27.4 C
Mumbai
March 20, 2026
Mumbai News Kannada
ಮುಂಬಯಿ

ಸೇವಾ ಪಥದಲ್ಲಿ ಮೂರು ದಶಕ: ಭಾರತ್ ಬ್ಯಾಂಕ್ ಬಾಂದ್ರಾ ಪೂರ್ವ ಶಾಖೆಯ 30ನೇ ವಾರ್ಷಿಕೋತ್ಸವ ಸಂಭ್ರಮ





ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬೈ) ಲಿಮಿಟೆಡ್‌ನ ಬಾಂದ್ರಾ (ಪೂರ್ವ) ಶಾಖೆಯು ಬುಧವಾರ, ಮಾರ್ಚ್ 18, 2026 ರಂದು ತನ್ನ 30ನೇ ವಾರ್ಷಿಕೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಿತು.
​ವಾರ್ಷಿಕೋತ್ಸವದ ಅಂಗವಾಗಿ ಬ್ಯಾಂಕಿನಲ್ಲಿ ಗಣ ಹೋಮ ಮತ್ತು ಗುರು ಪೂಜೆಯನ್ನು ಪುರೋಹಿತರಾದ ಶೇಖರ್ ಶಾಂತಿ ಶಾಸ್ತ್ರೋಕ್ತವಾಗಿ ನೆರವೇರಿಸಿದರು.
ಬಳಿಕ ಬ್ಯಾಂಕಿನ ನಿರ್ದೇಶಕರು, ಸಿಬ್ಬಂದಿಗಳು ಹಾಗೂ ಬಿಡಿಡಿ ಏಜೆಂಟ್‌ರ ಸಮ್ಮುಖದಲ್ಲಿ ಗೌರವಾನ್ವಿತ ಗ್ರಾಹಕರು ಸಾಂಪ್ರದಾಯಿಕ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬ್ಯಾಂಕಿನ ಉಪಕಾರ್ಯದ್ಯಕ್ಷರಾದ ಅಡ್ವೋಕೇಟ್ ಸೋಮನಾಥ್ ಅಮೀನ್ ಅವರು ಆಗಮಿಸಿದ ಅತಿಥಿಗಳಿಗೆ ಪುಷ್ಪಗುಚ್ಛ ನೀಡಿ ಗೌರವಿಸಿದರು.
​ಈ ಸಂದರ್ಭದಲ್ಲಿ ಕೆಲವು ಪ್ರಮುಖ ಗ್ರಾಹಕರು ಬ್ಯಾಂಕಿನೊಂದಿಗಿನ ತಮ್ಮ ಸುದೀರ್ಘ ಸಂಬಂಧದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಜಯ ಪೂಜಾರಿ ಅವರು ಮಾತನಾಡಿ, ಈ ಭಾಗವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಹೊಸ ಗ್ರಾಹಕರನ್ನು ಸೆಳೆಯಲು ಉತ್ತಮ ಅವಕಾಶಗಳಿವೆ ಎಂದು ತಿಳಿಸಿ ಸಿಬ್ಬಂದಿಗಳಿಗೆ ಪ್ರೋತ್ಸಾಹ ನೀಡಿದರು.
ನರೇಶ್ ರೋಡ್ ಲೈನ್ಸ್‌ನ ನರೇಶ್ ವ್ಯಾಸ್ ಅವರು ಕೋವಿಡ್ ಸಮಯದಲ್ಲಿ ತೀವ್ರ ಆರೋಗ್ಯ ಸಮಸ್ಯೆ ಹಾಗೂ ವ್ಯವಹಾರದಲ್ಲಿ ಸಂಕಷ್ಟ ಎದುರಿಸುತ್ತಿದ್ದಾಗ ಭಾರತ್ ಬ್ಯಾಂಕ್ ನೀಡಿದ ಬೆಂಬಲವನ್ನು ಸ್ಮರಿಸಿದರು. ಇತರ ಯಾವುದೇ ಬ್ಯಾಂಕ್ ನೀಡದಂತಹ ಸಹಕಾರವನ್ನು ನೀಡಿ ನನ್ನ ವ್ಯವಹಾರ ಮತ್ತೆ ಚೇತರಿಸಿಕೊಳ್ಳಲು ಈ ಬ್ಯಾಂಕ್ ಕಾರಣವಾಗಿದೆ ಎಂದು ಅವರು ಭಾವುಕರಾಗಿ ನುಡಿದರು.


