30.5 C
Mumbai
June 8, 2026
Mumbai News Kannada
ಮುಂಬಯಿ

ಡೊಂಬಿವಲಿ: ಶ್ರೀ ಜಗದಂಬಾ ಮಂದಿರದಲ್ಲಿ ಭಕ್ತಿಪೂರ್ವಕ ಮಹಾಶಿವರಾತ್ರಿ ಮತ್ತು ಭಜನೋತ್ಸವ






​ಡೊಂಬಿವಲಿ: ಇಲ್ಲಿನ ಶ್ರೀ ಜಗದಂಬಾ ಚಾರಿಟೇಬಲ್ ಟ್ರಸ್ಟ್ ಸಂಚಾಲಿತ ಶ್ರೀ ಜಗದಂಬಾ ಮಂದಿರದಲ್ಲಿ ಮಹಾಶಿವರಾತ್ರಿ ಮಹೋತ್ಸವ ಹಾಗೂ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಡೆದ ಭಜನೋತ್ಸವವು ಅತ್ಯಂತ ವೈಭವ ಮತ್ತು ಭಕ್ತಿಭಾವದಿಂದ ಜರುಗಿತು.



ಬೆಳಿಗ್ಗೆ ಪ್ರಾತಃಕಾಲದಲ್ಲಿ ನಿತ್ಯಪೂಜೆ, ಶ್ರೀ ದೇವಿಗೆ ಪಂಚಾಮೃತ ಅಭಿಷೇಕ ಹಾಗೂ ಶ್ರೀ ಮಹಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ ಸೇವೆಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಮಧ್ಯಾಹ್ನ ಮತ್ತು ಸಾಯಂಕಾಲ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.



ಮುಂಬಯಿ ಬಿಲ್ಲವರ ಅಸೋಸಿಯೇಷನ್ ಕೋಶಾಧಿಕಾರಿ ರವಿ ಸನಿಲ್, ಶಿವಸೇನಾ ಸೌತ್ ಇಂಡಿಯನ್ ಸೆಲ್‌ನ ಥಾಣೆ ಜಿಲ್ಲಾಧ್ಯಕ್ಷ ಸುಭಾಷ್ ಶೆಟ್ಟಿ ಇನ್ನಂಜೆ, ಮಂದಿರದ ಅಧ್ಯಕ್ಷ ದಿವಾಕರ್ ರೈ, ಉಪಾಧ್ಯಕ್ಷ ದಿನೇಶ್ ಪೂಜಾರಿ, ಕಾರ್ಯದರ್ಶಿ ರಾಜೇಶ್ ಕೋಟ್ಯಾನ್, ಕೋಶಾಧಿಕಾರಿ ಸಂತೋಷ್ ಶೆಟ್ಟಿ, ಜೊತೆ ಕೋಶಾಧಿಕಾರಿ ಹರೀಶ್ ಕೋಟ್ಯಾನ್ ಹಾಗೂ ಭೂವಾಜೀ ಸುರೇಶ್ ಶೆಟ್ಟಿ ಬಲ್ಕುಂಜೆ ಮತ್ತು ಮಹಿಳಾ ವಿಭಾಗದ ಸದಸ್ಯರು ದೀಪ ಪ್ರಜ್ವಲಿಸುವ ಮೂಲಕ ಭಜನೋತ್ಸವಕ್ಕೆ ಚಾಲನೆ ನೀಡಿದರು.


ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ನಡೆದ ಅಖಂಡ ಭಜನಾ ಕಾರ್ಯಕ್ರಮದಲ್ಲಿ ವಿವಿಧ ಮಂಡಳಿಗಳು ಪಾಲ್ಗೊಂಡು ಭಕ್ತಿ ಸುಧೆ ಹರಿಸಿದವು. ಶ್ರೀ ಜಗದಂಬ ಮಂದಿರದ ಸದಸ್ಯರ ಭಜನೆಯೊಂದಿಗೆ ಪ್ರಾರಂಭವಾದ ಈ ಉತ್ಸವದಲ್ಲಿ:
​ದೇವಾಡಿಗ ಸಂಘ (ಡೊಂಬಿವಲಿ ವಲಯ)
​ಅಯ್ಯಪ್ಪ ಭಕ್ತ ವೃಂದ (ಆಜ್ಡೆಪಾಡ, ಡೊಂಬಿವಲಿ)
​ತುಳು ವೆಲ್ಫೇರ್ ಅಸೋಸಿಯೇಷನ್ (ಡೊಂಬಿವಲಿ)
​ಬಿಲ್ಲವರ ಅಸೋಸಿಯೇಷನ್ (ಡೊಂಬಿವಲಿ ಸ್ಥಳೀಯ ಕಚೇರಿ)
​ಬಂಟರ ಸಂಘ (ಡೊಂಬಿವಲಿ ಪ್ರಾದೇಶಿಕ ಸಮಿತಿ)
​ಮಹಾವಿಷ್ಣು ಮಂದಿರ, ಮುಂಬ್ರಾ ಮಿತ್ರ ಭಜನಾ ಮಂಡಳಿ (ಡೊಂಬಿವಲಿ)
​ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರ (ಡೊಂಬಿವಲಿ)
​ಪಶ್ಚಿಮ ವಿಭಾಗ ನವರಾತ್ರಿ ಮಂಡಳಿ (ಡೊಂಬಿವಲಿ)
​ಜೈ ಭವಾನಿ ಶನೀಶ್ವರ ಮಂದಿರ (ಡೊಂಬಿವಲಿ)
​ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ (ಡೊಂಬಿವಲಿ)
​ಶ್ರೀ ಅಯ್ಯಪ್ಪ ಸೇವಾ ಸಮಿತಿ (ಫೋರ್ಟ್ ಮುಂಬಯಿ)
​ರಜಕ ಸಂಘ (ಡೊಂಬಿವಲಿ ವಲಯ)
​ಶಬರಿ ಅಯ್ಯಪ್ಪ ಭಜನಾ ಮಂಡಳಿ (ಡೊಂಬಿವಲಿ)
​ಫ್ರೆಂಡ್ಸ್ ಸ್ವಾವಲಂಬನ ಕೇಂದ್ರ (ಡೊಂಬಿವಲಿ) ಹಾಗೂ ಚಿಣ್ಣರ ಬಿಂಬ (ಡೊಂಬಿವಲಿ) ಸದಸ್ಯರು ಭಜನೆ ನಡೆಸಿಕೊಟ್ಟರು.



