34 C
Mumbai
March 6, 2026
Mumbai News Kannada
ಲೇಖನ

ಪ್ರಧಾನಮಂತ್ರಿಯವರ 75ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ತಯಾರಾದ ಮೋಹನ್ ದಾಸ್ ರವರ ಕೊಡುಗೆ “ವಸುಧೈವ ಕುಟುಂಬಕಂ ” ಕಲಾಕೃತಿ





ವಿವಿಧ ಧಾರ್ಮಿಕ ಪೂಜೆಗಳಲ್ಲಿ ಪುಷ್ಪಲಂಕಾರದ ಮಂಟಪಗಳನ್ನು ಮಾಡಿ ಮನೆಮಾತಾಗಿರುವ ‌ಮೋಹನ್ ದಾಸ್ ರವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬಕ್ಕಾಗಿಯೇ ಒಂದು ವಿಶೇಷವಾದ ಕಲಾಕೃತಿಯನ್ನು ರಚಿಸಿ, ಅದನ್ನು ಉಡುಗೊರೆಯಾಗಿ ಸ್ವೀಕರಿಸಲು ಪ್ರಧಾನಮಂತ್ರಿಯವರಲ್ಲಿ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಕಲಾಕೃತಿಯನ್ನು ಒಂದು ವಿಶೇಷವಾದ ಉದ್ದೇಶದಿಂದ ತಯಾರಿಸಲಾಗಿದ್ದು, ಪ್ರಧಾನಮಂತ್ರಿಯವರ ” ವಸುಧೈವ ಕುಟಂಬಕಂ” ಹಾಗೂ ” ಸಬ್ಕ ಸಾಥ್ ಸಬ್ಕ ವಿಕಾಸ್” ಎನ್ನುವ ಬೀಜಮಂತ್ರವನ್ನು ಬಿಂಬಿಸುವಂತಿದೆ.

ಯಈ ಕಲಾಕೃತಿಯು ಸುಮಾರು 130 Kg ಭಾರವಿದ್ದು, ಪೀಠದೊಟ್ಟಿಗೆ ಸುಮಾರು 200 Kg ಭಾರವಾಗಿದೆ. 8.5 ಅಡಿ ಎತ್ತರದ ಕಲಾಕೃತಿಯನ್ನು ಮೂರು ಭಾಗಗಳಾಗಿ ತಯಾರಿಸಿದ್ದು ಇದು ಮರದ ಪೀಠವಾದ ಆನೆಯ ರಥದ ಮೇಲಿನ ಖೂರ್ಮದ ಮೇಲೆ ವಿರಾಜಮಾನವಾಗಿದೆ. ಈ ಕಲಾಕೃತಿಯು ಏಳು ಸ್ತಂಭಗಳನ್ನು ಹೊಂದಿದ್ದು, ಈ ಸ್ತಂಭಗಳಿಗೆ ಕ್ರಮವಾಗಿ ನಮ್ಮ ಭೂಮಿಯ ಏಳು ಖಂಡಗಳಾಗಿರುವ ಏಶಿಯನ್ಸ್ ಸ್ತಂಭ, ಯುರೋಪಿಯನ್ಸ್ ಸ್ತಂಭ, ಆಫ್ರಿಕನ್ಸ್ ಸ್ತಂಭ, ಸೌತ್ ಅಮೇರಿಕನ್ಸ್ ಸ್ತಂಭ, ನಾರ್ತ್ ಆಮೇಕನ್ಸ್ ಸ್ತಂಭ, ಅಂಟಾರ್ಕಟಿಕ್ ಸ್ತಂಭ, ಹಾಗೂ ಆಸ್ಟ್ರೇಲಿನ್ಸ್ ಸ್ತಂಭ ಎಂದು ಹೆಸರಿಸಲಾಗಿದೆ.
ಅದರ ಮದ್ಯದಲ್ಲಿ ಏಳು ಮಹಾದ್ವಾರಗಳಿದ್ದು, ಕ್ರಮವಾಗಿ ಫೆಸಿಫಿಕ್ ಮಹಾಸಾಗರ ಮಹಾದ್ವಾರ, ಅಟ್ಲಾಂಟಿಕ್ ಮಹಾಸಾಗರ ಮಹಾದ್ವಾರ, ಹಿಂದೂ ಮಹಾಸಾಗರ ಮಹಾದ್ವಾರ, ಸದರ್ನ್ ಮಹಾಸಾಗರ ಮಹಾದ್ವಾರ, ಅರ್ಕೆಟಿಕ್ ಮಹಾಸಾಗರ ಮಹಾದ್ವಾರ, ನಾರ್ಥ್ ಪೋಲ್ ಮಹಾದ್ವಾರ ಹಾಗೂ ಸೌತ್ ಪೋಲ್ ಮಹಾದ್ವಾರ ಎಂದು ಹೆಸರಿಸಲಾಗಿದೆ. ಕಲಾಕೃತಿಯ ಒಳಭಾಗದಲ್ಲಿ ರಾಸಾಯನಿಕ ಮಹಾಸಾಗರವನ್ನು ಸೃಷ್ಟಿಸಿದ್ದು, ಸಾಗರದ ಅಲೆಗಳು ಸಾಗರದ ತಟವನ್ನು ಮುತ್ತಿಡುವಂತೆ ಗೋಚರಿಸುತ್ತಿದೆ.

