33 C
Mumbai
October 7, 2026
Mumbai News Kannada
ಕ್ರೀಡೆ

ಸ್ವಾಮಿ ವಿವೇಕಾನಂದ ರನ್‌ನಲ್ಲಿ ಕುಮಾರಿ ಸುವರ್ಣ ಸಾಧನೆ: 10 ಕಿ.ಮೀ. ಓಟ 1 ಗಂಟೆ 6 ನಿಮಿಷ 46 ಸೆಕೆಂಡ್‌ಗಳಲ್ಲಿ ಪೂರ್ಣ



ಮುಂಬೈ: ಇಲ್ಲಿನ ಡೌನ್‌ಟೌನ್ ಪೊವಾಯಿಯಲ್ಲಿ ಅಕ್ಟೋಬರ್ 4ರಂದು ನಡೆದ ‘ಸ್ವಾಮಿ ವಿವೇಕಾನಂದ ರನ್ 2026’ರಲ್ಲಿ ಕುಮಾರಿ ಸುವರ್ಣ ಅವರು 10 ಕಿ.ಮೀ. ಓಟವನ್ನು 1 ಗಂಟೆ 6 ನಿಮಿಷ 46 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

12096 ಬಿಬ್ ಸಂಖ್ಯೆಯೊಂದಿಗೆ 10 ಕಿ.ಮೀ. ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರ ಚಿಪ್ ಟೈಮ್ 01:06:46 ಎಂದು ತಾತ್ಕಾಲಿಕ (Provisional) ಫಲಿತಾಂಶದಲ್ಲಿ ದಾಖಲಾಗಿದೆ. ಸ್ವಾಮಿ ವಿವೇಕಾನಂದ ರನ್ ದೇಶದ ಪ್ರಮುಖ ಮ್ಯಾರಥಾನ್‌ಗಳಿಗೆ ಅರ್ಹತಾ ಓಟವಾಗಿದ್ದು, ಶಿಕ್ಷಣ, ನಿರ್ಗತಿಕರಿಗೆ ನೆರವು, ಮಹಿಳಾ ಸಬಲೀಕರಣ, ಆರೋಗ್ಯ ಹಾಗೂ ರೈತರ ಕಲ್ಯಾಣ ಸೇರಿದಂತೆ ವಿವಿಧ ಸಾಮಾಜಿಕ ಉದ್ದೇಶಗಳಿಗೆ ಬೆಂಬಲ ನೀಡುವ ‘ರನ್ ಫಾರ್ ಕಾಸ್’ ಪರಿಕಲ್ಪನೆಯೊಂದಿಗೆ ಆಯೋಜಿಸಲಾಗಿತ್ತು.

ಕ್ರೀಡಾ ಸಾಧನೆಗಳ ಪಯಣ: ಮುಂಬೈನ ಕ್ರೀಡಾಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕುಮಾರಿ ಸುವರ್ಣ ಅವರು ವಿವಿಧ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ ಪ್ರಮುಖ ಕ್ರೀಡಾ ಸಾಧನೆಗಳು ಹೀಗಿವೆ:

  • 2019: ಐಬಿಎಸ್ ಸ್ವಾಸ್ಥ್ಯ ಭಾರತ್ ರನ್ – ಪ್ರಥಮ ಬಹುಮಾನ.
  • 2019: ನಿಸರ್ಗ ರನ್ ‘ನನ್ನ ಮಣ್ಣು, ನನ್ನ ದೇಶ’ ಫಿಟ್ ಆ್ಯಂಡ್ ಟ್ರಿಮ್ 5ಕೆ/10ಕೆ ಓಟ – ತೃತೀಯ ಬಹುಮಾನ.
  • 2020: ಮರೋಲ್ ರನ್ ಚಾಂಪಿಯನ್ – ದ್ವಿತೀಯ ಬಹುಮಾನ.
  • 2024: ನಯೀ ಉಮಂಗ್ ಚಾರಿಟೇಬಲ್ ಟ್ರಸ್ಟ್ ಆಯೋಜನೆಯ ಡ್ರೀಮ್ ಮರೋಲ್ ಫನ್ ರನ್ – ದ್ವಿತೀಯ ಬಹುಮಾನ.
  • 2025: ಸ್ವಾಮಿ ವಿವೇಕಾನಂದ ರನ್ (13ನೇ ಆವೃತ್ತಿ) – ದ್ವಿತೀಯ ಬಹುಮಾನ.
  • 2025: ನಯೀ ಉಮಂಗ್ ಚಾರಿಟೇಬಲ್ ಟ್ರಸ್ಟ್ ಆಯೋಜನೆಯ ಡ್ರೀಮ್ ಮರೋಲ್ ಫನ್ ರನ್ – ದ್ವಿತೀಯ ಬಹುಮಾನ.
  • 2026: ಸ್ವಾಮಿ ವಿವೇಕಾನಂದ ರನ್ (14ನೇ ಆವೃತ್ತಿ) – ದ್ವಿತೀಯ ಬಹುಮಾನ.
  • ಕೋಟಿ ಚೆನ್ನಯ ಕ್ರೀಡಾಕೂಟ: ಬಿಲ್ಲವರ ಅಸೋಸಿಯೇಷನ್ ಪ್ರಾಯೋಜಿತ ಈ ಕ್ರೀಡಾಕೂಟದಲ್ಲಿ 100 ಮೀ., 200 ಮೀ. ಹಾಗೂ ರಿಲೇ ಓಟಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದಿದ್ದಾರೆ.

