30.9 C
Mumbai
June 8, 2026
Mumbai News Kannada
ಸುದ್ದಿ

ಗಮ್ಮತ್ ಕಲಾವಿದೆರ್ ಅವರ ‘ಪೋನಗ ಕೊನೊಪರ’ ನಾಟಕದ ಮುಹೂರ್ತ






ನೂತನ ನಾಟಕ ಯಶಸ್ವಿಯಾಗಿ ಪ್ರದರ್ಶನ ಕಾಣಲಿ – ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ

ದುಬಾಯಿ : ಯುಎಇಯಲ್ಲಿ ನ ತುಳುವರಿಗೆ ಕಳೆದ ಹದಿನಾಲ್ಕು ವರ್ಷಗಳಿಂದ ಉತ್ತಮ ಸಂದೇಶದ ನಾಟಕದ ಮೂಲಕ ಮನರಂಜನೆ ನೀಡುತ್ತಿರುವ ಗಮ್ಮತ್ ಕಲಾವಿದೆರ್ ದುಬೈ ತಂಡದ ನೂತನ ನಾಟಕ ಯಶಸ್ವಿಯಾಗಿ ಪ್ರದರ್ಶನ ಕಾಣಲಿ ಹಾಗೂ ಯುಎಇಯಲ್ಲಿ ಇರುವ ಕಲಾಭಿಮಾನಿಗಳಿಗೆ ಮನರಂಜನೆ ಕೊಡುವುದಲ್ಲದೆ ಇಲ್ಲಿನ ಕಲಾವಿದರಗೆ ಅವಕಾಶ ನೀಡುತ್ತಿರುವುದು ಪ್ರಶಂಸನೀಯ ಎಂದು ಯುಎಇ ಬಂಟ್ಸ‌್‌ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ನುಡಿದರು.
ಅವರು ನಗರದ ಬಿರಿಯಾನಿ 2020 ರೆಸ್ಟೋರೆಂಟ್ ನ ಸಭಾಂಗಣದಲ್ಲಿ ಗಮ್ಮತ್ ಕಲಾವಿದೆರ್ ದುಬೈ ಯುಎಇಯ ನೂತನ ನಾಟಕದ ಮುಹೂರ್ತ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಕೆಲಸದಲ್ಲಿ ನಿರತರಾಗಿ ವಾರದ ಒಂದು ರಜೆಯನ್ನು ನಾಟಕದ ಪ್ರಾಕ್ಟೀಸ್ ಗಾಗಿ ಮೀಸಲಿಟ್ಟು ಯುಎಇ ಮಾತ್ರವಲ್ಲದ್ದೆ ಸ್ವದೇಶದ ಕಲಾಭಿಮಾನಿಗಳನ್ನು ರಂಜಿಸುತ್ತಾ ಬಂದಿರುವ ಗಮ್ಮತ್ ಕಲಾವಿದೆರ್ ತಂಡಕ್ಕೆ ಶುಭಾಶಯವನ್ನು ಕೋರುತ್ತಾ,ಯುಎಇಯಲ್ಲಿ ನ ಸಂಘ ಸಂಸ್ಥೆಗಳಲ್ಲಿ ವಾರದಲ್ಲಿ ಮೂರು ನಾಲ್ಕು ಕಾರ್ಯಕ್ರಮಗಳು ನಡೆಯುತ್ತಿದ್ದು, ಕಾರ್ಯಕ್ರಮದ ಸಂಘಟಕರು ದಿನಾಂಕ ನಿಗದಿ ಪಡಿಸುವಾಗ ಯಾರಿಗೂ ಅನಾನುಕೂಲವಾಗದಂತೆ ದಿನಾಂಕವನ್ನು ಮುಂಚಿತವಾಗಿ ನಿಗದಿ ಪಡಿಸಿ ಎಂದು ಯುಎಇಯ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಕರೆ ನೀಡಿದರು.

