September 6, 2026
Mumbai News Kannada
ಪ್ರಕಟಣೆ

ಮಲಾಡ್: ಶ್ರೀ ದೇವಿ ಮಹಮ್ಮಾಯಿ ದೇವಸ್ಥಾನದಲ್ಲಿ ಇಂದು (ಏಪ್ರಿಲ್ 11) ಧರ್ಮ ದೈವಗಳ ಗಗ್ಗರ ಸೇವೆ (ಕೋಲ)






ಮುಂಬಯಿ: ಮಲಾಡ್ ಪೂರ್ವದ ಕುರಾರ್ ವಿಲೇಜ್, ಕೇತುವಾಡಿಯ ಜಾನ್ ಕಂಪೌಂಡ್‌ನಲ್ಲಿ ನೆಲೆಸಿರುವ ಶ್ರೀ ದೇವಿ ಮಹಮ್ಮಾಯಿ ದೇವಸ್ಥಾನದಲ್ಲಿ ಆರಾಧಿಸಿಕೊಂಡು ಬರಲಾಗುತ್ತಿರುವ ಸತ್ಯದೇವತೆ, ಕಲ್ಕುಡ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ಗಗ್ಗರ ಸೇವೆ (ಕೋಲ) ಏಪ್ರಿಲ್ 11ರ ಶನಿವಾರದಂದು ಅದ್ದೂರಿಯಾಗಿ ನಡೆಯಲಿದೆ.


ಕಾರ್ಯಕ್ರಮಗಳ ವಿವರ:


ದಿನದ ಧಾರ್ಮಿಕ ವಿಧಿವಿಧಾನಗಳು ಮಧ್ಯಾಹ್ನ 12:00 ಗಂಟೆಗೆ ಚಪ್ಪರ ಮುಹೂರ್ತದೊಂದಿಗೆ ಆರಂಭವಾಗಲಿವೆ. ತದನಂತರ 12:30ಕ್ಕೆ ದೈವಗಳ ಬಂಡಾರ ಇಳಿಸುವಿಕೆ ನಡೆಯಲಿದೆ. ಸಂಜೆ 5:00 ಗಂಟೆಯಿಂದ ಸತ್ಯದೇವತೆ, ಕಲ್ಕುಡ, ಕಲ್ಲುರ್ಟಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ಜರುಗಲಿದ್ದು, ರಾತ್ರಿ 8:00 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.


​ದೇವಸ್ಥಾನದ ಧರ್ಮದರ್ಶಿಗಳಾದ ರವಿ ಸ್ವಾಮೀಜಿ ಹಾಗೂ ಶ್ರೀ ದೇವಿ ಮಹಮ್ಮಾಯಿ ಸೇವಾ ಸಮಿತಿಯ ಗೌರವಾನ್ವಿತ ಅಧ್ಯಕ್ಷರಾದ ಸಂತೋಷ್ ಕೆ. ಪೂಜಾರಿ, ಅಧ್ಯಕ್ಷರಾದ ಲಾಲ್ ಮನ್ ಯಾದವ್, ಕಾರ್ಯದರ್ಶಿ ಉದಯ ಬಿ. ಸಾಲ್ಯಾನ್, ಕೋಶಾಧಿಕಾರಿ ಹರಿಶ್ಚಂದ್ರ ಆಚಾರ್ಯ, ಸಲಹೆಗಾರರಾದ ಸುರೇಂದ್ರ ಶೆಟ್ಟಿ ಹೊಸ್ಮರು, ಸುಧೀರ್ ಪುತ್ರನ್ ಮತ್ತು ಸಮಿತಿಯ ಸರ್ವ ಸದಸ್ಯರು ಈ ಪುಣ್ಯ ಕಾರ್ಯದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಾಯಿ ಮಹಮ್ಮಾಯಿ ಹಾಗೂ ಧರ್ಮ ದೈವಗಳ ಗಂಧ ಪ್ರಸಾದ ಮತ್ತು ಮಹಾಪ್ರಸಾದವನ್ನು ಸ್ವೀಕರಿಸಬೇಕಾಗಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




Related posts

ಎ. 5 : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿವತಿಯಿಂದ ಹಸಿರುವಾಣಿ ಹೊರೆಕಾಣಿಕೆ ಪೂರ್ವಭಾವಿ ಸಮಾಲೋಚನಾ ಸಭೆ

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ, ಉಡುಪಿ : ಜುಲೈ 21ಕ್ಕೆ ಗುರುಪೂರ್ಣಿಮ ಮಹೋತ್ಸವ.

Mumbai News Desk

ಶ್ರೀ ದುರ್ಗಾ ಭಜನಾ ಸೇವಾ ಮಂಡಳ, ಜ.21ಕ್ಕೆ 17ನೇ ವಾರ್ಷಿಕ ಮಹಾಪೂಜೆ.

Mumbai News Desk

ಕುಲಾಲ ಸಂಘ ಮುಂಬಯಿ, ಮಾ.8ಕ್ಕೆ ಕುಲಾಲ ಭವನ ಮಂಗಳೂರು, ಇದರ ಬ್ಯಾಂಕ್ವೆಟ್ ಹಾಲ್ ಗೆ ಮುಹೂರ್ತ.

Mumbai News Desk

ಮೆಹತಾ ಕಾಲೇಜ್ ಐರೋಲಿ: ಜೂನ್ 27 ರಂದು ಬೆಳ್ಳಿ ಹಬ್ಬದ ನಿಮಿತ್ತ ವಿಶೇಷ ಕಾರ್ಯಕ್ರಮ: ಪರಂಪರೆಯಿಂದ ಪ್ರಗತಿಗೆ ಸಂವಾದ, ಸಾಧಕರಿಗೆ ಗೌರವಾರ್ಪಣೆ

Mumbai News Desk

ಕುಲಾಲ ಸಂಘ ಮುಂಬಯಿಯ ಕೇಂದ್ರ ಕಾರ್ಯಾಲಯದಲ್ಲಿ  ಗುರು ಪೂರ್ಣಿಮೆ ಆಚರಣೆ.

Mumbai News Desk