30.9 C
Mumbai
June 8, 2026
Mumbai News Kannada
ಪ್ರಕಟಣೆ

ಶ್ರೀ ಜ್ವಾಲಾ ಮಹಾಮ್ಮಾಯಿ – ಕಾಲ ಭೈರವ ದೇವಸ್ಥಾನ ಅಲಂಗಾರು, ಮರೋಳಿ, ಮಂಗಳೂರು : ಫೆ 21ರಿಂದ ಪ್ರತಿಷ್ಠಾ ಮಹೋತ್ಸವ





ಪ್ರಕೃತಿಯ ಮಡಿಲಲ್ಲಿರುವ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಮರೋಳಿ ಗ್ರಾಮವು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದು ಅನೇಕ ಇತಿಹಾಸಗಳನ್ನೊಳಗೊಂಡ ಪುಣ್ಯಭೂಮಿಯು ಹೌದು. ಪುರಾತನ ಕಾಲದಲ್ಲಿ ಅನೇಕ ತಪಸ್ವಿಗಳು, ಯೋಗಿ ಪುರುಷರು,ಋಷಿಮುನಿಗಳು, ಶೈವ ಅನುಯಾಯಿಗಳ ತಪೋ ಭೂಮಿಯು ಆಗಿದ್ದ ಕಾರಣ ಈ ಮರೋಳಿ ಸಣ್ಣ ಗ್ರಾಮದಲ್ಲಿ ಹಲವಾರು ದೇವಸ್ಥಾನಗಳು ನಾಗಬನಗಳು ಭಕ್ತಾದಿಗಳಿಂದ ಆರಾಧಿಸಲ್ಪಟ್ಟು ತಪೋ ಭೂಮಿಯನ್ನು ಪಾವನಗೊಳಿಸಿದೆ.
ಇದೇ ಮರೋಳಿ ಗ್ರಾಮದ ಭಾಗವಾಗಿರುವ ಅಲಂಗಾರು ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಕೆಲವೊಂದು ಕಷ್ಟ- ನಷ್ಟ -ದೈಹಿಕ ಬಾದೆಗಳು,ಮೃತ್ಯು ತಲೆದೋರಿರುವ ಕಾರಣ ತಾರಿಕು 31.08.2025 ರಂದು ಜ್ಯೋತಿಷ್ಯ ಶಶಿಕುಮಾರ್ ಪಂಡಿತ್ ಅವರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆಯನ್ನು ಇರಿಸಲಾಗಿತ್ತು. ಈ ಪ್ರಶ್ನೆಯಲ್ಲಿ ಕಂಡುಬಂದಂತೆ, ಈ ಪ್ರದೇಶವು ಹಿಂದೆ ಶೈವಾಂಶ ಗುಣವುಳ್ಳ ವ್ಯಕ್ತಿಗಳಿಂದ ಉಪಾಸಿಸಲ್ಪಟ್ಟ ಸಾನಿಧ್ಯವಾಗಿತ್ತು. ಶಿವನ ಆರಾಧನೆ, ತಪಸ್ಸು, ಹೋಮಾದಿಗಳು ನಡೆದಂತಹ ಪುಣ್ಯಭೂಮಿಯಲ್ಲಿ ಅಗ್ನಿ ಮುಖೇನೆ ಉಪಾಸನೆ ಮಾಡುವಾಗ ಉದ್ಭವವಾದ ಶ್ರೀ ಜ್ವಾಲಾ ಮಹಾಮಾಯಿ ಎಂಬ ದೇವಿಯನ್ನು ಆರಾಧಿಸಲ್ಪಡುತ್ತಿದ್ದರು. ಹಾಗೂ ಕಾಲಭೈರವ, ನಾಗಬ್ರಹ್ಮ, ರಕ್ತೇಶ್ವರಿ ಧೂಮಾವತಿ, ಚಾಮುಂಡಿ, ಗುಳಿಗ ವಾರಹಿ ದೈವಗಳ ಆರಾಧನೆಯು ನಡೆಯುತ್ತಿತ್ತು. ಕ್ರಮೇಣ ಶೈವಾಂಶವುಳ್ಳವರು ವಲಸೆ ಹೋಗಿ ಇಲ್ಲವೇ ದೇಹ ಪರಿತ್ಯಾಗದಿಂದಾಗಿ ಹೋಮ ಆರಾಧನೆಗಳು ನಿಂತು ಹೋಗಿದ್ದವು. ತದನಂತರ ಶಿವನ ಆರಾಧನೆಯನ್ನು ಮಾಡಿಕೊಂಡು ಬರುತ್ತಿದ್ದ ಪೂರ್ವಿಕರಿಗೆ ಈ ಜಾಗವು ಪ್ರಾಪ್ತಿ ಆಯ್ತು ಅನಾದಿಕಾಲದಿಂದಲೂ ಪೂಜಿಸಲ್ಪಟ್ಟ ಈ ದೈವಂಶ ಶಕ್ತಿಗಳು ಉಪಾಸನೆ ಆರಾಧನೆ ಪೂಜೆ ಪುರಸ್ಕಾರಗಳು ಇಲ್ಲದ ಕಾರಣ ಸಂಬಂಧ ಪಟ್ಟ ಎಲ್ಲಾ ಪ್ರದೇಶಗಳ ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ಬಾದೆಗಳು ಗೋಚರಿಸಲ್ಪಡುತ್ತಿತ್ತು.
