30.5 C
Mumbai
June 8, 2026
Mumbai News Kannada
ಸುದ್ದಿ

ಅಗಸ್ಟ್ 23 : ಹರಿಣಿ ಎಂ ಶೆಟ್ಟಿ ಕಾಪು ಇವರ ಮುತ್ತುದಾ… ಪನಿ… ಕವನ ಸಂಕಲನ ಲೋಕಾರ್ಪಣೆ





 

     ಮುಂಬಯಿ ಆ20. ನಗರದ ಸಾಹಿತಿ ಸಂಘಟಕಿ ಹರಿಣಿ ಎಂ ಶೆಟ್ಟಿ ಕಾಪು ಇವರ” ಮುತ್ತುದಾ. ಪನಿ. ಕವನ ಸಂಕಲನ ಲೋಕಾರ್ಪಣೆ ಆ23 ರಂದು ಕುರ್ಲಾ ಪೂರ್ವದ ಬಂಟರ ಭವನದ ಎನೆಕ್ಷ್ ಹಾಲ್, ಇಲ್ಲಿ ಮಧ್ಯಾಹ್ನ 2 ಗಂಟೆಗೆ ಡಾ. ಸುನೀತಾ ಎಂ ಶೆಟ್ಟಿ ಇವರ ದಿವ್ಯ ಹಸ್ತ ದಿಂದ ಬಿಡುಗಡೆಗೊಳಿಸಲಿದ್ದಾರೆ. ಈ ಕೃತಿ ಪರಿಚಯವನ್ನು ಡಾ. ಪೂರ್ಣಿಮಾ ಶೆಟ್ಟಿಯವರು ಮಾಡಿಕೊಡಲಿದ್ದಾರೆ.

ಹರಿಣಿ ಎಂ ಶೆಟ್ಟಿ ಕಾಪು ,

ಕಾಪು ಕರಂದಾಡಿ ಭಟ್ಟಸ್ಥಾನದ  ದಿ. ರಾಧಾ ಶಿವರಾಮ್ ಶೆಟ್ಟಿಯವರ ಪುತ್ರಿ ದೇವಸ್ಯ ಕೊಡೆತೂರು ಗುತ್ತು ದಿ. ಮಲ್ಲಿನಾಥ್ ಜೆ. ಶೆಟ್ಟಿಯವರ ಜೀವನ ಸಂಗಾತಿಯಾಗಿ ಮುಂಬೈಯಲ್ಲಿ ಹಲವಾರು ಕ್ಷೇತ್ರಗಳಲ್ಲಿ ಕೈಯಾಡಿಸಿದವರು. 

ಬಿ. ಎ. ಪದವಿಯನ್ನು ಎಂ. ಎಸ್ ಆರ್. ಎಸ್. ಕಾಲೇಜ್ ಶಿರ್ವದಲ್ಲಿ ಪೂರೈಸಿರುತ್ತಾರೆ.

ಹೊಟ್ಟೆಪಾಡಿಗಾಗಿ ಜನ್ಮಭೂಮಿಯನ್ನು ಬಿಟ್ಟು ಕರ್ಮಭೂಮಿಯಾದ ಮುಂಬೈಗೆ ಆಗಮಿಸಿದ ತಾವು ಜೀವನದ ಏಳು ಬೀಳುಗಳನ್ನು ಕಂಡವರು. ಇವರ ಪತಿಯ ಸಹಕಾರದಿಂದ ಇವರು ಹಲವು ಕ್ಷೇತ್ರಗಳಲ್ಲಿ ಯಶಸ್ಸನ್ನು ಕಂಡಿದ್ದಾರೆ.  ಬಾಲ್ಯದಲ್ಲಿಯೇ ರಂಗ ಭೂಮಿಯಲ್ಲಿ ತುಂಬಾ ಆಸಕ್ತಿ ಇದ್ದ ತಾವು ಹುಟ್ಟೂರಿನಲ್ಲಿ ಹಲವು ಪಾತ್ರಗಳಲ್ಲಿ  ಅಭಿನಯಿಸಿದ ಖ್ಯಾತಿ ಇವರದ್ದು. ಬಂಟ ಸಂಘ ಮುಂಬೈಯ ಕುರ್ಲಾ ಭಾಂಡೂಪಿನ ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿಯಾಗಿ, ಉಪಕಾರ್ಯಾಧ್ಯಕ್ಷೆಯಾಗಿ ಅಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ  ವಿವಿಧ ಹುದ್ದೆಗಳಲ್ಲಿ ತನ್ನನ್ನು ತಾನು ಸಾಮಾಜಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡ ಹೆಗ್ಗಳಿಕೆ ಇವರದ್ದು. 

ಪ್ರಸ್ತುತ ಬಂಟರ ಸಂಘದ ಮಹಿಳಾ ವಿಭಾಗದ ಸಾಹಿತ್ಯ ಕನ್ವೀನಿಯರ್*  ಸೇವೆ ಸಲ್ಲಿಸುತ್ತಿದ್ದಾರೆ. 

