34 C
Mumbai
March 6, 2026
Mumbai News Kannada
ತುಳುನಾಡು

ಮೂಲ್ಕಿ ಹೊಸ ಅಂಗಣ ಮಾಸ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಆದಿಕಿಲ್ಲಾಡಿ ಶ್ರೀ ಕೊಡ್ದಬ್ಬು ದೈವಸ್ಥಾನದ ಗುರಿಕಾರರಾದ ವಿ ಎಸ್ ವಸಂತ್ ಗುರಿಕಾರಯವರಿಗೆ ಸನ್ಮಾನ






ಮೂಲ್ಕಿ ಹೊಸ ಅಂಗಣ ತಿಂಗಳ ಬೆಳಕು ಹಾಗೂ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಮೂಲ್ಕಿ ಪುನರೂರು ಟೂರಿಸ್ಟ್ ಹೋಮ್‌ನ ಸಭಾಂಗಣದಲ್ಲಿ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ. ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿ ಮಾತನಾಡಿ ತೆರೆಯ ಮರೆಯಲ್ಲಿರುವ ಸಾಧಕರನ್ನು ಗುರುತಿಸಿ ಸನ್ಮಾನ ಮಾಡುವುದರಿಂದ ಅವರಿಗೆ ಮುಂದೆ ಸಮಾಜ ಸೇವೆ ಮಾಡಲು ಉತ್ತೇಜನ ಕೊಟ್ಟಂತಾಗುತ್ತದೆ. ಹೊಸ ಅಂಗಣ ಪತ್ರಿಕೆಯಿಂದ ಪ್ರತಿ ತಿಂಗಳು ಸಾಧಕರನ್ನು ಗೌರವಿಸಿವುದು ಒಂದು ಒಳ್ಳೆಯ ಸಂಪ್ರದಾಯ ಇದು ನಡೆಯುವುದಕ್ಕೆ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.


ಮುಖ್ಯ ಅತಿಥಿಗಳಾಗಿ ರಾಷ್ಟಿçÃಯ ಬಿಲ್ಲವರ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಗಂಗಾಧರ ಪೂಜಾರಿ ಚೇಳಾಯರು ಇವರು ಮಾತನಾಡಿ ಹೊಸ ಅಂಗಣ ಪತ್ರಿಕೆಯು ಒಳ್ಳೆಯ ಲೇಖನಗಳಿಂದ ಕೂಡಿ ಪ್ರತಿ ತಿಂಗಳು ನಮ್ಮ ಕೈ ತಲುಪುತ್ತದೆ. ಮಹಾಮಂಡಲದ ಸ್ಮರಣ ಸಂಚಿಕೆಯನ್ನು ಮಾಡುವಾಗ ನಮಗೆ ಲೇಖನಗಳ ಅಗತ್ಯ ಇತ್ತು. ನಾನು ಹರಿಶ್ಚಂದ್ರ ಸಾಲಿಯಾನ್‌ರವರಿಗೆ ಫೋನ್ ಮಾಡಿದಾಗ ಅವರು ಮಹಾಮಂಡಲದ ಕಟ್ಟಡ ಹಾಗೂ ಜಯ ಸುವರ್ಣರ ಬಗ್ಗೆ ಒಳ್ಳೆಯ ಲೇಖನವನ್ನು ಬರೆದುಕೊಟ್ಟಿದ್ದಾರೆ. ಮುಂದಕ್ಕೆ ಈ ಪತ್ರಿಕೆಯು ಒಳ್ಳೆಯದಾಗಿ ನಡೆಯಲೆಂದು ಹೇಳಿದರು.
ಮುಲ್ಕಿ ಬಿಲ್ಲವ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ಗೋಪಿನಾಥ ಪಡಂಗ, ಎಚ್ ಡಿ ಎಫ್‌ಸಿ ಬ್ಯಾಂಕ್ ಪ್ರಬಂಧಕ ಅನಿಲ್ ಕುಮಾರ್, ಬಂಕಿ ನಾಯಕರು ಹಳೆಯಂಗಡಿ, ಅತಿಕಾರಿಬೆಟ್ಟು ಗ್ರಾ.ಪಂ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಹೊಸ ಅಂಗಣದ ಸಂಪಾದಕ ಹರಿಶ್ಚಂದ್ರ ಪಿ ಸಾಲ್ಯಾನ್, ಉದ್ಯಮಿ ಜೋನ್ ಕ್ವಾಡ್ರಸ್, ನಂದಾ ಪಾಯಸ್ ಹಳೆಯಂಗಡಿ, ಶಂಕರ್ ಪಡಂಗ, ದಿನೇಶ್ ಶೆಟ್ಟಿ, ವಕೀಲ ರವೀಶ್ ಕಾಮತ್, ಅಬ್ದುಲ್ ರಜಾಕ್ ಸಾಧು ಅಂಚನ್ ಮಟ್ಟು, ಜಯಪಾಲ ಶೆಟ್ಟಿ ಐಕಳ, ದಯಾನಂದ ಕಿಲ್ಪಾಡಿ, ದೊಡ್ಡಣ್ಣ, ಗುಣಪಾಲ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಹೊಸ ಅಂಗಣದ ಹರಿಶ್ಚಂದ್ರ ಪಿ ಸಾಲ್ಯಾನ್ ಸ್ವಾಗತಿಸಿದರು, ದಿನೇಶ್ ಶೆಟ್ಟಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಆದಿಕಿಲ್ಲಾಡಿ ಶ್ರೀ ಕೊಡ್ದಬ್ಬು ದೈವಸ್ಥಾನದ ಗುರಿಕಾರರಾದ ವಿ ಎಸ್ ವಸಂತ್ ಗುರಿಕಾರ ರವರನ್ನು ಗೌರವಿಸಲಾಯಿತು.



Related posts

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ದಲ್ಲಿ ಬ್ರಹ್ಮಕಲಶೋತ್ಸವ; ಶುಭಾರಂಭ

Mumbai News Desk

“ಉಡುಪಿ ಆಂಥೆಮ್” ಉಡುಪಿ ಬಗ್ಗೆ ಸುಂದರ ಗೀತೆಯ ವಿಡಿಯೋ ಬಿಡುಗಡೆ

Mumbai News Desk

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಇಂದಿನಿಂದ ಮಾ. 5ರ ತನಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Mumbai News Desk

ಕನ್ನಡ ಕಿರುತೆರೆ ನಟಿ, ‘ಬಿಗ್ ಬಾಸ್’ ಖ್ಯಾತಿಯ ಕಾವ್ಯ ಶಾಸ್ತ್ರೀ ಅವರಿಂದ ಕಾಪು ಶ್ರೀ ಹೊಸ ಮಾರಿಗುಡಿ ದೇವಿಗೆ ವಿಶೇಷ ಪೂಜೆ: ನವದುರ್ಗಾ ಲೇಖನ ಸಮರ್ಪಣೆ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಪಟ್ಲ ಸತೀಶ್ ಶೆಟ್ಟಿಯವರಿಗೆ  ಗೌರವ.

Mumbai News Desk

ಕುಲಾಲ ಪರ್ಬ ಉದ್ಘಾಟನೆ.

Mumbai News Desk