ಗೌರವಾನ್ವಿತ ಅತಿಥಿಯಾಗಿ ಉಪಸ್ಥಿತರಿದ್ದ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿಯವರು ಮಾತನಾಡಿ, ಕಳೆದ ಹದಿನಾಲ್ಕು ವರ್ಷಗಳಿಂದ ಈ ತಂಡದ ನಾಟಕವನ್ನು ನೋಡುತ್ತಾ ಇದ್ದೇನೆ ವರ್ಷ ವರ್ಷಕ್ಕೆ ಉತ್ತಮ ಸಂದೇಶ ನೀಡುವ ನಾಟಕವನ್ನು ನೀಡುತ್ತಿದ್ದು, ಈ ತಂಡದ ಪ್ರತಿಯೊಬ್ಬ ಕಲಾವಿದನ ಅಭಿನಯದ ಚಾತುರ್ಯವನ್ನು ನೋಡುವಾಗ ಊರಿನ ವೃತ್ತಿಪರ ನಾಟಕ ತಂಡಕ್ಕಿಂತ ಯಾವುದೇ ಕಮ್ಮಿ ಇಲ್ಲ ಎಂದು ಶ್ಲಾಘಿಸಿ ತಂಡದ ನೂತನ ನಾಟಕಕ್ಕೆ ಶುಭವನ್ನು ಹಾರೈಸಿದರು.
ಇನ್ನೋರ್ವ ಅತಿಥಿ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿಯವರು ಮಾತನಾಡುತ್ತಾ ಹಲವು ವರ್ಷಗಳಿಂದ ಊರಿನ ಪ್ರತಿಷ್ಠಿತ ನಾಟಕ ತಂಡ ಪ್ರದರ್ಶಿಸಿದ ಸ್ಕ್ರಿಪ್ಟನ್ನು ತಂದು ನಾಟಕವನ್ನು ಪ್ರದರ್ಶಿಸುತ್ತಿದ್ದು ಕಳೆದ ಎರಡು ವರ್ಷಗಳಿಂದ ಊರಲ್ಲಿ ಪ್ರದರ್ಶನವಾಗದ ನೂತನ ಸ್ಕ್ರಿಪ್ಟನ ನಾಟಕವನ್ನು ಆಡುತ್ತಾ ಮನರಂಜನೆ ನೀಡುತ್ತಿದ್ದೀರಿ ಎಂದು ಶುಭ ಹಾರೈಸಿದರು.

ಕೊಂಕಣಿ ರಂಗ ಕಲಾವಿದರು,ನಿರ್ದೇಶಕರಾದ ಡಯನಾ ಡಿ ಸೋಜಾರವರು ನೂತನ ನಾಟಕಕ್ಕೆ ಶುಭ ಹಾರೈಸಿದರು. ಪುರೋಹಿತ ರವಿಶಂಕರ್ ಲೋಹಿತ್ ಭಟ್, ನಿಹಾಲ್ ನ ಆಡಳಿತ ನಿರ್ದೇಶಕರಾದ ಸುಂದರ ಶೆಟ್ಟಿ ಅಬುಧಾಬಿ, ಕರ್ನಾಟಕ ಸಂಘ ದುಬೈಯ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ,ತಂಡದ ಮಹಾ ಪೋಷಕ ಹರೀಶ್ ಬಂಗೇರ ಉಪಸ್ಥಿತರಿದ್ದರು.

