October 12, 2026
Mumbai News Kannada
ಪ್ರಕಟಣೆ

ಮಾ. 23: ಕಾಂದಿವಲಿ ಕನ್ನಡ ಸಂಘದ ಮಹಿಳಾ ವಿಭಾಗದ ವತಿಯಿಂದ ಅರಶಿನ ಕುಂಕುಮ ಕಾರ್ಯಕ್ರಮ



​ಮುಂಬಯಿ: ಕಾಂದಿವಲಿ ಕನ್ನಡ ಸಂಘದ ಮಹಿಳಾ ವಿಭಾಗದ ವತಿಯಿಂದ ಅರಶಿನ ಕುಂಕುಮ ಕಾರ್ಯಕ್ರಮವು ಮಾ. 22 ರವಿವಾರದಂದು ಮಧ್ಯಾಹ್ನ 3 ಗಂಟೆಯಿಂದ ಪೊಯಿಸರ್ ಜಿಮ್ಖಾನ, ಮಹಾವೀರ ನಗರ, ಕಾಂದಿವಲಿ ಪಶ್ಚಿಮ ಇಲ್ಲಿ ಆಯೋಜಿಸಲಾಗಿದೆ.

​ಸಂಘದ ಅಧ್ಯಕ್ಷರಾದ ಪೊಲ್ಯ ಜಯಪಾಲ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಡಿ. ಶೆಟ್ಟಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

​ಮುಖ್ಯ ಅತಿಥಿಯಾಗಿ ಗೊರೆಗಾಂವ್ ಕರ್ನಾಟಕ ಸಂಘದ ಉಪಾಧ್ಯಕ್ಷೆ ಸರಿತಾ ಎಸ್. ನಾಯಕ್ ಪಾಲ್ಗೊಳ್ಳಲಿದ್ದಾರೆ. ಮಹಿಳಾ ವಿಭಾಗದ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಗೀತ ಕಲಾವಿದ ವಿಜಯ ಶೆಟ್ಟಿ ಮೂಡುಬೆಳ್ಳೆ ಮತ್ತು ತಂಡದವರಿಂದ ‘ರಸಮಂಜರಿ’ ಕಾರ್ಯಕ್ರಮ ನಡೆಯಲಿದೆ.

​ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಪರಿಸರದ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘದ ಗೌರವಾಧ್ಯಕ್ಷ ಪಳ್ಳಿ ಕಾವೇರಿಬೆಟ್ಟು ಜಯಕರ್ ಶೆಟ್ಟಿ, ಉಪಾಧ್ಯಕ್ಷರಾದ ಪ್ರೇಮನಾಥ್ ಪಿ. ಕೋಟ್ಯಾನ್, ವಾರಿಜಾ ಕರ್ಕೆರ, ಗೌರವ ಪ್ರಧಾನ ಕಾರ್ಯದರ್ಶಿ ಸಬಿತಾ ಜಿ. ಪೂಜಾರಿ, ಗೌರವ ಕೋಶಾಧಿಕಾರಿ ಜಗನ್ನಾಥ ಡಿ. ಕುಕ್ಯಾನ್, ಜೊತೆ ಕಾರ್ಯದರ್ಶಿ ಚೇತನ ಶೆಟ್ಟಿ, ಜೊತೆ ಕೋಶಾಧಿಕಾರಿ ಜಯಂತಿ ಸಾಲ್ಯಾನ್, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶರ್ಮಿಳಾ ಶೆಟ್ಟಿ, ಕಾರ್ಯದರ್ಶಿ ಜಯಲಕ್ಷ್ಮಿ ಶೆಟ್ಟಿ, ಕೋಶಾಧಿಕಾರಿ ಆಶಾ ಮೊಗವೀರ ಹಾಗೂ ಮಹಿಳಾ ವಿಭಾಗದ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.



Related posts

ಮಾ. 28 : ದಿ ಮೊಗವೀರ ಕೋ-ಅಪರೇಟಿವ್ ಬ್ಯಾಂಕ್ ಎಂಪ್ಲಾಯೀಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಪೂಜಾ ಸಮಿತಿಯಿಂದ 44ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ – ಡಿ. 1ರಂದು ವಾರ್ಷಿಕ ಕ್ರೀಡಾಕೂಟ.

Mumbai News Desk

ಡೊಂಬಿವಿಲಿಯಲ್ಲಿನ ವರದ ಸಿದ್ಧಿವಿನಾಯಕ ಮಂದಿರದಲ್ಲಿ  ಫೆ.01 ರಂದು ಮಾಘಿ ಗಣೇಶೋತ್ಸವ ಮತ್ತು ಯಕ್ಷಗಾನ ಪ್ರದರ್ಶನ

Mumbai News Desk

ಬಂಟರ ಸಂಘ ಮುಂಬಯಿ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ, ಮಾ. 8ಕ್ಕೆ , ಸಮಾಜ ಕಲ್ಯಾಣ ಸಮಿತಿ ವತಿಯಿಂದ ಆರ್ಥಿಕ ಸಹಾಯದ ಅರ್ಜಿ ವಿತರಣೆ,

Mumbai News Desk

ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್, ಜ. 12 ರಂದು 88 ನೇ ವಾರ್ಷಿಕೋತ್ಸವ,

Mumbai News Desk

ಆಗಸ್ಟ್ 22 ರಂದು ಭಾರತ್ ಬ್ಯಾಂಕಿನ 49ನೇ ವಾರ್ಷಿಕ ಮಹಾಸಭೆ

Mumbai News Desk