ಮಹಾರಾಷ್ಟ್ರ ವಿಧಾನ ಸಭೆಗೆ ನವಂಬರ್ 20ರಂದು ಚುನಾವಣೆ ನಡೆಯಲಿದ್ದು, ಸುಗಮ ಚುನಾವಣಾ ಪ್ರಕ್ರಿಯೆ ಗಾಗಿ ರಾಜ್ಯದ್ಯಂತ ಮದ್ಯ ಮಾರಾಟ ನಿಷೇದದ (Dry Day)ದಿನಗಳನ್ನು ನಿಗದಿಪಡಿಸಲಾಗಿದೆ. ಚುನಾವಣೆಯ ಮೊದಲು ಮತ್ತು ನಂತರ ಮುಂಬೈಯಲ್ಲಿ ವಿವಿಧ ದಿನಾಂಕಗಳಲ್ಲಿ ಮದ್ಯ ಮಾರಾಟವನ್ನು ಮುಚ್ಚುವಂತೆ ಚುನಾವಣಾ ಆಯೋಗ ಆದೇಶಿಸಿದೆ.
ಮದ್ಯ ಮಾರಾಟ ನಿಷೇದದ ದಿನಗಳು :
ನವಂಬರ್ 18 : ಸಂಜೆ 6 ಗಂಟೆಗಯ ನಂತರ ಮದ್ಯ ಮಾರಾಟ ನಿಷೇದ.
ನವಂಬರ್ 19 : ಸಂಪೂರ್ಣ ಶುಷ್ಕ ದಿನ (Dry Day)
ನವಂಬರ್ 20 : ಸಂಜೆ 6 ಗಂಟೆ ತನಕ ನಿರ್ಬಂಧ
ನವಂಬರ್ 23 : ಸಂಜೆ 6 ಗಂಟೆ ತನಕ (ಮತ ಎಣಿಕೆಯ ಕಾರಣ)
ಮದ್ಯ ಪ್ರಿಯರು ನಿರ್ಬಂಧದ ದಿನಾಂಕ ಮತ್ತು ಸಮಯವನ್ನು ಗಮನದಲ್ಲಿಟ್ಟು, ಮುಂಚಿತವಾಗಿ ತಮ್ಮ ಮೆಚ್ಚಿನ “ಎಣ್ಣೆ ” ಯ ದಾಸ್ತಾನು ಮಾಡಿಕೊಳ್ಳಬೇಕಿದೆ.

previous post