October 21, 2026
Mumbai News Kannada
ಕ್ರೀಡೆ

ಮುಂಬೈ : ಜಿಲ್ಲಾ ಕ್ರೀಡಾ ಕಛೇರಿ ಆಯೋಜಿಸಿದ ಕ್ರಿಕೆಟ್‌ ಪಂದ್ಯಾಟದಲ್ಲಿ ಚೆಂಬೂರು ಕರ್ನಾಟಕ ಪ್ರೌಢಶಾಲೆಗೆ ಮುಂಬೈ ವಲಯದ ಕಿರೀಟ



​ಮುಂಬೈ ಉಪನಗರದ ಜಿಲ್ಲಾ ಕ್ರೀಡಾ ಕಚೇರಿ (District Sports Office – DSO) ಆಯೋಜಿಸಿದ್ದ ಅಂತರ ಶಾಲಾ ಕ್ರಿಕೆಟ್ ಪಂದ್ಯಾವಳಿ, ಅಂಡರ್-14 ಬಾಲಕರ ವಿಭಾಗದ ಮುಂಬೈ ವಲಯದ ಪ್ರಶಸ್ತಿಯನ್ನು ಚೆಂಬೂರು ಸಂಘದ, ಚೆಂಬೂರು ಕರ್ನಾಟಕ ಪ್ರೌಢಶಾಲೆ (Chembur Karnataka High School) ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
​ಅಕ್ಟೋಬರ್ 15, 2025ರ ಬುಧವಾರದಂದು ಓವಲ್ ಮೈದಾನದಲ್ಲಿ (Oval Maidan) ನಡೆದ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ, ಶಾಲೆಯ ಕಿರಿಯ ಕ್ರಿಕೆಟಿಗರು ಅದ್ಭುತ ಪ್ರದರ್ಶನ ನೀಡಿದರು.
​320 ತಂಡಗಳ ಪೈಕಿ ವಿಭಾಗೀಯ ಮಟ್ಟಕ್ಕೆ ಆಯ್ಕೆ :
​ಈ ಪಂದ್ಯಾವಳಿಯಲ್ಲಾದ ಪ್ರಮುಖ ಸಾಧನೆ ಎಂದರೆ, ಮುಂಬೈ ವಲಯದ ವಿಜೇತರಾಗಿ, ಒಟ್ಟು 320 ತಂಡಗಳ ಪೈಕಿ ಚೆಂಬೂರು ಕರ್ನಾಟಕ ಪ್ರೌಢಶಾಲೆ ತಂಡವು ವಿಭಾಗೀಯ ಮಟ್ಟಕ್ಕೆ (Division Level) ಆಯ್ಕೆಯಾಗಿದೆ. ಇದು ಶಾಲೆಯ ಕ್ರೀಡಾ ಇತಿಹಾಸದಲ್ಲಿ ಒಂದು ಹೆಮ್ಮೆಯ ಮೈಲಿಗಲ್ಲು.
ಅದೇ ರೀತಿ ಅಂಡರ್-16ರ ಪಂದ್ಯಾಟದಲ್ಲಿ ಚೆಂಬೂರು ಕರ್ನಾಟಕ ಪ್ರೌಢಶಾಲೆ ತಂಡವು ಫೈನಲ್ ಮಟ್ಟಕ್ಕೆ ತಲಪಿದ್ದು ಒಂದು ಸಾಧನೆಯಾಗಿದೆ.
​ಶಾಲೆಯ ಈ ವಿಜಯಕ್ಕೆ ಶ್ರಮಿಸಿದ ವಿದ್ಯಾರ್ಥಿಗಳಿಗೆ, ಹಾಗೆಯೇ ಅವರಿಗೆ ಮಾರ್ಗದರ್ಶನ ನೀಡಿದ ತರಬೇತುದಾರರಾದ ದಿನೇಶ್ ಸಾಳುಂಖೆ ಸರ್, ಅಂಕುಶ್ ಸರ್ ಮತ್ತು ರಾಜಿಂದರ್ ಸಿಂಗ್ ಸರ್ ಅವರಿಗೆ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
​ಮುಂದಿನ ವಿಭಾಗೀಯ ಮಟ್ಟದ ಪಂದ್ಯಾವಳಿಗಾಗಿ ತಂಡಕ್ಕೆ ಶುಭ ಹಾರೈಕೆಗಳು!



Related posts

ಕಬಡ್ಡಿ ವಿಶ್ವಕಪ್: ಫೈನಲ್‌ನಲ್ಲಿ ಚೈನೀಸ್ ತೈಪೆಯನ್ನು ಸೋಲಿಸಿ ಸತತ ಎರಡನೇ ಬಾರಿಗೆ ಕಬಡ್ಡಿ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ತಂಡ

Mumbai News Desk

ಮೈಸೂರು ವಿಭಾಗೀಯ ಕ್ರಿಕೆಟ್‌ನಲ್ಲಿ ಪಡುಬಿದ್ರಿಯ ಸಾಗರ ವಿದ್ಯಾ ಮಂದಿರ ತಂಡದ ಅದ್ಭುತ ಸಾಧನೆ: ರಾಜ್ಯಮಟ್ಟಕ್ಕೆ ಆಯ್ಕೆ

Mumbai News Desk

ಏಷ್ಯನ್ ಗೇಮ್ಸ್ 2026: ಮಹಿಳಾ ಕ್ರಿಕೆಟ್‌ನಲ್ಲಿ ಭಾರತಕ್ಕೆ ಮೊದಲ ಸ್ವರ್ಣ, ಬ್ಯಾಡ್ಮಿಂಟನ್‌ನಲ್ಲಿ ರೋಚಕ ಗೆಲುವು

Mumbai News Desk

ಐತಿಹಾಸಿಕ ಜಯ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ವನಿತೆಯರ ತಂಡಕ್ಕೆ ಭರ್ಜರಿ ಗೆಲುವು

Mumbai News Desk

ರಾಷ್ಟ್ರಗೀತೆ ಮೊಳಗಿಸಿದ ಪ್ಯಾರಾ ಅಥ್ಲೀಟ್: ಸಕಲ ಸವಾಲುಗಳನ್ನು ಗೆದ್ದು ಕಾಮನ್‌ವೆಲ್ತ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಶರ್ಮಿಳಾ ಧನಖಡ್

Mumbai News Desk

ರಾಷ್ಟ್ರೀಯ ಜೂನಿಯರ್ ಫುಟ್ಬಾಲ್ ಚಾಂಪಿಯನ್‌ಶಿಪ್: ಬೋರಿವಲಿಯ ಶಿವಿಕಾ ಶೆಟ್ಟಿಗೆ ‘ಗೋಲ್ಡನ್ ಗ್ಲೋವ್’ ಪ್ರಶಸ್ತಿ

Mumbai News Desk