ಅನುಪಮಾ ಶೆಟ್ಟಿ ಮತ್ತು ಸುಭಾಷ್ ಶೆಟ್ಟಿ ಅವರ ಪ್ರಯತ್ನದಿಂದ ಕಲ್ಯಾಣ್-ಡೊಂಬಿವಲಿ ಮಹಾನಗರ ಪಾಲಿಕೆಯ ಮಹಾಪೌರರಾದ ಹರ್ಷಾಲಿ ತವಿಲ್ ಚೌಧರಿ ಅವರು ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸ್ಥಳೀಯ ನಗರಸೇವಕ ವಿಕಾಸ್ ಮಾತ್ರೆ ಹಾಗೂ ನಗರಸೇವಕಿ ಕವಿತಾ ವಿಕಾಸ್ ಮಾತ್ರೆ ಉಪಸ್ಥಿತರಿದ್ದರು.
​ಕಾರ್ಯಕ್ರಮದಲ್ಲಿ ಪ್ರಮುಖ ಗಣ್ಯರಾದ ಆನಂದ್ ಶೆಟ್ಟಿ ಎಕ್ಕಾರು, ಡಾ. ಇಂದ್ರಾಳಿ ದಿವಾಕರ್ ಶೆಟ್ಟಿ, ಸುಬ್ಬಯ್ಯ ಶೆಟ್ಟಿ, ರಾಜೀವ್ ಭಂಡಾರಿ ಹಾಗೂ ಸುಷ್ಮಾ ದಿವಾಕರ್ ಶೆಟ್ಟಿ, ನೂರಾರು ಭಕ್ತರು ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿದರು.

​ಮಂದಿರದ ಸದಸ್ಯರ ಮಂಗಳ ಭಜನೆ ಹಾಗೂ ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಮಂದಿರದ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್ ಅವರು ಆಗಮಿಸಿದ ಅತಿಥಿಗಳಿಗೆ, ಭಜನಾ ಮಂಡಳಿಗಳಿಗೆ ಹಾಗೂ ಭಕ್ತ ಸಮೂಹಕ್ಕೆ ವಂದನಾರ್ಪಣೆ ಮಾಡಿದರು.



Related posts

ರಾವಲ್ಪಾಡ ಶ್ರೀ ದುರ್ಗಾಪರಮೇಶ್ವರೀ – ಶನೀಶ್ವರ ದೇವಸ್ಥಾನದ ವಾರ್ಷಿಕ  ಮಹಾಪೂಜೆ ,  ಧಾರ್ಮಿಕ ಸಭೆ, ಯಕ್ಷಗಾನ.

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ ಮಹಿಳಾ ದಿನಾಚರಣೆ, ಪ್ರಶಸ್ತಿ ಪ್ರಧಾನ ಸಮಾರಂಭ

Mumbai News Desk

ಬೊರಿವಲಿ: ಶ್ರೀ ಜಗದೀಶ್ವರಿ ಮಂದಿರದ ಪುನರ್‌ಪ್ರತಿಷ್ಠಾಪನೆ ಕಾರ್ಯಕ್ರಮ ಆರಂಭ

Mumbai News Desk

ತುಳು ಸಂಘ ಬೋರಿವಲಿ ವತಿಯಿಂದ ಬೋರಿವಲಿ ಪಶ್ಚಿಮದಲ್ಲಿ ಸ್ವಚ್ಛತಾ ಅಭಿಯಾನ

Mumbai News Desk

ಡೊಂಬಿವಿಲಿಯಲ್ಲೊಂದು ಸುಂದರ ಯಕ್ಷ ಸಂಜೆ…

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯಿಂದ ರಕ್ತದಾನ ಶಿಭಿರ,

Mumbai News Desk