
ಸಮಾಜ ಬಾಂಧವರಿಗೆ ಪ್ರಯೋಜನವಾಗುವ ಯೋಜನೆಗಳು ಅಗತ್ಯ – ವೇದಪ್ರಕಾಶ್ ಶ್ರೀಯಾನ್
ಚಿತ್ರ : ಧನಂಜಯ್ ಪೂಜಾರಿ, ವರದಿ : ಇನ್ನಂಜೆ ಜಯರಾಮ್
ಇತರ ಸಮಾಜದಂತೆ ನಮ್ಮ ಸಮಾಜವು ಮುಂದುವರಿಯಬೇಕು, ನಮ್ಮಲ್ಲಿ ಆ ವಿಶನ್ ಇರಬೇಕು, ನಾವೆಲ್ಲರೂ ಒಂದಾಗಿ ಅದನ್ನು ಮಾಡಬೇಕು, ಜಿ ಶಂಕರ್ ರಂತ ನಾಯಕರು ನಮ್ಮೊಂದಿಗೆ ಇದ್ದಾರೆ. ನೀವು ನಕಾರಾತ್ಮಕ ಚಿಂತನೆಯನ್ನು ದೂರವಿಡಿ, ನಮ್ಮ ಕಾರ್ಯ ಯೋಜನೆಗಳು ನಮ್ಮಿಂದ ಖಂಡಿತ ಸಾಧ್ಯ ಎಂದು ಕಾರ್ಯಶೀಲರಾದರೆ ಯಶಸ್ಸು ಖಂಡಿತ. ಹೊಸಬರಿಗೆ ಅವಕಾಶ ಕೊಡಿ, ಇಲ್ಲಿಯ ಲೋಕಲ್ ಟೀಮ್ ತುಂಬಾ ಸ್ಟ್ರಾಂಗ್ ಇದೆ, ಸಮಸ್ಯೆ ಇದ್ದರೆ ಅದನ್ನು ಬಗೆಹರಿಸಿ ಆಗ ಯುವಕರು ಮುಂದೆ ಬರುತ್ತಾರೆ, ಇದರ ಒಂದು ಬಜೆಟ್ ಮಾಡಿ ಹೆಡ್ ಆಫೀಸ್ ಗೆ ಕಳುಹಿಸಿ, ನಾವು ನಿಮ್ಮೊಂದಿಗೆ ಇದ್ದು ಸಹಕಾರ ಮಾಡುತ್ತೇವೆ. ನಮ್ಮ ಸಮಾಜದ ಬಂಧುಗಳು ಈಗ ಮುಂಬಯಿಯಿಂದ ಈ ಪ್ರದೇಶದಲ್ಲಿ ಬಂದು ನೆಲೆಸಿದ್ದಾರೆ, ಎಲ್ಲರಿಗೂ ಉಪಯೋಗವಾಗುವ ಯಾವ ಪ್ರೋಜಾಕ್ಟ್ ನಮಗೆ ಬೇಕು ಅದನ್ನು ಮಾಡುವ ಅಗತ್ಯವಿದೆ. ಎಂದು ದಿವ್ಯಾ ಸಿಪ್ಪಿಂಗ್ ಆಂಡ್ ಕ್ಲೀಯರಿಂಗ್ ಸರ್ವಿಸಸ್ ಪ್ರೆ.ಲಿ ಮುಂಬಯಿಯ ಇದರ ವ್ಯವಸ್ಥಾಪಕ ನಿರ್ದೇಶಕರಾದ ವೇದಪ್ರಕಾಶ್ ಶ್ರೇಯಾನ್ ನುಡಿದರು.
ಅವರು ಜನವರಿ12 ರ ರವಿವಾರದಂದು ಡೊಂಬಿವಲಿ ಪೂರ್ವದ ಎಂ.ಐ.ಡಿ.ಸಿ ಪರಿಸರಸದ ಸಾವಿತ್ರಿ ಬಾಯಿ ಫುಲೆ ಸಭಾಗೃಹದಲ್ಲಿ ನಡೆದ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ
ಡೊಂಬಿವಲಿ ಸ್ಥಳೀಯ ಸಮಿತಿಯ 6ನೇ ವಾರ್ಷಿಕೋತ್ಸವ, ನಿಧಿ ಸಂಗ್ರಹಣೆ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿ ಮಾತನಾಡಿದರು.

