August 4, 2026
Mumbai News Kannada
ಕ್ರೀಡೆ

ಕುಲಾಲ ಸಂಘ ಮುಂಬಯಿ: ಕುಲಾಲ ಕ್ರೀಡೋತ್ಸವದ ಬಹುಮಾನ ವಿತರಣೆ





ಸಮುದಾಯದವರು ಒಗ್ಗಟ್ಟಿನಿಂದ ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸುವಲ್ಲಿ ಸಹಕರಿಸಬೇಕು: ಜಗದೀಶ್ ಬಂಜನ್ ಅಂಬರನಾಥ್.

​ಕುಲಾಲ ಸಂಘ ಮುಂಬಯಿ, ಇದರ 5 ಸ್ಥಳೀಯ ಸಮಿತಿಗಳ ಹಾಗೂ ಯುವ ವಿಭಾಗದವರಿಂದ, ಸಂಘದ ಅಧ್ಯಕ್ಷರಾದ ರಘು ಮೂಲ್ಯ ಇವರ ಅಧ್ಯಕ್ಷತೆಯಲ್ಲಿ ಹಾಗೂ ಗೌರವಾಧ್ಯಕ್ಷರಾದ ದೇವದಾಸ್ ಕುಲಾಲ್ ಇವರ ಉಪಸ್ಥಿತಿಯಲ್ಲಿ ‘ಕುಲಾಲ ಕ್ರೀಡೋತ್ಸವ 2026’ ಮಾರ್ಚ್ 01ರ ಭಾನುವಾರದಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಪನ್ವೆಲ್‌ನ ಕರ್ನಾಲ ಸ್ಪೋರ್ಟ್ಸ್ ಅಕಾಡೆಮಿ (ಕಾಲ್ಶೇಖರ್ ಕಾಲೇಜ್ ಹತ್ತಿರ) ಇಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

​ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ ರಘು ಮೂಲ್ಯರವರು ಮಾತನಾಡುತ್ತಾ, “ಯುವ ವಿಭಾಗದವರು ಮುಂದೆ ಬಂದು ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಮಕ್ಕಳು ಕ್ರೀಡೆಯಿಂದ ವಂಚಿತರಾಗದೆ ಪ್ರತಿಯೊಬ್ಬರೂ ಭಾಗವಹಿಸಿದ್ದರಿಂದ ಕ್ರೀಡಾಕೂಟವು ಬಹಳ ಯಶಸ್ವಿಯಾಗಿ ನಡೆಯಿತು. ಯುವಕರು ಸಂಘದೊಳಗೆ ಸೇವೆ ಮಾಡಬೇಕು, ಅವರಿಗೆ ಎಲ್ಲಾ ವಿಧದಲ್ಲಿ ಸಹಕಾರ ನೀಡಲಾಗುವುದು. ಸಮಾಜದ ಅಭಿವೃದ್ಧಿಗೆ ಸಮಾಜ ಬಾಂಧವರು ಸಹಕಾರ ನೀಡಬೇಕು,” ಎಂದು ನುಡಿದರು.

​ಮುಖ್ಯ ಅತಿಥಿಯಾಗಿ ಕುಲಾಲ ಸಂಘ ಮುಂಬಯಿ ಜ್ಯೋತಿ ಕೋ-ಆಪರೇಟಿವ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲಿಯಾನ್ ಬಂಟ್ವಾಳ ಅವರು ಮಾತನಾಡುತ್ತಾ, “ಶತಮಾನೋತ್ಸವದ ಆಚರಣೆಯ ದಿಕ್ಕಿನಲ್ಲಿ ನಮ್ಮ ಕುಲಾಲ ಸಂಘ ಮುಂಬಯಿ ಇನ್ನಷ್ಟು ಒಗ್ಗಟ್ಟಾಗಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕ್ರೀಡೆಯಲ್ಲಿ ಭಾಗವಹಿಸುವುದೇ ಮುಖ್ಯ, ಸೋಲು-ಗೆಲುವು ನಂತರದ ವಿಷಯ. ಬಾಕ್ಸ್ ಕ್ರಿಕೆಟ್ ಸ್ಪರ್ಧೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಇಂತಹ ಕಾರ್ಯಕ್ರಮಗಳು ಹೀಗೆಯೇ ಪ್ರತಿ ವರ್ಷ ನಿರಂತರವಾಗಿ ನಡೆಯುತ್ತಾ ಬರಬೇಕು,” ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.

