September 6, 2026
Mumbai News Kannada
ಸುದ್ದಿ

ಗೋರೆಗಾಂವ್ ; ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ನ ಆಧ್ಯಕ್ಷ, ಸಮಾಜಸೇವಕ ಪುರುಷೋತ್ತಮ ಕೆ. ಐಲ್ ನಿಧನ





ಮುಂಬಯಿ : ಹೆಸರಾಂತ ಕ್ರೀಡಾಪಟು, ಸಮಾಜ ಸೇವಕ ಪುರುಷೋತ್ತಮ ಕೆ. ಐಲ್ (79) ಅಲ್ಪಕಾಲದ ಅನಾರೋಗ್ಯದಿಂದಾಗಿ ಮೇ. 8 ರಂದು ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು,  ಓರ್ವ ಪುತ್ರಿ ಹಾಗೂ ಅಪಾರ ಸಂಬಂಧಿಕರನ್ನು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. 

ಮೂಲತ: ಕಾಸರಗೋಡು ಜಿಲ್ಲೆಯ ಉಪ್ಪಳದ ಐಲ ದವರಾದ ಇವರು ಸುಮಾರು 5 ದಶಯಗಳ ದಶಕಗಳ ಕಾಲ ದಿ ಯಂಗ್ ಎಂಗ್ ಮೆನ್ಸ್  ಬೋವಿ ಅಸೋಸಿಯೇಷನ್ (ವೈ. ಎಂ. ಬಿ. ಎ.) ಮುಂಬಯಿ ಇದರಲ್ಲಿ ಕ್ರೀಯಾಶೀಲರಾಗಿದ್ದು ಇದರ ಮಾಜಿ ಅಧ್ಯಕ್ಷರು. ಮೊಯಾ ಸಮುದಾಯದ ಏಕೈಕ ಕ್ರೀಡಾ ಸಂಘಟನೆ ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ 40 ವರ್ಷಗಳಿಂದ ಸೇವೆ ಮಾಡುತ್ತಿದ್ದ ಇವರು ಪ್ರಸ್ತುತ ಕಳೆದ ೧೫ ವರ್ಷಗಳಿಂದ ಇದರ ಅಧ್ಯಕ್ಷರಾಗಿ ಸಮಾಜದ ಯುವ ಕ್ರೀಡಾ ಪಟುಗಳಿಗೆ ಸ್ಪೂರ್ತಿಯಾಗಿದ್ದರು. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಬಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮುಂಬಯಿಯ ಎಲ್ ಆಂಡ್ ಟಿ ಸಂಸ್ಥೆಯಲ್ಲಿ ದೀರ್ಘ್ ಕಾಲ ಸೇವೆ ಸಲ್ಲಿಸಿ ಸ್ವಂಥ ಉದ್ದಿಮೆಯನ್ನು ಹೊಂದಿದ್ದರು. ವಾಮಂಜೂರು ಹದಿನಾರು ಸಮಸ್ಥರ ಸಭೆ ಮಾಟುಂಗಾ, ನೇತಿಲ ಗುತ್ಯಮ್ಮ ಭಗವತೀ ಭಂಡಾರ, ಮೋಯಾ ಕ್ರೆಡಿಟ್ ಸೊಸೈಟಿ, ಗೋರೆಗಾಂವ್ ಕರ್ನಾಟಕ ಸಂಘ ಹೀಗೆ ಹಲವಾರು ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ಉತ್ತಮ ಸಮಾಜ ಸೇವಕರಾಗಿದ್ದು ಇವರ ನಿಧನಕ್ಕೆ ದಿ ಯಂಗ್ ಎಂಗ್ ಮೆನ್ಸ್  ಬೋವಿ ಅಸೋಸಿಯೇಷನ್, ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್, ವಾಮಂಜೂರು ಹದಿನಾರು ಸಮಸ್ಥರ ಸಭೆಯ ಕಾರ್ಯಕಾರಿ ಸಮಿತಿ ಹಾಗೂ ಎಲ್ಲಾ ಸದಸ್ಯರುಗಳು ಸಂತಾಪ ಸೂಚಿಸಿದ್ದಾರೆ.



Related posts

ಪರೀಕ್ಷಾ ಅಕ್ರಮ ಹಾಗೂ ತೀವ್ರ ಪ್ರತಿಭಟನೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

Mumbai News Desk

ಕೊಲ್ಲಾಪುರ: ಯುವತಿಯರ ಲೈಂಗಿಕ ಶೋಷಣೆ ಹಾಗೂ ಬ್ಲ್ಯಾಕ್‌ಮೇಲ್ ಆರೋಪದಡಿ ಫಾರ್ಮಸಿ ವಿದ್ಯಾರ್ಥಿ ಬಂಧನ

Mumbai News Desk

ಜಾಗತಿಕ ಮಟ್ಟದಲ್ಲಿ ಕಾರ್ಕಳದ ಪ್ರತಿಭೆ: ಇಥಿಯೋಪಿಯದಲ್ಲಿ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ ನಿಟ್ಟೆಯ ವಿಶಾಲ್ ಪೂಜಾರಿ

Mumbai News Desk

ಭಾರತದ 15ನೇ ಉಪರಾಷ್ಟ್ರಪತಿಯಾಗಿ ರಾಧಾಕೃಷ್ಣನ್ ಆಯ್ಕೆ

Mumbai News Desk

ಸಮಾಜ ಸೇವಕ ಯೋಗೇಶ್ ಕೆ ಹೆಜ್ಮಾಡಿ‌‌ ದಂಪತಿ ಹಾಗೂ  ಗೋಪಾಲ್ ವಿ ಅಂಚನ್ ದಂಪತಿ ಆವರ ದಾಂಪತ್ಯ ಜೀವನದ ಸ್ವರ್ಣ  ಮಹೋತ್ಸವ  ಸಂಭ್ರಮ ಆಚರಣೆ,

Mumbai News Desk

ಬಂಗಾಳದಲ್ಲಿ ದೀದಿ ಯುಗಾಂತ್ಯ: 15 ವರ್ಷಗಳ ತೃಣಮೂಲ ಕಾಂಗ್ರೆಸ್ ಆಡಳಿತಕ್ಕೆ ತೆರೆ ಎಳೆದ ಬಿಜೆಪಿ ಸುನಾಮಿ

Mumbai News Desk