ಅಥಿತಿ ಬಿಲ್ಲವರ ಅಸೋಸಿಯೇಷನ್ ಮುಂಬಯಿಯ ಇದರ ಅಧ್ಯಕ್ಷರಾದ ಹರೀಶ್ ಅಮೀನ್ ಮಾತನಾಡುತ್ತಾ ಸಮಾಜ ಯಾವಾಗಲೂ ಉನ್ನತೀಕರಣ ಆಗುತ್ತಾ ಇರಬೇಕು. ಇಲ್ಲದಿದ್ದರೆ ಸಮಾಜ ಅಭಿವೃದ್ಧಿ ಹೊಂದುವುದಿಲ್ಲ. ನಮ್ಮ ಬಿಲ್ಲವ ಸಮಾಜದಿಂದ ಯಾವ ರೀತಿಯ ಸಹಾಯ ಮಾಡಲು ಆಗುತ್ತದೆ ಅದನ್ನು ಖಂಡಿತ ನಾವು ಮಾಡುತ್ತೇವೆ. ಕೇಂದ್ರದಲ್ಲಿ ನಿಧಿ ಇದ್ದರೆ ವಲಯ ಸಮಿತಿಗೆ ಕೊಡಲು ಕಷ್ಟ ಆಗಲಿಕ್ಕೆ ಇಲ್ಲ, ನನ್ನ ಸಹಕಾರ ಯಾವಾಗಲೂ ನಿಮ್ಮೊಂದಿಗೆ ಇದೆ ಎಂದರು.
ಅತಿಥಿ ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷರಾದ ಡಾ ದಿವಾಕರ ಶೆಟ್ಟಿ ಇಂದ್ರಾಳಿ ಮಾತನಾಡುತ್ತಾ ಮೊಗವೀರ ಸಮಾಜ ಎಂದರೆ ಎಲ್ಲರನ್ನೂ ಪ್ರೀತಿಸುವ ಒಂದು ದೊಡ್ಡ ಸಮಾಜ, ನಾನು ಯಾವಾಗಲೂ ಹೇಳುತ್ತರುತ್ತೇನೆ ಡೊಂಬಿವಲಿ ಎಂದರೆ ಅದು ಮಹಾರಾಷ್ಟ್ರದ ತುಳುನಾಡು. ಇಲ್ಲಿ 32 ಸಂಘ-ಸಂಸ್ಥೆಗಳಿವೆ, ಎಲ್ಲಾ ಸಂಘ ಸಂಸ್ಥೆಗಳು ಭ್ರಾತೃತ್ವದಿಂದ ಕೂಡಿ ಕೆಲಸ ಮಾಡುತ್ತಿವೆ. ಸಮಾಜದವರಿಗೆ ಒಳ್ಳೊಳ್ಳೆ ಕೆಲಸಗಳನ್ನು, ಒಗ್ಗಟ್ಟಾಗಿ ಮಾಡುತ್ತಿವೆ, ಯಾಕೆಂದರೆ ನಾವು ಪರಶುರಾಮ ಸೃಷ್ಟಿಯಿಂದ ಬಂದವರು ಬ್ರಹ್ಮಶ್ರೀ ನಾರಾಯಣ ಗುರುಗಳ ಒಂದು ತತ್ವವಿದೆ,ಒಂದೇ ಜಾತಿ- ಒಂದೇ ಧರ್ಮ ಅದೇ ಪ್ರಕಾರ ನಾವು ನಡೆಯಬೇಕು ಮೊದಲಿಗೆ ನಾವು ಮನುಷ್ಯರಾಗಿ ಬದುಕಲು ಕಲಿಯಬೇಕು. ನಾವು ಸಮಾಜವನ್ನು ಬಲಪಡಿಸಬೇಕು ಅದು ಯಾವುದೇ ಸಮಾಜವಿರಲಿ, ಅದಕ್ಕೆ ನೀವೆಲ್ಲರೂ ಸಹಕಾರ ಕೊಡಬೇಕು. ನಮ್ಮ ಸಹಕಾರ ನಿಮಗೆ ಯಾವಾಗಲೂ ಇದೆ ಎಂದರು.