​ಸಮಾರೋಪ ಸಮಾರಂಭದ ಮತ್ತೊಬ್ಬ ಮುಖ್ಯ ಅತಿಥಿ, ಜೈದೀಪ್ ಕನ್ಸ್ಟ್ರಕ್ಷನ್ ಅಂಬರನಾಥ್ ಇದರ ಮಾಲಕರಾದ ಜಗದೀಶ್ ಬಂಜನ್ ಶುಭ ಹಾರೈಸಿ, “ಸಂಘದ ಸೇವಾ ಕಾರ್ಯಗಳ ಮೂಲಕ ಸಮಾಜ ಬಲಿಷ್ಠಗೊಳ್ಳುತ್ತಿದೆ. ಸಮುದಾಯದವರು ಒಗ್ಗಟ್ಟಿನಿಂದ ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸುವಲ್ಲಿ ಸಹಕರಿಸಬೇಕು,” ಎಂದು ನುಡಿದರು.

​ಕುಲಾಲ ಸಮಾಜದ ಯುವ ಉದ್ಯಮಿ ದಿನಕರ್ ಬೇಲಾಡಿ ಕಂದೇಶ್ವರ ಅವರು ಕ್ರೀಡೋತ್ಸವಕ್ಕೆ ಶುಭ ಹಾರೈಸಿದರು. ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಡಿ. ಬಂಜನ್ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

​ಕ್ರೀಡೋತ್ಸವದ ನಿರೂಪಣೆಯನ್ನು ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಸಾಲಿಯಾನ್ ಮಾಡಿದರು. ವಂದನಾರ್ಪಣೆಯನ್ನು ಜೊತೆ ಕಾರ್ಯದರ್ಶಿ ಲಕ್ಷ್ಮಣ್ ಸಿ. ಮೂಲ್ಯ ನೆರವೇರಿಸಿದರು.

​ಯುವ ವಿಭಾಗದ ಕಾರ್ಯಾಧ್ಯಕ್ಷ ವೇಣುಗೋಪಾಲ್ ಕರ್ಕೇರಾ ಅವರು ಕ್ರೀಡೋತ್ಸವದ ಕ್ರಿಕೆಟ್ ಪಂದ್ಯಾವಳಿಗಳ ವಿಜೇತರ ಘೋಷಣೆ ಮಾಡಿ, ಗೆದ್ದ ತಂಡಗಳಿಗೆ ಅತಿಥಿಗಳಿಂದ ಟ್ರೋಫಿ ಕೊಡಿಸಿ ಅಭಿನಂದಿಸಿದರು.

ಮಕ್ಕಳ ಮನರಂಜನಾ ಕ್ರೀಡೆಯ ವಿವಿಧ ವಿಭಾಗಗಳ ವಿಜೇತರ ವಿವರಗಳು ಕೆಳಗಿನಂತಿವೆ:

ಪೊಟಾಟೋ ರೇಸ್ (1 ರಿಂದ 5 ವರ್ಷ):

  • ವಿಭಾಗ 1: 1. ಪೂರ್ವಿಕ ಕೆ., 2. ನಿಶಾನ್, 3. ಲಕ್ಷ್.
  • ವಿಭಾಗ 2: 1. ಲಕ್ಷ್, 2. ಸೂರ್ಯ, 3. ರೇಣೇಶರ್ಯ.

ಪೊಟಾಟೋ ರೇಸ್ (5 ರಿಂದ 10 ವರ್ಷ):

  1. ​ಚಿರಾಯುಷ್, 2. ದೀಮಾಯ್ರಾ, 3. ಆನ್ಶಿಕ, 3. ದ್ವೀಜ್.

50 ಮೀಟರ್ ಓಟ (1 ರಿಂದ 5 ವರ್ಷ):

  1. ​ಸೂರ್ಯ, 2. ರೇಣೇಶರ್ಯ ಮೂಲ್ಯ, 3. ಹಿಮಾನಿ.

