
ಇತ್ತೀಚಿಗೆ ಮೈಸೂರಿನಲ್ಲಿ ನಡೆದ 2018 ಮತ್ತು 2019 ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಮುಂಬೈನ ಪ್ರಭಾ ಸುವರ್ಣ ಅವರಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ನೀಡಿ ಗೌರವಿಸಿದರು.
ಮೂಲತಹ ಮಂಗಳೂರಿನವರಾದ ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಪ್ರಭಾ ಸುವರ್ಣ ಅವರ ಸಹ ನಿರ್ಮಾಣದ ” ಟ್ರಿಪಲ್ ತಲಾಖ್ ” ಸಿನಿಮಾಗೆ ಪ್ರಭಾ ಸುವರ್ಣ ಅವರು ಸಹ ನಿರ್ಮಾಪಕರಾಗಿದ್ದು,
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗುಲ್ವಾಡಿ ಟಾಕೀಸ್ ನಿರ್ಮಾಣದ ಯಾಕೂಬ್ ಖಾದರ್ ಗುಲ್ವಾಡಿ ಅವರ ಮೊದಲ ನಿರ್ದೇಶನದ ಈ ಬ್ಯಾರಿ ಭಾಷೆಯ ಈ ಸಿನಿಮಾ 2019 ನೇ ಸಾಲಿನ ಕನ್ನಡದ ಪ್ರಾದೇಶಿಕ ಬಾಷ ವಿಭಾಗದಲ್ಲಿ ಅತ್ಯುತ್ತಮ ರಾಜ್ಯ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿತ್ತು.

ಟ್ರಿಪಲ್ ತಲಾಖ್’ ಬಗ್ಗೆ ಒಂದಿಷ್ಟು:
ಟ್ರಿಪಲ್ ತಲಾಖ್ ಸಿನಿಮಾ ಸಮುದಾಯವೊಂದರ ಮಾನವೀಯ ಸಂವೇದನೆಗಳಿಗೆ ಹಿಡಿದ ಭಾವನಾತ್ಮಕ ಕನ್ನಡಿ. ತಲಾಖ್ ಎಂಬ ಮೂರಕ್ಷರವನ್ನು ಒಂದೇ ಉಸಿರಲ್ಲಿ ಮೂರು ಬಾರಿ ಹೇಳಿ ಬಿಟ್ಟರೆ ಸಂಬಂಧಗಳು ಮುರಿದೇ ಹೋಗುತ್ತವೆ ಎಂಬ ಕಲ್ಪನೆಯ ಹಿಂದಿರುವ ನೋವು, ತಲ್ಲಣಗಳಿಗೆ ಮೂರ್ತ ರೂಪ ಕೊಟ್ಟ ಕುಂದಾಪುರ ಕನ್ನಡದ ಕ್ರಿಯಾಶೀಲ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿಯವರ ಈ ಚಲನಚಿತ್ರ ಒಂದು ಸಾಮಾಜಿಕ ಜವಾಬ್ದಾರಿಯ ರೂಪದಲ್ಲಿ ತೆರೆಯಲ್ಲಿ ಸೆರೆಯಾದ ದೃಶ್ಯಗಳಾಗಿದೆ. ಕುಟುಂಬದ ಮೂಲ ನೆಲೆಯನ್ನೇ ಛಿದ್ರಗೊಳಿಸುವ ಸಮಯ ಸಾಧಕರ ಹಿಂದಿರುವ ನಗ್ನ ಸತ್ಯದ ದರ್ಶನದಂತಿರುವ ಈ ಸಿನಿಮಾ ಸಮುದಾಯದ ಮಹಿಳೆಯರನ್ನು ದಿಗ್ಗಾಂತಗೊಳಿಸುವ ತಲಾಖ್ ವಿರುದ್ಧ ಜಾಗೃತಿಯ ಸಂದೇಶ ಹರಡುತ್ತಾ ಸಮಸ್ಯೆಯ ದಾರುಣತೆಯನ್ನು ವಿಷಾದೀಕರಿಸುತ್ತಾ ಹೋಗುತ್ತದೆ.
ಈಗಾಗಲೇ ಈ ಸಿನೆಮಾ ಕನ್ನಡದ ಪ್ರಾದೇಶಿಕ ಬಾಷೆಯ ಅತ್ಯುತ್ತಮ ರಾಜ್ಯ ಪ್ರಶಸ್ತಿಯ ಜೊತೆಗೆ ಆಫ್ರಿಕಾದ
ನೈಜೀರಿಯಾದಲ್ಲಿ ನಡೆದ ಪ್ರತಿಷ್ಠಿತ ಅಬುಜ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೂರು ವಿಭಾಗದಲ್ಲಿ ಸೆಮಿಫೈನಲ್ ಹಂತ ತಲುಪಿದ್ದು, ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೂಡ ಭಾರತದ ಉಪ ಭಾಷೆಗಳು ವಿಭಾಗದಲ್ಲಿ ಪ್ರದರ್ಶನ ಕಂಡಿದ್ದಲ್ಲದೆ, ನಿಟ್ಟೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವಲ್ಲದೆ ದೂರದ ಅಮೇರಿಕ, ಇಂಗ್ಲೆಂಡ್ ಸೇರಿದಂತೆ ಹಲವು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ.