ವಸುಂದರೆಯನ್ನು ಬಿಂಬಿಸುವ ಅಡಿಪಾಯದ ಮೆಲ್ಭಾಗವನ್ನು 197 ದೇಶದ ರಾಷ್ಟ್ರಧ್ವಜಗಳಿಂದ ಶೃಂಗರಿಸಿದ್ದು, ಅದಕ್ಕಿಂತ ಮೇಲ್ಭಾಗದಲ್ಲಿ “ಒಂದೇ ಭೂಮಿ, ಒಂದೇ ಕುಟುಂಬ, ಒಂದೇ ಭವಿಷ್ಯ” ಎಂಬ ವಸುಧೈವ ಕುಟುಂಬಕಂನ ಮಂತ್ರಘೋಷವನ್ನು ಕೆತ್ತಲಾಗಿದ್ದು, ಕಲಾಕೃತಿಯ ತುತ್ತ ತುದಿಯಲ್ಲಿ ಗೋಪುರವನ್ನು ನಿರ್ಮಿಸಿದ್ದು, ಅದನ್ನು ಶುದ್ಧ ಚಿನ್ನದಿಂದ ಹೊದಿಸಲಾಗಿದೆ. ಅದರಲ್ಲಿ ಒಂದೊಂದು ದೇಶವೂ ವಸುಧೈವ ಕುಟುಂಬಕಂನ ಶೃಂಗಾರದ ಒಂದೊಂದು ವಜ್ರಗಳಂತೆ, ಬಣ್ಣ ಬಣ್ಣದ ವಜ್ರಗಳಿಂದ ಚಿನ್ನದ ಗೋಪುರವನ್ನು ಶೃಂಗರಿಸಲಾಗಿದೆ. ಅದರ ಮೇಲೆ ಶುದ್ಧ ಚಿನ್ನವನ್ನು ಹೊದಿಸಿದ ಅಶೋಕಸ್ತಂಭವನ್ನು ನಿರ್ಮಿಸಿ ರಾಷ್ಟ್ರಧ್ವಜದಿಂದ ಶೃಂಗರಿಸಲ್ಪಟ್ಟಿದ್ದು ನಮ್ಮ ಭಾರತವು ” ವಿಶ್ವ ಗುರು ” ಎಂದು ಭಾಸವಾಗುವಂತೆ ಈ ಕಲಾಕೃತಿಯನ್ನು ನಿರ್ಮಿಸಲಾಗಿದೆ.

