34 C
Mumbai
October 7, 2026
Mumbai News Kannada
ಪ್ರಕಟಣೆ

ಶಾರದಾ ಮಾತೆಯ ಆರಾಧನೆಗೆ ಸಜ್ಜಾದ ರಜಕ ಸಂಘ ವಸಾಯಿ ಘಟಕ



ಮುಂಬಯಿ: ರಜಕ ಸಂಘ (ಮುಂಬಯಿ) ಇದರ ವಸಾಯಿ ಘಟಕದ ಕಾರ್ಯಕಾರಿ ಸಮಿತಿ ಹಾಗೂ ಸರ್ವ ಸದಸ್ಯರ ತನು–ಮನ–ಧನ ಸಹಕಾರದೊಂದಿಗೆ, 15ನೇ ವರ್ಷದ ದಸರಾ ಹಬ್ಬದ ಪ್ರಯುಕ್ತ ಶಾರದಾ ಪೂಜಾ ಕಾರ್ಯಕ್ರಮವನ್ನು ನ. 11, 2026, ಭಾನುವಾರ ಬೆಳಿಗ್ಗೆ 10:30ರಿಂದ ಮಧ್ಯಾಹ್ನ 3:00ರವರೆಗೆ ವಿಜೃಂಭಣೆಯಿಂದ ಆಯೋಜಿಸಲಾಗಿದೆ.

ಈ ಶಾರದಾ ಪೂಜಾ ಕಾರ್ಯಕ್ರಮವು ವಸಾಯಿ ಪೂರ್ವದ ಸಾಯಿಬಾಬಾ ಮಂದಿರ ಸಮೀಪವಿರುವ ನಿಶಾಂತ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯ ಫ್ಲಾಟ್ ನಂ. 01ರಲ್ಲಿರುವ ಸಂಘದ ಕಚೇರಿಯಲ್ಲಿ ನೆರವೇರಲಿದೆ.

ಈ ಪುಣ್ಯ ಕಾರ್ಯಕ್ರಮಕ್ಕೆ ರಜಕ ಸಂಘದ ಸದಸ್ಯ ಬಂಧುಗಳು ಹಾಗೂ ವಸಾಯಿ ಪರಿಸರದ ತುಳು–ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶಾರದಾ ಮಾತೆಯ ದಿವ್ಯ ಕೃಪೆಗೆ ಪಾತ್ರರಾಗಬೇಕಾಗಿ ರಜಕ ಸಂಘ (ಮುಂಬಯಿ) ವಸಾಯಿ ಪ್ರಾದೇಶಿಕ ವಲಯದ ಸರ್ವ ಕಾರ್ಯಕಾರಿ ಸಮಿತಿಯ ಪರವಾಗಿ ಕೋರಲಾಗಿದೆ.

ಶ್ರೀ ರಜಕ ಸಂಘ (ಮುಂಬಯಿ) ವಸಾಯಿ ಪ್ರಾದೇಶಿಕ ವಲಯದ ಸರ್ವ ಕಾರ್ಯಕಾರಿ ಸಮಿತಿಯ ಪರವಾಗಿ ವಸಂತ್ ಬುನ್ನಾನ್, ವಿರಾರ್ ಮೊ.: 9970252064



Related posts

ಮಾ.15 ರಂದು ಮಹಾನಗರ ಕನ್ನಡ ಸಂಸ್ಥೆ ಡೊಂಬಿವಲಿ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆ

Mumbai News Desk

ಕುಮಾರ  ಕ್ಷತ್ರಿಯ ಸಂಘ  ಮುಂಬಯಿ: ಫೆಬ್ರವರಿ 11 : 58 ನೇ ವಾರ್ಷಿಕ ಮಹಾಸಭೆ , ಸತ್ಯನಾರಾಯಣ ಮಹಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ ಪೂರ್ವ : ಡಿ. 20ರಂದು 53ನೇ ವಾರ್ಷಿಕ ಏಕಹಾ ಭಜನಾ ಮಂಗಳೋತ್ಸವ

Mumbai News Desk

ನ.17 ರಂದು ಕರ್ನಾಟಕ ಸಂಘ ಡೊಂಬಿವಲಿ ಕ್ರೀಡಾ ವಿಭಾಗದ ವಾರ್ಷಿಕ ಕ್ರೀಡೋತ್ಸವ ದಂಗಲ್ 2024

Mumbai News Desk

ಸಿರಿಕಲಾ ಮೇಳದ ಪುಣೆ-ಮುಂಬೈ ದಶಮಾನೋತ್ಸವ ತಿರುಗಾಟ

Mumbai News Desk

ಬಿಲ್ಲವರ ಅಸೋಸಿಯೇಷನ್ ಭಾಯಂದರ್ ‌ ಸ್ಥಳೀಯ ಕಚೇರಿ:ಸೆ.13 ರಂದು ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಆಚರಣೆ

Mumbai News Desk