30.9 C
Mumbai
June 8, 2026
Mumbai News Kannada
ಕ್ರೀಡೆ

ಕಾಂದಿವಲಿ ಪಶ್ಚಿಮದ ರಂಜಿತ್ ಪೂಜಾರಿಗೆ ವಿಶ್ವ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ





ಮುಂಬಯಿ, ನವೆಂಬರ್ 4: ಮುಂಬಯಿಯ ಕಾಂದಿವಲಿ ಪಶ್ಚಿಮದ ನಿವಾಸಿ, ರಂಜಿತ್ ಪೂಜಾರಿಯವರು ಇತ್ತೀಚೆಗೆ ಮುಂಬಯಿಯಲ್ಲಿ ನಡೆದ ವಿಶ್ವ ನ್ಯಾಚುರಲ್ ಬಾಡಿಬಿಲ್ಡಿಂಗ್ ಫೆಡರೇಶನ್ (World Natural Bodybuilding Federation – WNBF) ಸ್ಪರ್ಧೆಯಲ್ಲಿ ಭಾಗವಹಿಸಿ, ಗಮನಾರ್ಹ ಸಾಧನೆ ಮಾಡಿದ್ದಾರೆ.

​ರಂಜಿತ್ ಪೂಜಾರಿಯವರು ಈ ಸ್ಪರ್ಧೆಯಲ್ಲಿ ಪುರುಷರ ಫಿಸಿಕ್ ವಿಭಾಗದಲ್ಲಿ (Men’s Physique) ಮೊದಲ ಬಾರಿಗೆ ತೃತೀಯ (ಮೂರನೇ) ಸ್ಥಾನವನ್ನು ಹಾಗೂ ದೇಹದಾರ್ಢ್ಯ ವಿಭಾಗದಲ್ಲಿ (Bodybuilding) ಮೊದಲ ಬಾರಿಗೆ ತೃತೀಯ (ಮೂರನೇ) ಸ್ಥಾನವನ್ನು ಗಳಿಸಿ, ಭಾರತವನ್ನು ಪ್ರತಿನಿಧಿಸಿದ್ದಾರೆ.

ಇವರು ತಮ್ಮ ತರಬೇತಿಯನ್ನು ಮುಂಬಯಿಯ ಕಾಂದಿವಲಿ ಪಶ್ಚಿಮದ ಚಾರ್ಕೋಪ್‌ನಲ್ಲಿರುವ V Legends ನಲ್ಲಿ ವಿನಾಯಕ ದೇಸಾಯಿ ಅವರ ಮಾರ್ಗದರ್ಶನದಲ್ಲಿ ಪಡೆದಿದ್ದಾರೆ.

ರಂಜಿತ್ ಪೂಜಾರಿಯವರು ಉಡುಪಿ ಜಿಲ್ಲೆಯ ಕೋಟೇಶ್ವರದ ಮಾತೃವಾತ್ಸಲ್ಯ ರಾಜೀವ ಪೂಜಾರಿ ಮತ್ತು ಜಾನಕಿ ಪೂಜಾರಿಯವರ ಸುಪುತ್ರ.



Related posts

ಮೂಡುಬಿದಿರೆ – ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊದ ಆಯೋಜನೆಯಲ್ಲಿ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ ಸ್ಪರ್ಧೆ : ಪ್ರಿನ್ಸೆಸ್ ಆಫ್ ಕರಾವಳಿ 2025 ಆಗಿ ವಿಯಾ ಸಾಯಿ ಆಯ್ಕೆ

Mumbai News Desk

ಮುಂಬೈ ಕುಲಾಲ ಸಂಘದಿಂದ ಅದ್ಧೂರಿ ‘ಕುಲಾಲ ಕ್ರೀಡೋತ್ಸವ-2026’

Mumbai News Desk

ಸುರತ್ಕಲ್ ಬಂಟ್ಸ್ ಕ್ರಿಕೆಟ್ ಜೆರ್ಸಿ ಹಾಗೂ ಟ್ರೋಫಿ ಅನಾವರಣ

Mumbai News Desk

ವೈಭವ್ ಸೂರ್ಯವಂಶಿ ಬಿರುಗಾಳಿ ಬ್ಯಾಟಿಂಗ್ ಗೆ ಇಂಗ್ಲೆಂಡ್ ನಿರುತ್ತರ; 6ನೇ ಬಾರಿ ಅಂಡರ್ 19 ವಿಶ್ವಕಪ್ ಎತ್ತಿ ಹಿಡಿದ ಭಾರತ

Mumbai News Desk

ಸಾಫಲ್ಯ ಸೇವಾ ಸಂಘ ಮುಂಬೈ ‘ಸಾಫಲ್ಯ ಕ್ರೀಡಾ ಸ್ಪರ್ಧೆ – 2026’

Mumbai News Desk

ರಾಷ್ಟ್ರೀಯ ಮಟ್ಟದ ಕರಾಟೆ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹರ್ಷಿತಾ ಪೂಜಾರಿ   ಇನ್ನಂಜೆ

Mumbai News Desk