ಕುಮಾರಿ ಸುವರ್ಣ ಅವರು ವರ್ಷದಿಂದ ವರ್ಷಕ್ಕೆ ಓಟದ ಸ್ಪರ್ಧೆಗಳಲ್ಲಿ ನಿರಂತರವಾಗಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸುತ್ತಿರುವುದು ಅವರ ಕ್ರೀಡಾ ಪ್ರತಿಭೆ, ಪರಿಶ್ರಮ ಮತ್ತು ಸಾಧನೆಯ ಛಲಕ್ಕೆ ಸಾಕ್ಷಿಯಾಗಿದೆ.

“ನನ್ನ ಪತಿ, ಭಾರತ್ ಬ್ಯಾಂಕ್ ಅಂಧೇರಿ ಪೂರ್ವ ಶಾಖೆಯ ಉಪ ಪ್ರಬಂಧಕರು ಹಾಗೂ ರಂಗ ನಿರ್ದೇಶಕ, ನಟ, ಸಂಘಟಕರಾದ ಭಾಸ್ಕರ್ ಸುವರ್ಣ ಸಸಿಹಿತ್ಲು ಅವರ ನಿರಂತರ ಪ್ರೋತ್ಸಾಹ ಮತ್ತು ಬೆಂಬಲದಿಂದಲೇ ಕ್ರೀಡಾ ಕ್ಷೇತ್ರದಲ್ಲಿ ಇಂತಹ ಸಾಧನೆ ಮಾಡಲು ಸಾಧ್ಯವಾಯಿತು” ಎಂದು ಕುಮಾರಿ ಸುವರ್ಣ ಸಂತಸ ವ್ಯಕ್ತಪಡಿಸಿದ್ದಾರೆ.

ಆರೋಗ್ಯಕರ ಜೀವನಶೈಲಿ, ಕ್ರೀಡಾಸಕ್ತಿ ಹಾಗೂ ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿರುವ ಇವರ ಈ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.



Related posts

ವಿಶ್ವ ಬಂಟರ  ಕ್ರೀಡಾಕೂಟದಲ್ಲಿ ಮುಂಬೈ ಬಂಟರ ಸಂಘದ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಗೆ ಸಮಗ್ರ ಚಾಂಪಿಯನ್

Mumbai News Desk

ಸುರತ್ಕಲ್ ಬಂಟರ  ವಾರ್ಷಿಕ ಕ್ರೀಡಾಕೂಟ

Mumbai News Desk

Jai Hind Sports Club Hosts 59th R. N. Utchil Memorial Athletics Meet

Mumbai News Desk

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮೀರಾಬಾಯಿ ಚಾನು ಸತತ ಮೂರನೇ ಚಿನ್ನದ ಪದಕ ಸಾಧನೆ

Mumbai News Desk

ಭಾರತಕ್ಕೆ ಚೊಚ್ಚಲ ವಿಶ್ವಕಪ್ ಕಿರೀಟ! ವನಿತಾ ವಿಶ್ವಕಪ್ 2025 ಫೈನಲ್: ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗಳ ಐತಿಹಾಸಿಕ ಜಯ

Mumbai News Desk

ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಕಾಪು – ವಾರ್ಷಿಕ ಮಹಾಸಭೆ : ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಿ – ಲವ ಕರ್ಕೇರ.

Mumbai News Desk