 *ಸಾಹಿತ್ಯ ಕ್ಷೇತ್ರದಲ್ಲಿ ಹಲವು ಬಾರಿ ರಾಜ್ಯ ಮಟ್ಟದ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 

ಇವರ ಬಹುಮುಖ ಸಾಧನೆಗೆ ರಾಷ್ಟ್ರಮಟ್ಟದ ವಿಶ್ವವಿಜ್ಞಾನ ಶ್ರೀ ಪ್ರಶಸ್ತಿ , ಸ್ವರ್ಣ ಸಿರಿ ಪ್ರಶಸ್ತಿ* , ತೌಳವ ಪ್ರಶಸ್ತಿ, ಕಲತ್ತ ಬೊಳ್ಳಿ ಗೌರವ, ಗೌರವ ಸಾಧಕ ಪ್ರಶಸ್ತಿ, ಶ್ರೀ ಶ್ರೀ ಕೆಂಗಲ್ ಹನುಮಂತಯ್ಯ ಸದ್ಭಾವನಾ ಪ್ರಶಸ್ತಿ, ಕರ್ನಾಟಕ ಮುಕುಟಮಣಿ, ಕರ್ನಾಟಕ ಕಲಾಭೂಷಣ, ಮಲೆನಾಡ ಮಾತೆ, ವಿಶೇಷ ಸಾಧಕ ಪ್ರಶಸ್ತಿ, ಕಾವ್ಯ ಶಿರೋಮಣಿ ರಾಜ್ಯ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳು ಅವರ ಪ್ರತಿಭೆಗೆ ಕಳಶಪ್ರಾಯವಾಗಿದೆ

 *ತುಳು ಲಿಪಿ ಪ್ರಥಮ* *ಶ್ರೇಣಿಯಲ್ಲಿ* ಪಾಸಾಗಿರಿವಿರಿ.

 *ಟಿವಿಯಲ್ಲಿ ಪ್ರಸಾರವಾಗಿರುವ* *ಸಕಿಯರ ಸಕತ್ತು* ಸಿನೇಮಾ ನಟಿ ವಿನಯಾ ಪ್ರಸಾದ್ ರೊಂದಿಗೆ ಭಾಗವಹಿಸಿದಂತಹ ಹೆಗ್ಗಳಿಕೆ ಇವರದ್ದು.

ಇತ್ತೀಚೆಗೆ ಮಹಾಲಕ್ಷ್ಮೀ ಬಂಟ ಮಹಿಳಾ ಯಕ್ಷಕಲಾ ಬಳಗ ಮುಂಬೈಯ ತಾಳಮದ್ದಲೆಯಲ್ಲಿ ಅಂಬಾ ಶಪತ – ಭೀಷ್ಮ ವಿಜಯದಲ್ಲಿ ಅಂಬೆಯಾಗಿ, ಸತ್ಯ ಹರಿಶ್ಚಂದ್ರದಲ್ಲಿ ಚಂದ್ರಮತಿಯಾಗಿ ಅತ್ಯುತ್ತಮ ಅಭಿನಯವನ್ನು ನೀಡಿದ್ದಾರೆ.

ನಾಟಕ, ಟೆಲಿಫಿಲಂ,  ತಾಳಮದ್ದಲೆ, ಯಕ್ಷಗಾನ, ಭಜನೆ,* *ನೃತ್ಯ, ಕಥೆ, ಕವನ, ಲೇಖನ* ಎಲ್ಲ ಕ್ಷೇತ್ರದಲ್ಲಿಯೂ ಬಹುಮುಖ ಪ್ರತಿಭೆಯ ಮನಾಲಿ ಆರ್ಟ್ ನ ಹರಿಣಿ ಎಂ. ಶೆಟ್ಟಿಯವರು ಇದೀಗ ತುಳುವೆರ ಕಲ ಟ್ರಸ್ಟ್ ರಿ. ಇದರ ಮಹಾರಾಷ್ಟ್ರ ರಾಜ್ಯದ ಸಂಚಾಲಕಿಯಾಗಿ ತಮ್ಮ ಮುಂದಾಳತ್ವದಲ್ಲಿ  ಅಗಸ್ಟ್ 23 ರಂದು ಜರಗಲಿರುವ ತುಲುವೆರೆ ಮಿನದನ  ಹಾಗೂ ಮುತ್ತುದಾ… ಪನಿ ಕವನ ಸಂಕಲನ ಬಿಡುಗಡೆ  ಕಾರ್ಯಕ್ರಮಕ್ಕೂ ತುಳು ಕನ್ನಡಿಗರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Related posts

“ಪ್ರೇರಣಾ – ಲಿಯೋ PST ಸ್ಕೂಲಿಂಗ್ 2025-26: ಲಿಯೋ ಜಿಲ್ಲಾ 317D ಯಲ್ಲಿ ನಾಯಕತ್ವಕ್ಕೆ ನೂತನ ಪ್ರೇರಣೆ”

Mumbai News Desk

ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

Mumbai News Desk

ಥಾಣೆ ನೇತ್ರಾವತಿ ಎಸ್.ಅಮೀನ್ ನಿಧನ.

Mumbai News Desk

ಮುಲ್ಕಿ: ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಜನಾಕರ್ಷಣೆ ಪಡೆಯುತ್ತಿರುವ ಪುಂಗನೂರು ತಳಿಯ ಹಸು

Mumbai News Desk

ಮೂಡುಬಿದ್ರೆ ಮಹಾವೀರ ಕಾಲೇಜಿನ ವಜ್ರ ಮಹೋತ್ಸವದ ಸಿದ್ಧತೆಗಾಗಿ ಮಾ. 22ರಂದು ಮುಂಬೈನಲ್ಲಿ ಹಳೆ ವಿದ್ಯಾರ್ಥಿಗಳ ಸಮಾಲೋಚನಾ ಸಭೆ

Mumbai News Desk

ಕೇಂದ್ರ ಬಜೆಟ್ 2025ರ ಪ್ರಮುಖ ಮುಖ್ಯಾಂಶಗಳು

Mumbai News Desk