50 ಮೀಟರ್ ಓಟ (6 ರಿಂದ 10 ವರ್ಷ):

  1. ​ದೀಮಾಯ್ರಾ, 2. ದ್ವೀಜ್, 3. ಆನ್ಶಿಕ.

​ಎಲ್ಲಾ ಮಕ್ಕಳಿಗೂ ಪದಕ ನೀಡಿ ಅಭಿನಂದನೆ ಸಲ್ಲಿಸಲಾಯಿತು.

​ನಡೆದ ಕ್ರೀಡೋತ್ಸವದಲ್ಲಿ ಯುವಕರು, ಮಹಿಳೆಯರು ಹಾಗೂ ಹಿರಿಯರ ವಿಭಾಗಗಳಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ಯಶಸ್ವಿಯಾಗಿ ನೆರವೇರಿದವು. ವಿವಿಧ ಪ್ರದೇಶಗಳಿಂದ ಭಾಗವಹಿಸಿದ ತಂಡಗಳು ಉತ್ಸಾಹಭರಿತ ಸ್ಪರ್ಧೆ ನೀಡಿ ಕ್ರೀಡಾಭಿಮಾನಿಗಳನ್ನು ರಂಜಿಸಿದವು.

ಯುವಕರ ಕ್ರಿಕೆಟ್ ವಿಭಾಗ: ಮೀರಾ ರೋಡ್ – ವಿರಾರ್ ತಂಡವು ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟಕ್ಕೇರಿತು. ಚರ್ಚ್‌ಗೇಟ್ – ದಹಿಸರ್ ತಂಡ ದ್ವಿತೀಯ ಸ್ಥಾನ ಪಡೆಯಿತು.

  • ಬೆಸ್ಟ್ ಬ್ಯಾಟ್ಸ್‌ಮನ್: ಪ್ರೀತೇಶ್ ಮೂಲ್ಯ (ಮೀರಾ ರೋಡ್ – ವಿರಾರ್).
  • ಬೆಸ್ಟ್ ಬೌಲರ್: ಪ್ರೀತಮ್ ಮೂಲ್ಯ (TKKB).
  • ಪ್ಲೇಯರ್ ಆಫ್ ದ ಸೀರೀಸ್: ಜೀತು ಸಾಲಿಯಾನ್.

ವನಿತೆಯರ ಬಾಕ್ಸ್ ಕ್ರಿಕೆಟ್ ವಿಭಾಗ: ಮಹಿಳೆಯರು ಅತ್ಯುತ್ತಮ ಆಟ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು.

  • ಬೆಸ್ಟ್ ಬ್ಯಾಟಿಂಗ್: ನಯನ ಮೂಲ್ಯ (ಮೀರಾ ರೋಡ್ – ವಿರಾರ್).
  • ಬೆಸ್ಟ್ ಬೌಲರ್: ವಿದ್ಯಾ ಮೂಲ್ಯ (ಚರ್ಚ್‌ಗೇಟ್ – ದಹಿಸರ್).
  • ಪ್ಲೇಯರ್ ಆಫ್ ದ ಸೀರೀಸ್: ನಯನಾ ಮೂಲ್ಯ (ಮೀರಾ ರೋಡ್ – ವಿರಾರ್).

ಹಿರಿಯರ (50 ವರ್ಷ ಮೇಲ್ಪಟ್ಟ) ಬಾಕ್ಸ್ ಕ್ರಿಕೆಟ್:

ಮೀರಾ ರೋಡ್ – ವಿರಾರ್ ತಂಡ ಪ್ರಥಮ ಸ್ಥಾನ ಪಡೆಯಿತು.

  • ಬೆಸ್ಟ್ ಬ್ಯಾಟ್ಸ್‌ಮನ್: ಸತೀಶ್ (ಮೀರಾ ರೋಡ್ – ವಿರಾರ್).
  • ಬೆಸ್ಟ್ ಬೌಲರ್: ನಾರಾಯಣ ಬಂಜನ್ (ಸೆಂಟ್ರಲ್).
  • ಪ್ಲೇಯರ್ ಆಫ್ ದ ಸೀರೀಸ್: ಸತೀಶ್.