ತಂಡದ ನಿರ್ದೇಶಕ ವಿಶ್ವನಾಥ ಶೆಟ್ಟಿ ನಾಟಕದ ಬಗ್ಗೆ ಮಾತನಾಡುತ್ತಾ ಅಕ್ಟೋಬರ್ ಹನ್ನೊಂದರಂದು ಸಂಜೆ ಐದು ಗಂಟೆಗೆ ಎಮಿರೇಟ್ಸ್ ಥೀಯೇಟರ್ ನಲ್ಲಿ ನಾಟಕ ಪ್ರದರ್ಶನವಾಗಲಿದೆ. ಎಂದರು. ದಿನಕರ ಭಂಡಾರಿ ಕಣಂಜಾರುರವರ ಜಗದೀಶ್ ಶೆಟ್ಟಿ ಕೆಂಚನಕೆರೆ ರಚಿಸಿ ಸಂಭಾಷಣೆ ಬರೆದಿರುವ “ಪೋನಗ ಕೊನೊಪರ” ನಾಟಕವನ್ನು ವಿಶ್ವನಾಥ ಶೆಟ್ಟಿ ಶೆಟ್ಟಿ ಯವರ ನಿರ್ದೇಶನದಲ್ಲಿ ತಂಡದ ಪ್ರತಿಭಾವಂತ ಕಲಾವಿದರು ಅಭಿನಯಿಸಲಿದ್ದಾರೆ. ನಾಟಕಕ್ಕೆ ಸಂಗಿತ ನಿರ್ದೇಶನವನ್ನು ರೋಹನ್ ಲೋಬೊ ಕಳಕುಲ್ಲು ಮತ್ತು ರಂಗ- ಸಜ್ಜಿಕೆಯನ್ನು ದುಬೈ ಸೋರ್ಸ್ ನಾ ಹರೀಶ್ ಬಂಗೇರರವರು ಮಾಡಲಿದ್ದಾರೆ.

ಯುಎಇಯ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ತಂಡದ ಮಾಜಿ ಅಧ್ಯಕ್ಷರುಗಳಾದ ವಾಸು ಶೆಟ್ಟಿ, ಸುವರ್ಣ ಸತೀಶ್ ಪೂಜಾರಿ, ರಾಜೇಶ್ ಕುತ್ತಾರ್, ಕೋಶಾಧಿಕಾರಿ ಜೇಶ್ ಬಾಯಾರ್ ಹಾಗೂ ತಂಡದ ಎಲ್ಲಾ ಪದಾಧಿಕಾರಿಗಳು ಕಲಾವಿದರು ಉಪಸ್ಥಿತರಿದ್ದರು.

ತಂಡದ ಅಧ್ಯಕ್ಷೆ ಶ್ರೀಮತಿ ಲವೀನಾ ಫೆರ್ನಾಂಡಿಸ್ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು.ದೀಕ್ಷಾ ರೈ ಕಾರ್ಯಕ್ರಮವನ್ನು ನಿರೂಪಿಸಿದರು, ಕಾರ್ಯದರ್ಶಿ ಶ್ರೀಮತಿ ದೀಪ್ತಿ ದಿನ್ ರಾಜ್ ಶೆಟ್ಟಿ ಧನ್ಯವಾದವಿತ್ತರು.



Related posts

ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾಗಿ ಮಯೂರ್ ಉಳ್ಳಾಲ್ ಆಯ್ಕೆ

Mumbai News Desk

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಖಂಡರಿಂದ ಡಾ. ವೀರೇಂದ್ರ ಹೆಗ್ಗಡೆಯವರ ಭೇಟಿ: ಕೈಗಾರಿಕೀಕರಣದ ಬಗ್ಗೆ ಸುದೀರ್ಘ ಚರ್ಚೆ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಡಿ. ಆರ್. ರಾಜು ನಿಧನಕ್ಕೆ ಶ್ರದ್ದಾಂಜಲಿ ಸಭೆ

Mumbai News Desk

ಪೊಲಿಪು ಶ್ರೀಧರ್ ಕಾಂಚನ್ ನಿಧನ

Mumbai News Desk

ಮೂಡುಬಿದಿರೆ – ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊದ ಆಯೋಜನೆಯಲ್ಲಿ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ ಸ್ಪರ್ಧೆ : ಮಿಸ್ ಕ್ವೀನ್ ಕರಾವಳಿ 2025 ಆಗಿ ಪೂರ್ವಿ ಇ ಕುಲಾಲ್ ಆಯ್ಕೆ

Mumbai News Desk

ಕಾಂದಿವಲಿ: ಯೂನಿಯನ್ ಬ್ಯಾಂಕ್ ನಿವೃತ್ತ ಅಧಿಕಾರಿ ಕುಸುಮಲತಾ ಸುವರ್ಣ ನಿಧನ

Mumbai News Desk