ಮೋಹನದಾಸ್ ರವರ ಪ್ರಕಾರ ಪೃಥ್ವಿಯು ಭೂಮಿ, ನೀರು, ಅಗ್ನಿ, ವಾಯು ಹಾಗೂ ಆಕಾಶ ಎನ್ನುವ ಪಂಚಭೂತಗಳಿಂದ ನಿರ್ಮಿಸಲಾಗಿದ್ದು, ಪೃಥ್ವಿಯು ‘ವಸುಂದರೆ’ ಎಂದು ನಾಮಾಂಕಿತಳಾಗಿ, ಆಕೆ ಎಲ್ಲಾ ಜೀವ ಜಂತುಗಳ ಮಾತೆಯಾಗಿದ್ದಾಳೆ. ವಸುಂದರೆಯ ಮನದಾಳದ ಇಚ್ಛೆಯನ್ನು ಆಕೆಯ ಸುಪುತ್ರಿ ‘ ಭಾರತಿಯು “ಸರ್ವೇ ಜನ ಸುಖಿನೋ ಭವಂತು”ಅಂದರೆ ಪ್ರಪಂಚದಲ್ಲಿರುವ ಎಲ್ಲಾ ಜೀವರಾಶಿಗಳು ಒಂದೇ ಕುಟುಂಬವಾಗಿದೆ, ಅವರೆಲ್ಲಾ ಒಂದೇ ಭವಿಷ್ಯವನ್ನು ಹೊಂದಿದ್ದು ಪ್ರತಿಯೊಬ್ಬರು ಪ್ರೀತಿ, ವಾತ್ಸಲ್ಯ, ಮಮಕಾರ, ದಯಾವಂತರಾಗಿ ಬಾಳಿ, ಪ್ರತಿಯೊಬ್ಬರಿಗೂ ನ್ಯಾಯ ಸಿಗುವಂತಿರಬೇಕು ಎಂದು ತಿಳಿಸುತ್ತಾಳೆ.ಇದು ಒಂದು ವಸುಧೈವ ಕುಟುಂಬವಾಗಿದ್ದು ನಾವೆಲ್ಲರೂ ಯಾವರೀತಿ ಬಾಳಬೇಕು ಎಂದು ವೇದಗಳ ಮುಖಾಂತರ ” ಸನಾತನ ಧರ್ಮ ” ವನ್ನು ಈ ಪ್ರಪಂಚಕ್ಕೆ ವಿವರಿಸಿದ್ದಾಳೆ.ವಸುಧೈವ ಕುಟುಂಬಕಂನ ಮೂಲ ಉದ್ದೇಶವನ್ನು ಸನಾತನ ಧರ್ಮದ ಮುಖಾಂತರ ವಿಶ್ವಕ್ಕೆ ವಿವರಿಸಿರುವ ಮಾತೆ ಭಾರತಿಯು “ವಿಶ್ವಗುರು” ಆಗಿ ಮೆರೆದಳು.

