July 23, 2026
Mumbai News Kannada
ಪ್ರಕಟಣೆ

ಕರ್ನಾಟಕ ಸಂಘ, ಕಲ್ಯಾಣ: 23 ರಂದು ಕರ್ನಾಟಕ ರಾಜ್ಯೋತ್ಸವ ಮತ್ತು 23ನೇ ವಾರ್ಷಿಕೋತ್ಸವ







ಕರ್ನಾಟಕ ಸಂಘ, ಕಲ್ಯಾಣ
ಕರ್ನಾಟಕ ರಾಜ್ಯೋತ್ಸವ ಮತ್ತು 23ನೇ ವಾರ್ಷಿಕೋತ್ಸವ
12/11/25,ಕಲ್ಯಾಣ (ಪ): ಕರ್ನಾಟಕ ಅಭಿಮಾನಿಗಳೇ, ಪ್ರತಿ ವರ್ಷದಂತೆ ಈ ವರ್ಷ ಕರ್ನಾಟಕ ರಾಜ್ಯೋತ್ಸವ ಹಾಗೂ ಸಂಘದ 23ನೇ ವಾರ್ಷಿಕೋತ್ಸವವನ್ನು 23ನೇ ನವೆಂಬರ್ 2025ರಂದು ಸಂಜೆ ಕಲ್ಯಾಣ(ಪ) ಪರಿಸರದ ಗಿರಿಜಾ ಪಯ್ಯಾಡೆ ಸಭಾಗ್ರಹದಲ್ಲಿ ಸಂಜೆ 5ರಿಂದ ಆಚರಿಸಲಾಗುವುದು. ಅದ್ದೂರಿಯಾಗಿ ಆಚರಿಸಲ್ಪಡುವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂಟರ ಸಂಘ, ಮುಂಬಯಿಯ ಭೀವಂಡಿ – ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಸುಭೋದ ಭಂಡಾರಿ ಹಾಗೂ ಪ್ರತಿಷ್ಠಿತ ಡೊಂಬಿವಲಿ ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿಗಳಾದ ಪ್ರೊ. ಅಜಿತ್ ಉಮ್ರಾಣಿಯವರು ಗೌರವ ಅತಿಥಿಯಾಗಿ ಆಗಮಿಸಲಿದ್ದಾರೆ. ವಿವಿಧ ಮನೋರಂಜನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕೂಡಿದ ಈ ಕಾರ್ಯಕ್ರಮದಲ್ಲಿ ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಹೋಟೆಲ್ ಡಾಲ್ಫಿನ್ ಮಾಲಿಕರಾದ ಶ್ರೀ ಸದಾನಂದ ಶೆಟ್ಟಿಯವರನ್ನು, ಕಲಾವಿದೆ ಪ್ರವೀಣಾ ಶೆಟ್ಟಿಯವರನ್ನು ಸಮಾಜ ಸೇವೆ ಕ್ಷೇತ್ರದಲ್ಲಿ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಎಲ್ಲರಿಗೂ ಪರಿಚಿತ ಉದಯವಾಣಿ ಪತ್ರಕರ್ತ ಶ್ರೀ ಗುರುರಾಜ ಪೊಟ್ನಿಸ್ ರವರನ್ನು ಸನ್ಮಾನಿಸಲಾಗುವುದು. ಅಲ್ಲದೆ ವರಿಷ್ಠ ನಾಗರಿಕ ಹಾಗೂ ಹಿಂದುಸ್ತಾನೀ ಸಂಗೀತ ಶಿಕ್ಷಕಿಯಾದ ಶ್ರೀಮತಿ ನಳಿನಿ ಕೊಟ್ಟಲಗಿಯವರನ್ನು ಸನ್ಮಾನಿಸಲಾಗುವುದು. ಜೊತೆಗೆ 16 ನವೆಂಬರ್ 25 ಸಂಜೆ 3 ರಿಂದ ಸಂಘದ ಕಾರ್ಯಾಲಯದಲ್ಲಿ ಸಂಘದ ಸದಸ್ಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಂಘದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಎಲ್ಲಾ ಕರ್ನಾಟಕ ಬಾಂಧವರು ಆಗಮಿಸಿ ನಮ್ಮ ಆದರಾತಿಥ್ಯವನ್ನು ಸ್ವೀಕರಿಸಿ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕಾಗಿ ಸಮಸ್ತ ಸಂಘದ ಸದಸ್ಯರ ಪರವಾಗಿ ಅಧ್ಯಕ್ಷ ಶ್ರೀ ಜಯಂತ ದೇಶಮುಖರವರು ವಿನಂತಿಸಿ ಕೊಂಡಿದ್ದಾರೆ.



Related posts

ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಕೋಟೆ; ನಾಲಾಸೋಪಾರ ಮೇ 27. ಶ್ರೀ ಶನಿ ಜಯಂತಿ ಉತ್ಸವ.

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ :

Mumbai News Desk

ಮೊಗವೀರ ಮಹಾಜನ ಸೇವಾ ಸಂಘ, ಡೊಂಬಿವಲಿ ಸಮಿತಿಯಿಂದ ದಶಮಾನೋತ್ಸವ ಸಂಭ್ರಮ: ಡಿ. 14ರಂದು ಉದ್ಘಾಟನಾ ಸಮಾರಂಭ

Mumbai News Desk

ಸೆ. 15 ರಂದು ಕನ್ನಡಿಗರ ಸ್ನೇಹ ಬಳಗ ಟ್ರಸ್ಟ್ ಡೊಂಬಿವಲಿಯ ಉದ್ಘಾಟನಾ ಕಾರ್ಯಕ್ರಮ.

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿ, ಮಾ 16 ರಂದು ವಿದ್ಯಾರ್ಥಿ ವೇತನ, ವಿಕಲಚೇತನ ಹಾಗೂ ವಿಧವಾ ವೇತನಗಳಿಗೆ ಅರ್ಜಿಗಳ ಆಹ್ವಾನ,

Mumbai News Desk

ಮದರ್ ಇಂಡಿಯಾದ 19th east ಬಾಂಬೆ ಸ್ಕೌಟ್ ಮಿತ್ರರ ಮತ್ತು ಮದರ್ ಇಂಡಿಯಾ ಹಳೆ ವಿದ್ಯಾರ್ಥಿ ಫೌಂಡೇಶನ್ ನ ಜಂಟಿ ಆಶ್ರಯದಲ್ಲಿ ನವೆಂಬರ್ 15 ಮತ್ತು 16 ರಂದು ಫಾರ್ಮ್ ರಿಜೆನ್ಸಿಯಲ್ಲಿ 6 ನೇ ವರ್ಷದ ಗುರುವಂದನಾ ಕಾರ್ಯಕ್ರಮ.

Mumbai News Desk