September 6, 2026
Mumbai News Kannada
ಪ್ರಕಟಣೆ

ಭಾಯಂದರ್: ಏಪ್ರಿಲ್ 12 ರಂದು ಶ್ರೀ ಮೂಕಾಂಬಿಕಾ ಶಾಂತದುರ್ಗಾ ದೇವಸ್ಥಾನದ ವಾರ್ಷಿಕ ಮಹಾಪೂಜೆ





ಭಯಂದರ್: ಭಾಯಂದರ್ ಪೂರ್ವದ ಎಸ್.ವಿ. ರೋಡ್, ನರೇಶ್ ಸ್ಟೀಲ್ ಸಮೀಪದ ನ್ಯೂ ಕೃಷ್ಣ ಪ್ಯಾಲೇಸ್ ಬಳಿ ಇರುವ ಶ್ರೀ ಮೂಕಾಂಬಿಕಾ ಶಾಂತದುರ್ಗಾ ದೇವಸ್ಥಾನದ ವಾರ್ಷಿಕ ಮಹಾಪೂಜೆಯು ಏಪ್ರಿಲ್ 12ರ ಭಾನುವಾರ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.


​ಸುಂದರಿ ಶೆಟ್ಟಿ ಪರಿವಾರ, ಸಮಿತಿಯ ಸದಸ್ಯರು ಹಾಗೂ ಭಕ್ತಾಭಿಮಾನಿಗಳ ಇಚ್ಛೆಯಂತೆ, ಧರ್ಮ ಸೇವಕ ಶೇಖರ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.


ಕಾರ್ಯಕ್ರಮದ ವಿವರ:



  • ಬೆಳಿಗ್ಗೆ 6:00ಕ್ಕೆ: ವನದುರ್ಗಾ ಹೋಮ.

  • ಬೆಳಿಗ್ಗೆ 9:30ರಿಂದ: ಭಜನಾ ಕಾರ್ಯಕ್ರಮ.

  • ಬೆಳಿಗ್ಗೆ 11:30ಕ್ಕೆ: ಪುಷ್ಪಾಲಂಕಾರ, ಶ್ರೀ ದೇವಿಯ ದರ್ಶನ ಹಾಗೂ ಮಹಾಮಂಗಳಾರತಿ.

  • ಮಧ್ಯಾಹ್ನ 1:00ರಿಂದ: ಮಹಾಪ್ರಸಾದ (ಅನ್ನಸಂತರ್ಪಣೆ).


  • ​”ಈ ಪುಣ್ಯ ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳು ತಮ್ಮ ಬಂಧು-ಮಿತ್ರರೊಂದಿಗೆ ಆಗಮಿಸಿ, ಶ್ರೀ ದೇವಿಯ ದರ್ಶನ ಪಡೆದು ತೀರ್ಥ-ಪ್ರಸಾದ ಸ್ವೀಕರಿಸಿ ಪುನೀತರಾಗಬೇಕು,” ಎಂದು ಶೇಖರ್ ಶೆಟ್ಟಿ ಹಾಗೂ ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿಯ ಸರ್ವ ಸದಸ್ಯರು ವಿನಂತಿಸಿದ್ದಾರೆ.





Related posts

ಎ. 12ರಂದು ವಿದ್ಯಾವಿಹಾರ್ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪಾದುಕಾ ಪ್ರದಾನ, ಪಂಚವಟಿ ತಾಳಮದ್ದಳೆ ಹಾಗೂ ಸಮ್ಮಾನ

Mumbai News Desk

ಬೊಯಿಸರ್ ಸೋಮೇಶ್ವರ ಮಂದಿರ ನಾಳೆ (ಮಾ. 1)17ನೇ ವರ್ಧಂತ್ಯುತ್ಸವ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) : ಸೆ. 5 ರಂದು 25ನೇ ಸಂಸ್ಥಾಪನಾ ದಿನಾಚರಣೆ, ಸಂಘ ಸಂಸ್ಥೆಗಳಿಗೆ ಗೌರವ ಪುರಸ್ಕಾರ

Mumbai News Desk

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ, ಜೋಗೇಶ್ವರಿ ಪೂರ್ವ – ಸೆ. 22ರಿಂದ ಶರನ್ನವರಾತ್ರಿ ಹಾಗೂ ವಿಜಯದಶಮಿ ಮಹೋತ್ಸವ

Mumbai News Desk

ಡಿ. 19ರಂದು ದಹಿಸರ್‌ನಲ್ಲಿ 19ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ

Mumbai News Desk

ಜ. ‌26 ರಂದು” ‘ಮುಲುಂಡ್  ಪಶ್ಚಿಮದಲ್ಲಿ *ಲಗ್ನಾ  ಪಿಶ್ಶ್ಯೆ’  ,ಕೊಂಕಣಿ ನಾಟಕ

Mumbai News Desk