಯದಿಂದ ಮಾತೆಯ ಆಶೀರ್ವಾದದಿಂದ ಜೀರ್ಣೋದ್ದಾರ ಮಾಡಿದ್ದೇವೆ ಎಂದರು. 

ತೀಯಾ ಸಮಾಜ ಮುಂಬಯಿಯ ಟ್ರಷ್ಟಿ ಡಾ. ದಯಾನಂದ ಕುಂಬ್ಳೆ, ಸಮಾಜದ ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಮುಂಬಯಿಯ ಸಿ.ಎ. ರಾಧೇಶ್ ನಾಯರ್ ಮೊದಲಾದವರು ಮಾತನಾಡಿದರು.

ವೇದಿಕೆಯಲ್ಲಿ ಜಗಜೀವನ್ ರಾಮ್ ಶೆಟ್ಟಿ,  ಯತೀಂದ್ರನಾಥ ಪುತ್ತೂರು, ಮಲೈಕಾ ಗ್ರೂಪಿನ  ನಿರ್ದೇಶಕ ಸುಶಾಂತ್, ಮುಂಬಯಿಂದ ಆಗಮಿಸಿದ ಸಮಾಜ ಸೇವಕ ತಿಮ್ಮಪ್ಪ ಬಂಗೇರ, ತೀಯಾ ಸಮಾಜದ ಮಾಜಿ ಕೋಶಾಧಿಕಾರಿ ರಮೇಶ್ ಉಳ್ಳಾಲ್, ಪದ್ಮನಾಭ ಕರ್ಕೇರ, ಚಂದ್ರಿಕಾ ಕೃಷ್ಣ ಉಚ್ಚಿಲ್, ತೀಯಾ ಸಮಾಜದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಶಾಲತಾ ಉಳ್ಳಾಲ್, ಶಶಿಪ್ರಭಾ ಬಂಗೇರ, ಸವಿತಾ ಶೆಟ್ಟಿ, ಸರಸ್ವತಿ ಬಜ್ಪೆ, ತೀಯಾ ಸಮಾಜ ದುಬಾಯಿಯ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಕರ್ತ ಈಶ್ವರ ಎಂ. ಐಲ್, ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ವಿವಿಧ ಕ್ಷೆತ್ರದಲ್ಲಿ ಸಾಧನೆಗೈದ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

 ಬ್ರಹ್ಮಕಲಶ ಸಮಾರಂಭದಲ್ಲಿ ತೀಯಾ ಸಮಾಜ ಮುಂಬಯಿಯ ಸದಸ್ಯರುಗಳು ನೂರಾರು ಸಂಖ್ಯೆಯಲ್ಲಿ ಬಾಗವಹಿಸಿದರು. ಕರಾವಳಿಯ ಎಲ್ಲಾ 18 ಭಗವತೀ ಕ್ಷೇತ್ರಗಳ ಸಮಿತಿಯ ಸದಸ್ಯರು, ಭಕ್ತಾಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.



Related posts

ಮೂಡುಬಿದಿರೆ – ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊದ ಆಯೋಜನೆಯಲ್ಲಿ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ ಸ್ಪರ್ಧೆ : ಮಿಸ್ ಕ್ವೀನ್ ಕರಾವಳಿ 2025 ಆಗಿ ಪೂರ್ವಿ ಇ ಕುಲಾಲ್ ಆಯ್ಕೆ

Mumbai News Desk

ಬಿಲ್ಲವ ಸಮುದಾಯದ ವಿರುದ್ಧ ಅನಿತಾ ಕಾಸರಗೋಡು ಹೇಳಿಕೆ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ತೀವ್ರ ಖಂಡನೆ

Mumbai News Desk

ಕೋಡಿಕಲ್ ವಿಶ್ವಭಾರತೀ ಫ್ರೆಂಡ್ಸ್ ಸರ್ಕಲ್ ಆರೋಗ್ಯ ತಪಾಸಣಾ ರಕ್ತದಾನ ಶಿಬಿರ 

Mumbai News Desk

ಥಾಣೆ ನೇತ್ರಾವತಿ ಎಸ್.ಅಮೀನ್ ನಿಧನ.

Mumbai News Desk

ಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆ, ಶತ ಸಂವತ್ಸರೋತ್ಸಮ ಸಂಭ್ರಮದ ಮನವಿ ಪತ್ರ ಬಿಡುಗಡೆ .

Mumbai News Desk

ಅನಿತಾ ಪಿ. ತಾಕೊಡೆಯವರಿಗೆ ಕರ್ನಾಟಕ ಲೇಖಕಿಯರ ಸಂಘದ ದತ್ತಿ ಪ್ರಶಸ್ತಿ ಪ್ರದಾನ

Mumbai News Desk