November 20, 2026
Mumbai News Kannada
ಪ್ರಕಟಣೆ

ನ.22 : ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಸಂಯುಕ್ತ ಆಯೋಜನೆಯ ಶ್ರೀ ರಾಮ ಕಥಾ ಹೃದಯಂ‌ ಸರಣಿ ತಾಳಮದ್ದಳೆಯ ಹದಿನೆಂಟನೆಯ ಪ್ರಸ್ತುತಿ.ಹಾಗೂ ಸನ್ಮಾನ ಕಾರ್ಯಕ್ರಮ





















ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರ ಅನುಗ್ರಹ ಹಾಗೂ ಪೂಜ್ಯ ಶ್ರೀ ಹರಿದಾಸ ಭಟ್ ಪೆರ್ಣಂಕಿಲ ಅವರ ಶುಭಾಶೀರ್ವಾದದೊಂದಿಗೆ ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನ , ವಿದ್ಯಾವಿಹಾರ್ ಇದರ ಆಡಳಿತ ಮೊಕ್ತೇಸರ ಶ್ರೀ ಹರಿದಾಸ ಗೋಪಾಲ ಶೆಟ್ಟಿ ಅವರ ಸಂಪೂರ್ಣ ಸಹಕಾರದೊಂದಿಗೆ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಸಂಯುಕ್ತ ಆಯೋಜನೆಯಲ್ಲಿ ಪ್ರಭು ರಾಮಚಂದ್ರ ದೇವರ ಅವತಾರದ ಆರಂಭದಿಂದ ಶ್ರೀ ದೇವರ ನಿರ್ಯಾಣದವರೆಗಿನ ಸಂಪೂರ್ಣ ಶ್ರೀ ರಾಮ ಚರಿತ್ರೆ- *ಶ್ರೀ ರಾಮ ಕಥಾ ಹೃದಯಂ‌’ ಎಂಬ ಪುಣ್ಯಪ್ರದ ಇಪ್ಪತ್ನಾಲ್ಕು ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಸರಣಿ ತಾಳಮದ್ದಳೆ ಕಾರ್ಯಕ್ರಮದ ಹದಿಂನೆಂಟನೆಯ ಪ್ರಸ್ತುತಿಯಾದ ರಾವಣ ವಧೆ ಎಂಬ ಕಥಾಪ್ರಸಂಗವು ದಿನಾಂಕ 22-11 – 2026 ರ ರವಿವಾರದಂದು ಮಧ್ಯಾಹ್ನ 2:ಗಂಟೆಗೆ ಸರಿಯಾಗಿ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ ಗಾಂವ್‌ದೇವಿ ವಿದ್ಯಾ ವಿಹಾರ್ ಇಲ್ಲಿ ಮುಂಬೈಯ ಖ್ಯಾತ ಕಲಾವಿದರ ಸಹಯೋಗದಿಂದ ನಡೆಯಲಿದೆ.
ಈ ಸಂದರ್ಭದಲ್ಲಿ ಶ್ರೀ ದುರ್ಗಾ ಮಕ್ಕಳ ಭಜನಾ ತಂಡ ಅಸಲ್ಪ ಇವರಿಂದ ಶ್ರೀ ರಾಮ. ಸಂಕೀರ್ತನೆ (ಕುಣಿತ ಭಜನೆ )ಜರಗಲಿದೆ.

ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ
ಶ್ರೀ ಅಶೋಕ ವಿ ಶೆಟ್ಟಿ (ಸಹ ಸಂಚಾಲಕರು ಅಕಾಡೆಮಿಕ್ ಬಂಟರ ಸಂಘ ವಿದ್ಯಾ ಸಂಸ್ಥೆ ಶಶಿಕಿರಣ್ ಶೆಟ್ಟಿ ಎಜುಕೇಷನಲ್ ಇನ್ಸ್ಟಿಟ್ಯೂಷನ್ ಬಂಟರ ಸಂಘ ಮುಂಬೈ ),ಶ್ರೀಮತಿ ಶಕುಂತಲಾ ಕೆ ಕೋಟ್ಯಾನ್( ಅಧ್ಯಕ್ಷೆ ಮಹಿಳಾ ವಿಭಾಗ ಬಿಲ್ಲವರ ಅಸೋಸಿಯೇಷನ್ ಮುಂಬೈ )ಇವರು ಆಗಮಿಸಲಿದ್ದಾರೆ.



















