July 23, 2026
Mumbai News Kannada
ಕ್ರೀಡೆ

ವೈಭವ್ ಸೂರ್ಯವಂಶಿ ಬಿರುಗಾಳಿ ಬ್ಯಾಟಿಂಗ್ ಗೆ ಇಂಗ್ಲೆಂಡ್ ನಿರುತ್ತರ; 6ನೇ ಬಾರಿ ಅಂಡರ್ 19 ವಿಶ್ವಕಪ್ ಎತ್ತಿ ಹಿಡಿದ ಭಾರತ







ಜಿಂಬಾಬ್ವೆಯ ಹರಾರೆ ಮೈದಾನದಲ್ಲಿ ಯುವ ಭಾರತ ತಂಡ ಇತಿಹಾಸ ಸೃಷ್ಟಿಸಿದೆ. ಅಂಡರ್ 19 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಬರೋಬ್ಬರಿ 100 ರನ್​ಗಳಿಂದ ಸೋಲಿಸಿತು. ಇದರೊಂದಿಗೆ, ಭಾರತ ಆರನೇ ಬಾರಿಗೆ ಅಂಡರ್ 19 ವಿಶ್ವಕಪ್ ಎತ್ತಿಹಿಡಿಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 411 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 311 ರನ್​ಗಳಿಗೆ ಆಲೌಟ್ ಆಗುವ ಮೂಲಕ 100 ರನ್​ಗಳಿಂದ ಸೋಲೊಪ್ಪಿಕೊಂಡಿತು. ಭಾರತದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ 14 ವರ್ಷದ ವೈಭವ್ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ 175 ರನ್​ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ವೈಭವ್ ಅವರ ಈ ಇನ್ನಿಂಗ್ಸ್‌ನಲ್ಲಿ 15 ಸಿಕ್ಸರ್‌ಗಳು ಮತ್ತು 15 ಬೌಂಡರಿಗಳು ಸೇರಿದ್ದವು.412 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡವು ಕ್ಯಾಲೆಬ್ ಫಾಲ್ಕನರ್ ಭರ್ಜರಿ ಶತಕ ಗಳಿಸುವುದರೊಂದಿಗೆ ತೀವ್ರವಾಗಿ ಹೋರಾಡಿತು ಆದರೆ, ಕೊನೆಯಲ್ಲಿ, ಬ್ಯಾಟಿಂಗ್ ಕೊರತೆಯಿಂದ 311 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಆರ್‌ಎಸ್ ಅಂಬ್ರೀಶ್ 56 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರೆ, ದೀಪೇಶ್ ದೇವೇಂದ್ರನ್ ಮತ್ತು ಕನಿಷ್ಕ್ ಚೌಹಾಣ್ ತಲಾ ಎರಡು ವಿಕೆಟ್‌ಗಳನ್ನು ಪಡೆದರು.



Related posts

ಗುರುಪುರ ಬಂಟರ ಮಾತೃ ಸಂಘಕ್ಕೆ  ಪುಣೆ, ಪಡುಬಿದ್ರಿ ಇಲ್ಲಿ ನಡೆದ ಕ್ರೀಡಾಕೂಟದಲ್ಲಿ ಅವಳಿ ಪ್ರಶಸ್ತಿಗಳು

Mumbai News Desk

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ 5ನೇ ಟಿ20 ಪಂದ್ಯ ರದ್ದು : ಭಾರತದ ಮುಡಿಗೆ ಟಿ20 ಸರಣಿ

Mumbai News Desk

ಸುರತ್ಕಲ್ ಬಂಟರ  ವಾರ್ಷಿಕ ಕ್ರೀಡಾಕೂಟ

Mumbai News Desk

ಯುವಶಕ್ತಿ ಸಂಘಟನೆಯಿಂದ ಸಮಾಜದ ಏಳಿಗೆ ಸಾಧ್ಯ: ಡೊಂಬಿವಲಿಯಲ್ಲಿ ‘KYD’ (ಕರುನಾಡ ಯೂತ್–ಡೊಂಬಿವಲಿ) ಕ್ರೀಡಾಕೂಟ ಯಶಸ್ವಿ

Mumbai News Desk

ಏಷ್ಯಾ ಕಪ್ 2025 : ಭಾರತ ತಂಡ ಪ್ರಕಟ: ಶುಭಮನ್ ಗಿಲ್ ಉಪನಾಯಕ, ಶ್ರೇಯಸ್ ಅಯ್ಯರ್‌ಗೆ ಸ್ಥಾನವಿಲ್ಲ

Mumbai News Desk

ರಾಜಸ್ತಾನ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಐತಿಹಾಸಿಕ ಐಪಿಎಲ್ ದಾಖಲೆ: ಲಕ್ನೋ ವಿರುದ್ಧ ರಾಜಸ್ತಾನಕ್ಕೆ ಭರ್ಜರಿ ಜಯ

Mumbai News Desk