October 21, 2026
Mumbai News Kannada
ಪ್ರಕಟಣೆ

ಡೊಂಬಿವಲಿ: ಜಗಜ್ಯೋತಿ ಕಲಾವೃಂದದಿಂದ ಫೆ. 15 ರಂದು ಮಹಾಶಿವರಾತ್ರಿ ಪೂಜೆ



​ಡೊಂಬಿವಲಿ: ಇಲ್ಲಿನ ಮಹಾತ್ಮ ಫುಲೆ ರಸ್ತೆಯಲ್ಲಿರುವ ಜಗಜ್ಯೋತಿ ಕಲಾವೃಂದದ (ರಿ.) ವತಿಯಿಂದ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

​ಫೆಬ್ರವರಿ 15ರ ಭಾನುವಾರ ಪಶ್ಚಿಮ ದೊಂಬಿವಲಿಯ ವಿವೇಕಾನಂದ ಶಾಲೆಯ ಸಮೀಪವಿರುವ ‘ಪಂಚಮ್’ ಸಹಕಾರಿ ಗೃಹನಿರ್ಮಾಣ ಸಂಘದ ಸಂಕೀರ್ಣದಲ್ಲಿರುವ ವೃಂದದ ಕಚೇರಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

​ಕಾರ್ಯಕ್ರಮದ ವಿವರ:

ಅಂದು ಮಧ್ಯಾಹ್ನ 4.00 ಗಂಟೆಯಿಂದ ಸಂಜೆ 7.00 ಗಂಟೆಯವರೆಗೆ ಭಕ್ತಾದಿಗಳಿಂದ ಮತ್ತು ಕಲಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 7.15ಕ್ಕೆ ಮಹಾಶಿವರಾತ್ರಿಯ ಮಂಗಳಾರತಿ ನೆರವೇರಲಿದ್ದು, ತದನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.

​ಈ ಭಕ್ತಿಪೂರ್ವಕ ಕಾರ್ಯಕ್ರಮಕ್ಕೆ ವೃಂದದ ಎಲ್ಲಾ ಸದಸ್ಯರು, ಹಿತೈಷಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜಗಜ್ಯೋತಿ ಕಲಾವೃಂದದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.

​ಸ್ಥಳ: ಜಗಜ್ಯೋತಿ ಕಲಾವೃಂದ (ರಿ.),

ಪಂಚಮ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ,

ಮಹಾತ್ಮ ಫುಲೆ ರಸ್ತೆ, ಡೊಂಬಿವಲಿ (ಪಶ್ಚಿಮ) – 421 202.



Related posts

ನ. 1ರಂದು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯೋದಯ 70ರ ಸಂಭ್ರಮ.

Mumbai News Desk

ಮಾ 9 ರಿಂದ 11 ರ ವರಗೆ ಶ್ರೀ ಜಗದಂಬಾ ಮಂದಿರ, ಡೊಂಬಿವಲಿಯ 9ನೇ ವಾರ್ಷಿಕೋತ್ಸವ.

Mumbai News Desk

ಎ. 6 ರಂದು ನಗರದ ಹೆಸರಾಂತ ಕನ್ನಡ ಮಾಸಿಕ ಛಾಯಾಕಿರಣ ಪತ್ರಿಕೆಯ ದಶಮಾನೋತ್ಸವ

Mumbai News Desk

ಡಿ. 03. ಥಾಣೆಯಲ್ಲಿ ಪ್ರಸಾದ್ ಪೂಜಾರಿ ಕಲ್ಯಾ ಇವರ ಸೇವೆಯಲ್ಲಿ ಮಂತ್ರ ದೇವತೆಯ 6ನೇ ವಾರ್ಷಿಕ ಪೂಜೆ ಹಾಗೂ ನೇಮೋತ್ಸವ

Mumbai News Desk

ಶ್ರೀ ಸದ್ಗುರು ಶನೀಶ್ವರ ಸೇವಾ ಸಮಿತಿ ಕಾಂದಿವಲಿ ಪೂರ್ವ : ನ. 15ರಂದು, 51ನೇ ವಾರ್ಷಿಕ ಶ್ರೀ ಶನೇಶ್ವರ ಗ್ರಂಥ ಪಾರಾಯಣ ಮಹೋತ್ಸವ ಮತ್ತು ಭಂಡಾರ

Mumbai News Desk

ಆ. 8: ವರ್ಲಿ ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ಆಶ್ರಯದಲ್ಲಿ ‘ತುಳುನಾಡ ಸಂಸ್ಕೃತಿದ ಆಟಿದ ಕೂಟ’

Mumbai News Desk