ಅತಿಥಿ ಕರ್ನಾಟಕ ಸಂಘ ಡೊಂಬಿವಲಿ ಇದರ ಅಧ್ಯಕ್ಷರಾದ ಸುಕುಮಾರ್ ಎನ್ ಶೆಟ್ಟಿ, ಮುಂಬೈ ನಮ್ಮ ಕರ್ಮ ಭೂಮಿ ನಾವೆಲ್ಲರೂ ಕೆಲಸವನ್ನು ಹುಡುಕುತ್ತಾ ಮುಂಬೈಗೆ ಬಂದವರು, ಆದರೆ ನಮ್ಮ ತುಳು ಕನ್ನಡಿಗರು ಸಂಘಟನೆ ಕಟ್ಟುವಲ್ಲಿ ತುಂಬಾ ಹುಷಾರು. ಮೊದಲು ಸಂಘಟನೆ ಕಟ್ಟಿದವರು ಮೊಗವೀರರು, ಮೊದಲು ಬ್ಯಾಂಕ್ ಕಟ್ಟಿದವರು ಕೂಡ ಮೊಗವೀರರು. ಆರು ಜನ ಕಟ್ಟಿದ ಈ ಮೊಗವೀರ ಮಂಡಳಿ ಇಂದು ಮೊಗವೀರ ವ್ಯವಸ್ಥಾಪಕ ಮಂಡಳಿ ಎಜುಕೇಶನ್ ಇನ್ಸ್ಟಿಟ್ಯೂಟ್ ಮಾಡಿ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದೆ. ಶೇಖರ್ ಅಣ್ಣ 75ನೇ ವಯಸ್ಸಿನಲ್ಲಿಯೂ ಕೂಡ ತನ್ನಿಂದ ಸಮಾಜಕ್ಕೆ ಏನಾದರೂ ಒಳ್ಳೆಯದು ಆಗಬೇಕು ಎಂಬ ಉದ್ದೇಶದಿಂದ ಈ ವೇದಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಅದನ್ನು ನೋಡಿ ತುಂಬಾ ಖುಷಿಯಾಗುತ್ತದೆ. ದಾನಿಗಳನ್ನು ಒಟ್ಟು ಸೇರಿಸಿ ಸಮಾಜವನ್ನು ಬಲಪಡಿಸಿ ಎಂದರು.
ಮೋಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿಯ ಇದರ ಮಾಜಿ ಅಧ್ಯಕ್ಷ ಮಹಾಬಲ್ ಕುಂದರ್ ಮಾತನಾಡುತ್ತಾ ನಮ್ಮ ಯುವ ಜನಾಂಗ ಬರುತ್ತಿಲ್ಲ ಕಾರಣ ಏನು. ಯಾಕಂದರೆ ಅವರಿಗೆ ಅವಕಾಶ ಸಿಗುತ್ತಿಲ್ಲ, ನಮ್ಮ ನಂತರ ಈ ಸಂಘವನ್ನು ಯಾರು ಮುಂದೆ ಕೊಂಡೊಯ್ಯುವವರು. ಹತ್ತು ಇಪ್ಪತ್ತು ಜನರಿಂದ ಆಗುವಂಥದ್ದಲ್ಲ, ಎಲ್ಲ ಯುವಕರು ಮುಂದೆ ಬರಬೇಕು.
ಶಿಕ್ಷಣದೊಂದಿಗೆ ಸಂಸ್ಕಾರವು ಬೇಕು. ಮಕ್ಕಳಿಗೆ ತಂದೆ ತಾಯಿಯನ್ನು ಗೌರವಿಸುವ ಸಂಸ್ಕಾರ ಕಲಿಸಬೇಕು. ಎಂವಿಎಂ ನ ಒಳ್ಳೆಯ ಟೀಮ್ ಅಂದರೆ ಅದು ಡೊಂಬಿವಲಿಯ ಟೀಮ್. ನಾವು ಮುಂದುವರಿಯಬೇಕಾದರೆ ನಮ್ಮಲ್ಲಿ ಒಗ್ಗಟ್ಟು ಬೇಕು. ಸಂಘದ ಅರ್ಥವೇ ಎಲ್ಲರೂ ಒಟ್ಟುಗೂಡುವಂತದ್ದು. ಯುವಕರಿಗಾಗಿ ಒಳ್ಳೆ ಕಾರ್ಯಕ್ರಮವನ್ನು ಆಯೋಜಿಸಿ, ಅವರನ್ನು ಸಂಘಕ್ಕೆ ಆಕರ್ಷಿಸಬೇಕು ಎಂದರು.