ಮಹಿಳೆಯರ ಬಾಲ್ ಎಸೆತ ಸ್ಪರ್ಧೆ: ಥಾಣೆ-ಕಸರಾ-ಖರ್ಜತ್ ತಂಡ ಪ್ರಥಮ ಸ್ಥಾನ ಹಾಗೂ ಮೀರಾ ರೋಡ್ – ವಿರಾರ್ ತಂಡ ದ್ವಿತೀಯ ಸ್ಥಾನ ಗಳಿಸಿತು.

ಪುರುಷರ ಬಾಕ್ಸ್ ಕ್ರಿಕೆಟ್ ವಿಭಾಗ: ಮೀರಾ ರೋಡ್ – ವಿರಾರ್ ತಂಡ ಪ್ರಥಮ ಸ್ಥಾನ ಹಾಗೂ ಸೆಂಟ್ರಲ್ ತಂಡ ದ್ವಿತೀಯ ಸ್ಥಾನ ಗಳಿಸಿತು.

​ಈ ಕ್ರೀಡೋತ್ಸವವು ಕ್ರೀಡಾಸ್ಫೂರ್ತಿ, ಸಹಕಾರ ಮತ್ತು ಏಕತೆಯ ಸಂದೇಶ ಸಾರಿತು. ವಿಜೇತರಿಗೆ ಟ್ರೋಫಿ ನೀಡಿ ಅಭಿನಂದಿಸಲಾಯಿತು.

​ಕ್ರೀಡೋತ್ಸವಕ್ಕೆ ಕೋಶಾಧಿಕಾರಿ ಜಯ ಅಂಚನ್, ಸಂಜೀವ ಎನ್. ಬಂಗೇರ, ಉಮೇಶ್ ಬಂಗೇರ, ಜೊತೆ ಕೋಶಾಧಿಕಾರಿ ರೇಣುಕಾ ಸಾಲಿಯಾನ್, ಮಹಿಳಾ ವಿಭಾಗದ ಪದಾಧಿಕಾರಿಗಳು ಹಾಗೂ ಸದಸ್ಯರಾದ ಸದಾನಂದ್ ಕುಲಾಲ್, ಕೃಪೇಶ್ ಕುಲಾಲ್, ಆನಂದ್ ಕುಲಾಲ್, ಶಂಕರ್ ವೈ. ಮೂಲ್ಯ, ಉದಯ್ ಅತ್ತಾವರ, ಹರಿಯಪ್ಪ ಮೂಲ್ಯ, ಅಮೂಲ್ಯ ಪತ್ರಿಕೆಯ ಉಪಸಂಪಾದಕ ಎಲ್. ಆರ್. ಮೂಲ್ಯ, ಕುಶ ಕುಲಾಲ್, ನ್ಯಾಯವಾದಿ ಉಮಾನಾಥ್ ಮೂಲ್ಯ, ಸುಕುಮಾರ್ ಸಾಲಿಯಾನ್, ನಟೇಶ್ ಬಂಗೇರ, ಮಹಿಳಾ ವಿಭಾಗದ ರತ್ನಾ ಡಿ. ಕುಲಾಲ್, ಆರತಿ ಕೆ. ಸಾಲಿಯಾನ್, ರಸಿಕ ಸಿ. ಮೂಲ್ಯ, ಜಯಂತಿ ಬಂಗೇರ, ಬೇಬಿ ವಿ. ಬಂಗೇರ, ಉಷಾ ಆರ್. ಮೂಲ್ಯ, ಕುಶಲ ಜಿ. ಬಂಗೇರ, ಗೀತಾ ಡಿ. ಮೂಲ್ಯ, ಇಂದಿರಾ ಆರ್. ಮೂಲ್ಯ, ಹರಿಣಾಕ್ಷಿ ಬಂಗೇರ ಹಾಗೂ ನವಿ ಮುಂಬಯಿ ಯುವ ವಿಭಾಗದ ಪ್ರಸಾದ್ ಮೂಲ್ಯ, ಸೂರಜ್ ಕುಲಾಲ್, ಅಕ್ಷತ್ ಮೂಲ್ಯ ಅವರು ಕ್ರೀಡೋತ್ಸವದ ಯಶಸ್ಸಿಗೆ ಸಹಕರಿಸಿದರು.

