34 C
Mumbai
March 6, 2026
Mumbai News Kannada
ಪ್ರಕಟಣೆ

ಸಿದ್ದಿವಿನಾಯಕನ ಕ್ಷೇತ್ರದ *ಶ್ರೀ ಹಟ್ಟಿಯಂಗಡಿ ಮೇಳದ* 10 ನೇ. ವರ್ಷದ ಮುಂಬಯಿ  ತಿರುಗಾಟ – ಜುಲೈ 13 ರಿಂದ. 15 ವರೆಗೆ ಪೂನಾ, ಮುಂಬಯಿ  ಮಹಾನಗರದಲ್ಲಿ ಯಕ್ಷಗಾನ.





    ಉಡುಪಿ ಜಿಲ್ಲೆಯ ಕುಂದಾಪುರದ ಪುರಾಣ ಪ್ರಸಿದ್ದ ಸಿದ್ದಿವಿನಾಯಕನ ಕ್ಷೇತ್ರದ *ಶ್ರೀ ಹಟ್ಟಿಯಂಗಡಿ ಮೇಳದ* 10 ನೇ ವರ್ಷದ ತಿರುಗಾಟದ ಸಂಭ್ರಮದಲ್ಲಿ ಜುಲೈ 13 ರಿಂದ ಪೂನಾ,ಮುಂಬಯಿ ತಿರುಗಾಟ ಹಮ್ಮಿಕೊಂಡಿದ್ದು 15 ರಿಂದ ಮುಂಬಯಿ ಮಹಾನಗರದ ಸುತ್ತಮುತ್ತ ಯಕ್ಷಗಾನ ಆಡಿಸುವವರು ಸಂಪರ್ಕಿಸಬಹುದು.ಮಂಡಳಿಯ ನೂತನ ಕಥಾನಕವಾಗಿ ನಾಗಶ್ರೀ ಜಿ.ಎಸ್ ರಚನೆಯ *ಯದುವಂಶೋದ್ದರಣ* ಹಾಗೂ ಬೇಳೂರು ವಿಷ್ಣುಮೂರ್ತಿ ನಾಯಕ್ ರಚನೆಯ *ಸಿರಿ ಸಿಂಗಾರಿ*  ಖ್ಯಾತ ಪ್ರಸಂಗಗಳಾಗಿದ್ದು ಇತರೇ ಪೌರಾಣಿಕ ಆಖ್ಯಾನಗಳನ್ನೂ ಪ್ರದರ್ಶನ ನಡೆಸುತ್ತಾರೆ . ಯಕ್ಷಗಾನ ಸೇವೆಯ ಮೂಲಕ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.ಮೇಳದಲ್ಲಿ *ವೀರ ಚಂದ್ರಹಾಸ* ಚಿತ್ರದ ನಟ,ನಟಿಯರಾದ ಶಿಥಿಲ್ ಶೆಟ್ಟಿ, ನಾಗಶ್ರೀ ಜಿ.ಎಸ್ ವಿಶೇಷ ಪಾತ್ರ ನಿರ್ವಹಿಸಲಿದ್ದಾರೆ….ಹಿರಿಯ ಕಲಾವಿದ ಹಾಸ್ಯ ಸಾಮ್ರಾಟ ರಮೇಶ್ ಭಂಡಾರಿ ಭಾಗವಹಿಸಲಿದ್ದು,ನರಸಿಂಹ ಗಾಂವ್ಕರ್,ಮಾರುತಿ ನಾಯ್ಕ,ಶ್ರೀಕಾಂತ್ ರಟ್ಟಾಡಿ,ತಿಲಕ್ರಾಜ್,ನವೀನ್ ಕೋಡಿ,ಸುರಾಗ್ ಹೇರೂರು ಮುಂತಾದ ಕಲಾವಿದರು ಹಾಗೂ ವಿನಯ್ ಶೆಟ್ಟಿಕಾವ್ರಾಡಿ,ಪ್ರಭಾಕರ ಹೆಗಡೆ,ಸಾಣ್ಮನೆ ಭಾಗವತಿಕೆ,ಮೂರೂರು ಸುಬ್ರಹ್ಮಣ್ಯ ಹೆಗಡೆ ಮದ್ದಲೆ,ರಾಕೇಶ್ ಮಲ್ಯ ಚಂಡೆ ವಾದಕರಾಗಿ ಭಾಗವಹಿಸಲಿದ್ದಾರೆ .ಪ್ರತೀ ದಿನದ ಯಕ್ಷಗಾನ ಮಾಹಿತಿ ಪತ್ರಿಕೆಯಲ್ಲಿ ಪ್ರಕಟಗೊಳ್ಳಲಿದ್ದು ಹೆಚ್ಚಿನ ಸಂಖ್ಯೆ ಯಲ್ಲಿ ಬಂದು ಕಲಾವಿದರನ್ನು ಪ್ರೋತ್ಸಾಹಿಸಲು ಕೋರಲಾಗಿದೆ            – *ರಂಜಿತ್ ಶೆಟ್ಟಿ ವಕ್ವಾಡಿ*        ಮೇಳದ ಯಜಮಾನರು ಆಟಗಳಿಗೆ ಸಂಪರ್ಕಿಸಿ..

9141930593/9900800593

B. Dinesh Kulal

Mob.: 9821868674



Related posts

ವರ್ಲಿ : ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ (ರಿ), ನ 17 ರಂದು ಮಾಲೆ ಧಾರಣೆ

Mumbai News Desk

ಅಂದೇರಿ  :ಶ್ರೀ ಮದ್ಭಾರತ  ಮಂಡಳಿಯ ಶ್ರೀ ಲಕ್ಷ್ಮೀನಾರಾಯಣ ಮಂದಿರದ 22ನೇ ಪ್ರತಿಷ್ಟಾ ಮಹೋತ್ಸವ.

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿ, ಮಾ 16 ರಂದು ವಿದ್ಯಾರ್ಥಿ ವೇತನ, ವಿಕಲಚೇತನ ಹಾಗೂ ವಿಧವಾ ವೇತನಗಳಿಗೆ ಅರ್ಜಿಗಳ ಆಹ್ವಾನ,

Mumbai News Desk

ಶ್ರೀ ದುರ್ಗಾ ಭಜನಾ ಸೇವಾ ಮಂಡಳ, ಜ.21ಕ್ಕೆ 17ನೇ ವಾರ್ಷಿಕ ಮಹಾಪೂಜೆ.

Mumbai News Desk

ಬೋಂಬೆ ಬಂಟ್ಸ್ ಅಸೋಷಿಯೇಶನ ಮಾ.9ರಂದ 41 ನೇ ಮಹಾಸಭೆ, ಸಾಧಕರಿಗೆ ಸನ್ಮಾನ! ಮಾಜಿ ಅಧ್ಯಕ್ಷರುಗಳಿಗೆ ಗೌರವ!

Mumbai News Desk

ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್. ಡಿ.27 ರಂದು 14 ನೆಯ ವಾರ್ಷಿಕ ಪ್ರತಿಷ್ಟಾಪನೋತ್ಸವ.

Mumbai News Desk