ಸನಾತನ ಧರ್ಮವು
ವಿಶ್ವದ ಮೂಲ ಧರ್ಮವಾಯಿತು.
ಕಲಾಕೃತಿಯ ಮುಖ್ಯ ನಾಮಫಲಕದಲ್ಲಿ ‘ ವಸುಧೈವ ಕುಟುಂಬಕಂ’ ಎನ್ನುವ ಹೆಸರನ್ನು ಸಂಸ್ಕ್ರತ (ಹಿಂದಿ), ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಬರೆದಿದ್ದಾರೆ.ಈ ಕಲಾಕೃತಿಯು ಜನರ ಮನವನ್ನು ಗೆದ್ದರೆ, ಜನರು ತನ್ನನ್ನು ಮರೆತರೂ, ಈ ಕಲಾಕೃತಿಯು ಕನ್ನಡಿಗರ ಮಗುವಾಗಿ ವಿಶ್ವದಲ್ಲಿ ಬಾಳಲಿ. ಭವಿಷ್ಯದಲ್ಲಿ ಯಾವುದೇ ಭಾಷೆಯವರು ಇದನ್ನು ವೀಕ್ಷಿಸಿದರೆ, ಅವರು ಯಾರೋ ಕನ್ನಡಿಗರೊಬ್ಬರು ಈ ಕಲಾಕೃತಿಯನ್ನು ಮಾಡಿದ್ದಾರೆ ಎಂದು ತಿಳಿಯಲಿ. ಭಾಷೆಯು ನಮಗೆ ಮಾತನಾಡಲು ಇರುವ ಸಾಧನವಾಗಿದೆ. ಆದರೆ ಈ ಕಲಾಕೃತಿಯಲ್ಲಿ ಭಾಷೆಯೇ ಮಾತನಾಡುತ್ತಿದೆ. ಈ ಕಲಾಕೃತಿಯು ಕನ್ನಡಿಗ ಕುವರನು ರಚಿಸಿದ್ದಾನೆ ಎಂದು ಮೌನವಾಗಿ ತಿಳಿಸುತ್ತದೆ. ಇದು ನನ್ನ ಜನ್ಮಸ್ಥಳವಾದ ಕನ್ನಡ ಮಾತೆಗೆ ಅರ್ಪಿಸುವ ಒಂದು ಚಿಕ್ಕ ಕಾಣಿಕೆ ಎಂದು ಮೋಹನದಾಸ್ ರವರ ಅಭಿಪ್ರಾಯ.
2005ರಲ್ಲಿ ಮೋಹನದಾಸ್ ರವರು ” ಮಾತೃಭೂಮಿ ಕಾ ಅನ್ಮೋಲ್ ರತ್ನ” ಎಂಬ ಕಲಾಕೃತಿಯನ್ನು ರಚಿಸಿ ಅದನ್ನು ಅಂದಿನ ರಾಷ್ಟ್ರಪತಿ ದಿವಂಗತ ಎ.ಪಿ.ಜೆ ಅಬ್ದುಲ್ ಕಲಾಂ ರವರಿಗೆ ಉಡುಗೊರೆಯಾಗಿ ನೀಡಿದ್ದರು. ಆ ಕಲಾಕೃತಿಯಲ್ಲಿ ಭಾರತಮಾತೆಯ ವೈಭವವನ್ನು ವಿವರಿಸಿದ್ದರೆ ಈಗಿನ ಕಲಾಕೃತಿಯಲ್ಲಿ ಸಂಪೂರ್ಣ ವಸುಂಧರೆಯ ವೈಭವವನ್ನು ಹಾಗೂ ಅದರ ಮೂಲ ಮಂತ್ರವನ್ನು ವಿವರಿಸಿದ್ದಾರೆ.
ಕಲಾಕೃತಿಯ ಪೀಠ ಹಾಗೂ ಆನೆಯ ರಥದ ಕೆತ್ತನೆಯನ್ನು ಕಟಿಲೇಶ್ವರಿ ಸುರೇಶ್ ಎಸ್.ಪೂಜಾರಿಯವರೂ ಬಣ್ಣದ ಹಾಗೂ ಕಲೆಯ ಕೆಲಸದಲ್ಲಿ ಕುಂಚ ಕಲಾವಿದ ನವೀನ್ ಎನ್.ಸುವರ್ಣರವರು ಸಹಕರಿಸಿದ್ದಾರೆ.
ಈ ಕಲಾಕೃತಿಯನ್ನು ರಚಿಸಲು ಕಳೆದ 35 ವರ್ಷಗಳಿಂದ ಕಾಣುತಿದ್ದ ಅವರ ಕನಸು ಇಂದು ನನಸಾಗುವ ಸಮಯ ಬಂದಿದೆ. ಇದನ್ನು ಪ್ರಧಾನ ಮಂತ್ರಿಗಳು ಅವರ 75 ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ತುಳುಕನ್ನಡಿಗ ಕುವರನ ಉಡುಗೊರೆಯಾಗಿ ಸ್ವೀಕರಿಸಿದರೆ ತನ್ನ ಜನ್ಮದ ಇಚ್ಛೆಯು ಪೂರ್ತಿಯಾಗಲಿದೆ ಎಂಬುದು ಮೋಹನದಾಸರವರ ಆಷಯ.
ತುಳುಕನ್ನಡಿಗೋರ್ವ ತನ್ನ ಮನದಾಸೆ ಹಾಗೂ ಮನದಲ್ಲಿ ಮೂಡಿಬಂದ ಈ ಕಲಾಕೃತಿಯನ್ನು ಪ್ರಧಾನ ಮಂತ್ರಿಯವರು ಸ್ವೀಕರಿಸಿದರೆ ಮೋಹನದಾಸ್ ರವರೊಂದಿಗೆ ತುಳು ಕನ್ನಡಿಗರಾದ ನಮಗೆಲ್ಲರಿಗೂ ಸಿಗುವ ಬಹುದೊಡ್ಡ ಗೌರವ ಎಂದೆಣೆಸುತ್ತಾ ಅವರ ಕನಸು ನನಸಾಗಲಿ ಎಂದು ಶ್ರೀದೇವರಲ್ಲಿ ಬೇಡಿ ಶುಭಹಾರೈಸುವ.
ಬರಹ……. ಉಮೇಶ್ ಕೆ.ಅಂಚನ್.



Related posts

ಪ್ರಧಾನಮಂತ್ರಿಗಳ 75ನೇ ಜನ್ಮದಿನಕ್ಕೆ ಮೋಹನ್ ದಾಸ್‌ರಿಂದ ವಿಶೇಷ ಕಲಾಕೃತಿ: ‘ವಸುಧೈವ ಕುಟುಂಬಕಂ’

Mumbai News Desk

ಬಡತನದ ಬೇಗೆಯಲ್ಲಿ ಹೂವಾಗಿ ಅರಳಿದ ಸುನೀಲ ದಂಗಾಪೂರ

Mumbai News Desk

ದೀಪಾವಳಿ …….ಬೆಳಕಿನೆಡೆಗೆ ಬದುಕು

Mumbai News Desk

ಸಹಸ್ರಾರು ಮಂದಿಯ ಹೃದಯ ದೇವತೆ ಲೀಲಾವತಿ ಜಯ ಸುವರ್ಣ

Mumbai News Desk

ವೈಕುಂಠ ಏಕಾದಶಿ 2025: ಮಹತ್ವ, ಮತ್ತು ಆಚರಣೆಗಳು

Mumbai News Desk

ಭಿಕ್ಷುಕ,ಬೀದಿ ಮಗು ಮತ್ತು ಬದುಕು

Mumbai News Desk