ಮಾಜಿ ನಗರ ಸೇವಕ ದೀಪೇಶ್ ಮಾತ್ರೆ ಮಾತನಾಡುತ್ತಾ ಮೊಗವೀರ ಸಮಾಜದೊಂದಿಗೆ ನನ್ನ ಒಂದು ವಚನ ಬಾಕಿ ಇದೆ ಶಿಕ್ಷಣ ಸಂಸ್ಥೆಗಳಾಗಿ ಒಂದು ಒಳ್ಳೆಯ ಜಾಗವನ್ನು ಮಂಜೂರು ಮಾಡಿಸುವ ಕೆಲಸವನ್ನು ಮಾಡಬೇಕಾಗಿದೆ. ಆದಷ್ಟು ಬೇಗ ಒಂದು ಜಾಗ ನೋಡಿ ಶಾಲೆ ಪ್ರಾರಂಭವಾಗುವಂತೆ ನೋಡಿಕೊಳ್ಳುವ ಭರವಸೆಯನ್ನು ನೀಡುತ್ತೇನೆ ಎಂದರು.
ಮೋಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ, ಇದರ ವಿಶ್ವಸ್ತ ಅಜೀತ ಜಿ ಸುವರ್ಣ ಮಾತನಾಡುತ್ತಾ ಡೊಂಬಿವಲಿ ಸಮಿತಿ ನನ್ನ ಹೃದಯದ ಹತ್ತಿರ ಇರುವ ಸಮಿತಿ ಏಕೆಂದರೆ ಇದು ನನ್ನ ಅಧ್ಯಕ್ಷವದಿಯಲ್ಲಿ ಸ್ಥಾಪನೆಯಾದ ಸಮಿತಿ. ಇನ್ನು ನಾವು ಸ್ಥಳೀಯ ಸಮಿತಿಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಬೇಕು. ಒಗ್ಗಟ್ಟಾಗಿ ಮುಂದೆ ಸಾಗುವ ಎಂಬ ರೀತಿಯಲ್ಲಿ ಜಾಯಿಂಟ್ ವೆಂಚರ್ ಮೂಲಕವೂ ನಾವು ಮುಂದುವರಿಯಬಹುದು, ಜಿ ಶಂಕರ್ ನಂತಹ ನಾಯಕ ನನ್ನ ಹಿಂದೆ ಬಲವಾಗಿ ನಿಂತಿದ್ದರಿಂದ ನನ್ನ ಅಧ್ಯಕ್ಷ ಅವಧಿಯಲ್ಲಿ ಕೆಲವೊಂದು ಕಾರ್ಯ ಉತ್ತಮವಾಗಿ ನಡೆಯಿತು. ನಾನು ಅಧ್ಯಕ್ಷರಿಗೆ ಮನವಿ ಮಾಡುತ್ತೇನೆ, 2030ರ ವರೆಗೆ ನಮ್ಮ ಎಲ್ಲ ಸಮಿತಿಯಲ್ಲಿ ನಮ್ಮದೇ ಆದ ಶೈಕ್ಷಣಿಕ ಸಂಸ್ಥೆ ಇರಬೇಕೆಂಬ ಗುರಿ ಇಟ್ಟು ನಡೆಯಬೇಕು ಎಂದರು.
