September 6, 2026
Mumbai News Kannada
ಕರ್ನಾಟಕ

ಕರ್ನಾಟಕ : ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಬಿಜೆಪಿ





ವಿವಿಧ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಗಳಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌ ವಿರುದ್ಧ ವಿಪಕ್ಷ ಬಿಜೆಪಿ ಜಯಗಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ, ಕಿನ್ನಿಗೋಳಿ, ಉತ್ತರ ಕನ್ನಡ ಜಿಲ್ಲೆಯ ಮಂಕಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಾಧಿಸಿದೆ.

ದೊಡ್ಡಬಳ್ಳಾಪುರ ನಗರಸಭೆಯ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ರಾಯಚೂರು ಜಿಲ್ಲೆಯ ತುರ್ವಿಹಾಳದ ಪಟ್ಟಣ ಪಂಚಾಯಿತ್‌ನ 4ನೇ ವಾರ್ಡ್‍ಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಜಯ ಸಾಧಿಸಿದ್ದಾರೆ

ಎಲ್ಲಿ ಎಷ್ಟು ಸ್ಥಾನ?
ಬಜಪೆ (ದಕ್ಷಿಣ ಕನ್ನಡ)
ಒಟ್ಟು ಸ್ಥಾನ – 19
ಬಿಜೆಪಿ 11, ಕಾಂಗ್ರೆಸ್‌ 4, ಎಸ್‌ಡಿಪಿಐ 3, ಪಕ್ಷೇತರ 1

ಕಿನ್ನಿಗೋಳಿ (ದಕ್ಷಿಣ ಕನ್ನಡ)
ಒಟ್ಟು ಸ್ಥಾನ – 18
ಬಿಜೆಪಿ 10, ಕಾಂಗ್ರೆಸ್‌ 8

ಮಂಕಿ(ಉತ್ತರ ಕನ್ನಡ)
ಒಟ್ಟು ಸ್ಥಾನ – 20
ಬಿಜೆಪಿ 12, ಕಾಂಗ್ರೆಸ್‌ 8

ಬಾಶೆಟ್ಟಿಹಳ್ಳಿ(ಬೆಂಗಳೂರು ಗ್ರಾಮಾಂತರ)
ಒಟ್ಟು ಸ್ಥಾನ – 19
ಬಿಜೆಪಿ – 15
ಕಾಂಗ್ರೆಸ್‌ – 3

ಈ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ ಗಮನಾರ್ಹ ಯಶಸ್ಸನ್ನು ಸಾಧಿಸಿದೆ.
ವಿವಿಧ ಜಿಲ್ಲೆಗಳ ಪಟ್ಟಣ ಪಂಚಾಯಿತಿ ಮತ್ತು ನಗರಸಭೆಗಳಲ್ಲಿ ಬಿಜೆಪಿ ಬಹುಮತದೊಂದಿಗೆ ವಿಜಯಶಾಲಿಯಾಗಿದೆ. ಮುಖ್ಯವಾಗಿ ಕರಾವಳಿ ಮತ್ತು ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ಪಕ್ಷವು ತನ್ನ ಹಿಡಿತವನ್ನು ಸಾಧಿಸಿದೆ.



Related posts

ಮಂಗಳೂರು : ಲಿಯೋ ಡಿಸ್ಟ್ರಿಕ್ಟ್ 317D: ಪಾಠ ಶಾಲಾ ಪ್ರಾಜೆಕ್ಟ್ ಯಶಸ್ವಿ ಉದ್ಘಾಟನೆ

Mumbai News Desk

ಕರ್ನಾಟಕ : ಹೈಕಮಾಂಡ್‌ ತೀರ್ಮಾನವೇ ಅಂತಿಮ, ಇದೇ ನಮ್ಮಿಬ್ಬರ ಮಂತ್ರ: ಜಂಟಿ ಸುದ್ದಿಗೋಷ್ಠಿಯಲ್ಲಿ ಸಿಎಂ-ಡಿಸಿಎಂ ಘೋಷಣೆ

Mumbai News Desk

ಬೆಂಗಳೂರು: ನಗರದ ತಾಪಮಾನ ತಗ್ಗಿಸಿದ ಮಾರ್ಚ್ ತಿಂಗಳ ಮೊದಲ ಮಳೆ

Mumbai News Desk

ಕರ್ನಾಟಕ : ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ, ಜನರಿಗೆ ಮತ್ತೆ ಶಾಕ್ ನೀಡಿದ ಸರಕಾರ

Mumbai News Desk

ಎಸ್ ಎಸ್ ಎಲ್ ಸಿ ಫಲಿತಾಂಶ- ಶ್ರೀಷಾ ಜಯ ಪೂಜಾರಿಗೆ ಶೇ.97.12 ಅಂಕ

Mumbai News Desk

ಬೆಳಗಾವಿ : ಸದನದಲ್ಲಿ ಗೃಹಲಕ್ಷ್ಮಿ ಗದ್ದಲ; ತಪ್ಪೊಪ್ಪಿಕೊಂಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Mumbai News Desk