September 6, 2026
Mumbai News Kannada
ಮುಂಬಯಿ

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ನೂತನ ಅಧ್ಯಕ್ಷರಾಗಿ ಗಣೇಶ್ ಕೆ ಕಾಂಚನ್ ಆಯ್ಕೆ





ಮುಂಬಯಿ ಮಹಾನಗರದ ಹಿರಿಯ ಸಾಮಾಜಿಕ ಸಂಘಟನೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿಯ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ, ಸಮಾಜ ಸೇವಕ, ಕ್ರೀಡಪಟು ಗಣೇಶ್ ಕೆ ಕಾಂಚನ್ ಆಯ್ಕೆಯಾಗಿದ್ದಾರೆ.
ಇಂದು (ಜುಲೈ. 5) ಬೆಳ್ಳಿಗೆ ಅಂಧೇರಿ ಪಶ್ಚಿಮ ವೀರ ದೇಸಾಯಿ ಮಾರ್ಗದ ಮೊಗವೀರ ಭವನದ ಕಿರು ಸಭಾಗ್ರಹದಲ್ಲಿ ನಡೆದ ನೂತನ ಆಡಳಿತ ಸಮಿತಿಯ ಮೊದಲ ವಿಶೇಷ ಸಭೆಯಲ್ಲಿ ಸದಸ್ಯ ಡಿ. ಬಿ. ಪುತ್ರನ್ ಅವರು ಅಧ್ಯಕ್ಷ ಪದವಿಗೆ ಗಣೇಶ್ ಕಾಂಚನ್ ಅವರ ಹೆಸರನ್ನು ಸೂಚಿಸಿದರೆ, ಪ್ರಶಾಂತ್ ತಿಂಗಳಾಯ ಅವರ ಅನುಮೋದನೆಯೊಂದಿಗೆ, 123 ವರ್ಷಗಳ ಭವ್ಯ ಇತಿಹಾಸವಿರುವ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರಾಗಿ ಗಣೇಶ್ ಕಾಂಚನ್ ಸೇರಿದ್ದ ಎಲ್ಲರ ಸಂಪೂರ್ಣ ಸಹಮತದಿಂದ ಆಯ್ಕೆಯಾದರು.


ಮಂಡಳಿಯ ನೂತನ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ದಿಲೀಪ್ ಮೂಲ್ಕಿ, ಗೌರವ ಕೋಶಾಧಿಕಾರಿಯಾಗಿ ದೇವರಾಜ್ ಕುಂದರ್ ಅವರನ್ನು ಆಯ್ಕೆ ಮಾಡಲಾಯಿತು. ಹಾಗೂ ಹೆಚ್ಚುವರಿ ಸದಸ್ಯರಾಗಿ(Co-opt) ಅಶೋಕ್ ಸುವರ್ಣ, ವರದರಾಜ್ ಶ್ರೀಯಾನ್ ನಿಯುಕ್ತಿಗೊಂಡರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗಣೇಶ್ ಕಾಂಚನ್ ಅವರನ್ನು ಮೊಗವೀರ ಕುಲರತ್ನ, ನಾಡೋಜ ಜಿ ಶಂಕರ್ ಅಭಿನಂದಿಸಿದರು.
“ವಿಶನ್-2030” ಬಣದ ಮಾರ್ಗದರ್ಶಕರುಗಳಾದ ವೇದ ಪ್ರಕಾಶ್ ಶ್ರೀಯಾನ್, ಸುರೇಶ್ ಕಾಂಚನ್, ಗೋಪಾಲ ಪುತ್ರನ್, ಅಜಿತ್ ಸುವರ್ಣ, ದ. ಕ. ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಜಯ ಕೋಟ್ಯಾನ್, ಉಪಾಧ್ಯಕ್ಷ ಮೋಹನ್ ಬೆಂಗ್ರೆ, ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಸದಸ್ಯ ದಿನೇಶ್ ಎರ್ಮಾಳ್, ಮೊಗವವೀರ ವ್ಯವಸ್ಥಾಪಕ ಮಂಡಳಿಯ ಟ್ರಸ್ಟಿಗಳಾದ ಹರೀಶ್ ಪುತ್ರನ್, ಲಕ್ಷ್ಮಣ ಶ್ರೀಯಾನ್, ಮೊಗವೀರ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಭಾಸ್ಕರ್ ಎಲ್ ಸಾಲಿಯಾನ್, ಉಪಕಾರ್ಯದಕ್ಷೆ ನೀತಾ ಮೆಂಡನ್, ನಿರ್ದೇಶಕರುಗಳಾದ ಮುಕೇಶ್ ಬಂಗೇರ ಹರೀಶ್ ಶ್ರೀಯಾನ್ ಹಾಗೂ 2025-28ರ ಅವಧಿಗೆ ಚುನಾಯಿತರಾದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ನೂತನ ಅಧ್ಯಕ್ಷ ಗಣೇಶ್ ಕೆ ಕಾಂಚನ್ ಅವರ ಕಿರು ಪರಿಚಯ :

ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ ಜನಿಸಿದ ಗಣೇಶ್ ಕಾಂಚನ್ ಕ್ರೀಡಾ ಕ್ಷೇತ್ರದಲ್ಲಿ ಬಾಲ್ಯದಲ್ಲಿ ಮಿಂಚಿದವರು. ಮುಂಬೈಗೆ ಬಂದ ನಂತರ ಮುಂಬೈ ವಿಶ್ವವಿದ್ಯಾಲಯವನ್ನು ಸತತವಾಗಿ ಮೂರು ವರ್ಷ ವಾಲಿಬಾಲ್ ತಂಡವನ್ನು ಪ್ರತಿನಿಧಿಸುತ್ತಾ ಚಾಂಪಿಯನ್ನಾಗಿ ಸುವರ್ಣ ಪದಕ ಗಳಿಸಿರುವರು. ಮೊಗವೀರ ಮಂಡಳಿಯ ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷರಾಗಿ ಯುವಕರಿಗೆ ತರಬೇತಿ ನೀಡುವ ಉದ್ದೇಶದಿಂದ ಪ್ರತಿಷ್ಠಿತ ಸ್ಪೋರ್ಟ್ಸ್ ಅಕಾಡೆಮಿಯನ್ನು ಎಂವಿಎಂ ಕ್ಯಾಂಪಸ್ ನಲ್ಲಿ ಸ್ಥಾಪನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ, ಸಮಾಜ ಸೇವೆಯೇ ಇವರ ಆಸಕ್ತಿಯ ಕ್ಷೇತ್ರ, ಮೊಗವೀರ ಮಂಡಳಿಯು ಪ್ರಗತಿ ಸಾಧಿಸಬೇಕು, ಕ್ರೀಡೆಯಲ್ಲಿ ಯುವಕರು ಶ್ರೇಷ್ಠ ಸಾಧನೆ ಮಾಡಬೇಕೆಂದ ಹಂಬಲ ಇವರದು. ಕುಂದರ್ ಮೂಲಸ್ಥಾನದ ಉಪಾಧ್ಯಕ್ಷರಾಗಿ ಕ್ರಿಕೆಟ್ ಟೂರ್ನಮೆಂಟ್ ಗಳನ್ನು ಆಯೋಜಿಸಿದ್ದರು. ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೊಪರ್, ಇದರ ಯುವ ವಿಭಾಗದ ಅಧ್ಯಕ್ಷರಾಗಿ ಯುವಕರ ಶಾರೀರಿಕ, ನೈತಿಕ ಹಾಗೂ ಆರೋಗ್ಯವಂತ ಜೀವನಕ್ಕೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಇವರ ಈ ಸೇವೆಗೆ ಸೊಸೈಟಿಯು ಪ್ರಶಸ್ತಿ ನೀಡಿ ವಿಶೇಷವಾಗಿ ಗೌರವಿಸಿತು.
ಲಾಜಿಸ್ಟಿಕ್ ಸಂಸ್ಥೆಯ ಸ್ಥಾಪಕರಾದ ಇವರು ಯಶಸ್ವಿ ಉದ್ಯಮಿಯಾಗಿ ಬೆಳೆಯುತ್ತಿರುವರು.
ಗಣೇಶ್ ಕಾಂಚನ್ ಅವರು ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಶ್ಲಾಘನೀಯವಾದುದು. ಇವರ ಅವಧಿಯಲ್ಲಿ ಮಂಡಳಿಯು ವಿಶೇಷ ಸಾಧನೆ ಮೂಲಕ ಪ್ರಗತಿ ಸಾಧಿಸಬಹುದು ಎಂಬ ವಿಶ್ವಾಸ ಇದೆ, ಎಂದು ನಾಡೋಜ ಡಾ. ಜಿ. ಶಂಕರ್ ಅವರು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ್ದಾರೆ.



Related posts

ಭಾರತ್ ಬ್ಯಾಂಕ್ ಈ ವರ್ಷದ 2024 ಕ್ಯಾಲೆಂಡರ್ ಬಿಡುಗಡೆ.

Mumbai News Desk

ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Mumbai News Desk

ಚಿಣ್ಣರಬಿಂಬ ವಿಕ್ರೋಲಿ ಶಿಬಿರದ ಮಕ್ಕಳ ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆ

Mumbai News Desk

ಮುಂಬೈ ನಗರದಲ್ಲಿ ಭಾರೀ ಮಳೆ: ಕರಾವಳಿ ಪ್ರದೇಶಗಳಿಗೆ ತೆರಳದಂತೆ, ಒಳಾಂಗಣದಲ್ಲಿಯೇ ಇರುವಂತೆ ಪೊಲೀಸರು ನಾಗರಿಕರಿಗೆ ಮನವಿ

Mumbai News Desk

ನವೋದಯ ಕನ್ನಡ ಸೇವಾ ಸಂಘ (ರಿ), ಥಾಣೆ ಇದರ ಆಯೋಜನೆಯಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡ ಭಜನಾ ಮಂಗಳೋತ್ಸವ

Mumbai News Desk

ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್‌ ಬದ್ಲಾಪುರದ ಮೋಯಾ ನಗರಿಯಲ್ಲಿ ಗಣ-ಹೋಮ, ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ

Mumbai News Desk