ಆ ಪ್ರಯುಕ್ತ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡುಬಂದಂತಹ ದೋಷ ಪರಿಹಾರಾರ್ಥಕವನ್ನು ಮಾಡಿ ದಿನಾಂಕ 14.12.2025 ರಂದು ಭಾನುವಾರ ಬೆಳಿಗ್ಗೆ 8.15 ರ ಶುಭ ಮುಹೂರ್ತದಲ್ಲಿ ಶ್ರೀ ಅವಘಡ್ ಪೀರ್ ರಾಜೇಶ್ ನಾಥ ಗುರೂಜಿ ಅವರ ಮಾರ್ಗದರ್ಶನದೊಂದಿಗೆ ಹಾಗೂ ಡಾ ಶ್ರೀನಿವಾಸ್ ಜಿ ಭಟ್ ಅವರಿಂದ, ಶಾಸಕರ ಹಾಗೂ ಊರ ಗಣ್ಯ ಭಕ್ತಾದಿಗಳ ಉಪಸ್ಥಿತಿಯಲ್ಲಿ ದೇವಸ್ಥಾನದ ಶಿಲನ್ಯಾಸ ಕಾರ್ಯಕ್ರಮವು ಜರಗಿತು. ಈ ದೇಗುಲವು ಎರಡು ತಿಂಗಳ ಅವಧಿಯಲ್ಲಿ ಸುಮಾರು 75 ಲಕ್ಷ ರೂಪಾಯಿ ವೆಚ್ಚದಲ್ಲಿ ದೇವಸ್ಥಾನವನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿ ನಿರ್ಧರಿಸಿ, ದಿನಾಂಕ 21.02.2026 ರಿಂದ 22.02.2026 ರವರೆಗೆ ಅಲಂಗಾರ್ ಮರೋಳಿ ಗ್ರಾಮ, ತಾರತೋಟ ಬಳಿ ಶ್ರೀ ಅವಘಡ್ ರಾಜೇಶ್ ನಾಥ್ ಗುರೂಜಿ ಇವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ವೇದಮೂರ್ತಿ ಡಾ. ಶ್ರೀನಿವಾಸ್ ಭಟ್ ಇವರ ನೇತೃತ್ವದಲ್ಲಿ ಮಹಮ್ಮಾಯಿ ಕಾಲಭೈರವ ದೇವರ ಹಾಗೂ ಪರಿವಾರದ ಪ್ರತಿಷ್ಠ ಮಹೋತ್ಸವವನ್ನು ನೆರವೇರಿಸಬೇಕು ಎಂದು ನಿರ್ಧರಿಸಲಾಗಿದೆ ಶ್ರೀ ಜ್ವಾಲಾ ಮಹಾಮಾಯಿ – ಕಾಲಭೈರವ ದೇವರ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವವನ್ನು ನೆರವೇರಿಸಲು ನಿರ್ಧರಿಸಲಾಗಿದೆ.
ಈ ಧಾರ್ಮಿಕ ಕಾರ್ಯಕ್ರಮಕ್ಕೆ ಪರಮ ಪೂಜನೀಯ ಶ್ರೀ ಶ್ರೀ ಶ್ರೀ 1008 ರಾಜ ಯೋಗಿ ನಿರ್ಮಲ್ ನಾಥ್ ಜಿ ಪೀಠಾಧಿಪತಿಗಳು : ಕದ್ರಿ ಯೋಗೇಶ್ವರ ಮಠ ಇವರ ಶುಭ ಆಶೀರ್ವಾದದೊಂದಿಗೆ, ಶ್ರೀ ಯೋಗಿ ನಿವೃತ್ತಿ ನಾಥ್ ಅಘೋರಿಬಾಬಾ : ಶ್ರೀ ಗುರು ಗೋರಕ್ಷನಾಥ ಮಠ ವಿಜಯಪುರ, ಶ್ರೀ ಅವಘಡ್ ಪೀರ್ ರಾಜೇಶ್ ನಾಥ್ ಗುರೂಜಿ : ಧರ್ಮದರ್ಶಿಗಳು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೀಶ್ವರ ಸಿದ್ದಮಠ ಅವರು ಆಗಮಿಸಲಿದ್ದಾರೆ. ಹಾಗೂ ಧಾರ್ಮಿಕ ಉಪನ್ಯಾಸಕ್ಕಾಗಿ ವೇದಮೂರ್ತಿ ಡಾ. ಶ್ರೀನಿವಾಸ್ ಭಟ್, ಅಧ್ಯಕ್ಷತೆ ಶ್ರೀ ಕೆ.ಪಿ. ಶೆಟ್ಟಿ ಮೋಡಂಕಾಪು ಗುತ್ತು, ಚೇರ್ಮ್ಯಾನ್ ಕರಾವಳಿ ಕಲರ್ ಕಾರ್ಟೂನ್ಸ್ ಪ್ರೈವೇಟ್ ಲಿಮಿಟೆಡ್ ಬೆಂಜನಪದವು, ಗೌರವ ಉಪಸ್ಥಿತಿ ಶ್ರೀ ಡಿ. ವೇದವ್ಯಾಸ ಕಾಮತ್ ಶಾಸಕರು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಹಾಗೂ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷರಾದ ಶ್ರೀ ಶರತ್ ಕುಮಾರ್ ಅಲಂಗಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Related posts

