ಮುಂಬೈ: ಮುಂಬೈಯ ಖ್ಯಾತ ಶನಿಗ್ರಂಥ ವಾಚಕ ಹಾಗೂ ಭಾಗವತರಾದ ಶ್ರೀ ಜಗದೀಶ್ ನಿಟ್ಟೆ ಅವರ ತಾಯಿ, ಮೂಲತಃ ಕಾರ್ಕಳ ತಾಲೂಕಿನ ನಿಟ್ಟೆಯ ನಿವಾಸಿ ಶ್ರೀಮತಿ ಕುಸುಮಾ ಪೂಜಾರಿ (75) ಅವರು ವಯೋಸಹಜ ಅಸೌಖ್ಯದಿಂದ ಇಂದು ನಲ್ಲಸೋಪಾರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.
ಮೃತರು ಮೂವರು ಪುತ್ರರು, ನಾಲ್ವರು ಪುತ್ರಿಯರು ಸೇರಿದಂತೆ ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಿರುವ ಜಗದೀಶ್ ನಿಟ್ಟೆ ಅವರ ಕುಟುಂಬದ ಹಿರಿಯ ಜೀವದ ಅಗಲಿಕೆಗೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ರಂಗಕರ್ಮಿಗಳು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥನೆ.



