30 C
Mumbai
April 24, 2026
Mumbai News Kannada
ಸುದ್ದಿ

ಉಡುಪಿ : ನೂತನ ಎಸ್ಪಿ ಆಗಿ ಹರಿರಾಮ್ ಶಂಕರ್ ಅಧಿಕಾರ ಸ್ವೀಕಾರ, ಕೋಮು ಪ್ರಚೋದನೆ, ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ – ಹರಿರಾಮ್ ಶಂಕರ್





 ಉಡುಪಿ ಜಿಲ್ಲೆಯ ನೂತನ ಎಸ್ಪಿ ಆಗಿ ಹರಿರಾಮ್ ಶಂಕರ್ ಅವರು ಇಂದು ಅಧಿಕಾರ ಸ್ವೀಕರಿಸಿದರು.
ಬನ್ನಂಜೆ ಎಸ್ಪಿ ಕಚೇರಿಯಲ್ಲಿ ನಿರ್ಗಮಿತ ಎಸ್ಪಿ ಡಾ. ಅರುಣ್ ಕುಮಾರ್ ಅವರು ನೂತನ ಎಸ್ಪಿಗೆ ಅಧಿಕಾರ ಹಸ್ತಾಂತರಿಸಿದರು.

 ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಎಸ್ಪಿ ಹರಿರಾಮ್ ಶಂಕರ್, ಉಡುಪಿ ಜಿಲ್ಲೆಯ ಜನತೆ ಕೋಮು ಪ್ರಚೋದನೆಗೆ ಅವಕಾಶ ನೀಡಬಾರದು. ಕೋಮು ಪ್ರಚೋದನೆ ನೀಡುವ ಮಾಹಿತಿಗಳಿದ್ದರೆ, ತಕ್ಷಣವೇ ಪೊಲೀಸರಿಗೆ ತಿಳಿಸಬೇಕು. ಸಾರ್ವಜನಿಕರು ಯಾವುದೇ ಪ್ರಚೋದನೆ, ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು. ಕೋಮು ಪ್ರಚೋದನೆ, ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.

ಈ ಹಿಂದಿನ ಎಸ್ಪಿ ಅರುಣ್ ಕುಮಾರ್ ಅವರು, ಅಕ್ರಮ ಚಟುವಟಿಕೆ ವಿರುದ್ಧ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಯಾವುದೆಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದರೋ ಅವುಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.

 ಈ ಮೊದಲು ಹರಿರಾಮ್ ಶಂಕರ್ ಅವರು ರಾಜ್ಯ ಇಂಟಲಿಜೆನ್ಸ್ ಎಸ್ಪಿಯಾಗಿದ್ದರು. ಡಾ. ಅರುಣ್ ಕುಮಾರ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.



Related posts

ಮೀರಾ ಭಾಯಂದರ್ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಗಣೇಶ್ ಗೋಪಾಲ್ ಶೆಟ್ಟಿ ವಿಜಯ

Mumbai News Desk

ಅವಿಭಜಿತ ಜಿಲ್ಲೆಗೆ ನಿರಂತರ ವಿದ್ಯುತ್ ಪೂರೈಸಲು ಜಯಶ್ರೀಕ್ರಷ್ಣ ಪರಿಸರ ಪ್ರೇಮಿ ಸಮಿತಿ ಆಗ್ರಹ

Mumbai News Desk

ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2024 ಪ್ರಕಟ, 69 ಜನರಿಗೆ ರಾಜ್ಯೋತ್ಸವ , 109 ಜನರಿಗೆ ಸಾಧಕ ಪ್ರಶಸ್ತಿ, ಮುಂಬೈಯ ಸಮಾಜ ಸೇವಕ ಸದಾಶಿವ ಶೆಟ್ಟಿ ಕನ್ಯಾಡಿಗೆ ಸಾಧಕ ಪ್ರಶಸ್ತಿ.ರಾಜ್ಯೋತ್ಸವ ಪ್ರಶಸ್ತಿ 2024

Mumbai News Desk

ಡಹಾಣು ಶ್ರೀ ಮಹಾಲಕ್ಷ್ಮೀ ಮಂದಿರದಲ್ಲಿ ವಾರ್ಷಿಕ ಜಾತ್ರೆ ಆರಂಭ

Mumbai News Desk

ಮಂಗಳೂರಿನ ರೈಲು ಬಳಕೆದಾರರ ದೀರ್ಘ ಕಾಲದ ಬೇಡಿಕೆಗಳ ಈಡೇರಿಕೆಗೆ ತ್ವರಿತ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ರೈಲ್ವೆ ಪ್ರಯಾಣಿಕರ ಸಮಿತಿ ಒತ್ತಾಯ.

Mumbai News Desk

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ, ಮೀರಾಭಾಯಂದರ್ ವತಿಯಿಂದ ಗಣೇಶ್ ಪುರಿ ಪಾದಯಾತ್ರೆ.

Mumbai News Desk