​ಕಳೆದ 20 ವರ್ಷಗಳಿಂದ ಬ್ಯಾಂಕಿನೊಂದಿಗೆ ಒಡನಾಟ ಹೊಂದಿರುವ ಪ್ರೊ| ಕ್ಯಾಲಿಬರ್ ಇಂಡಿಯಾದ ಮಕರಂದ್ ಬಪರ್ದೇಕರ್ ಅವರು, ತಮ್ಮ ಮನೆ, ಬೈಕ್ ಮತ್ತು ಕಾರು ಸಾಲಗಳೂ ಸೇರಿದಂತೆ ಎಲ್ಲಾ ಆರ್ಥಿಕ ವ್ಯವಹಾರಗಳಿಗೆ ಭಾರತ್ ಬ್ಯಾಂಕನ್ನೇ ಅವಲಂಬಿಸಿರುವುದಾಗಿ ತಿಳಿಸಿದರು. ಅದೇ ರೀತಿ ಕಲ್ಪನಾ ಸರ್ಮಳ್ಕರ್ ಅವರು ಮಾತನಾಡಿ, ಬ್ಯಾಂಕಿನ ಸಿಬ್ಬಂದಿಗಳು ಅತ್ಯಂತ ಸ್ನೇಹಪರ ಮತ್ತು ಸಹಾಯ ಮನೋಭಾವದವರಾಗಿದ್ದಾರೆ. ಇತರ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದರೂ ಸಹ ಭಾರತ್ ಬ್ಯಾಂಕ್‌ನಲ್ಲಿ ಸಿಗುವ ಉತ್ತಮ ಸೇವೆಯ ಕಾರಣದಿಂದ ತಾವು ಇಲ್ಲೇ ಎಲ್ಲಾ ವ್ಯವಹಾರಗಳನ್ನು ಮುಂದುವರಿಸುತ್ತಿರುವುದಾಗಿ ಹೇಳಿದರು.
​ನಂತರ ಬ್ಯಾಂಕಿನ ಉಪಕಾರ್ಯಧ್ಯಕ್ಷ ಅಡ್ವೋಕೇಟ್ ಸೋಮನಾಥ್ ಬಾಬು ಅಮೀನ್ ಅವರು ಬ್ಯಾಂಕಿನ ಬೆಳವಣಿಗೆ, ಮುಂದಿನ ಯೋಜನೆ ಹಾಗೂ ದೂರದೃಷ್ಟಿಯ ಬಗ್ಗೆ ಮಾಹಿತಿ ನೀಡಿದರು.
​ಬ್ಯಾಂಕಿನ ಜನರಲ್ ಮ್ಯಾನೇಜರ್ ಮಹೇಶ್ ಬಿ. ಕೋಟ್ಯಾನ್ ಅವರು ಬ್ಯಾಂಕಿನ ಪ್ರಯಾಣದ ಬಗ್ಗೆ ಮಾಹಿತಿ ನೀಡುತ್ತಾ, ಇತರ ಸಮಕಾಲೀನ ಬ್ಯಾಂಕುಗಳಿಗೆ ಹೋಲಿಸಿದರೆ ಭಾರತ್ ಬ್ಯಾಂಕ್ ಅತ್ಯಂತ ಕಿರಿಯ ನಗರ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿದ್ದರೂ, ಸ್ಥಾಪನೆಯಾದ ದಿನದಿಂದಲೂ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಗತಿಯನ್ನು ಸಾಧಿಸಿದೆ ಎಂದು ಅವರು ತಿಳಿಸಿದರು. ಹಾಗೆಯೇ ಬ್ಯಾಂಕಿಗೆ ತಮ್ಮ ಬೆಂಬಲವನ್ನು ಮುಂದುವರಿಸಬೇಕೆಂದು ಅವರು ಗ್ರಾಹಕರಲ್ಲಿ ಮನವಿ ಮಾಡಿದರು.
ಶಾಖಾ ವ್ಯವಸ್ಥಾಪಕರಾದ ದೀಪಕ್ ಎಂ. ಪ್ರಭು ಅವರ ವಂದನಾರ್ಪಣೆ ನೀಡುತ್ತಾ ” ಭಾರತ್ ಬ್ಯಾಂಕ್ ಅನ್ನು ತಮ್ಮ ಹಣಕಾಸಿನ ಪಾಲುದಾರರನ್ನಾಗಿ ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಮತ್ತು ಬ್ಯಾಂಕಿನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಅವರು ಎಲ್ಲಾ ಗ್ರಾಹಕರಿಗೆ ತಮ್ಮ ಹೃತ್ಪೂರ್ವಕ ಕೃತಜ್ಞತೆಗಳು.ಬ್ಯಾಂಕ್ ತನ್ನ ಗ್ರಾಹಕರಿಗೆ ಉತ್ತಮ ಹಣಕಾಸು ಪರಿಹಾರಗಳು, ವೈಯಕ್ತಿಕ ಸೇವೆ ಮತ್ತು ಅವರ ಅಗತ್ಯಗಳನ್ನು ಪೂರೈಸಲು ನವೀನ ಆಲೋಚನೆಗಳನ್ನು ಒದಗಿಸಲು ಬದ್ಧವಾಗಿರುತ್ತದೆ ಎಂದು ಅವರು ಭರವಸೆ ನೀಡಿದರು.
