November 13, 2026
Mumbai News Kannada
ಕರಾವಳಿ

ಮಲ್ಪೆ ಬೀಚ್‌ನಲ್ಲಿ ದೀಪಾವಳಿ ಪಾಡ್ಯದ ಸಂಭ್ರಮ: ಪ್ರವಾಸಿಗರ ಮಹಾಪೂರ24ನೇ ವರ್ಷದ ಮನರಂಜನಾ ಕಾರ್ಯಕ್ರಮಕ್ಕೆ ನಾಡೋಜ ಡಾ. ಜಿ. ಶಂಕರ್ ಚಾಲನೆ





















ಜಯ ಸಿ. ಪೂಜಾರಿ, ಕೆಳಾರ್ಕಳ ಬೆಟ್ಟು

ಉಡುಪಿ: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿರುವ ಮಲ್ಪೆ ಬೀಚ್‌ನಲ್ಲಿ ದೀಪಾವಳಿ ಪಾಡ್ಯದಂದು ಪ್ರವಾಸಿಗರ ಮಹಾಪೂರವೇ ಹರಿದುಬರುತ್ತದೆ. ದೇಶದ ವಿವಿಧ ಭಾಗಗಳಿಂದ ಆಗಮಿಸುವ ಪ್ರವಾಸಿಗರು ಸಮುದ್ರದ ಅಲೆಗಳಲ್ಲಿ ಆಟವಾಡುತ್ತಾ, ನೀರಿನಲ್ಲಿ ಮಿಂದು, ಕುಣಿದು ಕುಪ್ಪಳಿಸುತ್ತಾ, ಮೊಬೈಲ್ ಸೆಲ್ಫಿಗಳ ಮೂಲಕ ಸಂಭ್ರಮದ ಕ್ಷಣಗಳನ್ನು ಸೆರೆಹಿಡಿಯುವ ದೃಶ್ಯಗಳು ಎಲ್ಲೆಡೆ ಕಂಡುಬರುತ್ತವೆ. ಅಂದು ಮಲ್ಪೆ ಬೀಚ್ ಜನಜಂಗುಳಿಯಿಂದ ಕಂಗೊಳಿಸುತ್ತದೆ.



















ನ. 10, 2026ರ ಮಂಗಳವಾರದಂದು ಮಲ್ಪೆ ಬೀಚ್ ಫ್ರೆಂಡ್ಸ್ ವತಿಯಿಂದ 24ನೇ ವರ್ಷದ ದೀಪಾವಳಿ ಪಾಡ್ಯ ಪ್ರಯುಕ್ತ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್ ಉದ್ಘಾಟಿಸಿ ಮಾತನಾಡಿ, ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬದುಕಿನಲ್ಲಿ ಸಂತೋಷ ಮತ್ತು ಬೆಳಕನ್ನು ಹರಿಸಲಿ. ಮಲ್ಪೆ ಬೀಚ್ ಫ್ರೆಂಡ್ಸ್ ವತಿಯಿಂದ ಕಳೆದ 24 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ದೀಪಾವಳಿ ಸಂಭ್ರಮ ಮುಂದಿನ ರಜತ ಮಹೋತ್ಸವದ ಸಂದರ್ಭದಲ್ಲಿ ಭಜನ ಮಂದಿರಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಅದ್ದೂರಿಯಾಗಿ ನಡೆಯುವಂತಾಗಲಿ ಎಂದು ಹಾರೈಸಿದರು.







































































































ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಮಲ್ಪೆ ಬೀಚ್ ಫ್ರೆಂಡ್ಸ್ ಕಳೆದ 24 ವರ್ಷಗಳಿಂದ ಸಾರ್ವಜನಿಕವಾಗಿ ದೀಪಾವಳಿ ಆಚರಿಸುವ ಮೂಲಕ ಒಗ್ಗಟ್ಟಿನ ಸಂದೇಶವನ್ನು ಸಾರುತ್ತಿದೆ. 25ನೇ ವರ್ಷದ ರಜತ ಮಹೋತ್ಸವವನ್ನು ಫುಡ್ ಫೆಸ್ಟ್ ಸೇರಿದಂತೆ ಹಲವು ವಿನೂತನ ಕಾರ್ಯಕ್ರಮಗಳೊಂದಿಗೆ ಆಚರಿಸಲು ಯೋಜಿಸಲಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಸಂದರ್ಭೋಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ಮಾಜಿ ಶಾಸಕ ರಘುಪತಿ ಭಟ್, ಉಚ್ಚಿಲ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ನ್ಯಾಯವಾದಿ ಎಚ್. ಜಯಪ್ರಕಾಶ್ ಕೇದ್ಲಾಯ, ಉದ್ಯಮಿಗಳಾದ ಹರಿಯಪ್ಪ ಕೋಟ್ಯಾನ್, ಆನಂದ ಪಿ. ಸುವರ್ಣ, ಜಯಕರ ಶೆಟ್ಟಿ ಇಂದ್ರಾಳಿ, ಸಾಧು ಸಾಲ್ಯಾನ್, ಗೋಪಾಲ ಸಿ. ಬಂಗೇರ, ಯುವರಾಜ್ ಮಸ್ಕತ್, ಎನ್.ಟಿ. ಅಮೀನ್, ಗಣೇಶ್ ಮಲ್ಪೆ, ನಾಗರಾಜ್ ಸುವರ್ಣ, ಎಂ. ನಾಗೇಶ್ ಹೆಗ್ಡೆ, ವಿಲ್ಸನ್ ಫೆರ್ನಾಂಡಿಸ್ ಹಾಗೂ ವಿಜಯ ಕೊಡವೂರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಮದ್ಯದಲ್ಲಿ ಉಡುಪಿ ಹೈಟೆಕ್ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞ ಡಾಕ್ಟರ್ ಉಮೇಶ್ ಪ್ರಭು, ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಕೆ ಸುರೇಶ್ ಪ್ರಭು ಯಕ್ಷಗಾನ ಸಾದಕಿ ಬಹು ಮುಖ ಪ್ರತಿಭೆ ಪುಷ್ಪ ಶಶಿಧರ್ ಇವರೆನ್ನೆಲ್ಲ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಅತಿಥಿ ಗಣ್ಯರನ್ನು ಪಾಂಡುರಂಗ ಮಲ್ಪೆ ಸ್ವಾಗತಿಸಿದರೆ ಶಿಕ್ಷಕಿ ನರೇಂದ್ರ ಕುಮಾರ್ ಕೋಟ ನಿರೂಪಿಸಿದರು. ಇಂದಿರಾ ಶಶಿಧರ್ ವಂದಿಸಿದರು.



Related posts

ಇತಿಹಾಸ ಪ್ರಸಿದ್ಧ ಕಾಪು ಪಿಲಿಕೋಲ

Mumbai News Desk

ಉಳ್ತೂರು  ಚಿತ್ತಾರಿ‌ ಶ್ರೀ ಮಹಾಗಣಪತಿ   ದೈವಸ್ಥಾನ   ದೇಗುಲದಲ್ಲಿ ಪ್ರತಿಷ್ಠಾಪನಗೊಳ್ಳಲಿರುವ ಮಹಾಗಣಪತಿ   ವಿಗ್ರಹದ ಪುರಮೆರವಣಿಗೆ.

Mumbai News Desk

ಭಟ್ಕಳ ಕಪ್ಪೆಚಿಪ್ಪು ದುರಂತ: ಮೃತರ ಸಂಖ್ಯೆ 11ಕ್ಕೆ ಏರಿಕೆ, ಕರಾವಳಿಯಲ್ಲಿ ತೀವ್ರ ಶೋಕ ಸಾಗರ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟವಿಶ್ವ ಬಂಟರ ಸಮ್ಮೇಳನ .

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಡಿ.24ರಂದು 9ನೇ ಮೂಲತ್ವ ವಿಶ್ವ ಪ್ರಶಸ್ತಿ-2023.

Mumbai News Desk

ಶ್ರೀ ಸಾಯಿ ಈಶ್ವರ್ ಗುರೂಜಿ ಅವರಿಂದ ಕಾಪುವಿನ ಕರಸೇವಕರಿಗೆ ಗೌರವ

Mumbai News Desk