34 C
Mumbai
March 6, 2026
Mumbai News Kannada
ತುಳುನಾಡು

ಮೂಳೂರು : ಸಂಜೀವಿ ಸುಂದರ ವಿದ್ಯಾನಿಧಿ ಟ್ರಸ್ಟ್ ಉದ್ಘಾಟನೆ, ವಿದ್ಯಾನಿಧಿ ವಿತರಣೆ






ವಿದ್ಯಾವಂತ ಯುವಜನರೇ ಸಮಾಜದ ಮುಂದಿನ ಬಲು ದೊಡ್ಡ ಅಸ್ತಿ – ವಿನಯ್ ಕುಮಾರ್ ಸೊರಕೆ
ಮೂಳೂರು ದಿ.ಸುಂದರ ಪೂಜಾರಿ ಅವರ ಪುಣ್ಯ ಸ್ಮರಣೆಯಲ್ಲಿ ರಚಿಸಲ್ಪಟ್ಟ ಸಂಜೀವಿ ಸುಂದರ ವಿದ್ಯಾನಿಧಿ ಟ್ರಸ್ಟ್ ನ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾನಿಧಿ ವಿತರಣಾ ಸಮಾರಂಭ ಮೂಳೂರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಮೇ 24 ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ “ವಿದ್ಯೆ ಯಾರಿಂದಲೂ ಕದಿಯಲಾಗದ ಸ್ವತ್ತು, ವಿದ್ಯಾವಂತ ಯುವ ಜನರೇ ಸಮಾಜದ ಮುಂದಿನ ಬಲು ದೊಡ್ಡ ಅಸ್ತಿ. ಆರ್ಥಿಕ ಸೌಲಭ್ಯಗಳ ಕೊರತೆಯಿಂದ ವಿದ್ಯಾಭ್ಯಾಸದಿಂದ ವಂಚಿತರಾಗುವ ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯದೊಂದಿಗೆ ವಿದ್ಯಾವಂತರನ್ನಾಗಿಸುವ ಸಂಜೀವಿ ಸುಂದರ ವಿದ್ಯಾನಿಧಿ ಟ್ರಸ್ಟ್ ಪ್ರಯತ್ನಕ್ಕೆ ಸರ್ವರ ಬೆಂಬಲದ ಅಗತ್ಯವಿದೆ” ಎಂದರು.