ನೃತ್ಯ ಸ್ಪರ್ಧೆಯ ತೀರ್ಪುಗಾರರಾದ ಸಂಧ್ಯಾ ಸಾಲಿಯಾನ್ ಸ್ಪರ್ಧೆಯ ಬಗೆಗಿನ ಅನುಭವ ಹಂಚಿಕೊಂಡರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮೋಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಅಧ್ಯಕ್ಷರಾದ ಎಚ್ ಅರುಣ್ ಕುಮಾರ್ ಅಧ್ಯಕ್ಷತೆಯ ನುಡಿಗಳನ್ನಾಡುತ್ತಾ ತುಂಬಾ ಸಂತೋಷದ ವಿಚಾರವೆಂದರೆ 122 ವರ್ಷಗಳ ಹಿಂದೆ ನಮ್ಮ ಪೂರ್ವಜರು ಈ ಮಹಾರಾಷ್ಟ್ರದ ಮಣ್ಣಿಗೆ ಬಂದು ನಮ್ಮ ಸಮಾಜದ ಸರ್ವತೋಮುಖ ಅಭಿವೃದ್ಧಿ ಆಗಬೇಕೆಂದು ಈ ಸಂಸ್ಥೆಯನ್ನು ಸ್ಥಾಪಿಸಿದ್ದು. ಅಂದಿನಿಂದ ಇಂದಿನವರೆಗೆ ನಾವು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ರಂಗದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ನಮ್ಮ ಸಮಾಜ ಹಾಗೂ ಇತರ ಸಮಾಜಕ್ಕೆ ದೇಣಿಗೆಯನ್ನು ಕೊಡುತ್ತಾ ಬಂದಿದ್ದೇವೆ. ನಮ್ಮ ಈ ಲೋಕೋಪಯೋಗಿ ಕಾರ್ಯಗಳು ಉಪನಗರಗಳಿಗೂ ವಿಸ್ತರಣೆ ಆಗಬೇಕು ಎಂದು ನಾವು ಉಪನಗರಗಳಲ್ಲಿ ನಮ್ಮ ಶಾಖೆಯನ್ನು ಸಂಸ್ಥಾಪಿಸಿದೆವು. ನಮ್ಮ ಎಂ ವಿ ಎಂ ಅಂಧೇರಿ ಯಲ್ಲಿ ಕೆಜಿಯಿಂದ ಪಿಜಿಯವರೆಗಿನ ವಿದ್ಯಾಭ್ಯಾಸ ನಡೆಯುತ್ತಿದೆ. ಅದೇ ರೀತಿ 2010ರಲ್ಲಿ ದೊಂಬಿವಲಿಯಲ್ಲಿಯೂ ಕಿರಿಯ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದ್ದೇವೆ. ಇಲ್ಲಿನ ಕಾರ್ಯಧ್ಯಕ್ಷ ಶೇಖರ್ ಮೆಂಡನ್ ಹಾಗೂ ಅವರ ತಂಡ ಈ ಶಾಲೆಯನ್ನು ಶಿಕ್ಷಣ ಸಂಕುಲವನ್ನಾಗಿ ಮಾಡಬೇಕೆಂಬ ದೃಢ ನಿರ್ಧಾರವನ್ನು ಹೊಂದಿದ್ದಾರೆ. ಖಂಡಿತವಾಗಿಯೂ ಇದು ತುಂಬಾ ಉತ್ತಮವಾದ ವಿಷಯವಾಗಿದೆ, ಇದಕ್ಕೆ ಯಾವ ರೀತಿಯ ಸಹಾಯ, ಸಹಕಾರ ಬೇಕು ಅದನ್ನು ಮಂಡಳಿಯೂ ಖಂಡಿತ ಮಾಡುತ್ತದೆ ಎಂದು ಹೇಳಲು ನಾನು ತುಂಬಾ ಸಂತೋಷ ಪಡುತ್ತೇನೆ ಎಂದು ನುಡಿದರು.

ಈ ಸಂದರ್ಭ ಹಿರಿಯ ಸದಸ್ಯರಾದ ಚಿತ್ರಪು ಲಕ್ಷ್ಮಣ್ ಅವರನ್ನು ಸನ್ಮಾನಿಸಲಾಯಿತು. ಹಾಗೂ ಹೆಚ್ಚಿನ ನಿಧಿ ಸಂಗ್ರಹಿಸಿದ ಸದಸ್ಯರನ್ನು ಗೌರವಿಸಲಾಯಿತು.
ಕಾರ್ಯಧ್ಯಕ್ಷ ಶೇಖರ್ ಮೆಂಡನ್ ಹಾಗೂ ವೇದಿಕೆಯ ಗಣ್ಯರು ನಿಧಿ ಸಂಗ್ರಹಣೆಯ ಚೆಕ್ ಅನ್ನು ಅಧ್ಯಕ್ಷರಾದ ಅರುಣ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.
