April 14, 2025
ಸುದ್ದಿ

ಬೆಲ್ಜಿಯಂನಲ್ಲಿ ಭಾರತದಿಂದ ಪರಾರಿಯಾಗಿದ್ದ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬಂಧನ



ಭಾರತದಿಂದ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ) ಇಬ್ಬರು ಪ್ರಮುಖ ಆರೋಪಿಗಳಲ್ಲಿ ಮೆಹುಲ್ ಚೋಕ್ಸಿ ಒಬ್ಬರು.

ಕೇಂದ್ರ ತನಿಖಾ ದಳದ (ಸಿಬಿಐ) ಆದೇಶದ ಮೇರೆಗೆ ಶನಿವಾರ ಚೋಕ್ಸಿಯನ್ನು ಬಂಧಿಸಲಾಗಿದ್ದು, ಅವರು ಇನ್ನೂ ಜೈಲಿನಲ್ಲಿದ್ದಾರೆ. ವರದಿಯ ಪ್ರಕಾರ, ಚೋಕ್ಸಿಯನ್ನು ಬಂಧಿಸುವಾಗ, ಬೆಲ್ಜಿಯಂ ಪೊಲೀಸರು ಮುಂಬೈ ನ್ಯಾಯಾಲಯವು ಅವರ ವಿರುದ್ಧ ಹೊರಡಿಸಿದ ಎರಡು ಮುಕ್ತ ಬಂಧನ ವಾರಂಟ್‌ಗಳನ್ನು ಉಲ್ಲೇಖಿಸಿದ್ದಾರೆ. ಈ ವಾರಂಟ್‌ಗಳು ಮೇ 23, 2018 ಮತ್ತು ಜೂನ್ 15, 2021 ರ ದಿನಾಂಕದ್ದಾಗಿವೆ.

2018ರಲ್ಲಿ ದೇಶದಿಂದ ಪರಾರಿಯಾಗಿದ್ದ ಚೋಕ್ಸಿ, ಆರಂಭದಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸಿಸುತ್ತಿದ್ದರು ಎಂದು ಹೇಳಾಗುತ್ತಿತ್ತು. ಆದರೆ, ಇತ್ತೀಚೆಗೆ ಅವರು ಬೆಲ್ಜಿಯಂನ ಆಂಟ್ವೆರ್ಪ್‌ನಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಸಿಬಿಐ ಬೆಲ್ಜಿಯಂ ಸರ್ಕಾರಕ್ಕೆ ಮನವಿ ಮಾಡಿತ್ತು. ಅನಾರೋಗ್ಯ ಮತ್ತು ಇತರ ಕಾರಣಗಳನ್ನು ಉಲ್ಲೇಖಿಸಿ ಅವರು ಜಾಮೀನು ಕೋರುವ ನಿರೀಕ್ಷೆಯಿದೆ.

ಚೋಕ್ಸಿ ಸೋದರಳಿಯ ನೀರವ್ ಮೋದಿ ಪಿಎನ್‌ಬಿಗೆ 13,850 ಕೋಟಿ ರೂ. ವಂಚಿಸಿದ್ದು, ಅವರನ್ನು ಕರೆತರಲು ಸಿದ್ಧತೆ ನಡೆಯುತ್ತಿವೆ.

Related posts

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಪುತ್ರಿ ವಿಧಿವಶ.

Mumbai News Desk

ಬೊಯಿಸರ್  ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಗುರುಪೂರ್ಣಿಮೆ

Mumbai News Desk

ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ  (ಉತ್ಹಾನ ದ್ವಾದಶಿ ) ಆಚರಣೆ 

Mumbai News Desk

ಏಪ್ರಿಲ್ 7 ರಂದು ಥಾಣೆ ಯಲ್ಲಿ ದಕ್ಷಿಣ ಕನ್ನಡ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಗಳೊಂದಿಗೆ ತುಳು ಕನ್ನಡಿಗರ ಸಭೆ. ಸಂಸದ ಗೋಪಾಲ್ ಶೆಟ್ಟಿ ಅಧ್ಯಕ್ಷತೆ ವಹಿಸಿವಂತೆ ಮನವಿ.

Mumbai News Desk

ತೀಯಾ ಫ್ಯಾಮಿಲಿ (ತೀಯಾ ಸಮಾಜ) ಯು.ಎ.ಇ. ಅಧ್ಯಕ್ಷರಾಗಿ ಜಸ್ಮಿತಾ ವಿವೇಕಾನಂದ್

Mumbai News Desk

ಕಲಂಬೋಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಂಸ್ಥೆ ಇದರ ಮಹಿಳಾ ವಿಭಾಗದ ಹರಸಿನ ಕುಂಕುಮ ಕಾಯ೯ಕ್ರಮ.

Mumbai News Desk