ಉಳ್ಳೂರು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದ ಆಡಳಿತ ಸಮಿತಿ ಅಧ್ಯಕ್ಷ ಶೇಖರ್ ಶಾಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶ್ರೇಯಸ್ ಗಣೇಶ್ ಕೋಟ್ಯಾನ್ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ ತತ್ವ ಸಂದೇಶದ ಬಗ್ಗೆ ಉಪನ್ಯಾಸ ನೀಡಿದರು.
ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಕ್ರಂ ಕಾಪು, ಉಡುಪಿ ನಾರಾಯಣ ಗುರು ಕೋ. ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ಹರಿಶ್ಚಂದ್ರ ಅಮೀನ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಎಂ ಸುವರ್ಣ, ಮೂಳೂರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ವಿ ಅಂಚನ್,ಮೂಳೂರು ಬಿಲ್ಲವ ಸಂಘದ ಮುಂಬೈ ಸಮಿತಿ ಅಧ್ಯಕ್ಷ ನಾರಾಯಣ ಜಿ ಪೂಜಾರಿ, ಪಡುಬಿದ್ರಿ ಬಿಲ್ಲವರ ಸಂಘದ ಅಧ್ಯಕ್ಷ ವೈ ಸುಧೀರ್ ಕುಮಾರ್, ಮುದರಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಕರುಣಾಕರ್ ಡಿ ಪೂಜಾರಿ, ಮುಂಬೈ ಶನಿಮಹಾತ್ಮ ಸೇವಾ ಸಮಿತಿಯ ಅಧ್ಯಕ್ಷ ಶಂಕರ್ ಕೆ ಸುವರ್ಣ ಕುಧ್ರೋಳಿ, ಧಾರ್ಮಿಕ ಮುಂದಾಳು ಶೇಖರ್ ಮಹಾರಾಜ್, ಅದಮರು ಆದರ್ಶ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಬರ್ಪಾಣಿ ಎರ್ಮಾಳು, ಮೂಳೂರು ಬಿಲ್ಲವ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ನ್ಯಾಯವಾದಿ ದೀಪಾ ಆರ್ ಕೋಟ್ಯಾನ್, ಮುದರಂಗಡಿ ಬಿಲ್ಲವಾ ಸೇವಾ ಸಂಘದ ಅರ್ಚಕ ಶಂಕರ್ ಶಾಂತಿ, ಪಡುಬಿದ್ರಿ ಯುವ ವಾಹಿನಿಯ ಮಾಜಿ ಅಧ್ಯಕ್ಷ ರವಿರಾಜ್ ಕೋಟ್ಯಾನ್ ಮುಖ್ಯ ಅತಿಥಿಗಳಾಗಿದ್ದರು.
ಸಂಜೀವಿ ಸುಂದರ ವಿದ್ಯಾನಿಧಿ ಟ್ರಸ್ಟ್ ನ ಪ್ರವರ್ತಕರಾದ ಸಂಜೀವಿ ಸುಂದರ ಪೂಜಾರಿ, ಟ್ರಸ್ಟಿಗಳಾದ ಧನಂಜಯ ಶಾಂತಿ, ದಯಾನಂದ ಶಾಂತಿ, ಶಶಿಕಲಾ ಸುಧಾಕರ್ ಪೂಜಾರಿ, ದಿನೇಶ್ ಶಾಂತಿ ಉಪಸ್ಥಿತರಿದ್ದರು.
ಸಂಜೀವಿ ಸುಂದರ ವಿದ್ಯಾನಿಧಿ ಟ್ರಸ್ಟ್ ನ ಟ್ರಸ್ಟಿ ಧನಂಜಯ್ ಶಾಂತಿ ಸ್ವಾಗತಿಸಿ ,ಪ್ರಸ್ತಾವನೆಗೈದರು. ಹರೀಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.



Related posts

ಅದ್ಧೂರಿಯಾಗಿ ನಡೆದ ಮಂಗಳೂರು ದಸರಾ; ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ

Mumbai News Desk

ಕೋಡಿಕಲ್; ವಿಶ್ವ ಭಾರತಿ ಫ್ರೆಂಡ್ ಸರ್ಕಲ್. ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

Mumbai News Desk

ಸುರತ್ಕಲ್ ಬಂಟರ ಸಂಘದಲ್ಲಿ “ಆಟಿದ ಪೊರ್ಲು” ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

Mumbai News Desk

ಶ್ರೀ ಬಪ್ಪನಾಡು ಸೌಹರ್ದ ಸಹಕಾರಿ ಸಂಘ(ನಿ)ಇದರ ವಾರ್ಷಿಕ ಮಹಾಸಭೆಯಲ್ಲಿ ಹರಿಶ್ಚಂದ್ರ ಪಿ. ಸಾಲಿಯಾನ್‌ರವರಿಗೆ ಸನ್ಮಾನ

Mumbai News Desk

ಹೊಸ ಅಂಗಣ ತಿಂಗಳ ಕಾರ್ಯಕ್ರಮ : ಕಿಟ್ಟ ಪಂಬದರಿಗೆ ಸನ್ಮಾನ

Mumbai News Desk

‘ಹೊಸ ಅಂಗಣ’ ಮಾಸ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ : ದೈವದ ಪಾತ್ರಿ ಮೋಹನ್ ಪೂಜಾರಿಯವರಿಗೆ ಸನ್ಮಾನ

Mumbai News Desk