ಬಿಲ್ಲವರ ಅಸೋಸಿಯೇಷನ್ ಮುಲುಂಡ್ ಸ್ಥಳೀಯ ಕಚೇರಿ: ಸೆ.13 ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತಿ ಆಚರಣೆ; ಶನೀಶ್ವರ ಮಹಾಪೂಜೆ.

Mumbai News Desk

ಮೈಸೂರು ಅಸೋಸಿಯೇಷನ್, ಮುಂಬೈ ನ.25 ರಂದು ಕನಕ ಜಯಂತಿ ಆಚರಣೆ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಥಾಣೆ : ಅ. 8ಕ್ಕೆ ಶ್ರೀ ದುರ್ಗಾ ಹೋಮ, ಶ್ರೀ ದೇವಿ ದರ್ಶನ

Mumbai News Desk

ಗೋರೆವಾಂವ್ ಪೂರ್ವದ  ಶ್ರೀ ಸದ್ಗುರುನಿತ್ಯಾನಂದ ಆಶ್ರಮ. ಜು10ರಂದು  ಗುರು ಪೂರ್ಣಿಮೆ.

Mumbai News Desk

ಮಾ. 24: ಮಹಿಳಾ ದಿನಾಚರಣೆ ಅಂಗವಾಗಿ ಸ್ಟೇಫೈನ್ (Stay Fine) ಸೂಪರ್‌ಮಾರ್ಟ್‌ನಿಂದ ‘ನಾರಿ ಶಕ್ತಿ’ ಸನ್ಮಾನ ಮತ್ತು ಹಳದಿ-ಕುಂಕುಮ ಸಮಾರಂಭ, ಮಹಿಳೆಯರಿಗೆ ಆಕರ್ಷಕ ಉಡುಗೊರೆ

Mumbai News Desk

ಸೆ. 27, ಭಾಯಂದರ್ ಪೂರ್ವ: ಮೂಕಾಂಬಿಕಾ ಶಾಂತ ದುರ್ಗಾ ದೇವಿಯ ಶರನ್ನವರಾತ್ರಿ ಮಹಾಪೂಜೆ

Mumbai News Desk