32 C
Mumbai
March 7, 2026
Mumbai News Kannada
ಮುಂಬಯಿ

ಮುಂಬಯಿ : ಫೆ. 1ರಿಂದ ಆಟೋರಿಕ್ಷಾ, ಟ್ಯಾಕ್ಸಿ ದರ 3ರೂ. ಏರಿಕೆ.






ಆಟೋರಿಕ್ಷಾ ಮತ್ತು ಕಪ್ಪು -ಹಳದಿ ಟ್ಯಾಕ್ಸಿಯಲ್ಲಿ ನಿಮ್ಮ ಪ್ರಯಾಣವು ಫೆಬ್ರವರಿ ಒಂದರಿಂದ ದುಬಾರಿಯಾಗಲಿದೆ.
ಮುಂಬೈ ಮಹಾನಗರ ಪ್ರದೇಶ ಸಾರಿಗೆ ಪ್ರಾಧಿಕಾರ ( MMRTA) ಜನವರಿ 23 ರಂದು ಆಟೋ ರಿಕ್ಷಗಳು ಮತ್ತು ಟ್ಯಾಕ್ಸಿಗಳ ದರ ಹೆಚ್ಚಳದ ಪ್ರಸ್ತಾವನೆಯನ್ನು ಶುಕ್ರವಾರ ಘೋಷಿಸಿದೆ.
ಮುಂಬೈ ಮಹಾನಗರ ಪ್ರದೇಶ ಸಾರಿಗೆ ಪ್ರಾಧಿಕಾರವು ಹೊರಡಿಸಿದ ಆಧಿ ಸೂಚನೆಯ ಪ್ರಕಾರ ಆರ್‌ಟಿಓ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳನ್ನು ಒಳಗೊಂಡಿರುವ ಸರ್ಕಾರಿ ಸಂಸ್ಥೆ, ಹೆಚ್ಚಿದ ಜೀವನ ವೆಚ್ಚ, ವಾಹನಗಳು, ಇಂಧನ ಕಾರ್ಯಚರಣೆಯ ವೆಚ್ಚಗಳು, ನಿರ್ವಹಣ ವೆಚ್ಚ ಮತ್ತು ಇತರ ಅಂಶಗಳ ಕಾರಣ ಪ್ರಯಾಣ ದರವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ಕನಿಷ್ಠ ಆಟೋ ರಿಕ್ಷಾ ದರ ಈಗ 23ರಿಂದ 26 ಆಗಲಿದ್ದು ಕನಿಷ್ಠ ಟ್ಯಾಕ್ಸಿ ದರ 28ರಿಂದ 31ಕ್ಕೆ ಏರಿಕೆಯಾಗಲಿದೆ, ಕೂಲ್ ಕ್ಯಾಬ್ ದರವು ಪ್ರಸ್ತುತ 40 ರಿಂದ 48ಕ್ಕೆ ಏರಿಕೆಯಾಗಲಿದೆ .
ಮುಂಬೈ ಮೆಟ್ರೋ ಪಾಲಿಟಿನ್ ಪ್ರದೇಶದಲ್ಲಿ 4,50,000 ಆಟೋರಿಕ್ಷಾಗಳಿವೆ ಅವುಗಳಲ್ಲಿ 3,50,000 ಮುಂಬೈಯಲ್ಲಿಯೇ ಇವೆ ಹಾಗೂ ನಗರದಲ್ಲಿ ಸುಮಾರು 15,000 ಟ್ಯಾಕ್ಸಿ ಇದೆ. ಪ್ರಯಾಣದರ ಏರಿಕೆ ಪ್ರಸ್ತಾಪದ ಜೊತೆ ಸಂಪರ್ಕ ಹೆಚ್ಚಿಸುವ ಯೋಜನೆಗಳನ್ನು ಸಾರಿಗೆ ಇಲಾಖೆ ಮುಂದಿಟ್ಟಿದೆ. ಟ್ಯಾಕ್ಸಿ ಮತ್ತು ಆಟೋರಿಕ್ಷಾದ ಕೊನೆಯ ದರ ಪರಿಷ್ಕರಣೆಯು ಅಕ್ಟೋಬರ್ 2022ರಲ್ಲಿ ನಡೆದಿತ್ತು.



Related posts

ಎಸ್. ಎಸ್. ಸಿ. ಫಲಿತಾಂಶ: ಕರ್ನಾಟಕ ಸಂಘ ಡೊಂಬಿವಲಿ ಸಂಚಾಲಿತ ಮಂಜುನಾಥ ವಿದ್ಯಾಲಯಕ್ಕೆ ಶೇ. 100 ಫಲಿತಾಂಶ

Mumbai News Desk

ಕರ್ನಾಟಕ ಸಂಘ ಪನ್ವೆಲ್ ಇದರ  34ನೇ ವಾರ್ಷಿಕೋತ್ಸವ.

Mumbai News Desk

 ಶ್ರೀ ಕಟೀಲು ಯಕ್ಷಕಲ ವೇದಿಕೆ ಚಾರಿಟೇಬಲ್ ಟ್ರಸ್ಟ್ ಆರನೇ ವಾರ್ಷಿಕ ಯಕ್ಷ ಸಂಭ್ರಮ

Mumbai News Desk

ಕಾಮೊಟೆ : ಶ್ರೀ ದುರ್ಗಾಪರಮೇಶ್ವರಿ ಮಂದಿರದ  ನವರಾತ್ರಿ ಉತ್ಸವ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ.

Mumbai News Desk

ಸಯನ್ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ: ಆಗಸ್ಟ್ 15, 2026ಕ್ಕೆ ಗಡುವು ವಿಸ್ತರಣೆ; ವೆಚ್ಚದಲ್ಲೂ ಏರಿಕೆ

Mumbai News Desk

ಎಲ್ಲರ ಬದುಕಲ್ಲಿ ಧರ್ಮ ಕಾರ್ಯಗಳು ನಡೆಯಲಿ: ಸಾಣೂರು ಸಾಂತಿಂಜ ಜನಾರ್ದನ ಭಟ್‌

Mumbai News Desk