30.6 C
Mumbai
April 23, 2026
Mumbai News Kannada
ಪ್ರಕಟಣೆ

ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ, ಇರಾನಿ ಕಾಲೋನಿ ಮಲಾಡ್.ಭಕ್ತಿ ಸಂಭ್ರಮದೊಂದಿಗೆ ಶನಿ ಜಯಂತಿ ಆಚರಣೆ.





ಚಿತ್ರ ವರದಿ ದಿನೇಶ್ ಕುಲಾಲ್

ಮಲಾಡ್ ಪೂರ್ವ ಗೋರೆಗಾಂವ್ ಪ್ಲೈಓವರ್ ಇರಾನಿ ಕಾಲೋನಿಯಲ್ಲಿ ತುಳು ಕನ್ನಡಿಗರು ಸ್ಥಾಪಿಸಿರುವ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿಯ ಆಡಳಿತದಲ್ಲಿರುವ ಶನಿಮಂದಿರದಲ್ಲಿ ವಾರ್ಷಿಕ ಅಮಾವಾಸ್ಯೆಯ ಶನಿ ಜಯಂತಿ ಆಚರಣೆ
ಮೇ. 26 ರಂದು ಭಕ್ತಿ ಸಂಭ್ರಮದೊಂದಿಗೆ ದಿನ ಪೂರ್ತಿ ನಡೆಯಿತು.
.
ಅಂದು ಬೆಳಿಗ್ಗೆ ತನಕ ಗಣಹೋಮ.ಬಳಿಕ ಗಣೇಶನ ಮೂರ್ತಿಗೆ ಬೆಳ್ಳಿಯ ಕವಚವನ್ನು ದೇವಸ್ಥಾನದ ಆಡಳಿತ ಮಂಡಳಿ ಯು ವೈದಿಕ ವಿಧಿ ವಿಧಾನಗಳೊಂದಿಗೆ
ಸಮರ್ಪಿಸಿದರು.ಆನಂತರ ವೇದಮೂರ್ತಿ ಕೆ ಗೋವಿಂದ ಭಟ್ ಇವರಿಂದ ಸಾಮೂಹಿಕ ಶನಿ ಶಾಂತಿ .ಅಭಿಷೇಕ ಮಧ್ಯಾಹ್ ಮಹಾಪೂಜೆಯನ್ನು ದೇವಸ್ಥಾನದ ಅರ್ಚಕರಾದ ಸುಧಾಕರ ಎಂ. ಶೆಟ್ಟಿ ನೆರವೇರಿಸಿದರು.

ಶಾಸ್ತ್ರ ಸಂಖ್ಯೆಯಲ್ಲಿ ಸೇರಿರುವ ಭಕ್ತರು ಶ್ರೀದೇವರ ತೀರ್ಥ ಪ್ರಸಾದವನ್ನು ಸ್ವೀಕರಿಸಿದ ಬಳಿಕ ಅನ್ನ ಪ್ರಸಾದ ಸ್ವೀಕರಿಸಿದರು
. ಅಪರಾಹ್ನ ಕಲಶ ಮುಹೂರ್ತ ನಡೆದ ಬಳಿಕ, ಮಂದಿರದ ನೂತನ ಪ್ರಾರಂಭಗೊಂಡ ಮಹಿಳಾ ಮಂಡಳಿಯವರಿಂದ ಭಜನೆ ನಡೆಯಿತು.
, ಸಂಜೆ ಶನಿ ಗ್ರಂಥ ಪಾರಾಯಣ. ಸಮಿತಿಯ ಸದಸ್ಯರಿಂದ ಭಜನೆ. ರಾತ್ರಿ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.


ದಿನಪೂರ್ತಿ ನಡೆದ ಪೂಜಾ ಕಾರ್ಯಗಳಲ್ಲಿ ಉದ್ಯಮಿಗಳು. ರಾಜಕೀಯ ನಾಯಕರು ಸಿನಿಮಾ ನಟರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು.
ಪಾಲ್ಗೊಂಡು ದೇವರ ದರ್ಶನವನ್ನು ಪಡೆದರು.