​ಯುವ ಸಮುದಾಯ ಸಮಾಜದಲ್ಲಿ ಬೆಳೆಯಬೇಕು ಎನ್ನುವುದೇ ಸಂಘದ ಮುಖ್ಯ ಉದ್ದೇಶ: ದೇವದಾಸ್ ಕುಲಾಲ್

​ಸಂಘದ ಗೌರವಾಧ್ಯಕ್ಷರಾದ ದೇವದಾಸ್ ಎಲ್. ಕುಲಾಲ್ ಮಾತನಾಡಿ, “96 ವರ್ಷಗಳಿಂದ ಸಂಘವು ಸಮಾಜದ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿಕೊಂಡು ಎಲ್ಲರಿಗೂ ಸಹಕಾರ ನೀಡುತ್ತಾ ಬಂದಿದೆ. ಸಂಘದ ಕಾರ್ಯಗಳಿಗೆ ಸಮಾಜದ ಬಂಧುಗಳು ನಿರಂತರ ಬೆಂಬಲ ನೀಡುತ್ತಿದ್ದಾರೆ. ಯುವ ಸಮುದಾಯ ಸಮಾಜದಲ್ಲಿ ಬೆಳೆಯಬೇಕು ಎನ್ನುವ ಉದ್ದೇಶದಿಂದ ಇಂದು ನಡೆದ ಕ್ರೀಡಾಕೂಟವು ಯಶಸ್ವಿಯಾಗಲು ಎಲ್ಲರೂ ಶ್ರಮಿಸಿದ್ದಾರೆ. ಒಗ್ಗಟ್ಟಿನಿಂದ ಸಂಘವನ್ನು ಮುನ್ನಡೆಸೋಣ,” ಎಂದರು.



Related posts

ವಿಶ್ವ ಬಂಟರ  ಕ್ರೀಡಾಕೂಟದಲ್ಲಿ ಮುಂಬೈ ಬಂಟರ ಸಂಘದ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಗೆ ಸಮಗ್ರ ಚಾಂಪಿಯನ್

Mumbai News Desk

ಉಡುಪಿ : ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟ,ಪಡುಬಿದ್ರಿ ಸಾಗರ ವಿದ್ಯಾ ಮಂದಿರ ಆಂಗ್ಲ ಮಾಧ್ಯಮದ ಬಾಲಕಿಯರಿಗೆ ಪ್ರಥಮ ಸ್ಥಾನ.

Mumbai News Desk

ಬ್ಯಾಡ್ಮಿಂಟನ್ ಸಾಧಕಿ  ದಿಯಾ ಮನೋಜ್ ಶೆಟ್ಟಿ ಮಾಜಿ ಸಂಸದ ಗೋಪಾಲ್ ಶೆಟ್ಟಿ ಅವರಿಂದ ಗೌರವ

Mumbai News Desk

ಉಡುಪಿ : ವಲಯ ಮಟ್ಟದ 17ರ ವಯೋಮಾನದ ಬಾಲಕಿಯರ ಕಬ್ಬಡಿ ಪಂದ್ಯಾಟದಲ್ಲಿ, ಪಡುಬಿದ್ರಿ ಸಾಗರ ವಿದ್ಯಾ ಮಂದಿರ ಶಾಲೆಗೆ ಪ್ರಥಮ ಸ್ಥಾನ.

Mumbai News Desk

ಉಡುಪಿ ಜಿಲ್ಲಾ ಮಟ್ಟದ ಗ್ರಾಮೀಣ ಐಟಿ ರಸಪ್ರಶ್ನೆ ಸ್ಪರ್ಧೆ: ಪಡುಬಿದ್ರಿ ಸಾಗರ ವಿದ್ಯಾ ಮಂದಿರದ ಧೃತಿ ರವಿ ಕುಮಾರ್ ವಿಭಾಗೀಯ ಮಟ್ಟಕ್ಕೆ ಆಯ್ಕೆ

Mumbai News Desk

ವಿಶ್ವ ಬ್ಯಾಡ್ಮಿಂಟನ್ ದಿನಾಚರಣೆ: ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಪ್ರಥಮ ಬ್ಯಾಡ್ಮಿಂಟನ್ ಪಂದ್ಯಾಟ ಯಶಸ್ವಿ

Mumbai News Desk