September 6, 2026
Mumbai News Kannada
ಪ್ರಕಟಣೆ

ದೇವಾಡಿಗ ಸಂಘ ಮುಂಬಯಿ: ಪೆ. 2 ರಂದು ಶ್ರೀರಾಮದೇವರ ಪೂಜೆಸ್ಥಾನದ ಪುನರ್ ಪ್ರತಿಷ್ಠೆ






ಮುಂಬೈಯ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ, ಶತಮಾನೋತ್ಸವದ ಸಂಭ್ರಮದಲ್ಲಿರುವ ದೇವಾಡಿಗ ಸಂಘದ ಸಂಚಾಲಕತ್ವದ ಶ್ರೀರಾಮ ಭಜನಾ ಮಂಡಳಿ ಆರಾಧಿಸಿಕೊಂಡು ಬರುತ್ತಿರುವ ಶ್ರೀರಾಮದೇವರ ಪೂಜಾ ಕೇಂದ್ರದ ಪುನರ್ ಪ್ರತಿಷ್ಠೆ ಫೆ. 2 ರಂದು ಆದಿತ್ಯವಾರ ಬೆಳಿಗ್ಗೆ 7 ಗಂಟೆಗೆ ನವಿ ನವಿ ಮುಂಬೈಯ ನೇರುಲ್ ನ ಸೆಕ್ಟರ್ 12ರಲ್ಲಿರುವ ದೇವಾಡಿಗ ಭವನ ಮಾರ್ಗ, ದೇವಾಡಿಗ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮ :
ಅಂದು ಬೆಳಿಗ್ಗೆ 7 ಗಂಟೆಯಿಂದ ವಾಸ್ತು ಹೋಮ, ಗಣ ಹೋಮ, ಪುನರ್ ಪ್ರತಿಷ್ಟಾಪನೆಯಾದ ಬಳಿಕ ತೀರ್ಥ ಪ್ರಸಾದ, ಭಜನಾ-ಸಂಕೀರ್ತನೆ, ಮಂಗಳದ ಬಳಿಕ ಅನ್ನ ಸಂತರ್ಪಣೆ.
ಶ್ರೀ ರಾಮ ಭಜನಾ ಮಂಡಳಿಯ ಪುನರ್ ಪ್ರತಿಷ್ಠೆಯ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಶ್ರೀ ರಾಮ ದೇವರ ಕೃಪೆಗೆ ಪಾತ್ರರಾಗುವಂತೆ, ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್ ದೇವಾಡಿಗ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ ದೇವಾಡಿಗ ಹಾಗೂ ಮಂಡಳಿಯ ಸಂಯೋಜಕರಾದ ನ್ಯಾಯವಾದಿ ಶ್ರೀ ಪ್ರಭಾಕರ್ ಎಸ್ ದೇವಾಡಿಗ ಇವರು ಪ್ರಕಟಣೆ ಮೂಲಕ ಕೇಳಿಕೊಂಡಿದ್ದಾರೆ



Related posts

ದಹಿಸರ್ ಪೂರ್ವ, ರಾವಲ್ಪಾಡ: ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರದಲ್ಲಿ ಆ. 22ರಂದು 27ನೇ ವರ್ಷದ ಶ್ರೀ ಶನಿಗ್ರಂಥ ಪಾರಾಯಣ ಪೂಜೆ

Mumbai News Desk

ಜ. 04ರಂದು “ಕುಂಭಕಲಾವಳಿ ಕುಲಾಲ ಕಲಾ ಸೇವಾಂಜಲಿ” ಕಾರ್ಯಕ್ರಮ: ಡಾ.ಎಂ. ಅಣ್ಣಯ್ಯ ಕುಲಾಲ್ ಅವರು “ವೈದ್ಯ ಸಿಂಧೂರ” ಪ್ರಶಸ್ತಿ

Mumbai News Desk

ಎ. 6 ರಂದು ನಗರದ ಹೆಸರಾಂತ ಕನ್ನಡ ಮಾಸಿಕ ಛಾಯಾಕಿರಣ ಪತ್ರಿಕೆಯ ದಶಮಾನೋತ್ಸವ

Mumbai News Desk

ಆಗಸ್ಟ್ 30 : ಮುಂಬೈನಲ್ಲಿ “ಸನಾತನ ಸಮ್ಮೇಳನ”: ಧರ್ಮ, ಸಂಸ್ಕೃತಿ ಮತ್ತು ಮೌಲ್ಯಗಳ ಜಾಗೃತಿಗೆ ಆಹ್ವಾನ

Mumbai News Desk

ಫೆ. 1, ಶ್ರೀ ನಿತ್ಯಾನಂದ ಸೇವಾ ಸಂಸ್ಥೆ, ಮೀರಾಭಾಯಂದರ್ ವತಿಯಿಂದ ಗಣೇಶ್ ಪುರಿ ಪಾದಯಾತ್ರೆ.

Mumbai News Desk

ಅ. 24ರಂದು ಮಾಲಾಡ್ ಪೂರ್ವ  ಓಂ ಶ್ರೀ ಸಾಯಿ ದುರ್ಗಾ ನಿತ್ಯಾನಂದ ಟ್ರಸ್ಟ್  ನವರಾತ್ರಿ ಪೂಜೆ 

Chandrahas