ಆ ದಿನ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಪೆರ್ಣಂಕಿಲ ಹರಿದಾಸ ಭಟ್ ಇವರ ಆಶಯದಂತೆ ಮುಂಬೈ ಮಹಾನಗರದ ಪ್ರಸಿದ್ಧ ಯಕ್ಷಗಾನ ಕಲಾವಿದರುಗಳಾದ ಪ್ರಕಾಶ್ ಪಣಿಯೂರು (ಯಕ್ಷಗಾನ ಕಲಾವಿದರು,ವಾಗ್ಮಿ ), ಸತೀಶ್ ಶೆಟ್ಟಿ ಕೊಟ್ರಪಾಡಿ (ಯಕ್ಷಗಾನ ಕಲಾವಿದರು),ರಮೇಶ್ ಸುವರ್ಣ ಕಣಂಜಾರು (ಯಕ್ಷಗಾನ ಭಾಗವತರು ),
ಅನಂತ ಪದ್ಮನಾಭ ನಾಯಕ್ (ಯಕ್ಷಗಾನ ಕಲಾವಿದರು),
ಸುನಿಲ್ ಅಮೀನ್ ( ಯಕ್ಷಗಾನ ಸಂಚಾಲಕರು) ,
ಸಂದೀಪ್ ಸುಂದರ ಬುನ್ನನ್ (ಪ್ರಸಾದನ ಕಲಾವಿದರು),
ಹರೀಶ್ ಗಿರಿಯ ಪೂಜಾರಿ (ಪ್ರಸಾದನ ಕಲಾವಿದರು),
ಗಿರೀಶ್ ಗೌಡ (ಯಕ್ಷಗಾನ ಕಲಾವಿದರು),
ಡಾ|| ಸೌಜನ್ಯ ಬಿಲ್ಲವ(ಯಕ್ಷಗಾನ ಕಲಾವಿದೆ ) ಇವರನ್ನು ಗೌರವಿಸಲಾಗುವುದು.
ಕಲಾಭಿಮಾನಿಗಳು ತಮ್ಮ ಗೌರವದ ಉಪಸ್ಥಿತಿಯೊಂದಿಗೆ ಸಹಕರಿಸಬೇಕಾಗಿ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗದ ಸಂಚಾಲಕರು ಮತ್ತು ಕಲಾವಿದರಾದ ವಾಸು ಮಾರ್ನಾಡ್ ಮತ್ತು ಸುರೇಶ್ ನಂದ್ರೊಳ್ಳಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ



Related posts

ನ 26 : ಕರ್ನಾಟಕ ಸಂಘ ಪನ್ವೆಲ್. ಕರ್ನಾಟಕ ರಾಜ್ಯೋತ್ಸವ ಆಚರಣೆ

Mumbai News Desk

ಜಯ ಸಿ ಸುವರ್ಣ ಅಭಿಮಾನಿಗಳು ಮತ್ತು ಮುಂಬೈ ಬಿಲ್ಲವರು : ಸೆ. 27ರಂದು, ಕಾಂದಿವಲಿಯಲ್ಲಿ ಶನೀಶ್ವರ ಸಂಪೂರ್ಣ ಗ್ರಂಥ ಪಾರಾಯಣ, ಬ್ರಹ್ಮಶ್ರೀ ನಾರಾಯಣ ಗುರು ಪೂಜೆ

Mumbai News Desk

ಜ 3 . ಕರ್ನಿರೆ  ಶ್ರೀ ವಿಷ್ಣುಮೂರ್ತಿ ದೇವರ ಬ್ರಹ್ಮಕಲಶೋತ್ಸವವು ಸಮಾಲೋಚನಾ ಸಭೆ.

Mumbai News Desk

ಮುಲ್ಕಿ: ಉಚಿತ ಆರೋಗ್ಯ ತಪಾಸಣಾ ಶಿಬಿರ: ಸಾರ್ವಜನಿಕರಿಗೆ ಸೇವೆಯ ಸದುಪಯೋಗ ಪಡೆದುಕೊಳ್ಳಲು ಕರೆ

Mumbai News Desk

ಡೊಂಬಿವಲಿ: ಫೆ. 28ರಂದು ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ ಮತ್ತು ಭಜನಾ ಸ್ಪರ್ಧೆ

Mumbai News Desk

ಜ. 24 ಮತ್ತು 25 ; ಗೋರೆಗಾಂವ್ (ಪೂರ್ವ)ದ ಸಹಕಾರವಾಡಿ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ 61ನೇ ವಾರ್ಷಿಕ ಮಹೋತ್ಸವ ಹಾಗೂ ಗುರುಮೂರ್ತಿ ಅಭಿಷೇಕ

Mumbai News Desk