ಅವರು ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ, ಉಪಕಾರ್ಯಧ್ಯಕ್ಷರಾದ ಅಡ್ವೊಕೇಟ್ ಸೋಮನಾಥ್ ಅಮೀನ್ ಮತ್ತು ಆಡಳಿತ ಮಂಡಳಿಯ ಇತರ ಸದಸ್ಯರಿಗೆ ಅವರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಈ ಮೈಲಿಗಲ್ಲನ್ನು ಸಾಧಿಸಲು ಶ್ರಮಿಸಿದ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ ಬ್ಯಾಂಕಿನ ಸಿಬ್ಬಂದಿ ವರ್ಗಕ್ಕೂ ಅವರು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ದೇವೇಂದ್ರ ಬಂಗೇರ ( ಉಜಾಲ ರೆಸ್ಟೋರೆಂಟ್ ಮತ್ತು ಬಾರ್ ) ಜಯ ಪೂಜಾರಿ ( ಗ್ರಾಹಕರು ಮತ್ತು ಹಿತೈಷಿಗಳು ), ಉಮೇಶ್ ಕಾಪು (ಟ್ವಿಶ ಟೆಕ್ನಾಲಜಿಲಿಸ್ ), ಮಕರಂದ್ ಬಪರ್ದೇಕರ್ (ಕ್ಯಾಲಿಬರ್ ಇಂಡಿಯಾ ) ವಸಂತ ಪೂಜಾರಿ ( ಅಂಬಿಕಾ ಟ್ರಾನ್ಸ್ಪೋರ್ಟ್ ಸರ್ವಿಸಸ್ ),
ಗೌತಮ್ ಡೋಂಗ್ರೆ (ವಕೀಲರು, ಉಚ್ಚ ನ್ಯಾಯಾಲಯ )
ರಾಧಾಕೃಷ್ಣನ್ ಅಂಚನ್ (ಗ್ರಾಹಕರು ಮತ್ತು ಹಿತೈಷಿಗಳು )
ಪ್ರದೀಪ್ ಸರ್ಮಲ್ಕರ್ (ಗ್ರಾಹಕರು ಮತ್ತು ಹಿತೈಷಿಗಳು )
ಕಲ್ಪನಾ ಸರ್ಮಲ್ಕರ್ (ಗ್ರಾಹಕರು ಮತ್ತು ಹಿತೈಷಿಗಳು )
ನರೇಶ್ ವ್ಯಾಸ್ (ನರೇಶ್ ರೋಡ್‌ಲೈನ್ಸ್ ) ಪ್ರಭಾಕರ್ ಶೆಟ್ಟಿ(ಗ್ರಾಹಕರು ಮತ್ತು ಹಿತೈಷಿಗಳು ),ರಾಜಲಕ್ಷ್ಮಿ ರಾಧಾಕೃಷ್ಣನ್ (ಗ್ರಾಹಕರು ಮತ್ತು ಹಿತೈಷಿಗಳು ),ಕುಟುಬ್ ಶೇಖ್ (ಬಾವಾ ವೈನ್ಸ್ ಪರವಾಗಿ )
ಬ್ಯಾಂಕ್ ನ ಉಪಕಾರ್ಯ್ಯಾಧ್ಯಕ್ಷ ಅಡ್ವೊಕೇಟ್ ಸೋಮನಾಥ್ ಅಮೀನ್, ನಿರ್ದೇಶಕರುಗಳಾದ ಚಂದ್ರಶೇಖರ್ ಎಸ್ ಪೂಜಾರಿ,
ಅಶೋಕ್ ಎಂ ಕೋಟ್ಯಾನ್, ಮೋಹನ್‌ದಾಸ್ ಗಿರಿಯ ಪೂಜಾರಿ, ಜಯಲಕ್ಷ್ಮಿ ಪಿ ಸಾಲ್ಯಾನ್ ಉಪಸ್ಥಿತರಿದ್ದರು.
ಬಾಂದ್ರ ಪೂರ್ವ ಶಾಖೆಯ ಸಹಾಯಕ ವ್ಯವಸ್ಥಾಪಕ ವಿದ್ಯಾ ರಾಜ್ ಸನಿಲ್, ಸಿಬ್ಬಂದಿಗಳಾದ ವಿಜಿತ್ ಕುಮಾರ್ ಕೋಟ್ಯಾನ್, ಕೌಶಲ್ ಅಂಚನ್, ನಮೃತ ಸಾಲಿಯನ್, ರಾಜೇಶ್ ಶಿಂದೆ, ಶ್ವಾತ ಪೂಜಾರಿ, ಮಯೂರಿ ಅಂಬ್ರೆ, ಸಂತೋಷ್ ಪೂಜಾರಿ, ಇಶಾ ಭಂಡಾರಿ , ಅಭಿಷೇಕ್ ಪೂಜಾರಿ, ನಿತಿನ್, ಬಿಡಿಡಿ ಎಜೇಂಟ್ ಹರೀಶ್ ಬಿ ಕೋಟ್ಯಾನ್ ಸಹಕರಿಸಿದರು.

