30.5 C
Mumbai
June 8, 2026
Mumbai News Kannada
ಸುದ್ದಿ

ಹಾಸ್ಯ ನಟ ರಾಕೇಶ್‌ ಪೂಜಾರಿ ಮನೆಗೆ ಕೊನೆಗೂ ರಿಷಬ್‌ ಶೆಟ್ಟಿ ದಂಪತಿ ಭೇಟಿ





 ಇತ್ತೀಚೆಗೆ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ ಹಾಸ್ಯನಟ ರಾಕೇಶ್ ಪೂಜಾರಿ ಮನೆಗೆ ಕೊನೆಗೂ ನಟ ರಿಷಬ್ ಶೆಟ್ಟಿ ಭೇಟಿ ಮಾಡಿ ಕುಟುಂಸ್ಥರೊಂದಿಗೆ ಸಾಂತ್ವನ ಹೇಳಿದ್ದಾರೆ.

ಕಾಂತಾರ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ರಾಕೇಶ್ ಪೂಜಾರಿ ಬಳಿಕ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ವೇಳೆ ಅಲ್ಲಿಯೇ ಕುಸಿದು ಸಾವನ್ನಪ್ಪಿದ್ದರು. ರಾಕೇಶ್ ನಿಧನರಾದಾಗ ಈ ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಅಂತಿಮ ದರ್ಶನ ಪಡೆಯಲು ಬರಲಿಲ್ಲ ಎಂಬುದು ಸಾಕಷ್ಟು ಚರ್ಚೆ ಆಗಿತ್ತು.

ಇದೀಗ 21 ದಿನಗಳ ಬಳಿಕ ರಾಕೇಶ್ ಪೂಜಾರಿ ಮನೆಗೆ ರಿಷಬ್ ಶೆಟ್ಟಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಅವರ ಪತ್ನಿ ಪ್ರಗತಿ ಶೆಟ್ಟಿ ಕೂಡ ಸಾಥ್ ನೀಡಿದರು. ಉಡುಪಿಯ ಹೂಡೆಯಲ್ಲಿ ರಾಕೇಶ್ ಪೂಜಾರಿ ಮನೆ ಇದೆ. ಅಲ್ಲಿ ರಾಕೇಶ್ ತಂಗಿ ಮತ್ತು ತಾಯಿ ವಾಸವಾಗಿದ್ದಾರೆ. ಅವರಿಗೆ ರಿಷಬ್ ಶೆಟ್ಟಿ ಸಾಂತ್ವನ ಹೇಳಿದ್ದಾರೆ.

ಅಂದಹಾಗೆ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ಬಿಸಿಯಾಗಿದ್ದು, ಇದೇ ಚಿತ್ರದಲ್ಲಿ ನಟ ರಾಕೇಶ್ ಪೂಜಾರಿ ನಟಿಸಿದ್ದರು. ಈ ಚಿತ್ರದಲ್ಲಿ ರಾಕೇಶ್ ಪೂಜಾರಿ ಅವರಿಗೂ ಒಂದು ವಿಶೇಷ ಪಾತ್ರ ನೀಡಲಾಗಿತ್ತು. ಶೂಟಿಂಗ್​ನಲ್ಲಿ ಕೂಡ ಅವರು ಪಾಲ್ಗೊಂಡಿದ್ದರು. ಆದರೆ ಸಿನಿಮಾದ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಅವರು ನಿಧನರಾದರು.



Related posts

ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಶ್ರೀರಕ್ಷೆಯೇ, ಸಾಧನೆಗೆ ಪ್ರೇರಣೆ : ದೇವಿಪ್ರಸಾದ್ ಶೆಟ್ಟಿ ಬೆಳಪು.

Mumbai News Desk

ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಸೇವಾ ದಳದ ದಳಪತಿಯಗಿ ಪ್ರದೀಪ್ ಅತ್ತಾವರ ಆಯ್ಕೆ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ನ ಪ್ರಶಸ್ತಿ ಸ್ವೀಕರಿಸಿದ ಫೂಲ್‌ಬಸನ್ ಬಾಯಿ ಯಾದವ್ ಆಶಯ : ಅಹಂ, ಆಸೆಯಿಂದ ಕೇಡು; ಕರ್ಮ ಒಳಿತಿನ ಬೀಡು

Mumbai News Desk

ದ್ವಿತೀಯ ಪಿಯುಸಿ ಪರೀಕ್ಷೆ : 96% ಅಂಕ ಪಡೆದ ಸೃಜನ್ ಬಿ ಮೊಗವೀರ

Mumbai News Desk

ಮಲಾಡ್: ನಡಿಕೆರೆ ಕೃಷ್ಣ ಶೆಟ್ಟಿ ನಿಧನ

Mumbai News Desk

ಆರ್ಯಭಟ ಪುರಸ್ಕೃತ ಕೆ.ಕೆ. ಶೆಟ್ಟರಿಗೆ ಹುಟ್ಟೂರ ಅಭಿನಂದನೆ

Mumbai News Desk