ಮೊದಲಿಗೆ ವೇದಿಕೆ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಳೀಯ ಸಮಿತಿಯ
ಕಾರ್ಯಧ್ಯಕ್ಷ ಶೇಖರ್ ಮೆಂಡನ್ ಸ್ವಾಗತ ಭಾಷಣ ಮಾಡಿದರೆ, ಸಂಘಟಕ, ಮಾಜಿ ಕಾರ್ಯಾಧ್ಯಕ್ಷ ಯದುವೀರ್ ಬಿ.ಪುತ್ರನ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಮೋಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಅಧ್ಯಕ್ಷ ಎಚ್ ಅರುಣ್ ಕುಮಾರ್ , ದಿವ್ಯಾ ಶಿಪ್ಪಿಂಗ್ ಆಂಡ್ ಕ್ಲೀಯರಿಂಗ್ ಸರ್ವಿಸಸ್ ಪ್ರೆ.ಲಿ ಮುಂಬಯಿಯ ಇದರ ವ್ಯವಸ್ಥಾಪಕ ನಿರ್ದೇಶಕ ವೇದಪ್ರಕಾಶ್ ಶ್ರೀಯಾನ್, ಕಲ್ಯಾಣ್ ಪರಿಸರದ ಖ್ಯಾತ ಸಮಾಜ ಸೇವಕ ಹೋಟೆಲ್ ಉದ್ಯಮಿ ಭಾಸ್ಕರ ಶೆಟ್ಟಿ (ಹೋಟೆಲ್ ಗುರುದೇವ ಕಲ್ಯಾಣ), ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಡಾ ದಿವಾಕರ ಶೆಟ್ಟಿ ಇಂದ್ರಾಳಿ, ಬಿಲ್ಲವರ ಅಸೋಸಿಯೇಷನ್ ಮುಂಬಯಿಯ ಇದರ ಅಧ್ಯಕ್ಷ ಹರೀಶ್ ಅಮೀನ್, ಕರ್ನಾಟಕ ಸಂಘ ಡೊಂಬಿವಲಿ ಇದರ ಅಧ್ಯಕ್ಷ ಸುಕುಮಾರ್ ಎನ್ ಶೆಟ್ಟಿ, ಮೋಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿಯ ಇದರ ಮಾಜಿ ಅಧ್ಯಕ್ಷ ಮಹಾಬಲ್ ಕುಂದರ್ ಹಾಗೂ ಮೋಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಇದರ ವಿಶ್ವಸ್ತ ಅಜೀತ ಜಿ ಸುವರ್ಣ, ಗೌ. ಪ್ರ.ಕಾರ್ಯದರ್ಶಿ ದಿಲೀಪ್ ಕುಮಾರ ಮುಲ್ಕಿ, ಗೌ.ಕೋಶಾಧಿಕಾರಿ ಪ್ರತಾಪಕುಮಾರ್ ಕರ್ಕೆರ, ಮೋಗವೀರ ಮಂಡಳಿ ಮುಂಬಯಿ ಡೊಂಬಿವಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಮೆಂಡನ್, ಗೌ.ಕಾರ್ಯದರ್ಶಿ ಉಮೇಶ್ ಕೆ ಮೇಂಡನ್, ಗೌ ಕಾರ್ಯದರ್ಶಿ ಕೇಶವ ಎಸ್ ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದಮಯಂತಿ ಪಿ ಕೋಟ್ಯಾನ್, ಗೌ.ಕಾರ್ಯದರ್ಶಿ ಗೀತಾ ಎಸ್ ಮೇಂಡನ್ , ಗೌ ಕೋಶಾಧಿಕಾರಿ ಸವೀತಾ ಎನ್ ಸಾಲ್ಯಾನ್, ಚಿತ್ರಾಪು ಲಕ್ಷ್ಮಣ್ ತೀರ್ಪುಗಾರರಾದ ಬ್ರಿಜೇಶ್ ಆನಂದ್, ಸಂಧ್ಯಾ ಸಾಲಿಯಾನ್, ಸೌಜನ್ಯ ಆನಂದ್ ಬಿಲ್ಲವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಮೊದಲು ಶಾಲೆಯ ಮಕ್ಕಳಿಂದ ವಿವಿಧ ನೃತ್ಯ ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೆ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು.



ನೃತ್ಯ ಸ್ಪರ್ಧೆಯಲ್ಲಿ ಅಯ್ಯಪ್ಪ ಮಿತ್ರ ಮಂಡಲಿ ಪ್ರಥಮ ಬಹುಮಾನ, ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಸಂಸ್ಥೆ ದ್ವಿತೀಯ ಬಹುಮಾನ ವಿಷ್ಣು ಮಂದಿರ ತೃತೀಯ ಬಹುಮಾನವನ್ನು ಪಡೆಯಿತು.