ಬಾಂದ್ರ ಪೂರ್ವ ಶಾಖೆಯ 30 ವರ್ಷಗಳ ಸೇವೆಯ ನೆನಪಿಗಾಗಿ ಆಯೋಜಿಸಲಾದ ಈ ಕಾರ್ಯಕ್ರಮವು ಅತ್ಯಂತ ಸಕಾರಾತ್ಮಕ ಮತ್ತು ಸಂಭ್ರಮದ ವಾತಾವರಣದಲ್ಲಿ ಮುಕ್ತಾಯವಾಯಿತು. ಈ ಕಾರ್ಯಕ್ರಮವು ಬ್ಯಾಂಕಿನ ಬಲವಾದ ಗ್ರಾಹಕ ಸಂಬಂಧಗಳು, ತಂಡದ ಸಮರ್ಪಣೆ ಮತ್ತು ಶ್ರೇಷ್ಠತೆಯ ಕಡೆಗೆ ಬ್ಯಾಂಕಿನ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸಿತು.

ಮಾರ್ಚ್ 1996 ರಲ್ಲಿ ಕಲಾ ನಗರದ ಶ್ರದ್ಧಾ ಸಂಗೀತ ವಿದ್ಯಾಲಯದಲ್ಲಿ ತನ್ನ ವ್ಯವಹಾರವನ್ನು ಆರಂಭಿಸಿದ್ದ ಈ ಶಾಖೆಯು, ನಂತರ 2016 ರಲ್ಲಿ ಗುರುನಾನಕ್ ಆಸ್ಪತ್ರೆಯ ಎದುರಿಗಿನ ಸಿಂಧೂರತ್ನ ಸಿಎಚ್‌ಎಸ್‌ಎಲ್‌ಗೆ ಸ್ಥಳಾಂತರಗೊಂಡಿತ್ತು. ಕಳೆದ ಮೂರು ದಶಕಗಳಲ್ಲಿ ಅನೇಕ ಸವಾಲು ಮತ್ತು ಮೈಲಿಗಲ್ಲುಗಳನ್ನು ದಾಟಿ ಬಂದಿರುವ ಈ ಶಾಖೆಯು, ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡು ಉನ್ನತ ಗುಣಮಟ್ಟದ ಸೇವೆಯನ್ನು ನೀಡುತ್ತಾ ಬಂದಿದೆ.



Related posts

ಕರ್ನಾಟಕ ಮಹಾಮಂಡಲ ಮೀರಾ-ಭಾಯಂದರ್ – ಜಾಗತಿಕ ಮಹಿಳಾ ದಿನಾಚರಣೆ, ಅರಸಿನ ಕುಂಕುಮ ಕಾರ್ಯಕ್ರಮ

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗ ದಿಂದ ಲಲಿತ ಶಾಸ್ತ್ರ ನಾಮಾವಳಿ ಮತ್ತು ಭಜನೆ.

Mumbai News Desk

ನವೋದಯ ಕನ್ನಡ ಸೇವಾ ಸಂಘ (ರಿ), ಥಾಣೆ ಇದರ ಆಯೋಜನೆಯಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡ ಭಜನಾ ಮಂಗಳೋತ್ಸವ

Mumbai News Desk

ವರ್ಲಿ  ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ನಲ್ಲಿ ಭಕ್ತಿ ಸಂಭ್ರಮದ ಮಹಾ ಶಿವರಾತ್ರಿ ಆಚರಣೆ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಶಾಖೆಯ ಕಾರ್ಯಕಾರಿ ಸಮಿತಿಯ ಸ್ನೇಹ ಸಮ್ಮಿಲನ

Mumbai News Desk

ಕರ್ನಾಟಕ ಸಂಘ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ

Mumbai News Desk