ಈ ಕಲಾತ್ಮಕ ಚಲನಚಿತ್ರದ ಸಹ ನಿರ್ಮಾಪಕರಾದ ಪ್ರಭಾ ಸುವರ್ಣ
ಸಧ್ಯ ಮುಂಬೈನಲ್ಲಿ ನೆಲೆಸಿದ್ದು, ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಮುಂಬೈನ ರಿಸರ್ವ್ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆದು, ವೃತ್ತಿ ಬದುಕಿನ ಜೊತೆಯಲ್ಲಿ ಕಳೆದ ಐದು ದಶಕಗಳಿಂದ ನಿಷ್ಠಾಪೂರ್ವಕವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ, ಉದ್ಯೋಗದಿಂದ ಸ್ವಯಂ ನಿವೃತ್ತಿಯನ್ನು ಪಡೆದು ಸಕ್ರಿಯ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಹಲವು ವರ್ಷಗಳಿಂದ ಸಮಾಜ ಸೇವೆಯ
ಜೊತೆಗೆ ಕನ್ನಡ ಸಾಹಿತ್ಯ,ಸಂಸ್ಕೃತಿ, ಬಾಷೆಯಯೊಂದಿಗೆ ವಿಭಿನ್ನ ಕ್ಷೇತ್ರಗಳನ್ನು ಆಯ್ಕೆಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಮುಂಬೈನ ಯಂಗ್ ಮೆನ್ಸ್ ನೈಟ್ ಹೈಸ್ಕೂಲಿನಲ್ಲಿ ಗ್ರಾಂಡ್ ಪ್ಯಾಟ್ರನ್, ಬ್ರಹ್ಮಕುಮಾರಿಸಮಾಜದಲ್ಲಿ ಸೇವಾಧಾರಿಯಾಗಿ, ಜಾಗೃತಿ ಬಳಗದಲ್ಲಿ ಪೋರ್ಟ್ ಚಾಪ್ಟರ್ ಛೇರ್‌ಪರ್ಸನ್, ಗೌರ್ನಿಂಗ್ ಕೌನ್ಸಿಲ್‌ನ ಡಿಗ್ನಿಟಿ ಫೌಂಡೇಶನ್, ಮುಂಬಯಿ ಕನ್ನಡ ಸಂಘ, ಮಾತುಂಗ ಕನ್ನಡ ಸಂಘ, ಸಾಯನ್ ಮೆಸಾನಿಕ್ ಲೇಡೀಸ್ ಆರ್ಗನೈಜೇಶನ್‌ನಲ್ಲಿ ಉಪಾಧ್ಯಕ್ಷೆ, ಟಾಟಾ ಕ್ಯಾನ್ಸರ್ ಆಸ್ಪತ್ರೆಯ ಪುಟ್ಟಾತಿನಲ್ಲಿ ಚಿಕಿತ್ಸೆ ಪಡೆಯುವವರಿಗೆ ತಮ್ಮದೇ ಆದ ಸೇವೆ ಮಾಡುತ್ತ, ಮುಂಬೈ, ಬೆಂಗಳೂರು, ಮಂಗಳೂರು, ಅಬುದಾಬಿ, ಮಸ್ಕತ್, ದುಬೈ, ಅಮೇರಿಕಾ, ಯೂರೋಪ್, ರಷ್ಯಾ, ಖಜಕಿಸ್ತಾನ್, ಉಜು ಬೈಕಿಸ್ತಾನ್, ಅಲ್ಪಾಡಿ, ಮಾಸ್ಕೋ, ಆಸ್ಟ್ರೇಲಿಯಾ, ಜಪಾನ್, ಕೆನಡಾ, ಫಿಲಿಫೈನ್ಸ್, ವಿಯೆಟ್ನಾಂ, ಸುಮಾರು 25 ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಬಹುಭಾಷ ಕವಿಗೋಷ್ಟಿ ಮತ್ತು ವಿವಿಧ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಸೃಜನಶೀಲ ಮನಸ್ಸು ಹೊಂದಿರುವ ಇವರ ಸಹ ನಿರ್ಮಾಣದ “ಟ್ರಿಪಲ್ ತಲಾಖ್” ಸಿನಿಮಾಗೆ 2019 ನೇ ಸಾಲಿನ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ಪಡೆದಿದ್ದು ಅಲ್ಲದೇ ತಮ್ಮ ಸಿನಿಮಾದ ಜೊತೆಗೆ ಕಲಾತ್ಮಕ ಚಲನಚಿತ್ರಗಳಾದ ‘ಮಲ್ಲದಾನ’ ಹಾಗೂ ‘ಭೋಜರಾಜ್ ಎಂ.ಬಿ.ಬಿ.ಎಸ್’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಜೀವನದಲ್ಲಿ ಏನಾದರೂ ಮಹತ್ತರವಾದ ಸಾಧನೆಯನ್ನು ಮಾಡಬೇಕೆಂದು ಮಂಗಳೂರಿನಲ್ಲಿ ನಡೆದ ‘ಏಜ್ ಇಸ್ ಜಸ್ಟ್ ನಂಬರ್’ ಎಂದು ಹೇಳುವ ಹಿರಿಯರ ವಿಭಾಗದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ, ಮಿಸೆಸ್ ಮಂಗಳೂರು ವಿನ್ನರ್, ಬೆಂಗಳೂರಿನಲ್ಲಿ ನಡೆದ ಮಿಸೆಸ್ ಕರ್ನಾಟಕ ರನ್ನರ್, ರಾಜಸ್ಥಾನದ ರಣ ಥಂಬೋರ್ ನಲ್ಲಿ ರನ್ನರ್, ಥೈಲ್ಯಾಂಡಿನ ಬ್ಯಾಂಕಾನಲ್ಲಿ ಫಸ್ಟ್ ರನ್ನರ್ ಅಪ್, ಅಲ್ಲದೆ ಎರಡೆರಡು ಕಿರೀಟ ಪಡೆದಿದ್ದಾರೆ.