ಪೂಜಾ ಕಾರ್ಯ ಯಶಸ್ವಿಯಾಗುವಲ್ಲಿ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷರಾದ ಮೋಹನ್ . ಜಿ. ಬಂಗೇರ, ಕಾರ್ಯದರ್ಶಿಗಗಾದ ಎಚ್.ಎಸ್. ಕರ್ಕೇರ, ಎಂ. ಎನ್. ಸುವರ್ಣ, ಗೌರವ ಕೋಶಾಧಿಕಾರಿಗಳಾದ ಕೆ. ಎನ್. ಸಾಲ್ಯಾನ್, ಅತುಲ್ ಎಂ. ಓಜಾ, ಸಮಿತಿ ಸದಸ್ಯರಾದ ಎಸ್.ಎನ್. ಕೋಟ್ಯಾನ್, ಎನ್.ಎನ್. ಪೂಜಾರಿ, ಎಸ್. ಎ. ಸಾಲ್ಯಾನ್, ಎಂ. ಎನ್. ಕೋಟ್ಯಾನ್, ಪಿ. ಆರ್. ಅಮೀನ್, ಬಿ. ಎಚ್. ಹೆಚ್ಚಾಡಿ, ‘ಜಯಾ ಎಂ. ಬಂಗೇರ, ತನೂಜ್ ಕಪ್ಪನಕಲ್, ಯು. ವಿ. ರಾವ್, ಅರ್ಚಕರಾದ ಸುಧಾಕರ ಎಂ. ಶೆಟ್ಟಿ, ಭುವಾಜಿ ಕೆ. ಎನ್. ಸಿ. ಸಾಲ್ಯಾನ್, ಉಪ ಸಮಿತಿಯ ಸದಸ್ ಪಿ. ಪಿ. ಸಾಲ್ಯಾನ್, ಚಂದ್ರಾವತಿ ಪುತ್ರನ್, ಜಿ. ಆರ್. ಸಾಲ್ಯಾನ್ ಆರ್. ಎಸ್. ದೇವಾಡಿಗ, ಆರ್. ವೈ. ಪುತ್ರನ್, ಎನ್. ಆರ್. ಬಂಗೇರ, ವಿ. ಆರ್. ವಾಪ್ಟರೆ ಮತ್ತಿತರ ಸದಸ್ಯರು ಸಹಕರಿಸಿದರು.
ರಾತ್ರಿ ದೇವಸ್ಥಾನದ ಹೊರ ಆವರಣದ
ಮುಂಬೈಯ ಅಭಿನಯ ಮಂಟಪದ ಕಲಾವಿದರು ಅಭಿನಯಿಸಿದರು. . ಕರುಣಾಕರ್ ಕಾಪು ನಿರ್ದೇಶನ ಪಂಜುರ್ಲಿ ನಾಟಕ ಪ್ರದರ್ಶನಗೊಂಡಿತು

B. Dinesh Kulal
Mob.:9821868674



Related posts

ದೋಲ್ಗೊಟ್ಟು, ಕೆಲ್ಲಪುತ್ತಿಗೆ, ಶ್ರೀ ಧರ್ಮಶಾಸ್ತ ಭಕ್ತವೃಂದ,ಜ.11 ರಂದು 23ನೇ ಅಯ್ಯಪ್ಪ ಮಹಾಪೂಜೆ ಅನ್ನಸಂತರ್ಪಣೆ,

Mumbai News Desk

ಸೆ.5 ರಂದು ಅಂಧೇರಿ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ತುಳು ಹರಿಕಥೆಯ ನಾದ ಲಹರಿ

Mumbai News Desk

ಕುಲಾಲ ಸಂಘ ಮುಂಬಯಿ ಇದರ  ಸಿ ಎಸ್ ಟಿ – ಮುಲುಂಡ್ – ಮನ್ ಕ್ಹುರ್ಡ್ ಸ್ಥಳೀಯ ಸಮಿತಿಯವರಿಂದ ಅ. 26ರಂದು ಮಂಗಳೂರು ಕುಲಾಲ ಭವನ ಉದ್ಘಾಟನೆಯ ಆಮಂತ್ರಣ ಪತ್ರಿಕೆ ವಿತರಣೆ:

Mumbai News Desk

ಸಿರಿಕಲಾ ಮೇಳದ ಪುಣೆ-ಮುಂಬೈ ದಶಮಾನೋತ್ಸವ ತಿರುಗಾಟ

Mumbai News Desk

ಅ.9,ಭಾಯಂದರ್ ಬಿಲ್ಲವರ ಅಸೋಸಿಯೇಶನಿನ ಸ್ಥಳೀಯ ಕಚೇರಿಯ ವತಿಯಿಂದ ‘ಆಟಿಡೊಂಜಿ ಕೂಟ’ ಕಾರ್ಯಕ್ರಮ.

Mumbai News Desk

ನ. 21, 22 ರಂದು ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ, ಡೊಂಬಿವಲಿಯ 67ನೇ ವಾರ್ಷಿಕ ಮಂಗಳೋತ್ಸವ

Mumbai News Desk